ಕನ್ನಡ ಸುದ್ದಿ  /  ಜೀವನಶೈಲಿ  /  Brain Teaser: 18ರಲ್ಲಿ 9 ಕಳೆದು ಎ ಯಿಂದ ಭಾಗಿಸಿ 2 ಕೂಡಿಸಿ, 18 ಕಳೆದು ಎ ಯಿಂದ ಭಾಗಿಸಿದ್ರೆ ಉತ್ತರ 11, ಹಾಗಿದ್ರೆ ಎ ಮೌಲ್ಯವೆಷ್ಟು?

Brain Teaser: 18ರಲ್ಲಿ 9 ಕಳೆದು ಎ ಯಿಂದ ಭಾಗಿಸಿ 2 ಕೂಡಿಸಿ, 18 ಕಳೆದು ಎ ಯಿಂದ ಭಾಗಿಸಿದ್ರೆ ಉತ್ತರ 11, ಹಾಗಿದ್ರೆ ಎ ಮೌಲ್ಯವೆಷ್ಟು?

ಗಣಿತದ ಪಜಲ್‌ ಬಿಡಿಸುವುದು ನಿಮ್ಮ ನೆಚ್ಚಿನ ಹವ್ಯಾಸವಾದ್ರೆ ಇಲ್ಲಿದೆ ನಿಮಗಾಗಿ ಒಂದು ಮೆದುಳಿಗೆ ಹುಳ ಬಿಡುವ ಲೆಕ್ಕಾಚಾರ. ಈ ಗಣಿತದ ಪಜಲ್‌ಗೆ ನೀವು ಕ್ಯಾಲ್ಕುಲೆಟರ್‌ ಬಳಸದೇ ಉತ್ತರ ಹೇಳಬೇಕು. ಗಣಿತದಲ್ಲಿ ಬುದ್ಧಿವಂತರಾದ್ರೆ ಎಯ ಮೌಲ್ಯವೆಷ್ಟು ಕಂಡುಹಿಡಿಯಿರಿ.

ಎ ಮೌಲ್ಯವೆಷ್ಟು?
ಎ ಮೌಲ್ಯವೆಷ್ಟು?

ಗಣಿತ ಅಂದ್ರೆ ಹಲವರಿಗೆ ಪ್ರೀತಿ. ಮೆದುಳನ್ನು ಚುರುಕು ಮಾಡುವ, ಮೆದುಳಿಗೆ ಕೆಲಸ ಕೊಡುವ ಗಣಿತದ ಪಜಲ್‌ಗಳನ್ನು ಬಿಡಿಸುವುದು ಹಲವರಿಗೆ ಇಷ್ಟವಾಗುತ್ತದೆ. ಗಣಿತದ ಪಜಲ್‌ಗಳು ನಮ್ಮನ್ನು ಕ್ಷಣಕಾಲ ಹಿಡಿದಿಡುವುದು ಸುಳ್ಳಲ್ಲ. ಅದಕ್ಕಾಗಿ ಸಾಮಾಜಿಕ ಜಾಲತಾಣಗಳಲ್ಲಿ ಪಜಲ್‌ಗಳು ವೈರಲ್‌ ಆಗುತ್ತಿರುತ್ತವೆ. ಈ ಪಜಲ್‌ಗಳು ನಮ್ಮ ಬುದ್ಧಿಯನ್ನು ಚುರುಕು ಮಾಡುವ ಜೊತೆಗೆ ಒಂದಿಷ್ಟು ಹೊತ್ತು ಮನಸ್ಸಿಗೆ ಮಜಾ ಕೊಡುತ್ತವೆ. ಈ ಪಜಲ್‌ಗಳು ನಮ್ಮಲ್ಲಿನ ಕೌಶಲವನ್ನು ಚುರುಕುಗೊಳಿಸಲು ಸಹಾಯ ಮಾಡುತ್ತವೆ. ಔಟ್‌ ಆಫ್‌ ದಿ ಬಾಕ್ಸ್‌ ಯೋಚಿಸುವಂತೆ ಮಾಡುವ ಈ ಬ್ರೈನ್‌ ಟೀಸರ್‌ನ ಪಜಲ್‌ಗಳು ಗಣಿತದಲ್ಲಿ ನಮ್ಮನ್ನು ಶಾರ್ಪ್‌ ಮಾಡುವುದು ಸುಳ್ಳಲ್ಲ. ಅದೆಲ್ಲಾ ಸರಿ ನೀವು ಗಣಿತದಲ್ಲಿ ಶಾರ್ಪ್‌ ಆಗಿದ್ದರೆ, ನಿಮಗಾಗಿ ಇಲ್ಲಿದೆ ಸೂತ್ರವಿದೆ. ಇದಕ್ಕೆ ನೀವು ಕ್ಯಾಲ್ಕುಲೆಟರ್‌ ಬಳಸದೇ ಉತ್ತರ ಕಂಡುಹಿಡಿಯಬೇಕು.

ಟ್ರೆಂಡಿಂಗ್​ ಸುದ್ದಿ

Easy Daily Quiz ಎಂಬ ಎಕ್ಸ್‌ ಪುಟದಲ್ಲಿ ಹಂಚಿಕೊಳ್ಳಲಾಗಿರುವ ಬ್ರೈನ್‌ ಟೀಸರ್‌ ಇದಾಗಿದೆ. ʼಎ ಯ ಮೌಲ್ಯವೆಷ್ಟು? 18-9÷A+2-18÷A= 11, ಹಾಗಾದ್ರೆ A=?ʼ ಎಂದು ಇದರಲ್ಲಿ ಬರೆದುಕೊಳ್ಳಲಾಗಿದೆ. ಸರಿ ಈ ಬ್ರೈನ್‌ ಟೀಸರ್‌ಗೆ ಉತ್ತರ ಹುಡುಕಲು ನಿಮ್ಮಿಂದ ಸಾಧ್ಯವೇ? ನಿಮ್ಮ ಸಮಯ ಈಗ ಶುರು...

ಏಪ್ರಿಲ್‌ 2 ರಂದು ಈ ಬ್ರೈನ್‌ ಟೀಸರ್‌ ಅನ್ನು ಹಂಚಿಕೊಳ್ಳಲಾಗಿದೆ. ಈ ಪೋಸ್ಟ್‌ ಶೇರ್‌ ಆದಾಗಿನಿಂದ ಸುಮಾರು 500ಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಹಲವರು ಈ ಬ್ರೈನ್‌ ಟೀಸರ್‌ಗೆ ಲೈಕ್‌ ಕಾಮೆಂಟ್‌ ಮಾಡಿದ್ದಾರೆ. ಹಲವರು ಈ ಗಣಿತದ ಪಜಲ್‌ಗೆ ಉತ್ತರ 3 ಎಂದು ಕಾಮೆಂಟ್‌ ಮಾಡಿದ್ದಾರೆ. ಹಾಗಾದ್ರೆ ಇದಕ್ಕೆ ಉತ್ತರವೇನು?

ಈ ಬ್ರೈನ್‌ ಟೀಸರ್‌ಗಳನ್ನೂ ಓದಿ

Brain Teaser: ಚಿತ್ರದಲ್ಲಿರುವ ತಪ್ಪೇನು? 10 ಸೆಕೆಂಡ್‌ನಲ್ಲಿ ಕಂಡು ಹಿಡಿಯಿರಿ; ನಿಮ್ಮ ಕಣ್ಣು ಎಷ್ಟು ಶಾರ್ಪ್‌ ಇದೆ ನೋಡೋಣ

ಶೇ 99.99 ರಷ್ಟು ಮಂದಿ ಖಂಡಿತ ಇದಕ್ಕೆ ತಪ್ಪು ಉತ್ತರ ನೀಡ್ತಾರೆ ಎಂದು ಬರೆದಿರುವ ಬ್ರೈನ್‌ ಟೀಸರ್‌ ಚಿತ್ರವೊಂದು ಇದೀಗ ಭಾರಿ ವೈರಲ್‌ ಆಗುತ್ತಿದೆ. ಅಷ್ಟಕ್ಕೂ ಚಿತ್ರದಲ್ಲೇನಿದೆ, ಇದಕ್ಕೆ ಉತ್ತರ ಏನು ಎಂಬುದನ್ನೆಲ್ಲಾ ತಿಳಿಯಬೇಕು ಅಂದ್ರೆ ಮುಂದೆ ಓದಿ.

Brain Teaser: ಆ ತರಗತಿಯಲ್ಲಿ ಒಟ್ಟು ಎಷ್ಟು ಜನ ಮಕ್ಕಳಿದ್ದಾರೆ? ಕ್ಯಾಲ್ಕುಲೆಟರ್‌ ಬಳಸದೇ ಯೋಚಿಸಿ ಉತ್ತರಿಸಿ; ನಿಮಗೊಂದು ಸವಾಲು

ಇನ್‌ಸ್ಟಾಗ್ರಾಂ ಪುಟವೊಂದರಲ್ಲಿ ಹಂಚಿಕೊಳ್ಳಲಾಗಿರುವ ಬ್ರೈನ್‌ ಟೀಸರ್‌ವೊಂದು ಇದೀಗ ಪಜಲ್‌ ಪ್ರಿಯರಿಗೆ ತಲೆ ಕೆರೆದುಕೊಳ್ಳುವಂತೆ ಮಾಡಿದೆ. ಕ್ಯಾಲ್ಕುಲೆಟರ್‌ ಬಳಸದೇ ಇಲ್ಲಿರುವ ಸುಲಭ ಗಣಿತಕ್ಕೆ ಉತ್ತರ ಹೇಳಬೇಕು. ಇದು ನಿಮಗಿರುವ ಚಾಲೆಂಜ್‌. ಉತ್ತರ ಹುಡುಕೋಕೆ ನೀವೊಮ್ಮೆ ಟ್ರೈ ಮಾಡಿ.

ವಿಭಾಗ