Brain Teaser: ಬುದ್ಧಿವಂತರಿಗೆ ಮಾತ್ರ! ಚಿತ್ರದಲ್ಲಿ ಅಡಗಿರುವ ನಂಬರ್ ಪತ್ತೆ ಮಾಡಲು ನಿಮ್ಮಿಂದ ಸಾಧ್ಯವೇ, ಪ್ರಯತ್ನಿಸಿ
ಕಣ್ಣು ಮಂಜಾಗಿಸುವ ಈ ಚಿತ್ರದಲ್ಲಿ ಗುಪ್ತ ಸಂಖ್ಯೆಯೊಂದು ಅಡಗಿದೆ. ಆ ಸಂಖ್ಯೆ ಯಾವುದು ಎಂದು ಕಂಡುಹಿಡಿಯಬೇಕು. ಇದಕ್ಕೆ ಕಣ್ಣಷ್ಟೇ ಅಲ್ಲ, ಮೆದುಳು ಕೂಡ ಚುರುಕಾಗಿರಬೇಕು. ನೀವು ಬುದ್ಧಿವಂತರಾದ್ರೆ ಟ್ರೈ ಮಾಡಿ.

ಕಣ್ಣು, ಮೆದುಳಿಗೆ ಮೋಸ ಮಾಡುವಂತಿರುವ ಬ್ರೈನ್ ಟೀಸರ್‌ಗೆ ಉತ್ತರ ಕಂಡುಹಿಡಿಯುವ ಕ್ರೇಜ್ ನಿಮಗೂ ಇದ್ಯಾ? ನಿಮ್ಮ ಕಣ್ಣಿಗೆ ಅಚ್ಚರಿ ಮೂಡಿಸುವಂತಹ ಬ್ರೈನ್ ಟೀಸರ್ ಚಿತ್ರವೊಂದು ಇಲ್ಲಿದೆ. ಈ ವಿಲಕ್ಷಣ ಚಿತ್ರದಲ್ಲಿ ಸಂಖ್ಯೆಯೊಂದನ್ನು ಮರೆ ಮಾಡಲಾಗಿದೆ. ಸಾಧ್ಯವಾದಷ್ಟು ಬೇಗ ಆ ಸಂಖ್ಯೆಯನ್ನು ಕಂಡುಹಿಡಿಯಬೇಕು. ಅದು ನಿಮಗಿರುವ ಸವಾಲು.
ʼಅಡಗಿರುವ ನಂಬರ್ ಹುಡುಕಲು ನಿಮ್ಮಿಂದ ಸಾಧ್ಯವೇ?ʼ ಎಂದು ಶೀರ್ಷಿಕೆ ಬರೆದುಕೊಂಡು ಹಂಚಿಕೊಳ್ಳಲಾದ ಬ್ರೈನ್ ಟೀಸರ್ ಇದಾಗಿದೆ. ಚಿತ್ರದಲ್ಲಿ ಕೆಂಪು, ಬಿಳಿಯ ಆಕಾರಗಳಿಂದ ತುಂಬಿಸಲಾಗಿದೆ. ಚಿತ್ರವನ್ನು ಹತ್ತಿರದಿಂದ ಗಮನಿಸಿದ್ರೆ ನಿಮಗೆ ಚಿತ್ರದಲ್ಲಿ ಅಡಗಿರುವ ಸಂಖ್ಯೆ ಕಾಣಿಸಬಹುದು.
ಮೇ 29ರಂದು ಪೋಸ್ಟ್ ಮಾಡಲಾದ ಈ ವೈರಲ್ ಚಿತ್ರಕ್ಕೆ 7ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ. ಹಲವು ಬುದ್ಧಿವಂತರು ಕಾಮೆಂಟ್ ಮಾಡುವ ಮೂಲಕ ತಾವು ಕಂಡುಕೊಂಡ ಉತ್ತರ ತಿಳಿಸಿದ್ದಾರೆ.
ʼನಂಗೆ 4018 ಕಾಣಿಸಿತ್ತು. ಆದರೆ ನಾನು ಕನ್ನಡಕ ತೆಗೆದಾಗ, ಆದರೆ ನಾನು ಕನ್ನಡದ ಹಾಕಿದಾಗ ನಂಗೇನೂ ಕಾಣಿಸಿಲ್ಲ. ಯಾರಾದ್ರೂ ಇದರ ಬಗ್ಗೆ ವಿವರ ಕೊಡ್ತೀರಾʼ ಎಂದು ಎಕ್ಸ್ ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ.
ʼದುರಾದೃಷ್ಟವಶಾತ್ ನಂಗೆ ಏನೂ ಕಾಣಿಸಿಲ್ಲ. ನನ್ನ ಕಣ್ಣುಗಳು ವೇಗವಾಗಿ ಆಚೀಚೆ ತಿರುಗಾಡುತ್ತಿವೆʼ ಎಂದು ವ್ಯಕ್ತಿಯೊಬ್ಬರು ಕಾಮೆಂಟ್ ಮಾಡಿದ್ದಾರೆ.
ʼನಿಮ್ಮ ಫೋನ್‌ನ ಬ್ರೈಟ್‌ನೆಸ್ ಕಡಿಮೆ ಮಾಡಿ. ಆಗ ನಿಮಗೆ ಚಿತ್ರದಲ್ಲಿ ಅಡಗಿರುವ ನಂಬರ್ ಕಾಣಿಸುತ್ತದೆʼ ಎಂದು ಇನ್ನೊಬ್ಬರು ಕಾಮೆಂಟ್ ಮಾಡುವ ಮೂಲಕ ತಿಳಿಸಿದ್ದಾರೆ.
ಸರಿ ಈಗ ನೀವು ಈ ಮೇಲಿನ ಪ್ರಯತ್ನಗಳನ್ನು ಮಾಡಿ, ಚಿತ್ರದಲ್ಲಿರುವ ನಂಬರ್ ಕಂಡುಹಿಡಿಯಲು ಟ್ರೈ ಮಾಡಿ.
ಈ ಬ್ರೈನ್ ಟೀಸರ್‌ಗಳನ್ನೂ ಓದಿ
Brain Teaser: 5+5=11, 7+7=17 ಆದ್ರೆ, 9+9= ಎಷ್ಟು? ಗಣಿತದಲ್ಲಿ ನೀವು ಪಂಟರಾದ್ರೆ ಥಟ್ಟಂತ ಉತ್ತರ ಹೇಳಿ
ಗಣಿತದ ಸೂತ್ರಗಳಿಗೆ ಉತ್ತರ ಕಂಡುಹಿಡಿಯುವಲ್ಲಿ ನೀವು ಪಂಟರಾದ್ರೆ ನಿಮಗಾಗಿ ಇಲ್ಲಿದೆ ಒಂದು ಮೆದುಳಿಗೆ ಹುಳ ಬಿಡುವ ಪಜಲ್. ಈ ಬ್ರೈನ್ ಟೀಸರ್‌ನಲ್ಲಿ 5+5=11 ಆದ್ರೆ 9+9 ಎಷ್ಟು ಎಂಬುದನ್ನು ನೀವು ಕಂಡುಹಿಡಿಯಬೇಕು.
Brain Teaser: ಆಮೆಗಳ ಹಿಂಡಿನಲ್ಲಿ ಹಾವೊಂದಿದೆ, ಅದನ್ನು 5 ಸೆಕೆಂಡ್‌ನಲ್ಲಿ ಕಂಡುಹಿಡಿಬೇಕು, ನಿಮ್ಮ ಕಣ್ಣಿಗಿದು ಚಾಲೆಂಜ್
ಆಮೆಗಳ ಹಿಂಡಿನಲ್ಲಿ ಇಣುಕಿ ನೋಡುತ್ತಿರುವ ಹಾವನ್ನು 5 ಸೆಕೆಂಡ್‌ನಲ್ಲಿ ಕಂಡು ಹಿಡಿಯಬೇಕು. ನೀವು ನಿಜಕ್ಕೂ ಶಾರ್ಪ್ ಅಂತಾದ್ರೆ ಇದಕ್ಕೆ ಉತ್ತರ ಹುಡುಕಲು ಟ್ರೈ ಮಾಡಿ. ಹಾವು ಎಲ್ಲಿದೆ ಹುಡುಕಿ, ನಿಮ್ಮ ಸಮಯ ಈಗ ಶುರು…
