Brain Teaser: ನಿಮ್ಮ ಮೆದುಳಿಗೊಂದು ಸವಾಲ್, ಚಿತ್ರದಲ್ಲಿ ಮಿಸ್ ಆಗಿರುವ ನಂಬರ್ ಯಾವುದು, 15 ಸೆಕೆಂಡ್ ಒಳಗೆ ಉತ್ತರ ಹೇಳಿ
ಗಣಿತದಲ್ಲಿ ನೀವು ಜಾಣರು ಅಂತಾದ್ರೆ ನಿಮಗಾಗಿ ಇಲ್ಲೊಂದು ಸವಾಲಿದೆ. ಈ ಚಿತ್ರದಲ್ಲಿ ಒಂದು ನಂಬರ್ ಮಿಸ್ ಆಗಿದೆ. ಅದು ಯಾವುದು ಎಂದು ಕಂಡುಹಿಡಿಯಬೇಕು. ನಿಮ್ಮ ಮೆದುಳು ಶಾರ್ಪ್ ಇದ್ರೆ ಕೇವಲ 15 ಸೆಕೆಂಡ್ ಒಳಗೆ ಉತ್ತರ ಹೇಳಬೇಕು. ನಿಮ್ಮ ಸಮಯ ಈಗ ಶುರು, ಟ್ರೈ ಮಾಡಿ.
ಆಯುಧಪೂಜೆ ಮುಗಿಸಿ, ಮನೆಯಲ್ಲೇ ಕೂತಿದ್ದು ಬೇಸರವಾಗಿದ್ರೆ ಮೆದುಳಿಗೆ ಸ್ವಲ್ಪ ಕೆಲಸ ಕೊಡಿ. ಏನಪ್ಪಾ ಅಂತ ಕೆಲಸ ಅಂತೀರಾ, ಅದೇ ಬ್ರೈನ್ ಟೀಸರ್‌ಗೆ ಉತ್ತರ ಹೇಳೋದು. ಇಂದಿನ ಬ್ರೈನ್ ಟೀಸರ್ ಗಣಿತಕ್ಕೆ ಸಂಬಂಧಿಸಿದ್ದಾಗಿ. ಇದರಲ್ಲಿ ಒಂದು ನಂಬರ್ ಮಿಸ್ ಆಗಿದೆ, ಆ ನಂಬರ್ ಯಾವುದು ಎಂದು 15 ಸೆಕೆಂಡ್‌ನಲ್ಲಿ ಕಂಡುಹಿಡಿಯಬೇಕಾಗಿರುವುದು ನಿಮಗಿರುವ ಸವಾಲು.
ಇಂತಹ ಬ್ರೈನ್ ಟೀಸರ್‌ಗಳಿಗೆ ಉತ್ತರ ಹುಡುಕುವ ಪ್ರಯತ್ನ ಮಾಡುವುದರಿಂದ ಮೆದುಳು ಚುರುಕಾಗುತ್ತದೆ. ಕಣ್ಣುಗಳು ಸೂಕ್ಷ್ಮವಾಗುತ್ತದೆ. ಯೋಚನಾಶಕ್ತಿ ವೃದ್ಧಿಯಾಗುತ್ತದೆ. ಏಕಾಗ್ರತೆ ಬೆಳೆಯುತ್ತದೆ. ಇದರಿಂದ ಸಮಸ್ಯೆ ಪರಿಹರಿಸುವ ಗುಣವೂ ವೃದ್ಧಿಯಾಗುತ್ತದೆ. ಈ ಎಲ್ಲದರ ಜೊತೆಗೆ ಒಂದಿಷ್ಟು ಮೋಜು ಕೂಡ ಸಿಗುತ್ತದೆ.
ಆ ಕಾರಣಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಇತ್ತೀಚೆಗೆ ಸಾಕಷ್ಟು ಬ್ರೈನ್ ಟೀಸರ್‌ಗಳು ವೈರಲ್ ಆಗುತ್ತಿವೆ. ಇದರಿಂದ ನಿಮ್ಮ ಕಣ್ಣು ಹಾಗೂ ಮೆದುಳು ಎರಡಕ್ಕೂ ಸಾಕಷ್ಟು ಕೆಲಸ ಸಿಗುತ್ತದೆ. ನೀವು ನಿಜಕ್ಕೂ ಖಾಲಿ ಕೂತು ಬೇಸರ ಅನುಭವಿಸುತ್ತಿದ್ದರೆ ಇಂತಹ ಬ್ರೈನ್ ಟೀಸರ್‌ಗಳು ನಿಮ್ಮ ಮೆದುಳನ್ನು ಚುರುಕು ಮಾಡಿ, ಬೇಸರ ಕಳೆಯುವಂತೆ ಮಾಡುತ್ತವೆ.
ಇಂದಿನ ಬ್ರೈನ್ ಟೀಸರ್‌ನಲ್ಲಿ ಏನಿದೆ?
ಒಂದು ವೃತ್ತಾಕಾರದ ಪೆಂಡಲ್ ಇರುವ ಈ ಚಿತ್ರದಲ್ಲಿ 5,18, 7, 15, 6, 21, 3 ಸಂಖ್ಯೆಗಳನ್ನ ಬರೆಯಲಾಗಿದೆ. ಮಧ್ಯದಲ್ಲಿ ಅಂದರೆ 7 ಹಾಗೂ 15ರ ನಡುವೆ ಒಂದು ಸಂಖ್ಯೆ ಮಿಸ್ ಆಗಿದೆ. ಅದು ಯಾವುದು ಎಂದು ಕಂಡುಹಿಡಿಯುವುದು ನಿಮಗಿರುವ ಸವಾಲು. ಗಣಿತದ ಸೂತ್ರ ಇದಾಗಿದ್ದು, ಕೊಂಚ ಯೋಚಿಸಿದ್ರೆ ಖಂಡಿತ ನಿಮಗೆ ಇದಕ್ಕೆ ಉತ್ತರ ಕಂಡುಕೊಳ್ಳುವುದು ಸಮಸ್ಯೆ ಎನ್ನಿಸುವುದಿಲ್ಲ.
ಸರಿ ನಿಮ್ಮ ಸಮಯ ಈಗ ಶುರು, 15 ಸೆಕೆಂಡ್ ಒಳಗೆ ಈ ಬ್ರೈನ್ ಟೀಸರ್‌ಗೆ ಉತ್ತರ ಕಂಡುಕೊಳ್ಳಲು ಸಾಧ್ಯವಾಗುವುದೇ ಪ್ರಯತ್ನಿಸಿ. ನಂತರ ಅದನ್ನು ನಿಮ್ಮ ಮನೆಯವರಿಗೂ ಚಾಲೆಂಜ್ ಮಾಡಿ, ಉತ್ತರ ಕಂಡುಕೊಳ್ಳುವಂತೆ ತಿಳಿಸಿ.
ಈ ಬ್ರೈನ್ ಟೀಸರ್‌ಗಳನ್ನೂ ಓದಿ
Brain Teaser: ಹದ್ದಿನ ಕಣ್ಣಿನಷ್ಟೇ ನಿಮ್ಮ ಕಣ್ಣು ಕೂಡ ಶಾರ್ಪ್ ಅಂತಾದ್ರೆ ಚಿತ್ರದಲ್ಲಿ ಇರುವ ನಂಬರ್ ಯಾವುದು ಹೇಳಿ, ನಿಮಗೊಂದು ಸವಾಲ್
ಎರಡು ಬಣ್ಣದ ಬಾಕ್ಸ್ ಇರುವ ಈ ಚಿತ್ರದಲ್ಲಿ ಒಂದು ನಂಬರ್ ಬರೆಯಲಾಗಿದೆ. ಆ ನಂಬರ್ ಯಾವುದು ಎಂಬುದನ್ನು ನೀವು ಕಂಡುಹಿಡಿಯಬೇಕು. ಹದ್ದಿನ ಕಣ್ಣಿನಷ್ಟೇ ನಿಮ್ಮ ಕಣ್ಣು ಸೂಕ್ಷ್ಮವಾಗಿದ್ದರೆ ಮಾತ್ರ ನಿಮ್ಮಿಂದ ಈ ಪಜಲ್‌ಗೆ ಸರಿಯಾದ ಉತ್ತರ ಕಂಡುಹಿಡಿಯಲು ಸಾಧ್ಯವಾಗುತ್ತದೆ.
Brain Teaser: ಮೆದುಳಿಗೆ ಹುಳ ಬಿಡುವ ಈ ಬ್ರೈನ್ ಟೀಸರ್‌ನಲ್ಲಿ 'ಎ'ಗೂ 'ಡಿ'ಗೂ ಇರುವ ಸಂಬಂಧವೇನು ಹೇಳಿ? ಬುದ್ಧಿ ಉಪಯೋಗಿಸಿ ಉತ್ತರಿಸಿ
ಫೇಸ್‌ಬುಕ್‌ನಲ್ಲಿ ವೈರಲ್ ಆಗಿರುವ ಬ್ರೈನ್ ಟೀಸರ್‌ವೊಂದು ನಿಮ್ಮ ಮೆದುಳಿಗೆ ಹುಳ ಬಿಡುವಂತಿರುವುದು ಸುಳ್ಳಲ್ಲ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳುವ ಪ್ರಶ್ನೆಯಂತಿರುವ ಈ ಬ್ರೈನ್ ಟೀಸರ್ ಸಂಬಂಧಗಳ ರಹಸ್ಯವನ್ನು ಬಿಚ್ಚಿಡುವಂಥದ್ದು. ಎ ಹಾಗೂ ಡಿ ನಡುವೆ ಇರುವ ಸಂಬಂಧ ಏನು ಎಂಬುದನ್ನು ನೀವು ಹೇಳಬೇಕು.