Brain Teaser: 1+4=5, 2+5=12, 8+11= ಎಷ್ಟು? ಈ ಗಣಿತದ ಪಜಲ್‌ಗೆ 5 ಸೆಕೆಂಡ್‌ ಒಳಗೆ ಉತ್ತರ ಹೇಳಿ
ಕನ್ನಡ ಸುದ್ದಿ  /  ಜೀವನಶೈಲಿ  /  Brain Teaser: 1+4=5, 2+5=12, 8+11= ಎಷ್ಟು? ಈ ಗಣಿತದ ಪಜಲ್‌ಗೆ 5 ಸೆಕೆಂಡ್‌ ಒಳಗೆ ಉತ್ತರ ಹೇಳಿ

Brain Teaser: 1+4=5, 2+5=12, 8+11= ಎಷ್ಟು? ಈ ಗಣಿತದ ಪಜಲ್‌ಗೆ 5 ಸೆಕೆಂಡ್‌ ಒಳಗೆ ಉತ್ತರ ಹೇಳಿ

ಗಣಿತದ ಪಜಲ್‌ಗಳು ಮೆದುಳಿಗೆ ಹುಳ ಬಿಡೋದು ಖಂಡಿತ. ಕೆಲವೊಮ್ಮೆ ಕ್ಯಾಲ್ಕುಲೆಟರ್‌ ಇದ್ರೂ ಉತ್ತರ ಹೇಳೋಕೆ ಕಷ್ಟ ಆಗುತ್ತೆ. ಅಂತಹ ಪಜಲ್‌ಗಳು ಬ್ರೈನ್‌ ಟೀಸರ್‌ ರೂಪದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುತ್ತವೆ. ಇಲ್ಲೊಂದು ಅಂಥದ್ದೇ ಪಜಲ್‌ ಇದೆ. ಇದಕ್ಕೆ 5 ಸೆಕೆಂಡ್‌ ಒಳಗೆ ಉತ್ತರ ಹೇಳೋಕೆ ನಿಮ್ಮಿಂದ ಸಾಧ್ಯವೇ ನೋಡಿ.

1+4=5, 2+5=12, 8+11= ಎಷ್ಟು? ಈ ಗಣಿತದ ಪಜಲ್‌ಗೆ 5 ಸೆಕೆಂಡ್‌ ಒಳಗೆ ಉತ್ತರ ಹೇಳಿ
1+4=5, 2+5=12, 8+11= ಎಷ್ಟು? ಈ ಗಣಿತದ ಪಜಲ್‌ಗೆ 5 ಸೆಕೆಂಡ್‌ ಒಳಗೆ ಉತ್ತರ ಹೇಳಿ

ಗಣಿತ ಅಂದ್ರೆ ನಂಗಿಷ್ಟ, ಎಂಥ ಲೆಕ್ಕ ಇದ್ರೂ ಪಟ್‌ ಅಂತ ಉತ್ತರ ಹೇಳ್ತೇನೆ, ಲಾಜಿಕಲ್‌ ಗಣಿತ ನನ್ನ ತಲೆಗೆ ಥಟ್ಟಂತ ಹೋಗುತ್ತೆ ಅನ್ನೋರ ಲಿಸ್ಟ್‌ನಲ್ಲಿ ನೀವೂ ಇದ್ರೆ ನೀವು ನಿಮಗಾಗಿ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಬ್ರೈನ್‌ ಟೀಸರ್‌ಗಳು ಹರಿದಾಡುತ್ತಿರುತ್ತವೆ. ಅಂತಹ ಬ್ರೈನ್‌ ಟೀಸರ್‌ಗಳು ತಮ್ಮ ಮೆದುಳಿಗೆ ಸವಾಲು ಹಾಕುವುದು ಸುಳ್ಳಲ್ಲ.

ಇಲ್ಲೊಂದು ಗಣಿತದ ಪಜಲ್‌ ಇರುವ ಬ್ರೈನ್‌ ಟೀಸರ್‌ ಇದೆ. ಇದರಲ್ಲಿ ಒಂದು ಸುಲಭದ ಲೆಕ್ಕಾಚಾರವಿದೆ. ಮೇಲ್ನೋಟಕ್ಕೆ ಇದೇನು ಮಹಾ ಎನ್ನುವಂತೆ ನಿಮ್ಮ ಕಣ್ಣಿಗೆ ಕಾಣಬಹುದು. ಆದರೆ ಇದು ಪಕ್ಕಾ ಮೆದುಳಿಗೆ ಹುಳ ಬಿಡುವ ಲೆಕ್ಕ ಅನ್ನೋದು ಮಾತ್ರ ಸುಳ್ಳಲ್ಲ. ಟ್ವಿಟರ್‌ನಲ್ಲಿ ವೈರಲ್‌ ಆದ ಈ ಬ್ರೈನ್‌ ಟೀಸರ್‌ನಲ್ಲಿ ಏನಿದೆ ನೋಡಿ.

@brain_teaser_1 ಎಂಬ ಟ್ವಿಟರ್‌ ಪುಟ ಹೊಂದಿರುವ ವ್ಯಕ್ತಿಯೊಬ್ಬರು ಈ ಬ್ರೈನ್‌ ಟೀಸರ್‌ ಅನ್ನು ಹಂಚಿಕೊಂಡಿದ್ದಾರೆ. #math, #quiz ಎಂಬ ಹ್ಯಾಷ್‌ಟ್ಯಾಗ್‌ ಹಾಕಿ ಈ ಬ್ರೈನ್‌ ಟೀಸರ್‌ ಅನ್ನು ಹಂಚಿಕೊಳ್ಳಲಾಗಿದೆ. ಇದರಲ್ಲಿ ಒಂದು ಪ್ರಶ್ನೆ ಇದೆ. 1+4=5, 2+5=12, 3+6=21, ಆದ್ರೆ 8+11= ಎಷ್ಟು? ಎಂದು ಪ್ರಶ್ನೆ ಕೇಳಲಾಗಿದೆ. ಈ ಚಿತ್ರದ ಮೇಲೆ ಐಕ್ಯೂ ಟೆಸ್ಟ್‌ ಎಂದು ಕೂಡ ಬರೆಯಲಾಗಿದೆ.

ಜುಲೈ 6 ರಂದು ಈ ಬ್ರೈನ್‌ ಟೀಸರ್‌ ಅನ್ನು ಟ್ವಿಟರ್‌ನಲ್ಲಿ ಪೋಸ್ಟ್‌ ಮಾಡಲಾಗಿತ್ತು. ಈಗಾಗಲೇ 9000ಕ್ಕೂ ಅಧಿಕ ಮಂದಿ ಇದನ್ನು ವೀಕ್ಷಿಸಿದ್ದಾರೆ. ಹಲವರು ಲೈಕ್ಸ್‌, ಕಾಮೆಂಟ್‌ ಮಾಡಿದ್ದಾರೆ. ಈ ಬ್ರೈನ್‌ ಟೀಸರ್‌ಗೆ ಒಬ್ಬೊಬ್ಬರು ಒಂದೊಂದು ಉತ್ತರ ಹೇಳಿದ್ದಾರೆ. ಕೆಲವರು 96 ಎಂದರೆ ಕೆಲವರು 40 ಎಂದು ಕಾಮೆಂಟ್‌ ಮಾಡಿದ್ದಾರೆ. ಇನ್ನೂ ಕೆಲವರು 32, 23 ಎಂದೆಲ್ಲಾ ಕಾಮೆಂಟ್‌ ಮಾಡಿದ್ದಾರೆ. ಆದರೆ ಬಹುತೇಕ ಮಂದಿ 40 ಹಾಗೂ 96 ಎಂದು ಕಾಮೆಂಟ್‌ ಮಾಡಿದ್ದಾರೆ. ಹಾಗಾದರೆ ಈ ಬ್ರೈನ್‌ ಟೀಸರ್‌ಗೆ ನಿಮ್ಮ ಉತ್ತರವೇನು?

ಇಂತಹ ಬ್ರೈನ್‌ ಟೀಸರ್‌ಗಳಿಗೆ ಉತ್ತರ ಯೋಚಿಸಿದಾಗ ನಮ್ಮ ಮೆದುಳು ಚುರುಕಾಗುತ್ತದೆ. ನಮ್ಮ ಯೋಚನಾಶಕ್ತಿ ವೃದ್ಧಿಯಾದಷ್ಟು ಸಮಸ್ಯೆ ಪರಿಹರಿಸುವ ಕೌಶಲವೂ ಹೆಚ್ಚುತ್ತದೆ. ಈ ಬ್ರೈನ್‌ ಟೀಸರ್‌ಗೆ ನಿಮ್ಮ ಉತ್ತರವೇನು ಹೇಳಿ.

ಈ ಬ್ರೈನ್‌ ಟೀಸರ್‌ಗಳನ್ನೂ ಓದಿ

Brain Teaser: Aಯ ಮೌಲ್ಯವೆಷ್ಟು? ಗಣಿತದಲ್ಲಿ ನೀವು ಜೀನಿಯಸ್‌ ಅಂತಾದ್ರೆ ಈ ಸೂತ್ರಕ್ಕೆ ಥಟ್ಟಂತ ಉತ್ತರ ಹೇಳಿ

ಶಾಲಾ ದಿನಗಳಲ್ಲಿ ಗಣಿತದ ಸಮೀಕರಣಗಳು ನಮಗೆ ಭಯ ಹುಟ್ಟಿಸಿರುವುದು ಸುಳ್ಳಲ್ಲ. ಹಾಗಂತ ಇವು ಎಲ್ಲರಿಗೂ ಕಬ್ಬಿಣ ಕಡಲೆಯಲ್ಲ. ಗಣಿತ ಎಕ್ಸ್‌ಪರ್ಟ್‌ಗಳು ಎಂತಹ ಇಕ್ವೇಷನ್‌ಗಳನ್ನಾದ್ರೂ ಸುಲಭವಾಗಿ ಬಿಡಿಸುತ್ತಾರೆ. ಇಲ್ಲೊಂದು ಅಂಥದ್ದೇ ಸಮೀಕರಣವಿದೆ. ನೀವು ಗಣಿತ ಪ್ರೇಮಿಯಾದ್ರೆ ಇದಕ್ಕೆ ಉತ್ತರ ಹೇಳಲು ಪ್ರಯತ್ನಿಸಿ.

Brain Teaser: ಮೂರು ಅಥವಾ ನಾಲ್ಕು? ಚಿತ್ರದಲ್ಲಿ ಎಷ್ಟು ಬ್ಲಾಕ್‌ಗಳಿವೆ, ಈ ಚಿತ್ರ ನಿಮ್ಮ ಮೆದುಳಿಗೆ ಹುಳ ಬಿಡೋದು ಪಕ್ಕಾ

ಆಪ್ಟಿಕಲ್‌ ಇಲ್ಯೂಷನ್‌ ಚಿತ್ರಗಳನ್ನು ನೋಡಿದಾಗ ಇದೇನಪ್ಪಾ ಹೀಗಿದೆ ಎಂದು ಅನ್ನಿಸದೇ ಇರುವುದಿಲ್ಲ. ಯಾಕಂದ್ರೆ ಅದು ನಮ್ಮ ಕಣ್ಣಿಗೆ ವಿಚಿತ್ರವಾಗಿ ಕಾಣಿಸುತ್ತದೆ. ಚಿತ್ರದಲ್ಲಿ ಇರುವುದೇ ಒಂದು ನಮ್ಮ ಕಣ್ಣಿಗೆ ಕಾಣಿಸುವುದೇ ಒಂದು. ಇಂದಿನ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರದಲ್ಲಿ ಎಷ್ಟು ಬ್ಲಾಕ್‌ಗಳಿವೆ ಎಂಬುದನ್ನು ನೀವು ಕಂಡುಹಿಡಿಯಬೇಕು.

Whats_app_banner