Brain Teaser: ಚಿತ್ರದಲ್ಲಿ ಒಂದೇ ಒಂದು ಕಡೆ Dog ಪದ ಇದೆ, ಅದು ಎಲ್ಲಿದೆ? 5 ಸೆಕೆಂಡ್‌ನಲ್ಲಿ ಕಂಡುಹಿಡಿಯುವುದು ನಿಮಗಿರುವ ಸವಾಲ್
ಕನ್ನಡ ಸುದ್ದಿ  /  ಜೀವನಶೈಲಿ  /  Brain Teaser: ಚಿತ್ರದಲ್ಲಿ ಒಂದೇ ಒಂದು ಕಡೆ Dog ಪದ ಇದೆ, ಅದು ಎಲ್ಲಿದೆ? 5 ಸೆಕೆಂಡ್‌ನಲ್ಲಿ ಕಂಡುಹಿಡಿಯುವುದು ನಿಮಗಿರುವ ಸವಾಲ್

Brain Teaser: ಚಿತ್ರದಲ್ಲಿ ಒಂದೇ ಒಂದು ಕಡೆ Dog ಪದ ಇದೆ, ಅದು ಎಲ್ಲಿದೆ? 5 ಸೆಕೆಂಡ್‌ನಲ್ಲಿ ಕಂಡುಹಿಡಿಯುವುದು ನಿಮಗಿರುವ ಸವಾಲ್

ನಿಮ್ಮ ಮೆದುಳು ತುಂಬಾನೇ ಚುರುಕಾಗಿದೆ ಎಂದು ನಿಮಗೆ ಅನ್ನಿಸುತ್ತಾ, ಹಾಗಾದ್ರೆ ಅದಕ್ಕೊಂದು ಪರೀಕ್ಷೆ ನೀಡಿ. ಚಿತ್ರದಲ್ಲಿ ಒಂದಿಷ್ಟು ಆಂಗ್ಲ ಪದಗಳನ್ನ ಬರೆಯಲಾಗಿದ್ದು, ಆ ಪದಗಳ ನಡುವೆ ಒಂದೇ ಒಂದು ಕಡೆ Dog ಪದ ಇದೆ. ಅದು ಎಲ್ಲಿದೆ ಎಂದು ಕಂಡುಹಿಡಿಯುವುದು ನಿಮಗಿರುವ ಸವಾಲು. ನಿಮಗಿರುವುದು ಕೇವಲ 5 ಸೆಕೆಂಡ್ ಸಮಯ.

ಬ್ರೈನ್ ಟೀಸರ್
ಬ್ರೈನ್ ಟೀಸರ್

ಹಬ್ಬದ ರಜೆಗಳು ಕಳೆದು ಪುನಃ ಕಚೇರಿಗೆ ಹೋದಾಗ ಒಂಥರಾ ಬೇಸರ ಕಾಡುವುದು ಸಹಜ. ಇಂತಹ ಸಮಯದಲ್ಲಿ ಮೆದುಳು ಕೂಡ ಚುರುಕಾಗಿ ಕೆಲಸ ಮಾಡುವುದಿಲ್ಲ. ನಿಮಗೂ ಅದೇ ಭಾವನೆ ಇದ್ದರೆ ಮೆದುಳು ಚುರುಕಾಗಿಸುವ ಈ ಬ್ರೈನ್ ಟೀಸರ್‌ಗಳಿಗೆ ಉತ್ತರ ಹೇಳುವ ಪ್ರಯತ್ನ ಮಾಡಿ. ಇದರಿಂದ ನಿಮ್ಮ ಮನಸ್ಸಿಗೆ ಮೋಜು ಸಿಗುತ್ತದೆ, ಬುದ್ಧಿಯೂ ಚುರುಕಾಗುತ್ತದೆ.

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುವ ಇಂತಹ ಬ್ರೈನ್ ಟೀಸರ್‌ಗಳು ಟ್ರಿಕ್ಕಿ ಎನ್ನಿಸಿದರೂ ಅದಕ್ಕೆ ಉತ್ತರ ಕಂಡುಕೊಳ್ಳುವವರೆಗೂ ಮನಸ್ಸಿಗೆ ಖುಷಿ ಸಿಗುವುದಿಲ್ಲ. ಆ ಕಾರಣಕ್ಕೆ ನಾವು ಬ್ರೈನ್ ಟೀಸರ್‌ಗೆ ಉತ್ತರ ಹೇಳಲು ಸಾಕಷ್ಟು ಬುದ್ಧಿ ಖರ್ಚು ಮಾಡಬೇಕಾಗುತ್ತದೆ. ಇದರಿಂದ ಮನಸ್ಸು ಒಂದಿಷ್ಟು ಹೊತ್ತು ಬೇರೇನೂ ಯೋಚನೆ ಮಾಡದೇ ಉತ್ತರ ಹುಡುಕುವ ಸಲುವಾಗಿ ಅದರ ಸುತ್ತಲೂ ಯೋಚನೆ ಮಾಡುತ್ತಿರುತ್ತದೆ. ಇದರಿಂದ ನಮ್ಮಲ್ಲಿ ಏಕಾಗ್ರತೆಯು ಬೆಳೆಯುತ್ತದೆ.

ಇಂದಿನ ಬ್ರೈನ್ ಟೀಸರ್ ಚಿತ್ರದಲ್ಲಿ ಒಂದಿಷ್ಟು ಇಂಗ್ಲಿಷ್ ಪದಗಳಿಗೆ, ವರ್ಡ್‌ ಪಜಲ್‌ನಂತೆ ಕಾಣುವ ಈ ಚಿತ್ರದಲ್ಲಿ ಒಂದು ಕಡೆ DOG ಪದ ಇದೆ. ಅದು ಇಲ್ಲಿದೆ ಎಂದು ನೀವು ಕಂಡುಹಿಡಿಯಬೇಕು. ಇದು ನಿಮಗಿರುವ ಸವಾಲು. ಮೆದುಳಿಗೆ ಹುಳ ಬಿಡುವಂತಿರುವ ಈ ಬ್ರೈನ್ ಟೀಸರ್‌ನಲ್ಲಿ DOG ಪದ ಹುಡುಕುವುದು ಖಂಡಿತ ಸುಲಭದ ಮಾತಲ್ಲ. ಇದನ್ನು ಕೇವಲ 5 ನಿಮಿಷಗಳಲ್ಲಿ ನೀವು ಕಂಡುಹಿಡಿಯಬೇಕು.

Menace3k ಎನ್ನುವ ಇನ್‌ಸ್ಟಾಗ್ರಾಂ ಪುಟದಲ್ಲಿ ಈ ಬ್ರೈನ್ ಟೀಸರ್ ಅನ್ನು ಹಂಚಿಕೊಳ್ಳಲಾಗಿತ್ತು. ‘ನಿಮ್ಮಿಂದ ಉತ್ತರ ಹೇಳಲು ಸಾಧ್ಯವೇ‘ ಎಂಬ ಶೀರ್ಷಿಕೆ ಬರೆದುಕೊಂಡು ಈ ಬ್ರೈನ್ ಟೀಸರ್ ಅನ್ನು ಪೋಸ್ಟ್ ಮಾಡಲಾಗಿದೆ. ಈ ಬ್ರೈನ್ ಟೀಸರ್‌ಗೆ ಹಲವರು ಉತ್ತರ ಕಂಡುಹಿಡಿಯುವ ಪ್ರಯತ್ನ ಮಾಡಿದ್ದರೂ 5 ಸೆಕೆಂಡ್‌ನೊಳಗೆ ಬಹುತೇಕರಿಗೆ ಉತ್ತರ ಹೇಳಲು ಸಾಧ್ಯವಾಗಿಲ್ಲ, ಹಾಗಾದರೆ ಇದಕ್ಕೆ ಉತ್ತರ ಹೇಳಲು ನಿಮ್ಮಿಂದ ಸಾಧ್ಯವೇ ಪ್ರಯತ್ನ ಮಾಡಿ.

ಈ ಬ್ರೈನ್ ಟೀಸರ್‌ಗಳನ್ನೂ ಓದಿ

Brain Teaser: ನಿಮ್ಮ ಮೆದುಳಿಗೊಂದು ಸವಾಲ್‌, ಚಿತ್ರದಲ್ಲಿ ಮಿಸ್ ಆಗಿರುವ ನಂಬರ್ ಯಾವುದು, 15 ಸೆಕೆಂಡ್ ಒಳಗೆ ಉತ್ತರ ಹೇಳಿ

ಗಣಿತದಲ್ಲಿ ನೀವು ಜಾಣರು ಅಂತಾದ್ರೆ ನಿಮಗಾಗಿ ಇ‍ಲ್ಲೊಂದು ಸವಾಲಿದೆ. ಈ ಚಿತ್ರದಲ್ಲಿ ಒಂದು ನಂಬರ್ ಮಿಸ್ ಆಗಿದೆ. ಅದು ಯಾವುದು ಎಂದು ಕಂಡುಹಿಡಿಯಬೇಕು. ನಿಮ್ಮ ಮೆದುಳು ಶಾರ್ಪ್ ಇದ್ರೆ ಕೇವಲ 15 ಸೆಕೆಂಡ್‌ ಒಳಗೆ ಉತ್ತರ ಹೇಳಬೇಕು. ನಿಮ್ಮ ಸಮಯ ಈಗ ಶುರು, ಟ್ರೈ ಮಾಡಿ.

Brain Teaser: ಹದ್ದಿನ ಕಣ್ಣಿನಷ್ಟೇ ನಿಮ್ಮ ಕಣ್ಣು ಕೂಡ ಶಾರ್ಪ್ ಅಂತಾದ್ರೆ ಚಿತ್ರದಲ್ಲಿ ಇರುವ ನಂಬರ್ ಯಾವುದು ಹೇಳಿ, ನಿಮಗೊಂದು ಸವಾಲ್‌

ಎರಡು ಬಣ್ಣದ ಬಾಕ್ಸ್ ಇರುವ ಈ ಚಿತ್ರದಲ್ಲಿ ಒಂದು ನಂಬರ್ ಬರೆಯಲಾಗಿದೆ. ಆ ನಂಬರ್ ಯಾವುದು ಎಂಬುದನ್ನು ನೀವು ಕಂಡುಹಿಡಿಯಬೇಕು. ಹದ್ದಿನ ಕಣ್ಣಿನಷ್ಟೇ ನಿಮ್ಮ ಕಣ್ಣು ಸೂಕ್ಷ್ಮವಾಗಿದ್ದರೆ ಮಾತ್ರ ನಿಮ್ಮಿಂದ ಈ ಪಜಲ್‌ಗೆ ಸರಿಯಾದ ಉತ್ತರ ಕಂಡುಹಿಡಿಯಲು ಸಾಧ್ಯವಾಗುತ್ತದೆ.

Whats_app_banner