Brain Teaser: ಹುಲ್ಲಿನ ಬಣವೆಯಲ್ಲಿ ಸೂಜಿಯೊಂದು ಕಳೆದುಹೋಗಿದೆ; ಹದ್ದಿನ ಕಣ್ಣು ನಿಮ್ಮದಾಗಿದ್ದರೆ 5 ಸೆಕೆಂಡ್‌ನಲ್ಲಿ ಹುಡುಕಿ ತೋರಿಸಿ
ಸಾಮಾಜಿಕ ಜಾಲತಾಣವಾದ ಫೇಸ್‌ಬುಕ್‌ನಲ್ಲಿ ಇದೀಗ ಬ್ರೈನ್ ಟೀಸರ್‌ವೊಂದು ಸಾಕಷ್ಟು ಸದ್ದು ಮಾಡುತ್ತಿದೆ. ಇಲ್ಲೊಂದು ಹುಲ್ಲಿನ ಬಣವೆಯ ಚಿತ್ರವಿದೆ. ಈ ಹುಲ್ಲಿನ ಬಣವೆಯ ಮಧ್ಯೆ ಸೂಜಿಯೊಂದು ಕಳೆದು ಹೋಗಿದೆ. 5 ಸೆಕೆಂಡ್‌ನಲ್ಲಿ ಸೂಜಿಯನ್ನು ಹುಡುಕುವುದು ನಿಮಗಿರುವ ಚಾಲೆಂಜ್.
ಒಂದಿಷ್ಟು ದಿನಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದ್ದು ಬ್ರೈನ್ ಟೀಸರ್ ಚಿತ್ರವೊಂದು ಇದೀಗ ಮತ್ತೆ ಮುನ್ನೆಲೆಗೆ ಬಂದಿದೆ. ಈ ಬ್ರೈನ್ ಟೀಸರ್ ಜನರ ಕಣ್ಣಿಗೆ ಮೋಸ ಮಾಡುತ್ತಿರುವುದಂತೂ ಸುಳ್ಳಲ್ಲ. ಇಲ್ಲೊಂದು ಒಣಹುಲ್ಲಿನ ರಾಶಿ ಇದೆ. ಆ ರಾಶಿಯ ಮೇಲೆ ಒಂದಿಷ್ಟು ಕೀಟಗಳು ಸುಳಿದಾಡುತ್ತಿವೆ. ಆದರೆ ಈ ರಾಶಿ ಹುಲ್ಲಿನ ನಡುವೆ ಸೂಜಿಯೊಂದು ಕಳೆದಿದೆ. ಆ ಸೂಚಿಯನ್ನು ಹುಡುಕುವುದು ನಿಮಗಿರುವ ಸವಾಲು. ಹಾಗಂತ ದಿನವಿಡೀ ಕುಳಿತ ಹುಡುಕುವ ಹಾಗಿಲ್ಲ. ಕೇವಲ 5 ಸೆಕೆಂಡ್ ಒಳಗೆ ಚಿತ್ರದಲ್ಲಿರುವ ಸೂಜಿಯನ್ನು ಹುಡುಕಬೇಕು. ನಿಮ್ಮ ಕಣ್ಣು ನಿಜಕ್ಕೂ ಸೂಕ್ಷ್ಮವಾಗಿದೆ, ಮೆದುಳು ಚುರುಕಾಗಿದೆ ಎಂದರೆ ಐದೇ ಐದು ಸೆಕೆಂಡ್‌ನಲ್ಲಿ ಸೂಜಿಯನ್ನು ಹುಡುಕಿ.
ʼಹುಲ್ಲಿನ ಬಣವೆಯಲ್ಲಿರುವ ಸೂಜಿಯನ್ನು ಹುಡುಕಲು ಸಾಧ್ಯವೇ?ʼ ಎಂಬ ಶೀರ್ಷಿಕೆ ಬರೆದುಕೊಳ್ಳುವ ಮೂಲಕ ಈ ಚಿತ್ರವನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದಾರೆ ಹಂಗೇರಿಯನ್ ಮೂಲದ ಕಲಾವಿದ ಗೆರ್ಗೆಲಿ ಡುಡಾಸ್. ಇವರು ಸಾಮಾಜಿಕ ಜಾಲತಾಣದಲ್ಲಿ ಡುಡಾಲ್ಫ್ ಎಂಬ ಹೆಸರಿನಿಂದಲೂ ಖ್ಯಾತಿ ಪಡೆದಿದ್ದಾರೆ. ಚಿತ್ರದಲ್ಲಿ ರಾಶಿ ರಾಶಿ ಒಣ ಹಲ್ಲು ಬಿದ್ದಿದೆ. ಅವುಗಳ ನಡುವೆ ಸೂಜಿಯೊಂದನ್ನು ಜಾಣತನದಿಂದ ಮರೆಮಾಚಲಾಗಿದೆ. ಇದನ್ನು ನಿಮ್ಮಿಂದ ಕಂಡುಹಿಡಿಯಲು ಸಾಧ್ಯವೇ ನೋಡಿ.
ಈ ಬ್ರೈನ್ ಟೀಸರ್ ಅನ್ನು 3 ದಿನಗಳ ಹಿಂದೆ ಮೆಟಾ ಒಡೆತನದ ಫೇಸ್‌ಬುಕ್‌ನಲ್ಲಿ ಹಂಚಿಕೊಳ್ಳಲಾಗಿದೆ. ಈಗಾಗಲೇ 300ಕ್ಕೂ ಹೆಚ್ಚು ಮಂದಿ ಈ ಪೋಸ್ಟ್‌ಗೆ ಪ್ರತಿಕ್ರಿಯೆ ನೀಡಿದ್ದಾರೆ. ಅಲ್ಲದೆ ಹಲವರು ಲೈಕ್, ಕಾಮೆಂಟ್ ಮಾಡುತ್ತಲೇ ಇದ್ದಾರೆ. ಕೆಲವು ಪಜಲ್ ಪ್ರಿಯರು ಕಾಮೆಂಟ್ ಮಾಡುವ ಮೂಲಕ ತಮ್ಮ ಉತ್ತರವನ್ನು ತಿಳಿಸಲು ಪ್ರಯತ್ನಿಸುತ್ತಿದ್ದಾರೆ.
ಈ ಬ್ರೈನ್ ಟೀಸರ್‌ಗೆ ಬಂದ ಕಾಮೆಂಟ್‌ಗಳು ಹೀಗಿವೆ:
ʼಶೀರ್ಷಿಕೆ ಓದುವ ಮೊದಲೇ ನಾನು ಸೂಚಿಯನ್ನು ಕಂಡು ಹಿಡಿದೆʼ ಎಂದು ವ್ಯಕ್ತಿಯೊಬ್ಬರು ಕಾಮೆಂಟ್ ಮಾಡಿದ್ದಾರೆ. ʼಖಂಡಿತ ನಂಬಲು ಸಾಧ್ಯವಿಲ್ಲ. ನಾನು 5 ಸೆಕೆಂಡ್‌ನಲ್ಲಿ ಸೂಜಿಯನ್ನು ಕಂಡುಹಿಡಿದೆ. ಸರಿಯಾದ ಜಾಗದಲ್ಲಿ ನೋಡಿ. ಖಂಡಿತ ಸಿಗುತ್ತೆʼ ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ.
ʼಇಷ್ಟು ಸುಲಭದ ಜಾಗದಲ್ಲಿ ಸೂಜಿಯನ್ನು ಇರಿಸುತ್ತಾರೆ ಎಂದು ನಾನು ಕನಸಲ್ಲೂ ಅಂದುಕೊಂಡಿಲ್ಲʼ ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ.
ಅವರ ಕಥೆ ಬಿಡಿ, ನಿಮ್ಮಿಂದ ಸೂಜಿಯನ್ನು ಹುಡುಕಲು ಸಾಧ್ಯವಾಯ್ತೆ? ಹೌದು ಎಂದಾದರೆ ಎಷ್ಟು ನಿಮಿಷದಲ್ಲಿ ಹುಡುಕಿದ್ರಿ? ಒಂದು ವೇಳೆ ನಿಮ್ಮಿಂದ ಹುಡುಕಲು ಸಾಧ್ಯವಾಗಿಲ್ಲ ಎಂದರೆ ನಾವು ನಿಮಗೆ ಸಹಾಯ ಮಾಡುತ್ತೇವೆ.
ಇಲ್ಲಿದೆ ನೋಡಿ ಸೂಜಿ, ಒಂದು ವೇಳೆ ಈ ಚಿತ್ರದಲ್ಲಿ ಕಾಣಲು ಸಾಧ್ಯವಾಗದೇ ಇದ್ದರೆ ಪುನಃ ಹಳೆಯ ಚಿತ್ರದಲ್ಲಿ ಹೋಗಿ ನೋಡಿ. ಖಂಡಿತ ನಿಮಗೆ ಸೂಜಿ ಕಾಣುತ್ತೆ.
ಇದನ್ನೂ ಓದಿ
Brain Teaser: ನಿಮ್ಮ ಕಣ್ಣು ನಿಜಕ್ಕೂ ಸೂಕ್ಷ್ಮವಾಗಿದ್ರೆ 5 ಸೆಕೆಂಡ್‌ನಲ್ಲಿ ಹೂಗಳ ನಡುವೆ ಅಡಗಿರುವ ಚಿಟ್ಟೆಗಳನ್ನು ಹುಡುಕಿ
ಇಲ್ಲೊಂದು ಹೂಗಳ ರಾಶಿ ಇರುವ ಬ್ರೈನ್ ಟೀಸರ್ ಚಿತ್ರವಿದೆ. ಈ ಚಿತ್ರ ನಿಮ್ಮ ಗಮನ ವೀಕ್ಷಣಾ ಸಾಮರ್ಥ್ಯವನ್ನು ಪರೀಕ್ಷಿಸುತ್ತದೆ, ಅಲ್ಲದೆ ಇದು ನಿಮಗೆ ಸವಾಲು ಎಸೆಯುತ್ತದೆ, ಆ ಸವಾಲು ಎಂದರೆ ಚಿತ್ರದಲ್ಲಿ ಚಿಟ್ಟೆಗಳನ್ನು ಹುಡುಕಬೇಕು. ಅದು ಕೇವಲ 5 ಸೆಕೆಂಡ್‌ನಲ್ಲಿ.
ಈ ಬ್ರೈನ್ ಟೀಸರ್‌ಗಳನ್ನು ಬಿಡಿಸಲು ನಿಮ್ಮ ಕಣ್ಣು ಹಾಗೂ ಮೆದುಳು ಎರಡೂ ಚುರುಕಾಗಿರಬೇಕು. ಇದು ಆಸಕ್ತಿ ಮೂಡಿಸುವ ಜೊತೆಗೆ ಟೈಂಪಾಸ್ ಮಾಡಲು ಕೂಡ ಉತ್ತಮ. ಹಾಗಾಗಿ ಹಲವರು ಬ್ರೈನ್ ಟೀಸರ್ ಅನ್ನು ಇಷ್ಟಪಡುತ್ತಾರೆ. ಮಾತ್ರವಲ್ಲ, ನಿಮ್ಮ ಪ್ರೀತಿಪಾತ್ರರಿಗೆ ಚಾಲೆಂಜ್ ಮಾಡಲು ಇದು ನಿಮಗೆ ಸಹಾಯ ಮಾಡುತ್ತದೆ.
ವಿಭಾಗ