Viral Brain Teaser: ಕ್ಯಾಲ್ಕುಲೇಟರ್ ಬಳಸದೇ 10 ಸೆಕೆಂಡ್‌ನಲ್ಲಿ ಈ ಗಣಿತದ ಪಜಲ್ ಬಿಡಿಸಲು ಸಾಧ್ಯವೇ; ನಿಮ್ಮ ಮೆದುಳಿಗಿಲ್ಲಿದೆ ಕಸರತ್ತು
Maths Puzzle: ಇಲ್ಲೊಂದು ಬ್ರೈನ್ ಟೀಸರ್ ಇದೆ. ಇದು ನಿಮ್ಮ ಮೆದುಳನ್ನು ಕೊರೆಯುವುದು ಖಂಡಿತ. ನೀವು ಗಣಿತ ಪ್ರಿಯರು ಹೌದೇ ಎಂದಾದರೆ ಕ್ಯಾಲ್ಕುಲೇಟರ್ ಇಲ್ಲದೆ ಈ ಗಣಿತದ ಪಜಲ್ ಅನ್ನು ಬಿಡಿಸಬೇಕು. ಈ ಚಾಲೆಂಚ್ ಸ್ವೀಕರಿಸುತ್ತೀರಾ? ಹಾಗಾದರೆ ಮುಂದೆ ನೋಡಿ.
ಇಂದು ಭಾನುವಾರ, ಮಳೆಗಾಲ ಬೇರೆ ಹೊರಗಡೆ ಹೋಗಲು ಮಳೆ ಬಿಡುತ್ತಿಲ್ಲ, ಹಾಗಾಗಿ ಬೇಸರ ಕಾಡುತ್ತಿದ್ಯಾ? ಯಾವುದಾದರೂ ಆಸಕ್ತಿಕರ ಬ್ರೈನ್ ಟೀಸರ್ ಇದ್ದರೆ ಬಿಡಿಸಬಹುದಿತ್ತು, ಅಂದುಕೊಳ್ಳುತ್ತಿದ್ದೀರಾ? ನಿಮ್ಮ ಮೆದುಳಿಗೆ ಕೆಲಸ ಕೊಡಬೇಕು ಅನ್ನಿಸಿದರೆ ಇಲ್ಲೊಂದು ಬ್ರೈನ್ ಟೀಸರ್ ಇದೆ. ಗಣಿತದ ಪಜಲ್‌ನ ಈ ಬ್ರೈನ್ ಟೀಸರ್ ನಿಮ್ಮ ತಲೆಗೆ ಹುಳ ಬಿಡುವುದು ಫಿಕ್ಸ್. ಮೇಲ್ನೋಟಕ್ಕೆ ಸರಳವಾಗಿರುವಂತೆ ಕಾಣುವ ಈ ಪಜಲ್ ಅನ್ನು 10 ಸೆಕೆಂಡ್ ಒಳಗೆ ಬಿಡಿಸಬೇಕು. ಇದಕ್ಕಿರುವ ಕಂಡೀಷನರ್ ಎಂದರೆ ನೀವು ಯಾವುದೇ ಕಾರಣಕ್ಕೂ ಕ್ಯಾಲ್ಕುಲೇಟರ್ ಬಳಸಬಾರದು. ಫಜಲ್ ಬಿಡಿಸಲು ನೀವು ರೆಡಿನಾ?
ʼಕುತೂಹಲಿಗಳೇ, ನಾನು ನೀಡಿದ ಉತ್ತರವನ್ನು ನಿಮ್ಮಲ್ಲಿ ಯಾರು ನೀಡಲು ಸಾಧ್ಯ? ಎಂಬಂತೆ ಒಕ್ಕಣೆ ಬರೆದು ಈ ಗಣಿತ ಪಜಲ್ ಇರುವ ಚಿತ್ರವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ ಅನ್ನಿ ಮೇರಿ ಬಿಬ್ಬಿ. ಅವರು #brainteaser ಎಂಬ ಹ್ಯಾಶ್‌ಟ್ಯಾಗ್ ಬಳಸಿ ಇದನ್ನು ಹಂಚಿಕೊಂಡಿದ್ದಾರೆ.
ಇಲ್ಲಿದೆ ನೋಡಿ ಅವರ ಪೋಸ್ಟ್
ಈ ಪಜಲ್ ಅನ್ನು ಕ್ಯಾಲ್ಕುಲೇಟರ್ ಬಳಸದೇ ನಿಮ್ಮಿಂದ ಬಿಡಿಸಲು ಸಾಧ್ಯವೇ? ಈ ಬ್ರೈನ್ ಟೀಸರ್ ಅನ್ನು ಜೂನ್ 25 ರಂದು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಲಾಗಿತ್ತು. ಈಗಾಗಲಿ 18000ಕ್ಕೂ ಹೆಚ್ಚು ಮಂದಿ ಇದನ್ನು ನೋಡಿದ್ದಾರೆ. ಅಲ್ಲದೆ ಹಲವರು ಲೈಕ್ಸ್, ಕಾಮೆಂಟ್ ಮಾಡಿದ್ದಾರೆ.
ಗಣಿತದ ಪಜಲ್‌ಗೆ ಬಂದ ಕಾಮೆಂಟ್‌ಗಳು ಹೀಗಿವೆ
ʼನೀವು ಯಾವ ರೀತಿ ಲೆಕ್ಕ ಹಾಕುತ್ತೀರಿ ಎಂಬುದರ ಮೇಲೆ ಈ ಗಣಿತದ ಪಜಲ್‌ನ ಉತ್ತರ ಅವಲಂಬಿತವಾಗಿದೆ. ನೀವು ಎಡದಿಂದ ಬಲಕ್ಕೆ ಕ್ರಮವಾಗಿ ಹೋದರೆ ಉತ್ತರ 9. ಬೇರೆ ಕ್ರಮ ಅನುಸರಿಸಿದರೆ ಉತ್ತಮ 59. ಇದನ್ನು 50 (10*0) ಎಂದು ಲೆಕ್ಕ ಹಾಕಬೇಕು. 50 +0= ನಂತರ 7 +2ʼ ಎಂದು ಬಳಕೆದಾರರೊಬ್ಬರು ಬರೆದುಕೊಂಡಿದ್ದಾರೆ. ʼಉತ್ತರ 9, ಒಂದು ವೇಳೆ 10*0 ಆದರೆ ಉತ್ತರವು 59 ಕೂಡ ಆಗಬಹುದು ಎಂದು ಇನ್ನೊಬ್ಬ ಬಳಕೆದಾರರು ಬರೆದುಕೊಂಡಿದ್ದಾರೆ. ಹಾಗಾದರೆ ನೀವು ನಿಮ್ಮ ಉತ್ತರ ಕಂಡುಹಿಡಿಯಿರಿ.
ಇದನ್ನೂ ನೋಡಿ
Optical Illusion: ಅರೇ ಇದೇನಿದು, ಚಿತ್ರದಲ್ಲಿನ ಚೌಕ ಅಲುಗಾಡ್ತಾ ಇದ್ಯಾ; ಸರಿಯಾಗಿ ನೋಡಿ; ನಿಮಗೂ ಹಂಗೆ ಅನ್ನಿಸ್ತಾ; ಕಣ್ಣಿಗೊಂದು ಸವಾಲ್
A Challenge To The Eyes: ರೆಡ್ಡಿಟ್‌ನಲ್ಲಿ ಪೋಸ್ಟ್ ಮಾಡಲಾದ ಚಿತ್ರವೊಂದು ಈಗ ಜನರನ್ನು ದಿಗ್ಭ್ರಮೆಗೊಳಿಸಿದೆ. ಈ ಆಪ್ಟಿಕಲ್ ಇಮೇಜ್ ನೋಡಿದವರೆಲ್ಲಾ ಶಾಕ್ ಆಗುತ್ತಿದ್ದಾರೆ. ಹಾಗಾದರೆ ಚಿತ್ರದಲ್ಲಿ ಅಂಥದ್ದೇನಿದೆ ನೀವು ನೋಡಿ.
ಆಪ್ಟಿಕಲ್ ಇಲ್ಯೂಷನ್ ಅಥವಾ ಭ್ರಾಮಕ ಚಿತ್ರಗಳು ಕೆಲವೊಮ್ಮೆ ತಲೆ ಕೆಡಿಸುತ್ತವೆ, ಮಾತ್ರವಲ್ಲ ಇವು ಮನರಂಜನೆಯನ್ನೂ ನೀಡುತ್ತವೆ. ಏಕೆಂದರೆ ಇವು ಮೆದುಳಿಗೆ ಆವಿಷ್ಕಾರ ಮತ್ತು ಉತ್ಸಾಹವನ್ನು ನೀಡುವುದರಲ್ಲಿ ಎರಡು ಮಾತಿಲ್ಲ. ಆ ಕಾರಣಕ್ಕೆ ಆಪ್ಟಿಕಲ್ ಇಲ್ಯೂಷನ್ ಚಿತ್ರಗಳಿರುವ ಸಾಮಾಜಿಕ ಜಾಲತಾಣದ ಪೋಸ್ಟ್‌ಗಳು ಸದಾ ಜನರನ್ನು ಸೆಳೆಯುತ್ತವೆ. ಇಲ್ಲೊಂದು ಅಪರೂಪ ಆಪ್ಟಿಕಲ್ ಇಲ್ಯೂಷನ್ ಚಿತ್ರವಿದೆ. ಬೂದು ಬಣ್ಣದ ಈ ಚಿತ್ರದಲ್ಲಿನ ಚೌಕಗಳು ಅಲುಗಿದಂತೆ ಭಾಸವಾಗುತ್ತಿವೆ. ಇದು ಅಲುಗಾಡುತ್ತಿದೆಯೇ ಅಥವಾ ನಿಶ್ಚಲವಾಗಿದೆಯೇ ಎಂದು ಪ್ರಶ್ನಿಸುವ ಮೂಲಕ ಪೋಸ್ಟ್ ಹಂಚಿಕೊಂಡಿದೆ ರೆಡ್ಡಿಟ್.
ವಿಭಾಗ