Brain Teaser: ಈ ಚಿತ್ರದಲ್ಲಿ ಯಾವ ನಂಬರ್ ಕಾಣುತ್ತಿದೆ? 8 ಸೆಕೆಂಡ್ ಒಳಗೆ ಉತ್ತರ ಹೇಳಿ, ನಿಮ್ಮ ಕಣ್ಣಿಗೊಂದು ಪರೀಕ್ಷೆ
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬ್ರೈನ್ ಟೀಸರ್‌ವೊಂದು ನಿಮ್ಮ ಮೆದುಳಿಗೆ ಹುಳ ಬಿಡುವುದು ಮಾತ್ರವಲ್ಲ, ಕಣ್ಣಿಗೂ ನೋವಾಗುವಂತೆ ಮಾಡುತ್ತದೆ. ಈ ಬ್ರೈನ್ ಟೀಸರ್‌ನಲ್ಲಿ ಅಡಗಿರುವ ನಂಬರ್ ಯಾವುದು ಎಂಬುದನ್ನು ನೀವು 8 ಸೆಕೆಂಡ್ ಒಳಗೆ ಕಂಡುಹಿಡಿಯಬೇಕು. ನಿಮ್ಮ ಕಣ್ಣಿಗಿದು ಚಾಲೆಂಜ್.
ಸಾಮಾಜಿಕ ಜಾಲತಾಣದಲ್ಲಿ ಆಗಾಗ ಮೆದುಳು, ಕಣ್ಣಿಗೆ ಪರೀಕ್ಷೆ ಇಡುವ ಬ್ರೈನ್ ಟೀಸರ್‌ಗಳು ವೈರಲ್ ಆಗುತ್ತವೆ. ಇವುಗಳಿಗೆ ಉತ್ತರ ಕಂಡುಹಿಡಿಯಬೇಕು ಎಂದರೆ ನಾವು ಸಾಕಷ್ಟು ಬುದ್ಧಿ ಖರ್ಚು ಮಾಡಬೇಕಾಗುತ್ತದೆ. ಇಲ್ಲಿರುವ ಬ್ರೈನ್ ಟೀಸರ್ ಮೆದುಳಿನ ಜೊತೆಗೆ ಕಣ್ಣಿಗೆ ಸಾಕಷ್ಟು ಕೆಲಸ ಕೊಡುತ್ತದೆ. ಇದು ನಿಮ್ಮ ಕಣ್ಣಿಗೆ ನೋವಾಗುವಂತೆ ಮಾಡುವುದು ಪಕ್ಕಾ. ಅಂತಹದ್ದೇನಿದೆ ಇದರಲ್ಲಿ ಅಂತೀರಾ ಮುಂದೆ ನೋಡಿ.
ಈ ಬ್ರೈನ್ ಟೀಸರ್ ಅಡ್ಡಕ್ಕೆ ಗೆರೆಗಳನ್ನು ಹೊಂದಿರುವ ಚಿತ್ರವಾಗಿದೆ. ಇದರಲ್ಲಿ ನಂಬರ್‌ಗಳಿವೆ, ಅದು ಯಾವುದು ಎಂಬುದನ್ನು ನೀವು ಕಂಡುಹಿಡಿಯಬೇಕು. ಈ ಚಿತ್ರವನ್ನು ನೋಡಿದರೆ ಕಣ್ಣು ನೋವು ಬರುವುದು ಖಂಡಿತ, ಆದರೂ ಸೂಕ್ಷ್ಮವಾಗಿ ಗಮನಿಸಿದರೆ ಚಿತ್ರದಲ್ಲಿ ಇರುವ ನಂಬರ್ ಅನ್ನು ನೀವು ಗುರುತಿಸಬಹುದು.
ಎಲಾನ್ ಮಸ್ಕ್ ಎಕ್ಸ್‌ನಲ್ಲಿ ಹಂಚಿಕೊಂಡಿರುವ ಈ ಫೋಟೊವನ್ನು 62 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ. ಆಗಸ್ಟ್ 9 ರಂದು ಮಸ್ಕ್ ಈ ಚಿತ್ರವನ್ನು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದರು. ಈ ಚಿತ್ರದಲ್ಲಿ ನಂಬರ್ ಕಾಣುತ್ತಿದ್ಯಾ, ನಿಮ್ಮ ಕಣ್ಣಿಗೆ ಪರೀಕ್ಷೆ ಎಂದು ಶೀರ್ಷಿಕೆ ಬರೆದುಕೊಂಡು ಮಸ್ಕ ಇದನ್ನು ಹಂಚಿಕೊಂಡಿದ್ದಾರೆ. ಮಾತ್ರವಲ್ಲ ಸರಿಯಾದ ಉತ್ತರವನ್ನು ಹೇಳಿದವರಿಗೆ ಭಾರಿ ಮೊತ್ತವನ್ನು ನೀಡುವುದಾಗಿ ಘೋಷಿಸಿದ್ದಾರೆ.
ಕಣ್ಣಿಗೆ ನೋವಾಗಿ, ತಲೆ ಸುತ್ತಿದ್ರು ಪರ್ವಾಗಿಲ್ಲ ನಾವು ಈ ಬ್ರೈನ್ ಟೀಸರ್‌ಗೆ ಉತ್ತರ ಹೇಳೇ ಹೇಳ್ತೀವಿ ಅಂತ ಕೆಲವರು ಉತ್ತರ ಹೇಳೋಕೆ ಟ್ರೈ ಮಾಡಿದ್ದಾರೆ. ತಾವು ಕಂಡುಕೊಂಡ ಉತ್ತರವನ್ನು ಕಾಮೆಂಟ್ ಮಾಡಿ ತಿಳಿಸಿದ್ದಾರೆ.
‘56‘ ಸರಿಯಾದ ಉತ್ತರ ಎಂದು ವ್ಯಕ್ತಿಯೊಬ್ಬರು ಕಾಮೆಂಟ್ ಮಾಡಿದ್ದಾರೆ. ‘66‘ ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ. ಬಹುತೇಕರು ಈ ಬ್ರೈನ್ ಟೀಸರ್‌ಗೆ 56 ಹಾಗೂ 66 ಎಂದೇ ಕಾಮೆಂಟ್ ಮಾಡಿದ್ದಾರೆ. ‘ಉತ್ತರ 56, ಇದರಲ್ಲಿ ನಾನು ವಿನ್ ಆದ್ರೆ ನನಗೆ ಬಂದ ಹಣವನ್ನು ನಾವು ನಾನು 560 ಜನರಿಗೆ ಸಮನಾಗಿ ಹಂಚುತ್ತೇನೆ ಎಂದು ವ್ಯಕ್ತಿಯೊಬ್ಬರು ಕಾಮೆಂಟ್ ಮಾಡಿದ್ದಾರೆ.
ಸರಿ ಅವರೆಲ್ಲರ ಉತ್ತರ ಬಿಡಿ, ಈ ಬ್ರೈನ್ ಟೀಸರ್‌ಗೆ ನಿಮ್ಮ ಉತ್ತರವೇನು ಹೇಳಿ. ಕೇವಲ 8 ಸೆಕೆಂಡ್ ಒಳಗೆ ಉತ್ತರ ಹೇಳಲು ಸಾಧ್ಯವಾಗುತ್ತಾ ಟ್ರೈ ಮಾಡಿ.
ಈ ಬ್ರೈನ್ ಟೀಸರ್ ಅನ್ನೂ ಓದಿ
Brain Teaser: 4ಕ್ಕೆ 4 ಕೂಡಿಸಿ 4 ಗುಣಿಸಿ 4 ಕಳೆದು ನಾಲ್ಕರಿಂದ ಭಾಗಿಸಿದ್ರೆ ಉತ್ತರ ಎಷ್ಟು? ಥಟ್ಟಂತ ಹೇಳಿ
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಗಣಿತದ ಪಜಲ್‌ವೊಂದು ನಿಮ್ಮ ಮೆದುಳಿಗೆ ಹುಳ ಬಿಡುವುದು ಸುಳ್ಳಲ್ಲ. ಲೆಕ್ಕದಲ್ಲಿ ನೀವು ಎಷ್ಟೇ ಪಂಟರಾದ್ರೂ ಈ ಪ್ರಶ್ನೆ ನಿಮಗೆ ಗೊಂದಲ ಮಾಡಿಸುತ್ತೆ. ಕೂಡಿಸಿ, ಗುಣಿಸಿ, ಕಳೆದು ಭಾಗಿಸುವ ಪ್ರಶ್ನೆಗೆ ಉತ್ತರ ಎಷ್ಟು ಅಂತ ಥಟ್ಟಂತ ಹೇಳಿ.