Brain Teaser: 4ರಲ್ಲಿ 3 ಗುಣಿಸಿ, 3 ಭಾಗಿಸಿ, 4 ಗುಣಿಸಿದ್ರೆ ಎಷ್ಟಾಗುತ್ತೆ; ಥಟ್ಟಂತ 10 ಸೆಕೆಂಡ್‌ನಲ್ಲಿ ಉತ್ತರ ಹೇಳಿ-viral news brain teaser can you find the answer to this maths puzzle in just 10 seconds social media viral rst ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  Brain Teaser: 4ರಲ್ಲಿ 3 ಗುಣಿಸಿ, 3 ಭಾಗಿಸಿ, 4 ಗುಣಿಸಿದ್ರೆ ಎಷ್ಟಾಗುತ್ತೆ; ಥಟ್ಟಂತ 10 ಸೆಕೆಂಡ್‌ನಲ್ಲಿ ಉತ್ತರ ಹೇಳಿ

Brain Teaser: 4ರಲ್ಲಿ 3 ಗುಣಿಸಿ, 3 ಭಾಗಿಸಿ, 4 ಗುಣಿಸಿದ್ರೆ ಎಷ್ಟಾಗುತ್ತೆ; ಥಟ್ಟಂತ 10 ಸೆಕೆಂಡ್‌ನಲ್ಲಿ ಉತ್ತರ ಹೇಳಿ

ಗಣಿತ ಎಲ್ಲರಿಗೂ ಕಬ್ಬಿಣದ ಕಡಲೆಯಲ್ಲ. ಕೆಲವರು ಗಣಿತದ ಸೂತ್ರಗಳಿಗೆ ಥಟ್ಟಂತ ಉತ್ತರ ಹೇಳ್ತಾರೆ. ಅಂತಹವರಿಗಾಗಿ ಇಲ್ಲಿದೆ ಒಂದು ಬ್ರೈನ್‌ ಟೀಸರ್‌. ಇಲ್ಲೊಂದು ಸರಳ ಗಣಿತ ಸೂತ್ರವಿದೆ, ಇದಕ್ಕೆ 10 ಸೆಕೆಂಡ್‌ನಲ್ಲಿ ಉತ್ತರ ಹೇಳಿದ್ರೆ ನೀವು ನಿಜಕ್ಕೂ ಜಾಣರು.

4ರಲ್ಲಿ 3 ಗುಣಿಸಿ, 3 ಭಾಗಿಸಿ, 4 ಗುಣಿಸಿದ್ರೆ ಎಷ್ಟಾಗುತ್ತೆ?
4ರಲ್ಲಿ 3 ಗುಣಿಸಿ, 3 ಭಾಗಿಸಿ, 4 ಗುಣಿಸಿದ್ರೆ ಎಷ್ಟಾಗುತ್ತೆ?

ಗಣಿತ ಸೂತ್ರಗಳನ್ನು ಹೊಂದಿರುವ ಬ್ರೈನ್‌ ಟೀಸರ್‌ಗಳಿಗೆ ಉತ್ತರ ಹೇಳುವುದು ಕೊಂಚ ಕ್ಲಿಷ್ಟಕರ ಎನ್ನುವುದು ಸತ್ಯ. ಇದೊಂಥರ ಚಾಲೆಂಜಿಂಗ್‌ ಟಾಸ್ಕ್‌. ಇಂತಹ ಗಣಿತ ಸೂತ್ರಗಳಿಗೆ ಉತ್ತರ ಹುಡುಕಲು ಪ್ರೊಬೆಬಿಲಿಟಿ, ಬೋಡ್‌ಮಾಸ್‌, ಪರ್ಸೆಂಟೇಜ್‌ ಲೆಕ್ಕಾಚಾರಗಳನ್ನು ಅನ್ವಯಿಸಬೇಕು. ಆದರೆ ಕೆಲವು ಪ್ರಾಥಮಿಕ ಶಾಲಾ ಹಂತದ ಗಣಿತಕ್ಕೆ ಮನಸ್ಸಿನಲ್ಲಿ ಲೆಕ್ಕಾಚಾರ ಸುಲಭವಾಗಿ ಉತ್ತರ ಕಂಡುಹಿಡಿಯಬಹುದು. ನಿಮಗೆ ಗಣಿತದ ಬೇಸಿಕ್‌ ಗೊತ್ತಿದ್ದರೆ ಇದಕ್ಕೆ ಥಟ್‌ ಅಂತ ಉತ್ತರ ಹೇಳಬಹುದು. ನಿಮ್ಮ ಗಣಿತದ ಕೌಶಲವನ್ನು ಪರೀಕ್ಷೆಗೆ ಒಡ್ಡಲು ಹಾಗೂ ಗಣಿತದ ಸೂತ್ರಗಳನ್ನು ಸುಲಭವಾಗಿ ಪರಿಹರಿಸಲು ನಿಮ್ಮ ಸಾಮರ್ಥ್ಯವನ್ನು ಅಭಿವೃದ್ಧಿ ಪಡಿಸಿಕೊಳ್ಳುವುದು ಮುಖ್ಯವಾಗುತ್ತದೆ. ಅದಕ್ಕಾಗಿ ಇಲ್ಲಿದೆ ಉತ್ತಮ ಅವಕಾಶ.

Math Quiz, Game and Puzzles ಎಂಬ ಇನ್‌ಸ್ಟಾಗ್ರಾಂ ಪುಟದಲ್ಲಿ ಈ ಬ್ರೈನ್‌ ಟೀಸರ್‌ ಅನ್ನು ಹಂಚಿಕೊಳ್ಳಲಾಗಿದೆ. ಈ ಪುಟದಲ್ಲಿ ಸಾಕಷ್ಟು ಬ್ರೈನ್‌ ಟೀಸರ್‌ಗಳನ್ನು ಪೋಸ್ಟ್‌ ಮಾಡಲಾಗಿದೆ. 4X3÷3X4 ಎಷ್ಟು? ಈ ಪ್ರಶ್ನೆಗೆ ಉತ್ತರ ಏನು?

ಇಂದು ಬೆಳಿಗ್ಗೆ ಈ ಪೋಸ್ಟ್‌ ಅನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಳ್ಳಲಾಗಿದೆ. ಈಗಾಗಲೇ ಹಲವರು ಈ ಪೋಸ್ಟ್‌ ಅನ್ನು ಲೈಕ್‌ ಮಾಡಿದ್ದಾರೆ. ಹಲವು ಗಣಿತ ಪ್ರೇಮಿಗಳು ಇದಕ್ಕೆ ತಾವು ಕಂಡುಕೊಂಡ ಉತ್ತರವನ್ನು ಕಾಮೆಂಟ್‌ ಮಾಡಿದ್ದಾರೆ.

ʼಈ ಪ್ರಶ್ನೆಗೆ ನನ್ನ ಉತ್ತರ 16. 4 ರಿಂದ 3 ಗುಣಿಸಿದ್ರೆ ಉತ್ತರ 12. ನಂತರ 12 ಅನ್ನು 3 ರಿಂದ ಭಾಗಿಸಿದ್ರೆ ಉತ್ತರ 4, 4 ಅನ್ನು 4 ರಿಂದ ಗುಣಿಸಿದ್ರೆ ಉತ್ತರ 16. ಹಲವರು ಈ ಪ್ರಶ್ನೆಗೆ 16 ಎಂದು ಉತ್ತರ ಹೇಳಿದ್ದಾರೆ. ಹಾಗಾದ್ರೆ ಈ ಬ್ರೈನ್‌ ಟೀಸರ್‌ಗೆ ನಿಮ್ಮ ಉತ್ತರ ಏನು, ಜಾಸ್ತಿ ಟೈಮ್‌ ಇಲ್ಲ. 10 ಸೆಕೆಂಡ್‌ನಲ್ಲಿ ಉತ್ತರ ಹೇಳಬೇಕು ಮರಿಬೇಡಿ.

ಈ ಬ್ರೈನ್‌ ಟೀಸರ್‌ಗಳನ್ನೂ ಓದಿ

Brain Teaser: ಇಲ್ಲಿದೆ ಕೂಡಿಸಿ, ಭಾಗಿಸುವ ಸುಲಭ ಗಣಿತ; ಆದ್ರೆ ಕ್ಯಾಲ್ಕುಲೆಟರ್‌ ಬಳಸದೆ ಉತ್ತರ ಹೇಳ್ಬೇಕು; ನಿಮ್ಮಿಂದ ಸಾಧ್ಯನಾ ನೋಡಿ

ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ ಮಾಡಲಾದ ಸರಳ ಗಣಿತದ ಸೂತ್ರವೊಂದು ನಿಮ್ಮ ಮೆದುಳಿಗೆ ಹುಳ ಬಿಡುವುದು ಖಂಡಿತ. ಯಾಕೆಂದರೆ ಕ್ಯಾಲ್ಕುಲೆಟರ್‌ ಬಳಸದೇ ಈ ಪ್ರಶ್ನೆಗೆ ಉತ್ತರ ಹೇಳಬೇಕು. ಇದು ನಿಜಕ್ಕೂ ಚಾಲೆಂಜ್‌ ಅನ್ನಿಸೋದು ಸುಳ್ಳಲ್ಲ.

Brain Teaser: 9=90 ಆದ್ರೆ, 3= ಎಷ್ಟು? ಗಣಿತದಲ್ಲಿ ಪಂಟರಾದ್ರೆ ಪೆನ್ನು-ಪೇಪರ್‌ ಬಳಸದೇ ಈ ಪ್ರಶ್ನೆಗೆ ಉತ್ತರ ಹೇಳಿ

ಇತ್ತೀಚಿಗೆ ಥ್ರೆಡ್‌ನಲ್ಲಿ ಪೋಸ್ಟ್‌ ಮಾಡಲಾದ ಬ್ರೈನ್‌ ಟೀಸರ್‌ವೊಂದು ನಿಮ್ಮ ಮೆದುಳಿಗೆ ಹುಳ ಬಿಡುವುದು ಖಂಡಿತ. ಇದರಲ್ಲಿ ಒಂದು ಗಣಿತದ ಸೂತ್ರವಿದ್ದು, 3ರ ಮೌಲ್ಯ ಎಷ್ಟು ಎಂಬುದನ್ನು ಕಂಡುಹಿಡಿಯಬೇಕಾಗಿರುವುದು ನಿಮಗಿರುವ ಸವಾಲು. ಪೆನ್ನು-ಪೇಪರ್‌ ಬಳಸದೇ ಅದಕ್ಕೆ ಉತ್ತರ ಕಂಡುಹಿಡಿಯಲಯ ಸಾಧ್ಯವೇ? ಟ್ರೈ ಮಾಡಿ.