ಕನ್ನಡ ಸುದ್ದಿ  /  Lifestyle  /  Viral News Brain Teaser Can You Figure Out What The Closest Time To Midnight Is Social Media Viral Rst

Brain Teaser: ಮಧ್ಯರಾತ್ರಿಗೆ ಹತ್ತಿರದ ಸಮಯ ಯಾವುದು, ಚಿತ್ರ ನೋಡಿ ಉತ್ತರ ಹೇಳಿ; ಇಲ್ಲಿದೆ ಮೆದುಳಿಗೆ ಹುಳ ಬಿಡುವ ಸವಾಲು

ಮಧ್ಯರಾತ್ರಿಗೆ ಹತ್ತಿರದ ಸಮಯ ಯಾವುದು? ಈ ಬ್ರೈನ್‌ ಟೀಸರ್‌ಗೆ ಉತ್ತರ ಹುಡುಕಲು ಸಾಧ್ಯವಾಗದೇ ಹಲವರು ತಲೆ ಕೆಡಿಸಿಕೊಂಡಿದ್ದಾರೆ. ನಿಮಗೇನಾದ್ರೂ ಇದಕ್ಕೆ ಉತ್ತರ ಹೊಳಿಯುತ್ತಾ ನೋಡಿ. ಈ ಪ್ರಶ್ನೆ ನಿಮ್ಮ ಮೆದುಳಿಗೆ ಹುಳ ಬಿಡುವುದು ಪಕ್ಕಾ.

ಮಧ್ಯರಾತ್ರಿಗೆ ಹತ್ತಿರದ ಸಮಯ ಯಾವುದು, ಚಿತ್ರ ನೋಡಿ ಉತ್ತರ ಹೇಳಿ; ಇಲ್ಲಿದೆ ಮೆದುಳಿಗೆ ಹುಳ ಬಿಡುವ ಸವಾಲು
ಮಧ್ಯರಾತ್ರಿಗೆ ಹತ್ತಿರದ ಸಮಯ ಯಾವುದು, ಚಿತ್ರ ನೋಡಿ ಉತ್ತರ ಹೇಳಿ; ಇಲ್ಲಿದೆ ಮೆದುಳಿಗೆ ಹುಳ ಬಿಡುವ ಸವಾಲು

ಸಾಮಾಜಿಕ ಜಾಲತಾಣದಲ್ಲಿ ಒಮ್ಮೊಮ್ಮೆ ಕಣ್ಣಿಗೆ ಬೀಳುವ ಬ್ರೈನ್‌ ಟೀಸರ್‌ಗಳು ನಿಜಕ್ಕೂ ತಲೆ ಕೆರೆದುಕೊಳ್ಳುವಂತೆ ಮಾಡುವುದು ಖಂಡಿತ. ಇವು ಮೇಲ್ನೋಟಕ್ಕೆ ಉತ್ತರ ಹುಡುಕುವುದು ಸುಲಭ ಅನ್ನಿಸಿದರೂ ಕೂಡ ಉತ್ತರ ಸಿಗದೇ ತಲೆಗೆ ಹುಳ ಬಿಟ್ಟುಕೊಳ್ಳುತ್ತೇವೆ. ಇಲ್ಲೊಂದು ಅಂತಹದ್ದೇ ಬ್ರೈನ್‌ ಟೀಸರ್‌ ಇದೆ. ಇದರಲ್ಲಿ ಇರುವ ಪ್ರಶ್ನೆ ನಿಜಕ್ಕೂ ಸರಳ. ಇದಕ್ಕೆ ನಾಲ್ಕು ಉತ್ತರಗಳನ್ನು ಕೂಡ ನೀಡಲಾಗಿದೆ. ಮಧ್ಯರಾತ್ರಿಗೆ ಹತ್ತಿರವಿರುವ ಸಮಯ ಯಾವುದು? ಎಂದು ಇದರಲ್ಲಿ ಕೇಳಲಾಗಿದೆ. ನೀವು ಪಜಲ್‌ ಸವಾಲುಗಳನ್ನು ಬಿಡಿಸುವಲ್ಲಿ ನಿಜಕ್ಕೂ ಪಂಟರಾಗಿದ್ರೆ ಈ ಪ್ರಶ್ನೆಗೆ ಉತ್ತರ ಕಂಡುಹುಡುಕಿ.

@7millionaire_lines ಎಂಬ ಥ್ರೆಡ್‌ ಬಳಕೆದಾರರು ಈ ಬ್ರೈನ್‌ ಟೀಸರ್‌ ಅನ್ನು ಪೋಸ್ಟ್‌ ಮಾಡಿದ್ದಾರೆ. ಮಧ್ಯರಾತ್ರಿಗೆ ಹತ್ತಿರದ ಸಮಯ ಯಾವುದು ಎಂಬ ಪ್ರಶ್ನೆಗೆ 11.55 Am, 12.06 Am, 11.55 am ಹಾಗೂ 12.03 am ಈ ನಾಲ್ಕು ಉತ್ತರಗಳನ್ನು ನೀಡಲಾಗಿದೆ.

ಎರಡು ದಿನಗಳ ಹಿಂದೆ ಈ ಬ್ರೈನ್‌ ಟೀಸರ್‌ ಅನ್ನು ಥ್ರೆಡ್‌ನಲ್ಲಿ ಪೋಸ್ಟ್‌ ಮಾಡಲಾಗಿದ್ದು 500ಕ್ಕೂ ಹೆಚ್ಚು ಮಂದಿ ಲೈಕ್‌ ಮಾಡಿದ್ದಾರೆ. ಕೆಲವರು ಕಾಮೆಂಟ್‌ ಮಾಡುವ ಮೂಲಕ ತಮಗೆ ಅನ್ನಿಸಿದ ಉತ್ತರಗಳನ್ನು ಹೇಳಿದ್ದಾರೆ.

ಈ ಬ್ರೈನ್‌ ಟೀಸರ್‌ಗೆ ಬಂದ ಕಾಮೆಂಟ್‌ಗಳು ಹೀಗಿವೆ

12.03am, ಯಾಕೆಂದರೆ ಇದು 12 ಗಂಟೆಗೆ 3 ನಿಮಿಷ ದೂರದಲ್ಲಿದೆ. ಇದನ್ನು ತಪ್ಪು ಎಂದು ಹೇಗೆ ಹೇಳುತ್ತೀರಿʼ ಎಂದು ವ್ಯಕ್ತಿಯೊಬ್ಬರು ಕಾಮೆಂಟ್‌ ಮಾಡಿದ್ದಾರೆ. ʼಮಧ್ಯರಾತ್ರಿ 12 ಗಂಟೆ ಹೌದಾದ್ರೆ ಉತ್ತರ ಡಿʼ ಎಂದು ಇನ್ನೊಬ್ಬರು ಕಾಮೆಂಟ್‌ ಮಾಡಿದ್ದಾರೆ.

ಹಲವರು ಈ ಬ್ರೈನ್‌ ಟೀಸರ್‌ಗೆ ಡಿ ಉತ್ತರ ಸರಿ ಎಂದು ಕಾಮೆಂಟ್‌ ಮಾಡಿದ್ದಾರೆ. ಕೆಲವರು ಎ ಅಂದರೆ ಮಧ್ಯರಾತ್ರಿಗೆ ಹತ್ತಿರದ ಸಮಯ 11.55am ಎಂದು ಕಾಮೆಂಟ್‌ ಮಾಡಿದ್ದಾರೆ. ಸರಿ ಹಾಗಿದ್ರೆ ಈ ಬ್ರೈನ್‌ ಟೀಸರ್‌ಗೆ ನಿಮ್ಮ ಉತ್ತರವೇನು? ಮಧ್ಯರಾತ್ರಿ ಹತ್ತಿರದ ಸಮಯ ಯಾವುದು ಎಂದು ನಿಮಗನ್ನಿಸುತ್ತೆ? ತಿಳಿಸಿ.

ಇದನ್ನೂ ಓದಿ

Brain Teaser: ನೀವು ಒಗಟು ಬಿಡಿಸೋದ್ರಲ್ಲಿ ಜಾಣರಾದ್ರೆ ಇಲ್ಲಿದೆ ಒಂದು ಸವಾಲು; ನಿಮಗಿರೋದು ಬರೀ 10 ಸೆಕೆಂಡ್‌ ಸಮಯ

ಇಲ್ಲಿ ನಿಮಗೊಂದು ಚೆಂದದ ಒಗಟಿದೆ. ಇದು ನೀವೆಷ್ಟು ಜಾಣರು ಮತ್ತೂ ನಿಮ್ಮ ಸವಾಲು ಬಿಡಿಸುವ ವೇಗ ಎಷ್ಟು ಎಂಬುದನ್ನು ತೋರಿಸುತ್ತದೆ. ಈ ಒಗಟಿಗೆ 10 ಸೆಕೆಂಡ್‌ ಅಥವಾ ಅದಕ್ಕಿಂತ ಕಡಿಮೆ ಸಮಯದಲ್ಲಿ ಉತ್ತರ ಹುಡುಕಬಲ್ಲಿರಾ? ಇಲ್ಲಿದೆ ನೋಡಿ ಒಗಟು.

(This copy first appeared in Hindustan Times Kannada website. To read more like this please logon to kannada.hindustantimes.com)

ವಿಭಾಗ