ಕನ್ನಡ ಸುದ್ದಿ  /  Lifestyle  /  Viral News Brain Teaser Can You Deduce The Missing Number In This Maths Question In Ten Seconds Social Media Rst

Brain Teaser: 3ಕ್ಕೆ 3 ಕೂಡಿಸಿದ್ರೆ 36 ಆದ್ರೆ, 6ಕ್ಕೆ 7 ಕೂಡಿಸಿದ್ರೆ ಎಷ್ಟು? 10 ಸೆಕೆಂಡ್‌ನಲ್ಲಿ ಉತ್ತರ ಹೇಳೋಕೆ ಟ್ರೈ ಮಾಡಿ

ಗಣಿತಪ್ರೇಮಿಗಳಿಗಾಗಿ ಇಲ್ಲೊಂದು ಹೊಸ ಬ್ರೈನ್‌ ಟೀಸರ್‌ ಇದೆ. ಎಕ್ಸ್‌ನಲ್ಲಿ ಪೋಸ್ಟ್‌ ಮಾಡಲಾದ ಈ ಸುಲಭ ಗಣಿತದ ಪಜಲ್‌ಗೆ ಉತ್ತರ ಹುಡುಕಲು ಜನ ಮೆದುಳಿಗೆ ಹುಳ ಬಿಟ್ಟುಕೊಂಡಿರುವುದು ಸುಳ್ಳಲ್ಲ. 6ಕ್ಕೆ 7 ಕೂಡಿಸಿದ್ರೆ ಎಷ್ಟು ಅಂತ 10 ಸೆಕೆಂಡ್‌ನಲ್ಲಿ ಉತ್ತರ ಹೇಳಬೇಕು.

3ಕ್ಕೆ 3 ಕೂಡಿಸಿದ್ರೆ 36 ಆದ್ರೆ, 6ಕ್ಕೆ 7 ಕೂಡಿಸಿದ್ರೆ ಎಷ್ಟು?
3ಕ್ಕೆ 3 ಕೂಡಿಸಿದ್ರೆ 36 ಆದ್ರೆ, 6ಕ್ಕೆ 7 ಕೂಡಿಸಿದ್ರೆ ಎಷ್ಟು?

ಗಣಿತದ ಪಜಲ್‌ಗಳಿಗೆ ಉತ್ತರ ಹೇಳೋದು ಅಂದ್ರೆ ನಿಮಗೆ ಇಷ್ಟನಾ, ಪಜಲ್‌ಗಳಿಗೆ ಉತ್ತರ ಹುಡುಕೋದು ನಿಮ್ಮ ದಿನಚರಿಯ ಭಾಗ ಆಗಿದ್ಯಾ, ಹಾಗಿದ್ರೆ ನಾವು ನಿಮಗಾಗಿ ಪ್ರತಿದಿನ ಬ್ರೈನ್‌ ಟೀಸರ್‌ಗಳನ್ನು ತರುತ್ತೇವೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುವ ಈ ಬ್ರೈನ್‌ ಟೀಸರ್‌ ಚಿತ್ರಗಳು ನಿಮ್ಮ ಮೆದುಳನ್ನು ಚುರುಕು ಮಾಡುವುದು ಸುಳ್ಳಲ್ಲ. ಮೇಲ್ನೋಟಕ್ಕೆ ಇದ್ಯಾವ ಮಹಾ, ಇದಕ್ಕೆ ನಾನು ಥಟ್ಟಂತ ಉತ್ತರ ಹೇಳ್ತೇನೆ ಎಂದು ನೀವು ಅಂದುಕೊಂಡರೂ ಕೂಡ ಸರಿ ಉತ್ತರ ಹೇಳೋದು ಸ್ವಲ್ಪ ಕಷ್ಟಾನೇ, ಇನ್ನೂ ನಿರ್ದಿಷ್ಟ ಸಮಯದಲ್ಲೇ ಉತ್ತರ ಹೇಳಬೇಕು ಅಂದ್ರೆ ಮೆದುಳು ತಡಕಾಡುತ್ತೆ. ಅದೆಲ್ಲಾ ಸರಿ ಗಣಿತದ ಪಜಲ್‌ ಇರುವ ಬ್ರೈನ್‌ ಟೀಸರ್‌ಗೆ ಉತ್ತರ ಹೇಳೋದು ನಿಮಗೆ ಇಷ್ಟ ಆಗುತ್ತೆ ಅಂದ್ರೆ ನಿಮಗಾಗಿ ಇಲ್ಲೊಂದು ಹೊಸ ಪಜಲ್‌ ಇದೆ. ಇದರಲ್ಲಿ ಕೂಡಿಸುವ ಲೆಕ್ಕಾಚಾರವಿದೆ. ಆದರೆ ಕೊನೆಯ ಪ್ರಶ್ನೆ ಉತ್ತರ ಮಿಸ್‌ ಆಗಿದೆ. ಆ ಮಿಸ್‌ ಆಗಿರುವ ಉತ್ತರವನ್ನು ನೀವು ಕಂಡು ಹಿಡಿಯಬೇಕು. ಈ ಪ್ರಶ್ನೆಗೆ ಉತ್ತರ ಹುಡುಕಲು ನಿಮ್ಮಿಂದ ಸಾಧ್ಯಾನಾ? ಟ್ರೈ ಮಾಡಿ.

ʼಮಿಸ್‌ ಆಗಿರುವ ಸಂಖ್ಯೆ ಹುಡುಕಿʼ ಎಂದು ಶೀರ್ಷಿಕೆ ಬರೆದುಕೊಂಡು ಈ ಬ್ರೈನ್‌ ಟೀಸರ್‌ ಅನ್ನು ಹಂಚಿಕೊಳ್ಳಲಾಗಿದೆ. ಎಕ್ಸ್‌ನಲ್ಲಿ ಹಂಚಿಕೊಳ್ಳಲಾದ ಈ ಬ್ರೈನ್‌ ಟೀಸರ್‌ನಲ್ಲಿರುವ ಗಣಿತದ ಪಜಲ್‌ನ ಪ್ರಶ್ನೆ ಹೀಗಿದೆ “If 3+3=>36. 4+4=>48. 5+4=>59. Then 6+7=>?”.

ಮಾರ್ಚ್‌ 28 ರಂದು ಈ ಬ್ರೈನ್‌ ಟೀಸರ್‌ ಅನ್ನು ಎಕ್ಸ್‌ನಲ್ಲಿ ಪೋಸ್ಟ್‌ ಮಾಡಲಾಗಿತ್ತು. ಇಲ್ಲಿಯವರೆಗೆ 1000ಕ್ಕೂ ಅಧಿಕ ಮಂದಿ ಇದನ್ನು ವೀಕ್ಷಿಸಿದ್ದಾರೆ. ವೀಕ್ಷಕರ ಸಂಖ್ಯೆ ಏರಿಕೆಯಾಗುತ್ತಿದೆ. ಕೆಲವರು ತಾವು ಕಂಡುಕೊಂಡು ಉತ್ತರವನ್ನು ಕಾಮೆಂಟ್‌ ಬಾಕ್ಸ್‌ನಲ್ಲಿ ಕಾಮೆಂಟ್‌ ಮಾಡುವ ಮೂಲಕ ತಿಳಿಸಿದ್ದಾರೆ.

ಕಾಮೆಂಟ್‌ಗಳು ಹೀಗಿವೆ

73. ಫಾರ್ಮುಲಾ (A×10)+(A+B)= (4×10)+(4+4)=40+8=48. (5×10)+(5+4)=50+9=59. (6×10)+(6+7)=60+13= 73,” ಎಂದು ಎಕ್ಸ್‌ ಬಳಕೆದಾರರೊಬ್ಬರು ಉತ್ತರವನ್ನು ಬಿಡಿಸಿ ಬರೆದು ಕಾಮೆಂಟ್‌ ಮೂಲಕ ತಿಳಿಸಿದ್ದಾರೆ. ಇನ್ನೊಬ್ಬರು ʼ73 ಅಥವಾ 613ʼ ಆಗಿರಬಹುದು ಎಂದು ಕಾಮೆಂಟ್‌ ಮಾಡಿದ್ದಾರೆ. “73. 33 + 3. 44 + 4. 54 + 5. 67 + 6 = 73 ಎಂದು ಇನ್ನೊಬ್ಬರು ಕಾಮೆಂಟ್‌ ಮಾಡಿದ್ದಾರೆ.

ಹಲವರು ಈ ಬ್ರೈನ್‌ ಟೀಸರ್‌ಗೆ 613 ಅಥವಾ 73 ಸರಿ ಉತ್ತರ ಎಂದು ಕಾಮೆಂಟ್‌ ಮಾಡಿದ್ದಾರೆ. ಹಾಗಾದರೆ ಅವರು ಹೇಳಿರುವುದು ಸರಿಯೇ, ಈ ಪ್ರಶ್ನೆಗಳಿಗೆ ನೀವು ಕಂಡುಕೊಂಡು ಉತ್ತರವೇನು? 10 ಸೆಕೆಂಡ್‌ನಲ್ಲಿ ಉತ್ತರ ಹುಡುಕಲು ಸಾಧ್ಯವಾಯ್ತಾ?

ಈ ಬ್ರೈನ್‌ ಟೀಸರ್‌ಗಳನ್ನೂ ಓದಿ

Brain Teaser: ವೃತ್ತದಲ್ಲಿ ಮಿಸ್‌ ಆಗಿರುವ ಸಂಖ್ಯೆ ಯಾವುದು; ನೀವು ನಿಜಕ್ಕೂ ಬುದ್ಧಿವಂತರಾದ್ರೆ 20 ಸೆಕೆಂಡ್‌ನಲ್ಲಿ ಉತ್ತರ ಹೇಳಿ

ಇಲ್ಲೊಂದು ಗಣಿತದ ಸವಾಲಿದೆ. ಚಿತ್ರದಲ್ಲಿರುವ ವೃತ್ತದಲ್ಲಿ 10,13,4,15,17 ಹೀಗೆ ಒಂದಿಷ್ಟು ಸಂಖ್ಯೆಗಳಿವೆ. ಇದರಲ್ಲಿ ಒಂದು ಸಂಖ್ಯೆ ಮಾತ್ರ ಮಿಸ್‌ ಆಗಿದೆ. ಆ ಸಂಖ್ಯೆ ಯಾವುದು ಎಂದು ಕಂಡುಹಿಡಿಯಬೇಕು. ನೀವು ನಿಜಕ್ಕೂ ಬುದ್ಧಿವಂತರಾದ್ರೆ 20 ಸೆಕೆಂಡ್‌ನಲ್ಲಿ ಉತ್ತರ ಹೇಳಬೇಕು.

Brain Teaser: 1ಕ್ಕೆ 5 ಕೂಡಿಸಿದ್ರೆ 6 ಆದ್ರೆ, 5ಕ್ಕೆ 11 ಕೂಡಿಸಿದ್ರೆ ಎಷ್ಟು, ಲೆಕ್ಕದಲ್ಲಿ ಪಕ್ಕಾ ಇದ್ರೆ ಥಟ್ಟಂತ ಉತ್ತರ ಹೇಳಿ

ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ವೈರಲ್‌ ಆದ ಹೊಸ ಗಣಿತದ ಪಜಲ್‌ವೊಂದು ಇದೀಗ ಮೆದುಳಿಗೆ ಹುಳ ಬಿಡುವುದು ಖಂಡಿತ. ಇದು ಸುಲಭ ಗಣಿತವೇ ಆದ್ರೂ ಲಾಜಿಕಲ್‌ ಥಿಂಕಿಂಗ್‌ನಿಂದಷ್ಟೇ ಇದಕ್ಕೆ ಸರಿ ಉತ್ತರ ಕಂಡುಹಿಡಿಯಲು ಸಾಧ್ಯ. ಇದಕ್ಕೆ ಉತ್ತರ ಖಂಡಿತ 16 ಅಲ್ಲ.

ವಿಭಾಗ