Brain Teaser: ಏಳಲ್ಲ, 9 ಖಂಡಿತ ಅಲ್ಲ; ಚಿತ್ರದಲ್ಲಿ ಎಷ್ಟು ಬೆಂಕಿಕಡ್ಡಿ ಇದೆ ಅಂತ 5 ಸೆಕೆಂಡ್‌ನಲ್ಲಿ ಹೇಳೋಕೆ ಸಾಧ್ಯನಾ?
ಇಲ್ಲಿರುವ ಚಿತ್ರವನ್ನು ನೋಡಿ ಚಿತ್ರದಲ್ಲಿ ಎಷ್ಟು ಬೆಂಕಿಕಡ್ಡಿಗಳಿವೆ ಎಂಬುದನ್ನು ಅತ್ಯಂತ ಬೇಗ ಯಾರು ಹೇಳ್ತಾರೋ ಅವ್ರು ನಿಜಕ್ಕೂ ಜೀನಿಯಸ್. 6 ಅಲ್ಲ, 7 ಮೊದಲೇ ಅಲ್ಲ, ಹಾಗಾದ್ರೆ ಅಲ್ಲಿ ಎಷ್ಟು ಬೆಂಕಿಕಡ್ಡಿಗಳಿವೆ? ಥಟ್ ಅಂತ ಉತ್ರ ಹೇಳಿ.
ಸಾಮಾಜಿಕ ಜಾಲತಾಣ ಥ್ರೆಡ್‌ನಲ್ಲಿ ಇತ್ತೀಚಿಗೆ ಪೋಸ್ಟ್ ಮಾಡುತ್ತಿರುವ ಬ್ರೈನ್ ಟೀಸರ್ ಪೋಸ್ಟ್‌ಗಳು ಸಾಕಷ್ಟು ವೈರಲ್ ಆಗುತ್ತಿವೆ. ಇವು ನಿಜಕ್ಕೂ ನೀವು ಮೆದುಳಿಗೆ ಹುಳ ಬಿಟ್ಟುಕೊಂಡು ತಲೆ ಕೆರೆದುಕೊಳ್ಳುವಂತೆ ಮಾಡುತ್ತಿರುವುದು ಸುಳ್ಳಲ್ಲ. ಯಾಕೆಂದರೆ ಇವೆಲ್ಲ ನೋಡಲು ಸರಳವಾಗಿಯೇ ಕಂಡರೂ ಉತ್ತರ ಮಾತ್ರ ಗೊಂದಲ ಮೂಡಿಸುವಂತಿರುವುದು ಸುಳ್ಳಲ್ಲ. ಇಲ್ಲೊಂದು ಅಂತಹದ್ದೇ ಬ್ರೈನ್ ಟೀಸರ್ ಅನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದೆ. ಇದರಲ್ಲಿ ಒಂದಿಷ್ಟು ರಾಶಿ ಬೆಂಕಿಕಡ್ಡಿಗಳಿವೆ. ಚಿತ್ರದಲ್ಲೇ ನಾಲ್ಕು ಉತ್ತರವನ್ನೂ ನೀಡಲಾಗಿದೆ. ಅದನ್ನು ನೋಡಿ ಚಿತ್ರದಲ್ಲಿ ಒಟ್ಟು ಎಷ್ಟು ಬೆಂಕಿಕಡ್ಡಿಗಳಿವೆ ಎಂಬುದನ್ನು ಥಟ್ಟಂತ ಹೇಳಬೇಕು. ನಿಮಗಿರೋದು ಬರೀ 5 ಸೆಕೆಂಡ್ ಸಮಯ. ಸರಿ ಇನ್ಯಾಕೆ ತಡ ನೀವು ಚಿತ್ರವನ್ನು ನೋಡಿ ಎಷ್ಟು ಬೆಂಕಿಕಡ್ಡಿಗಳಿವೆ ಎಂದು ಉತ್ತರ ಹೇಳಿ.
ʼಚಿತ್ರದಲ್ಲಿ ಎಷ್ಟು ಬೆಂಕಿಕಡ್ಡಿಗಳು ಕಾಣಿಸುತ್ತಿವೆ?ʼ ಎಂದು ಶೀರ್ಷಿಕೆ ಬರೆದುಕೊಂಡು ಈ ಬ್ರೈನ್ ಟೀಸರ್ ಅನ್ನು ಥ್ರೆಡ್‌ನಲ್ಲಿ ಪೋಸ್ಟ್ ಮಾಡಲಾಗಿದೆ. ಈ ಬ್ರೈನ್ ಟೀಸರ್ ಚಿತ್ರದಲ್ಲೇ 4 ಉತ್ತರಗಳನ್ನೂ ನೀಡಲಾಗಿದೆ. ಎ. 9, ಬಿ. 10, ಸಿ. 11 ಹಾಗೂ ಡಿ. 12 ಎಂದು ನಾಲ್ಕು ಆಯ್ಕೆ ನೀಡಲಾಗಿದೆ.
ಮಾರ್ಚ್ 10 ರಂದು ಈ ಬ್ರೈನ್ ಟೀಸರ್ ಅನ್ನು ಹಂಚಿಕೊಳ್ಳಲಾಗಿತ್ತು. ಈ ಪೋಸ್ಟ್‌ಗೆ ಹಲವರು ಲೈಕ್ ಮಾಡಿದ್ದರೆ, ಇನ್ನೂ ಕೆಲವರು ಕಾಮೆಂಟ್ ಮಾಡುವ ಮೂಲಕ ತಾವು ಕಂಡುಕೊಂಡು ಉತ್ತರವನ್ನು ತಿಳಿಸಿದ್ದಾರೆ.
ನೆಟ್ಟಿಗರ ಕಾಮೆಂಟ್‌ಗಳು ಹೀಗಿವೆ
ʼಇದು ಸುಲಭ, ಬೆಂಕಿ ಕಡ್ಡಿಯ ತುದಿಯನ್ನು ಲೆಕ್ಕ ಮಾಡಿ, 2 ರಿಂದ ಗುಣಿಸಿʼ ಎಂದು ಥ್ರೆಡ್ ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ. ಹಲವರು ಈ ಬ್ರೈನ್ ಟೀಸರ್‌ಗೆ ಉತ್ತರ 11 ಎಂದು ಕಾಮೆಂಟ್ ಮಾಡಿದ್ದಾರೆ. ಹಾಗಾದರೆ ಈ ಬ್ರೈನ್ ಟೀಸರ್‌ಗೆ ನಿಮ್ಮ ಉತ್ತರವೇನು? 5ಸೆಕೆಂಡ್ ಚಿತ್ರ ನೋಡಿ 6ನೇ ಸೆಕೆಂಡ್‌ಗೆ ಉತ್ತರ ಹೇಳಿ.
ಈ ಬ್ರೈನ್ ಟೀಸರ್‌ಗಳನ್ನೂ ಓದಿ
Brain Teaser: 7 ಕಪ್‌ಗಳಲ್ಲಿ ಮೊದಲು ಯಾವ ಕಪ್ ತುಂಬುತ್ತೆ, ಉತ್ತರ ಹೇಳಿ ಜಾಣತನ ತೋರಿ; ನಿಮಗಿದು ಚಾಲೆಂಜ್
ಯಾವ ಕಪ್‌ಗೆ ಮೊದಲು ನೀರು ತುಂಬುತ್ತೆ?ʼ ಇನ್‌ಸ್ಟಾಗ್ರಾಂ ಥ್ರೆಡ್‌ನಲ್ಲಿ ಪೋಸ್ಟ್ ಮಾಡಲಾದ ಬ್ರೈನ್ ಟೀಸರ್ ನಿಮ್ಮ ಬುದ್ಧಿಮತ್ತೆಯನ್ನು ಪರೀಕ್ಷಿಸುವುದು ಸುಳ್ಳಲ್ಲ. 7 ಕಪ್‌ಗಳಲ್ಲಿ ಮೊದಲು ಯಾವ ಕಪ್‌ಗೆ ನೀರು ತುಂಬುತ್ತೆ ಎನ್ನುವುದು ನಿರ್ಧರಿಸಿ ಉತ್ತರ ಹೇಳಿ. ನಿಮ್ಮ ಜಾಣತನ ತೋರಿ.
Brain Teaser: ಇಲ್ಲಿದೆ ಕೂಡಿಸಿ, ಭಾಗಿಸುವ ಸುಲಭ ಗಣಿತ; ಆದ್ರೆ ಕ್ಯಾಲ್ಕುಲೆಟರ್ ಬಳಸದೆ ಉತ್ತರ ಹೇಳ್ಬೇಕು; ನಿಮ್ಮಿಂದ ಸಾಧ್ಯನಾ ನೋಡಿ
ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಲಾದ ಸರಳ ಗಣಿತದ ಸೂತ್ರವೊಂದು ನಿಮ್ಮ ಮೆದುಳಿಗೆ ಹುಳ ಬಿಡುವುದು ಖಂಡಿತ. ಯಾಕೆಂದರೆ ಕ್ಯಾಲ್ಕುಲೆಟರ್ ಬಳಸದೇ ಈ ಪ್ರಶ್ನೆಗೆ ಉತ್ತರ ಹೇಳಬೇಕು. ಇದು ನಿಜಕ್ಕೂ ಚಾಲೆಂಜ್ ಅನ್ನಿಸೋದು ಸುಳ್ಳಲ್ಲ.
(This copy first appeared in Hindustan Times Kannada website. To read more like this please logon to kannada.hindustantimes.com)