Brain Teaser: ವೃತ್ತದಲ್ಲಿ ಅಡಗಿರುವ ನಂಬರ್ ಯಾವುದು? 8 ಸೆಕೆಂಡ್ ಒಳಗೆ ಕಂಡುಹಿಡಿಯಿರಿ, ನಿಮ್ಮ ಕಣ್ಣಿಗೊಂದು ಪರೀಕ್ಷೆ
Brain Teaser Eye Test: ಇಂದಿನ ಬ್ರೈನ್ ಟೀಸರ್‌ನಲ್ಲಿ ಒಂದು ಹಸಿರು ಬಣ್ಣದ ವೃತ್ತವಿದೆ. ಆ ವೃತ್ತದಲ್ಲಿ ಮೇಲ್ನೋಟಕ್ಕೆ ಏನೂ ಕಾಣುವುದಿಲ್ಲ. ಆದರೆ ಅದರಲ್ಲಿ ನಂಬರ್ ಒಂದು ಅಡಗಿದೆ. ಆ ನಂಬರ್ ಯಾವುದು ಎಂದು 8 ಸೆಕೆಂಡ್ ಒಳಗೆ ಕಂಡುಹಿಡಿಯಬೇಕು. ನಿಮ್ಮ ಕಣ್ಣಿಗಿದು ಪರೀಕ್ಷೆ, ಪ್ರಯತ್ನ ಮಾಡಿ.
ಬ್ರೈನ್ ಟೀಸರ್‌ಗಳು ಕೇವಲ ಮೆದುಳು ಮಾತ್ರವಲ್ಲ ಕಣ್ಣಿಗೂ ಪರೀಕ್ಷೆ ಒಡ್ಡುತ್ತವೆ. ನಮ್ಮ ಕಣ್ಣು ಮೇಲ್ನೋಟಕ್ಕೆ ಗ್ರಹಿಸಲು ಸಾಧ್ಯವಾಗದೇ ಇರುವ ಅಂಶಗಳು ಬ್ರೈನ್ ಟೀಸರ್‌ನಲ್ಲಿರುತ್ತವೆ. ಇಂತಹ ಚಿತ್ರಗಳು ಕಣ್ಣಿಗೆ ಸವಾಲು ಹಾಕುವಂತಿರುವುದು ಸುಳ್ಳಲ್ಲ.
ಇಲ್ಲೊಂದು ಅಂಥದ್ದೇ ಬ್ರೈನ್ ಟೀಸರ್ ಚಿತ್ರವಿದೆ. ಇದರಲ್ಲಿ ಒಂದು ಹಸಿರು ಬಣ್ಣ ತುಂಬಿರುವ ವೃತ್ತ ಕಾಣಿಸುತ್ತದೆ. ಈ ವೃತ್ತದಲ್ಲಿ ಒಂದು ನಂಬರ್ ಇದೆ. ಅದು ಯಾವುದು ಎಂದು ಕಂಡು ಹಿಡಿಯುವುದು ನಿಮಗಿರುವ ಸವಾಲ್. ಹಾಗಂತ ಅಲ್ಲಿ ನಂಬರ್ ಇಲ್ಲ ಎಂದು ಮಾತ್ರ ಹೇಳಬೇಡಿ. ಖಂಡಿತ ಅಲ್ಲಿ ನಂಬರ್ ಇದೆ. ಆದರೆ ನಂಬರ್ ಯಾವುದು ಎಂದು ನೀವು ಕಂಡುಹಿಡಿಯಬೇಕು.
ನನ್ನ ಕಣ್ಣು ಸಖತ್ ಶಾರ್ಪ್, ಹದ್ದಿನ ಕಣ್ಣಿಗಿಂತ ಚುರುಕು ಎನ್ನುವವರಿಗೂ ಈ ಬ್ರೈನ್ ಟೀಸರ್‌ಗೆ ಉತ್ತರ ಕಂಡುಹಿಡಿಯುವುದು ಕಷ್ಟವಾಗಬಹುದು. ಯಾಕೆಂದರೆ ಇದರಲ್ಲಿ ಸುಲಭವಾಗಿ ನಿಮ್ಮ ಕಣ್ಣಿಗೆ ನಂಬರ್ ಕಾಣಿಸುವುದಿಲ್ಲ. ಆದರೆ ಸೂಕ್ಷ್ಮವಾಗಿ ಗಮನಿಸಿದ್ರೆ ಇದರಲ್ಲಿರುವ ನಂಬರ್ ಯಾವುದು ಎಂದು ನಿಮಗೆ ಸುಲಭವಾಗಿ ಕಾಣಿಸಬಹುದು. ಇದಕ್ಕಾಗಿ ನೀವು ಕೇವಲ ಕಣ್ಣಿಗೆ ಮಾತ್ರವಲ್ಲ ಮೆದುಳಿಗೂ ಕೂಡ ಸಾಕಷ್ಟು ಕೆಲಸ ನೀಡಬೇಕು.
ಇಂತಹ ಆಪ್ಟಿಕಲ್ ಇಲ್ಯೂಷನ್‌ಗಳು ನಮ್ಮಲ್ಲಿ ಯೋಚನಾ ಶಕ್ತಿಯೊಂದಿಗೆ ಗಮನಶಕ್ತಿಯನ್ನೂ ಹೆಚ್ಚಿಸುತ್ತದೆ. ಈ ಒಂದು ಬ್ರೈನ್ ಟೀಸರ್‌ಗೆ ಉತ್ತರ ಹೇಳಲು ನಾವು ಒಂದಿಷ್ಟು ಸಮಯ ವ್ಯಯಿಸುತ್ತೇವೆ. ನಮ್ಮ ಕಣ್ಣು ಹಾಗೂ ಮನಸ್ಸು ಎರಡೂ ಈ ಕೆಲ ಹೊತ್ತು ಬೇರೇನೂ ಯೋಚನೆ ಮಾಡದೇ ಇದಕ್ಕಾಗಿ ಸಮಯ ಕೊಡುತ್ತದೆ. ಇದರಿಂದ ಮನಸ್ಸಿಗೆ ನೆಮ್ಮದಿ ಖುಷಿ ಸಿಗುತ್ತದೆ. ಬೇರೆಲ್ಲಾ ಯೋಚನೆಗಳಿಂದ ಕೆಲ ಹೊತ್ತು ನಾವು ಮುಕ್ತರಾಗುತ್ತೇವೆ.
ಪ್ರತಿದಿನ ಇಂತಹ ಬ್ರೈನ್ ಟೀಸರ್‌ಗಳಿಗೆ ಉತ್ತರ ಹುಡುಕುವ ಪ್ರಯತ್ನ ಮಾಡಿದರೆ ಖಂಡಿತ ನಮ್ಮ ಮೆದುಳು ಚುರುಕಾಗುತ್ತದೆ, ಸಾಮಾಜಿಕ ಜಾಲತಾಣಗಳಲ್ಲಿ ಇಂತಹ ಸಾಕಷ್ಟು ಬ್ರೈನ್ ಟೀಸರ್‌ಗಳು ವೈರಲ್ ಆಗುತ್ತವೆ. ಇದನ್ನು ಪೋಸ್ಟ್ ಮಾಡಲೆಂದೇ ಕೆಲವೊಂದು ವಿಶೇಷ ಪುಟಗಳು ಕೂಡ ಇವೆ. ಸರಿ ಇನ್ನೇಕೆ ತಡ ಚಿತ್ರದಲ್ಲಿ ಕಾಣುತ್ತಿರುವ ನಂಬರ್ ಯಾವುದು ಕಂಡು ಹಿಡಿಯಲು ಪ್ರಯತ್ನಿಸಿ. ನಿಮ್ಮ ಸಮಯ ಈಗ ಶುರು.
ಈ ಬ್ರೈನ್ ಟೀಸರ್‌ಗಳನ್ನು ಓದಿ
Brain Teaser: ‘M‘ ರಾಶಿ ನಡುವೆ ಅಡಗಿ ಕುಳಿತಿರುವ 'N' ಅಕ್ಷರವನ್ನು ಹುಡುಕಿ, ನಿಮಗಿರೋದು ಕೇವಲ 11 ಸೆಕೆಂಡ್ ಸಮಯ
ನಿಮ್ಮ ಕಣ್ಣು, ಮೆದುಳು ತುಂಬಾನೇ ಶಾರ್ಪ್ ಆಗಿದ್ಯಾ? ಇಂತಹ ಸೂಕ್ಷ್ಮವನ್ನಾದ್ರೂ ನಿಮ್ಮ ಕಣ್ಣು ಗುರುತಿಸುತ್ತಾ, ಹಾಗಾದ್ರೆ ಇಲ್ಲಿರುವ M ಅಕ್ಷರಗಳ ನಡುವೆ ಅಡಗಿ ಕುಳಿತಿರುವ N ಹುಡುಕಿ. ನಿಮಗಿರೋದು ಕೇವಲ 11 ಸೆಕೆಂಡ್ ಸಮಯ, ನಿಮ್ಮ ಕಣ್ಣು ಎಷ್ಟು ಚುರುಕಿದೆ ನೋಡೋಣ.
Brain Teaser: 2+3=10, 6+5=66, 7+2=63 ಆದ್ರೆ 4+7= ಎಷ್ಟು? ಲೆಕ್ಕದಲ್ಲಿ ಪಕ್ಕಾ ಇದ್ರೆ ಪಟ್ ಅಂತ ಉತ್ತರ ಹೇಳಿ
ಸಂಡೇ ಹೇಗಪ್ಪಾ ಟೈಮ್ ಪಾಸ್ ಮಾಡೋದು, ಹೊರಗಡೆ ಹೋಗೋಕು ಬೇಜಾರು ಅನ್ನೋರ ಲಿಸ್ಟ್‌ನಲ್ಲಿ ನೀವೂ ಇದ್ರೆ ನಿಮಗಾಗಿ ಇಲ್ಲಿದೆ ಒಂದು ಬೇಸರ ಕಳೆಯುವ ಪಜಲ್. ಇದೊಂದು ಕೂಡಿಸುವ ಲೆಕ್ಕವಾದ್ರೂ 4+7 ಎಷ್ಟು ಎಂದು ಹೇಳೋಕೆ ನೀವು ಖಂಡಿತ ಸಾಕಷ್ಟು ಬುದ್ಧಿ ಉಪಯೋಗಿಸಬೇಕಾಗುತ್ತೆ, ಗಣಿತಪ್ರೇಮಿಗಳು ಟ್ರೈ ಮಾಡಿ ನೋಡೋಣ.