Brain Teaser: ಪುಸ್ತಕದೊಂದಿಗೆ ಆಡುತ್ತಿದ್ದ ಉಷಾಳ ಮಗ ಒಟ್ಟು ಎಷ್ಟು ಪುಟಗಳನ್ನು ಹರಿದಿದ್ದಾನೆ? ಥಟ್ಟಂತ ಉತ್ತರ ಹೇಳಿ
ಇನ್‌ಸ್ಟಾಗ್ರಾಂನ ಥ್ರೆಡ್‌ನಲ್ಲಿ ಹಂಚಿಕೊಳ್ಳಲಾದ ಬ್ರೈನ್ ಟೀಸರ್‌ವೊಂದು ನಿಮ್ಮ ಮೆದುಳಿಗೆ ಹುಳ ಬಿಡುವುದು ಸುಳ್ಳಲ್ಲ. ಪುಸ್ತಕದೊಂದಿಗೆ ಆಟವಾಡುತ್ತಿದ್ದ ಉಷಾಳ ಮಗ ಒಟ್ಟು ಎಷ್ಟು ಪುಟಗಳನ್ನು ಹರಿದಿದ್ದಾನೆ ಎಂಬುದು ನೀವು ಕಂಡುಹಿಡಿಯಬೇಕಾಗಿದೆ. ಎಷ್ಟು ಬೇಗ ನೀವು ಈ ಪ್ರಶ್ನೆಗೆ ಉತ್ತರ ಹೇಳ್ತೀರಿ ನೋಡೋಣ.
ಬ್ರೈನ್ ಟೀಸರ್‌ಗಳನ್ನು ಬಿಡಿಸುವುದು ಮನಸ್ಸಿಗೆ ಸಖತ್ ಮಜಾ ನೀಡುತ್ತದೆ. ಇವು ನಮ್ಮ ಮೆದುಳಿನ ಸಾಮರ್ಥ್ಯವನ್ನು ಪರೀಕ್ಷೆ ಮಾಡುವುದು ಮಾತ್ರವಲ್ಲ, ಅರಿವಿನ ಸಾಮರ್ಥ್ಯವನ್ನೂ ತಿಳಿಯುವಂತೆ ಮಾಡುತ್ತವೆ. ನಿಮಗೆ ಬ್ರೈನ್ ಟೀಸರ್ ಬಿಡಿಸುವುದು ಇಷ್ಟ ಎಂದಾದರೆ ನಿಮಗಾಗಿ ನಾವು ಪ್ರತಿದಿನ ಹೊಸ ಹೊಸ ಬ್ರೈನ್ ಟೀಸರ್‌ಗಳನ್ನು ತರುತ್ತೇವೆ. ಇದಕ್ಕೆ ನೀವು ಉತ್ತರ ಕಂಡುಕೊಳ್ಳುವುದು ಮಾತ್ರವಲ್ಲ, ನಿಮ್ಮ ಸ್ನೇಹಿತರು ಹಾಗೂ ಸಂಬಂಧಿಕರೊಂದಿಗೆ ಹಂಚಿಕೊಂಡು ಅವರ ಜಾಣ್ಮೆಯನ್ನೂ ಪರೀಕ್ಷೆ ಮಾಡಬಹುದು. ಹಾಗಾದ್ರೆ ಇನ್ಯಾಕೆ ತಡ, ಇಲ್ಲೊಂದು ಬ್ರೈನ್ ಟೀಸರ್ ಇದೆ, ಉಷಾಳ ಮಗ ಎಷ್ಟು ಪುಟಗಳನ್ನು ಹರಿದಿದ್ದಾನೆ ಎಂದು ನೀವು ಥಟ್ಟಂತ ಉತ್ತರ ಹೇಳಬೇಕು.
ʼನಿಮ್ಮಿಂದ ಇದನ್ನು ಬಿಡಿಸಲು ಸಾಧ್ಯವೇ?ʼ ಎಂದು ಶೀರ್ಷಿಕೆ ಬರೆದುಕೊಂಡು ಈ ಬ್ರೈನ್ ಟೀಸರ್ ಅನ್ನು ಇನ್‌ಸ್ಟಾಗ್ರಾಂನ ಥ್ರೆಡ್‌ನಲ್ಲಿ ಹಂಚಿಕೊಳ್ಳಲಾಗಿದೆ. ಇಲ್ಲಿರುವ ಚಿತ್ರದಲ್ಲಿ ಪ್ರಶ್ನೆ ಹೀಗಿದೆ ʼಉಷಾಳ ಮಗ ಪುಸ್ತಕದೊಂದಿಗೆ ಆಟವಾಡುತ್ತಿರುತ್ತಾನೆ. ಅವನು 7,8,100,101,222 ಹಾಗೂ 223ನೇ ಪುಟಗಳನ್ನು ಹರಿದಿರುತ್ತಾನೆ. ಹಾಗಾದರೆ ಅವನು ಒಟ್ಟು ಎಷ್ಟು ಪುಟಗಳನ್ನು ಹರಿದಿದ್ದಾನೆ? ಇದಕ್ಕೆ ನಾಲ್ಕು ಉತ್ತರಗಳನ್ನು ನೀಡಲಾಗಿದೆ. ಎ.6, ಬಿ. 3, ಸಿ.5 ಮತ್ತು ಡಿ. 4 ಎಂದು ಆಯ್ಕೆ ನೀಡಲಾಗಿದ್ದು, ಸರಿಯಾದ ಉತ್ತರ ಎಷ್ಟು ಎಂಬುದನ್ನು ನೀವು ಹೇಳಬೇಕಾಗಿದೆ. ಈ ಪಜಲ್‌ಗೆ ಹಲವು ಬ್ರೈನ್ ಟೀಸರ್ ಪ್ರೇಮಿಗಳು ಕಾಮೆಂಟ್ ಮಾಡುವ ಮೂಲಕ ಉತ್ತರ ಹೇಳಿದ್ದಾರೆ.
ಬ್ರೈನ್ ಟೀಸರ್‌ಗೆ ಬಂದ ಕಾಮೆಂಟ್‌ಗಳು ಹೀಗಿವೆ
ʼ5 ಯಾಕೆಂದರೆ 7 ಮತ್ತು 8 ಎರಡೂ ಸೇರಿ ಒಂದೇ ಪುಟʼ ಎಂದು ಥ್ರೆಡ್ ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ. ʼಉತ್ತರ 3, ಯಾಕೆಂದರೆ 7/8 ಒಂದು ಪುಟ, 100/101 ಒಂದು ಪುಟ ಹಾಗೂ 222/223 ಕೂಡ ಒಂದು ಪುಟʼ ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ.
ʼ5 ಯಾಕೆಂದರೆ 7/8, 100,101,222,223 ಎಂದು ಮೂರನೇ ವ್ಯಕ್ತಿ ಕಾಮೆಂಟ್ ಮಾಡಿದ್ದಾರೆ.
ಈ ಬ್ರೈನ್ ಟೀಸರ್‌ಗೆ ಹಲವರು 5 ಎಂದು ಉತ್ತರ ಹೇಳಿದ್ದಾರೆ. ಇನ್ನೂ ಕೆಲವರು 3 ಸರಿ ಉತ್ತರ ಎಂದಿದ್ದಾರೆ. ಹಾಗಾದ್ರೆ ಇದಕ್ಕೆ ಸರಿ ಉತ್ತರ ಯಾವುದು? ನಿಮ್ಮ ಉತ್ತರ ತಿಳಿಸಿ.
ಈ ಬ್ರೈನ್ ಟೀಸರ್‌ಗಳನ್ನೂ ಓದಿ
Brain Teaser: 25ಕ್ಕೆ 25ಕ್ಕೆ ಕೂಡಿಸಿ ಸೊನ್ನೆ ಗುಣಿಸಿ ಒಂದು ಕಳೆದ್ರೆ ಉತ್ತರ ಎಷ್ಟಾಗುತ್ತೆ? 30 ಸೆಕೆಂಡ್‌ನಲ್ಲಿ ಹೇಳಿ
ಗಣಿತದ ಪಜಲ್ ಬಿಡಿಸುವುದು ನಿಮ್ಮ ನೆಚ್ಚಿನ ಹವ್ಯಾಸವಾದ್ರೆ ನಿಮಗಾಗಿ ಇಲ್ಲಿದೆ ಒಂದು ಹೊಸ ಬ್ರೈನ್ ಟೀಸರ್. ಇಲ್ಲೊಂದು ಸುಲಭದ ಗಣಿತ ಸೂತ್ರವಿದೆ. 30 ಸೆಕೆಂಡ್‌ನಲ್ಲಿ ಇದಕ್ಕೆ ಉತ್ತರ ಕಂಡುಹಿಡಿಯಬೇಕು. ಗಣಿತ ಎಕ್ಸ್‌ಪರ್ಟ್ಸ್ ಟ್ರೈ ಮಾಡಿ.
Brain Teaser: ಒಂದೇ ಒಂದು ಬೆಂಕಿಕಡ್ಡಿ ಸರಿಸಿದ್ರೆ ಸಾಕು ಸರಿಯಾದ ಉತ್ತರ ಸಿಗುತ್ತೆ, ನಿಮ್ಮ ಮೆದುಳು ಶಾರ್ಪ್ ಇದ್ರೆ ಟ್ರೈ ಮಾಡಿ
ನಿಮ್ಮ ಬಳಿ ಈಗ ಐದೇ 5 ಸೆಕೆಂಡ್ ಇದೆ. ಅಷ್ಟ್ರಲ್ಲಿ ಒಂದು ಬೆಂಕಿಕಡ್ಡಿಯನ್ನು ಸರಿಸಿ ಇಲ್ಲಿರುವ ಬ್ರೈನ್ ಟೀಸರ್‌ಗೆ ಉತ್ತರ ಕಂಡುಹಿಡಿಬೇಕು. ನಿಮ್ಮ ಮೆದುಳು ನಿಜಕ್ಕೂ ಶಾರ್ಪ್ ಇದ್ರೆ ಈ ಪಜಲ್‌ಗೆ ಉತ್ತರ ಹೇಳಿ.