Brain Teaser: ಮೆದುಳಿಗೆ ಹುಳ ಬಿಡುವ ಈ ಗಣಿತದ ಸೂತ್ರಕ್ಕೆ ಉತ್ತರ ಹೇಳಲು ನಿಮ್ಮಿಂದ ಸಾಧ್ಯವೆ? ನೀವು ಜಾಣರಾಗಿದ್ರೆ ಟ್ರೈ ಮಾಡಿ
ಕನ್ನಡ ಸುದ್ದಿ  /  ಜೀವನಶೈಲಿ  /  Brain Teaser: ಮೆದುಳಿಗೆ ಹುಳ ಬಿಡುವ ಈ ಗಣಿತದ ಸೂತ್ರಕ್ಕೆ ಉತ್ತರ ಹೇಳಲು ನಿಮ್ಮಿಂದ ಸಾಧ್ಯವೆ? ನೀವು ಜಾಣರಾಗಿದ್ರೆ ಟ್ರೈ ಮಾಡಿ

Brain Teaser: ಮೆದುಳಿಗೆ ಹುಳ ಬಿಡುವ ಈ ಗಣಿತದ ಸೂತ್ರಕ್ಕೆ ಉತ್ತರ ಹೇಳಲು ನಿಮ್ಮಿಂದ ಸಾಧ್ಯವೆ? ನೀವು ಜಾಣರಾಗಿದ್ರೆ ಟ್ರೈ ಮಾಡಿ

ಗಣಿತದಲ್ಲಿ ನೀವು ಪಂಟರಾಗಿದ್ರೆ ನಿಮಗಾಗಿ ಇಲ್ಲೊಂದು ಬ್ರೈನ್ ಟೀಸರ್ ಚಿತ್ರವಿದೆ. ಇದಲ್ಲಿರುವ ಗಣಿತಸೂತ್ರಕ್ಕೆ ನೀವು ಉತ್ತರ ಹೇಳಬೇಕು. ನೀವು ಜಾಣರಾದರಷ್ಟೇ ಈ ಪ್ರಶ್ನೆಗೆ ಉತ್ತರ ಹೇಳಲು ಸಾಧ್ಯ. K/P= ಎಷ್ಟು?ನಿಮಗೊಂದು ಚಾಲೆಂಜ್‌, ಥಟ್ಟಂತ ಉತ್ತರ ಹೇಳಿ.

ಬ್ರೈನ್ ಟೀಸರ್
ಬ್ರೈನ್ ಟೀಸರ್

ಬ್ರೈನ್ ಟೀಸರ್‌ಗಳು ಟ್ರಿಕ್ಕಿಯಾಗಿರುತ್ತವೆ. ಇವು ನಮ್ಮ ಮೆದುಳಿಗೆ ಚಾಲೆಂಜ್ ಮಾಡುವುದು ಸುಳ್ಳಲ್ಲ. ಇದು ನಿಮಗೆ ಔಟ್ ಆಫ್ ದಿ ಬಾಕ್ಸ್ ಯೋಚಿಸುವಂತೆ ಮಾಡುತ್ತದೆ. ಅದರಲ್ಲೂ ಗಣಿತದ ಪಜಲ್ಗಳು ನಿಮ್ಮಲ್ಲಿ ಸಮಸ್ಯೆ ಪರಿಹರಿಸುವ ಗುಣವನ್ನು ವೃದ್ಧಿಸುತ್ತವೆ. ನಮ್ಮಲ್ಲಿ ಲಾಜಿಕಲ್ ಥಿಂಕಿಂಗ್ ವೃದ್ಧಿಸುವ ಗುಣ ಬ್ರೈನ್ ಟೀಸರ್‌ಗಿದೆ. ಇಂತಹ ಬ್ರೈನ್ ಟೀಸರ್‌ ಒಂದು ಇಲ್ಲಿದೆ.

@brain_teaser_1 ಎಂಬ ಎಕ್ಸ್‌ ಪುಟದಲ್ಲಿ ಪೋಸ್ಟ್ ಮಾಡಲಾಗಿರುವ ಬ್ರೈನ್ ಟೀಸರ್ ಇದಾಗಿದೆ. ಈ ಪಜಲ್‌ ಈಗ ನೆಟ್ಟಿಗರ ಗಮನ ಸೆಳೆದಿದೆ. ಇದರಲ್ಲಿರುವ ಸೂತ್ರ ಬಿಡಿಸುವ ಕೆಲಸ ನೀವು ಮಾಡಬೇಕು. ನೀವು ಈ ಚಾಲೆಂಜ್ ಸ್ವೀಕರಿಸಿ, ಉತ್ತರ ಹೇಳುವ ಪ್ರಯತ್ನ ಮಾಡಿ.

ಈ ಬ್ರೈನ್ ಟೀಸರ್‌ನಲ್ಲಿ ಮೂರು ಸೂತ್ರಗಳಿವೆ. ಮೊದಲ ಎರಡು K+P= 10 and K-P= 6, ಈಗ ನಿಮಗಿರುವ ಚಾಲೆಂಜ್ 3ನೇ ಸೂತ್ರಕ್ಕೆ ಉತ್ತರ ಹೇಳುವುದು. K÷P= ಎಷ್ಟು ಎಂದು ಇದರ ಮೌಲ್ಯವನ್ನು ನೀವು ಕಂಡುಹಿಡಿಯಬೇಕು.

ಈ ಪ್ರಶ್ನೆ ಮೇಲ್ನೋಟಕ್ಕೆ ನಿಮಗೆ ಸುಲಭವಾಗಿ ಕಾಣಿಸಬಹುದು. ಆದರೆ ಖಂಡಿತ ಇದು ನೀವು ಅಂದುಕೊಂಡಷ್ಟು ಸುಲಭವಾಗಿರುವುದಿಲ್ಲ. ಇದಕ್ಕೆ ಅಷ್ಟು ಸುಲಭವಾಗಿ ಉತ್ತರ ಕಂಡುಹಿಡಿಯಲು ಸಾಧ್ಯವಿಲ್ಲ. ಈ ಬ್ರೈನ್ ಟೀಸರ್‌ಗೆ ಹಲವರು ಕಾಮೆಂಟ್ ಮೂಲಕ ಉತ್ತರ ಹೇಳುವ ಪ್ರಯತ್ನ ಮಾಡಿದ್ದಾರೆ. ಅವರ ಉತ್ತರಗಳು ಏನಿವೆ ನೋಡಿ.

‘K+P=10 and K-P=6 gives K=8 and P=2. So, K: P=8:2=4‘ ಎಂದು ಎಕ್ಸ್ ಬಳಕೆದಾರರೊಬ್ಬರು ಕಾಮೆಂಟ್ ಮಾಡುವ ಮೂಲಕ ಉತ್ತರ ಹೇಳಿದ್ದಾರೆ.

ಈ ಬ್ರೈನ್ ಟೀಸರ್‌ಗಳನ್ನೂ ಓದಿ

Brain Teaser: ಚಿತ್ರದಲ್ಲಿರುವ ಮಹಿಳೆಯರ ಚಪ್ಪಲಿ ಗಮನಿಸಿ ಗರ್ಭಿಣಿ ಯಾರೆಂದು ಊಹಿಸಿ, ನಿಮಗಿರೋದು 15 ಸೆಕೆಂಡ್‌ ಸಮಯ

ಇಂದಿನ ಬ್ರೈನ್ ಟೀಸರ್ ಚಿತ್ರದಲ್ಲಿ ಮೂವರು ಹುಡುಗಿಯರಿದ್ದಾರೆ. ಇವರ ಕಾಲು ಮಾತ್ರ ತೋರಿಸಿಲಾಗಿದ್ದು, ಅವರ ಚಪ್ಪಲಿಯನ್ನು ನೋಡಿ ಇವರಲ್ಲಿ ಗರ್ಭಿಣಿ ಯಾರೆಂದು ಊಹಿಸುವುದು ನಿಮಗಿರುವ ಸವಾಲು. ನೀವು ನಿಜಕ್ಕೂ ಶಾರ್ಪ್ ಮೈಂಡ್‌ನವರಾದ್ರೆ ಈ ಚಿತ್ರದಲ್ಲಿ ಗರ್ಭಿಣಿ ಯಾರೆಂದು ಊಹಿಸಿ, ಉತ್ತರ ಹೇಳಿ.

Brain Teaser: 312 = 36, 412= 47 ಆದ್ರೆ 612 = ಎಷ್ಟು? ಗಣಿತ ಸುಲಭ ಅನ್ನೋರು 10 ಸೆಕೆಂಡ್‌ ಒಳಗೆ ಉತ್ತರ ಹೇಳಿ ನೋಡೋಣ

ಸಾಮಾಜಿಕ ಜಾಲತಾಣಗಳಲ್ಲಿ ದಿನಕ್ಕೊಂದು ಗಣಿತದ ಪಜಲ್‌ಗಳು ವೈರಲ್ ಆಗುತ್ತವೆ. ಇಂತಹ ಪಜಲ್‌ಗಳಲ್ಲಿ ಇಲ್ಲೊಂದು ವಿಶೇಷವಾದ, ಮೆದುಳಿಗೆ ಟ್ರಿಕ್ಕಿ ಎನ್ನಿಸುವ ಸವಾಲಿದೆ. ಗಣಿತ ನಿಮಗೆ ಇಷ್ಟದ ಸಬ್ಜೆಕ್ಟ್ ಅಂತಾದ್ರೆ ನೀವು ಈ ಪಜಲ್‌ಗೆ 10 ನಿಮಿಷದಲ್ಲಿ ಉತ್ತರ ಹೇಳಬೇಕು. 312 =36 ಆದ್ರೆ 612= ಎಷ್ಟು ಎಂದು ಹೇಳಬೇಕಾಗಿರುವುದು ನಿಮಗಿರುವ ಸವಾಲು.

Whats_app_banner