ಕನ್ನಡ ಸುದ್ದಿ  /  Lifestyle  /  Viral News Brain Teaser Can You Crack The 3 Digit Code To This Lock Without Using A Pen And Paper Social Media Viral Rst

Brain Teaser: ಪಾಸ್‌ವರ್ಡ್‌ ಏನು? ಹಿಂಟ್‌ ಬಳಸಿ ಲಾಕ್‌ ಓಪನ್‌ ಮಾಡೋಕೆ ಸಹಾಯ ಮಾಡಿ; 20 ಸೆಕೆಂಡ್‌ನಲ್ಲಿ ಉತ್ತರ ಹುಡುಕಿ

ಇನ್‌ಸ್ಟಾಗ್ರಾಂನ ಥ್ರೆಡ್‌ನಲ್ಲಿ ಮೆದುಳಿಗೆ ಹುಳ ಬಿಡುವಂತಿರುವ ಬ್ರೈನ್‌ ಟೀಸರ್‌ವೊಂದನ್ನು ಶೇರ್‌ ಮಾಡಲಾಗಿದೆ. ಅಲ್ಲೊಂದಿಷ್ಟು ಹಿಂಟ್‌ ನೀಡಲಾಗಿದ್ದು, ಅದನ್ನು ಬಳಸಿಕೊಂಡು ಲಾಕ್‌ನ ಪಾಸ್‌ವರ್ಡ್‌ ಭೇದಿಸುವುದು ನಿಮಗಿರುವ ಸವಾಲು. ನೋಡೋಣ ನೀವೆಷ್ಟು ಜಾಣರು, ಎಷ್ಟು ಬೇಗ ಲಾಕ್‌ ಓಪನ್‌ ಮಾಡ್ತೀರಿ ಅಂತ.

ಪಾಸ್‌ವರ್ಡ್‌ ಏನು? ಹಿಂಟ್‌ ಬಳಸಿ ಲಾಕ್‌ ತೆರೆಯೋಕೆ ಸಹಾಯ ಮಾಡಿ
ಪಾಸ್‌ವರ್ಡ್‌ ಏನು? ಹಿಂಟ್‌ ಬಳಸಿ ಲಾಕ್‌ ತೆರೆಯೋಕೆ ಸಹಾಯ ಮಾಡಿ

ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆದ ವೈರಲ್‌ ಟೀಸರ್‌ವೊಂದು ನೀವು ತಲೆ ಕೆರೆದುಕೊಳ್ಳುವಂತೆ ಮಾಡುವುದು ಸುಳ್ಳಲ್ಲ. ಪಾಸ್‌ವರ್ಡ್‌ ಭೇದಿಸುವ ಚಾಲೆಂಜ್‌ ಇರುವ ಈ ಬ್ರೈನ್‌ ಬಗ್ಗೆ ಸಾಕಷ್ಟು ಮಂದಿ ತಲೆ ಕೆಡಿಸಿಕೊಂಡಿದ್ದಾರೆ. ಲಾಕ್‌ನ ಪಾಸ್‌ವರ್ಡ್‌ ಕಂಡುಹಿಡಿಯೋಕೆ 5 ಹಿಂಟ್‌ ಕೂಡ ನೀಡಲಾಗಿದೆ. ಈ ಹಿಂಟ್‌ ಬಳಸಿಕೊಂಡು 3 ಸಂಖ್ಯೆಯ ಪಾಸ್‌ವರ್ಡ್‌ ಅನ್ನು ಕಂಡುಹಿಡಿಯುವುದು ನಿಮಗಿರುವ ಸವಾಲು. ಇಲ್ಲಿರುವ 3 ಹಿಂಟ್‌ನ ಕೆಳಗೆ ಉತ್ತರಗಳನ್ನು ನೀಡಲಾಗಿದೆ. ಆದರೆ ಅದರಲ್ಲಿ ಒಂದು ಸರಿ ಇದ್ದರೆ, ಇನ್ನೊಂದು ಸರಿಯಿಲ್ಲ. ಅದರಲ್ಲಿರುವ ಸಂಖ್ಯೆಗಳನ್ನೇ ಬಳಸಿಕೊಂಡು ಉತ್ತರ ಹುಡುಕಬೇಕು. ಲಾಕ್‌ಗೆ ಪಾಸ್‌ವರ್ಡ್‌ ಕಂಡುಹಿಡಿದು ಲಾಕ್‌ ಓಪನ್‌ ಮಾಡಲು ನಿಮ್ಮಿಂದ ಸಾಧ್ಯವೇ? ಪ್ರಯತ್ನ ಮಾಡಿ.

ʼಪಾಸ್‌ವರ್ಡ್‌ ಭೇದಿಸಿʼ ಎಂದು ಚಿತ್ರದ ಮೇಲೆ ಬರೆದಿದ್ದು ಅದನ್ನು ಥ್ರೆಡ್‌ನಲ್ಲಿ ಹಂಚಿಕೊಳ್ಳಲಾಗಿದೆ. ಅಲ್ಲೇ ನೀಡಿರುವ ಹಿಂಟ್‌ ಬಳಸಿಕೊಂಡು ಪಾಸ್‌ವರ್ಡ್‌ ಎಷ್ಟು ಎಂಬುದನ್ನು ಕಂಡುಹಿಡಿದು ಲಾಕ್‌ ಓಪನ್‌ ಮಾಡಬೇಕು. ಮೊದಲ ಹಿಂಟ್‌ನಲ್ಲಿ 682 ಎಂದು ಬರೆಯಲಾಗಿದ್ದು, ಇದರಲ್ಲಿ 1 ಸಂಖ್ಯೆ ಮಾತ್ರ ಅದನ್ನು ಸರಿಯಾದ ಜಾಗದಲ್ಲಿ ಇರಿಸಲಾಗಿದೆ ಎಂದು ಬರೆಯಲಾಗಿದೆ. 2ನೇ ಹಿಂಟ್‌ 614 ಆಗಿದ್ದು, ಇದರಲ್ಲಿ ಕೂಡ 1 ಸಂಖ್ಯೆ ಸರಿಯಿದೆ ಆದರೆ ತಪ್ಪಾಗಿ ಇಡಲಾಗಿದೆ ಎಂದು ಬರೆಯಲಾಗಿದೆ. ಮೂರನೇ ಹಿಂಟ್‌ 206 ಆಗಿದ್ದು, ಇದರಲ್ಲಿ 2 ಸಂಖ್ಯೆ ಸರಿ, ಆದರೆ ತಪ್ಪಾಗಿ ಇರಿಸಲಾಗಿದೆ ಎಂದು ಬರೆಯಲಾಗಿದೆ. 4ರಲ್ಲಿ 738 ಎಂದು ಬರೆಯಲಾಗಿದೆ. ಇದರಲ್ಲಿ ಯಾರೂ ಸರಿಯಲ್ಲ ಎಂದು ಬರೆದಿದ್ದರೆ, 5ನೇ ಬಾಕ್ಸ್‌ನಲ್ಲಿ 780 ಎಂದು ಬರೆಯಲಾಗಿದ್ದು, 1 ಸಂಖ್ಯೆ ಸರಿ ಆದರೆ ತಪ್ಪಾಗಿ ಇರಿಸಲಾಗಿದೆ ಎಂದು ಬರೆಯಲಾಗಿದೆ.

ಮಾರ್ಚ್‌ 18 ರಂದು ಥ್ರೆಡ್‌ನಲ್ಲಿ ಹಂಚಿಕೊಳ್ಳಲಾದ ಈ ಬ್ರೈನ್‌ ಅನ್ನು ಹಲವರು ಲೈಕ್‌ ಮಾಡಿದ್ದಾರೆ. ಕೆಲವರು ಕಾಮೆಂಟ್‌ ಮಾಡುವ ಮೂಲಕ ತಾವು ಕಂಡುಕೊಂಡ ಪಾಸ್‌ವರ್ಡ್‌ ಎಷ್ಟು ಎಂಬುದನ್ನು ಹೇಳಿದ್ದಾರೆ.

ಕಾಮೆಂಟ್‌ಗಳಲ್ಲಿ ಬಂದ ಉತ್ತರಗಳು ಹೀಗಿವೆ

ʼ042ʼ ಪಾಸ್‌ವರ್ಡ್‌ ಎಂದು ಥ್ರೆಡ್‌ ಬಳಕೆದಾರರೊಬ್ಬರು ಕಾಮೆಂಟ್‌ ಮಾಡಿದ್ದಾರೆ. ʼ062 ಉತ್ತರ ಸರಿ ಎಂಬುದು ನನ್ನ ಅನಿಸಿಕೆʼ ಎಂದು ಇನ್ನೊಬ್ಬರು ಕಾಮೆಂಟ್‌ ಮಾಡಿದ್ದಾರೆ. ʼ042ʼ ಸರಿಯಾದ ಉತ್ತರ ಎಂದು ಮೂರನೇ ವ್ಯಕ್ತಿ ಕಾಮೆಂಟ್‌ ಮಾಡಿದ್ದಾರೆ. ಈ ಬ್ರೈನ್‌ ಟೀಸರ್‌ಗೆ ಹಲವರು 042 ಸರಿಯಾದ ಪಾಸ್‌ವರ್ಡ್‌ ಎಂದು ಉತ್ತರಿಸಿದ್ದಾರೆ. ಅವರ ಕಥೆ ಬಿಡಿ. ಇದಕ್ಕೆ ನಿಮ್ಮ ಉತ್ತರ ತಿಳಿಸಿ.

ಈ ಬ್ರೈನ್‌ ಟೀಸರ್‌ಗಳನ್ನೂ ಓದಿ

Brain Teaser: 4ರಲ್ಲಿ 3 ಗುಣಿಸಿ, 3 ಭಾಗಿಸಿ, 4 ಗುಣಿಸಿದ್ರೆ ಎಷ್ಟಾಗುತ್ತೆ; ಥಟ್ಟಂತ 10 ಸೆಕೆಂಡ್‌ನಲ್ಲಿ ಉತ್ತರ ಹೇಳಿ

ಗಣಿತ ಎಲ್ಲರಿಗೂ ಕಬ್ಬಿಣದ ಕಡಲೆಯಲ್ಲ. ಕೆಲವರು ಗಣಿತದ ಸೂತ್ರಗಳಿಗೆ ಥಟ್ಟಂತ ಉತ್ತರ ಹೇಳ್ತಾರೆ. ಅಂತಹವರಿಗಾಗಿ ಇಲ್ಲಿದೆ ಒಂದು ಬ್ರೈನ್‌ ಟೀಸರ್‌. ಇಲ್ಲೊಂದು ಸರಳ ಗಣಿತ ಸೂತ್ರವಿದೆ, ಇದಕ್ಕೆ 10 ಸೆಕೆಂಡ್‌ನಲ್ಲಿ ಉತ್ತರ ಹೇಳಿದ್ರೆ ನೀವು ನಿಜಕ್ಕೂ ಜಾಣರು.

Brain Teaser: ಏಳಲ್ಲ, 9 ಖಂಡಿತ ಅಲ್ಲ; ಚಿತ್ರದಲ್ಲಿ ಎಷ್ಟು ಬೆಂಕಿಕಡ್ಡಿ ಇದೆ ಅಂತ 5 ಸೆಕೆಂಡ್‌ನಲ್ಲಿ ಹೇಳೋಕೆ ಸಾಧ್ಯನಾ?

ಇಲ್ಲಿರುವ ಚಿತ್ರವನ್ನು ನೋಡಿ ಚಿತ್ರದಲ್ಲಿ ಎಷ್ಟು ಬೆಂಕಿಕಡ್ಡಿಗಳಿವೆ ಎಂಬುದನ್ನು ಅತ್ಯಂತ ಬೇಗ ಯಾರು ಹೇಳ್ತಾರೋ ಅವ್ರು ನಿಜಕ್ಕೂ ಜೀನಿಯಸ್‌. 6 ಅಲ್ಲ, 7 ಮೊದಲೇ ಅಲ್ಲ, ಹಾಗಾದ್ರೆ ಅಲ್ಲಿ ಎಷ್ಟು ಬೆಂಕಿಕಡ್ಡಿಗಳಿವೆ? ಥಟ್‌ ಅಂತ ಉತ್ರ ಹೇಳಿ.

ವಿಭಾಗ