Brain Teaser: ಬೀಗದ ರಾಶಿ ಇರುವ ಈ ಚಿತ್ರದಲ್ಲಿ ಯಾವೆಲ್ಲಾ ಬೀಗಗಳು ತೆರೆದಿವೆ? 7 ಸೆಕೆಂಡ್‌ನಲ್ಲಿ ಉತ್ತರ ಹೇಳಿ, ನಿಮಗೊಂದು ಹೊಸ ಚಾಲೆಂಜ್
ಕನ್ನಡ ಸುದ್ದಿ  /  ಜೀವನಶೈಲಿ  /  Brain Teaser: ಬೀಗದ ರಾಶಿ ಇರುವ ಈ ಚಿತ್ರದಲ್ಲಿ ಯಾವೆಲ್ಲಾ ಬೀಗಗಳು ತೆರೆದಿವೆ? 7 ಸೆಕೆಂಡ್‌ನಲ್ಲಿ ಉತ್ತರ ಹೇಳಿ, ನಿಮಗೊಂದು ಹೊಸ ಚಾಲೆಂಜ್

Brain Teaser: ಬೀಗದ ರಾಶಿ ಇರುವ ಈ ಚಿತ್ರದಲ್ಲಿ ಯಾವೆಲ್ಲಾ ಬೀಗಗಳು ತೆರೆದಿವೆ? 7 ಸೆಕೆಂಡ್‌ನಲ್ಲಿ ಉತ್ತರ ಹೇಳಿ, ನಿಮಗೊಂದು ಹೊಸ ಚಾಲೆಂಜ್

ಇಂದಿನ ಬ್ರೈನ್ ಟೀಸರ್ ಚಿತ್ರಕ್ಕೆ ಉತ್ತರ ಹೇಳಬೇಕು ಎಂದರೆ ನಿಮ್ಮ ಕಣ್ಣು ಸೂಕ್ಷ್ಮವಾಗಿರಬೇಕು. ಕೆಲವೇ ಕೆಲವು ಸೆಕೆಂಡುಗಳಲ್ಲಿ ಇಲ್ಲಿರುವ ಚಿತ್ರದಲ್ಲಿ ಎಷ್ಟು ಬೀಗಗಳು ತೆರೆದಿವೆ ಎಂಬುದನ್ನು ನೀವು ಕಂಡುಹಿಡಿಯಬೇಕು. ನಿಮಗಿರೋದು ಕೇವಲ 7 ಸೆಕೆಂಡ್ ಸಮಯ.

ಬ್ರೈನ್ ಟೀಸರ್
ಬ್ರೈನ್ ಟೀಸರ್

ಬ್ರೈನ್ ಟೀಸರ್‌ಗಳು ಮೆದುಳಿಗೆ ಹುಳ ಬಿಡುವುದು ಮಾತ್ರವಲ್ಲ ನಮ್ಮ ಮೆದುಳು ಹಾಗೂ ಕಣ್ಣು ಎಷ್ಟು ಸೂಕ್ಷ್ಮವಾಗಿದೆ ಎಂದು ಕೂಡ ಪರೀಕ್ಷೆ ಮಾಡುತ್ತವೆ. ಇಂತಹ ಬ್ರೈನ್ ಟೀಸರ್ ಚಿತ್ರಗಳಿಗೆ ಉತ್ತರ ಹೇಳುವುದು ನಿಜಕ್ಕೂ ಸುಲಭವಲ್ಲ. ಇಂದಿನ ಬ್ರೈನ್ ಟೀಸರ್‌ಗೆ ಉತ್ತರ ಕಂಡು ಹಿಡಿಯಲು ನಿಮ್ಮ ಕಣ್ಣು ಸೂಕ್ಷ್ಮವಾಗಿರಬೇಕು.

ಒಂದಿಷ್ಟು ಬೀಗಗಳ ರಾಶಿ ಇರುವ ಚಿತ್ರ ಇಲ್ಲಿದೆ. ಈ ಚಿತ್ರದಲ್ಲಿ ಕೆಲವು ಬೀಗಗಳನ್ನು ಓಪನ್ ಮಾಡಿ ಇಡಲಾಗಿದೆ. ಮೇಲ್ನೋಕ್ಕೆ ಎಲ್ಲಾ ಬೀಗಗಳು ಲಾಕ್ ಆಗಿವೆ ಅನ್ನಿಸಿದರೂ ಕೆಲವು ಬೀಗಗಳು ಅನ್‌ಲಾಕ್ ಆಗಿವೆ. ಇವು ಯಾವುವು ಮತ್ತು ಎಷ್ಟಿದೆ ಎಂದು ಕೇವಲ 7 ಸೆಕೆಂಡ್‌ನಲ್ಲಿ ನೀವು ಕಂಡುಹಿಡಿಯಬೇಕು. ಇದು ನಿಮಗಿರುವ ಸವಾಲು.

ಇಂತಹ ಬ್ರೈನ್ ಟೀಸರ್‌ಗಳು ಒತ್ತಡದ ಬದುಕಿನಲ್ಲಿ ಮನಸ್ಸಿಗೆ ಒಂದು ರೀತಿಯ ಖುಷಿ ಕೊಡುವುದು ಸುಳ್ಳಲ್ಲ. ಇದು ನಮ್ಮ ಮನಸ್ಸನ್ನು ರಿಫ್ರೆಶ್ ಮಾಡುತ್ತದೆ. ಈ ಬ್ರೈನ್ ಟೀಸರ್‌ಗೆ ಉತ್ತರ ಹುಡುಕುವ ಮಾರ್ಗವು ನಮ್ಮ ಮನಸ್ಸನ್ನು ಒಂದಿಷ್ಟು ಹೊತ್ತು ಹಿಡಿದಿಟ್ಟುಕೊಳ್ಳುತ್ತದೆ. ಆ ಕ್ಷಣದಲ್ಲಿ ನಮ್ಮ ಬೇರೆಲ್ಲಾ ಯೋಚನೆಗಳು ಮರೆಯಾಗಿ ಅದಕ್ಕಾಗಿ ನಾವು ಸಮಯ ಕೊಡುತ್ತೇವೆ.

ಇಂತಹ ಒಗಟುಗಳು ಕೇವಲ ಮೋಜು ನೀಡುವುದು ಮಾತ್ರವಲ್ಲ, ನಮ್ಮನ್ನು ಔಟ್ ಆಫ್ ದಿ ಬಾಕ್ಸ್ ಯೋಚಿಸುವಂತೆ ಮಾಡುತ್ತವೆ. ನಿರಂತರವಾಗಿ ಬ್ರೈನ್ ಟೀಸರ್‌ಗಳಿಗೆ ಉತ್ತರ ಹುಡುಕುವ ಪ್ರಯತ್ನ ಮಾಡುವುದರಿಂದ ನಮ್ಮ ಮೆದುಳು ಚುರುಕಾಗುತ್ತದೆ, ನಮ್ಮಲ್ಲಿ ಯೋಚನಾಶಕ್ತಿ ವೃದ್ಧಿಸುತ್ತದೆ ಎಂದು ಹೇಳಲಾಗುತ್ತದೆ.

ಹಾಗಾದರೆ ಇನ್ನೇಕೆ ತಡ ಈ ಬ್ರೈನ್ ಟೀಸರ್‌ಗೆ ಉತ್ತರ ಕಂಡುಕೊಳ್ಳಲು ನಿಮ್ಮಿಂದ ಸಾಧ್ಯವಾದರೆ ಇದನ್ನು ನಿಮ್ಮ ಸ್ನೇಹಿತರು ಹಾಗೂ ಆತ್ಮೀಯರೊಂದಿಗೂ ಹಂಚಿಕೊಳ್ಳಿ. ಅವರಿಗೆ ಇದಕ್ಕೆ ಸರಿಯಾದ ಉತ್ತರ ಕಂಡುಕೊಳ್ಳಲು ಸಾಧ್ಯವಾಗುವುದೋ ಇಲ್ಲವೋ ತಿಳಿಸಿ.

ಈ ಬ್ರೈನ್ ಟೀಸರ್‌ಗಳ ವಿವರಕ್ಕೆ ಇಲ್ಲಿದೆ ಲಿಂಕ್

Brain Teaser: ಎರಡಕ್ಕೆ ಮೂರು ಕೂಡಿಸಿ, ನಾಲ್ಕರಿಂದ ಗುಣಿಸಿದ್ರೆ ಉತ್ತರ 14 ಅಥವಾ 20? 5 ಸೆಕೆಂಡ್‌ನಲ್ಲಿ ಹೇಳಿ

ಗಣಿತದಲ್ಲಿ ನೀವು ಎಷ್ಟೇ ಎಕ್ಸ್‌ಪರ್ಟ್ ಆದ್ರೂ ಕೆಲವೊಂದು ಪ‍್ರಶ್ನೆಗಳು ನಿಮ್ಮ ತಲೆಗೆ ಹುಳ ಬಿಡದೇ ಇರುವುದಿಲ್ಲ. ಇಲ್ಲೊಂದು ಅಂಥದ್ದೇ ಪ್ರಶ್ನೆ ಇದೆ. ಪ್ರಶ್ನೆಗೆ ನೀವು ಕೇವಲ 5 ಸೆಕೆಂಡ್‌ನಲ್ಲಿ ಉತ್ತರ ಹೇಳಬೇಕು. ಈ ಪ್ರಶ್ನೆಯ ಉತ್ತರದಲ್ಲಿ ಎರಡು ಆಯ್ಕೆಗಳನ್ನು ನೀಡಲಾಗಿದೆ. ಇದರಲ್ಲಿ ಯಾವುದು ಸರಿ ಉತ್ತರ ಎಂದು ಹೇಳಬೇಕಾಗಿರುವುದು ನಿಮಗಿರುವ ಸವಾಲು.

Brain Teaser: ಚಿತ್ರದಲ್ಲಿ ಒಂದೇ ಒಂದು ಕಡೆ Dog ಪದ ಇದೆ, ಅದು ಎಲ್ಲಿದೆ? 5 ಸೆಕೆಂಡ್‌ನಲ್ಲಿ ಕಂಡುಹಿಡಿಯುವುದು ನಿಮಗಿರುವ ಸವಾಲ್

ನಿಮ್ಮ ಮೆದುಳು ತುಂಬಾನೇ ಚುರುಕಾಗಿದೆ ಎಂದು ನಿಮಗೆ ಅನ್ನಿಸುತ್ತಾ, ಹಾಗಾದ್ರೆ ಅದಕ್ಕೊಂದು ಪರೀಕ್ಷೆ ನೀಡಿ. ಚಿತ್ರದಲ್ಲಿ ಒಂದಿಷ್ಟು ಆಂಗ್ಲ ಪದಗಳನ್ನ ಬರೆಯಲಾಗಿದ್ದು, ಆ ಪದಗಳ ನಡುವೆ ಒಂದೇ ಒಂದು ಕಡೆ Dog ಪದ ಇದೆ. ಅದು ಎಲ್ಲಿದೆ ಎಂದು ಕಂಡುಹಿಡಿಯುವುದು ನಿಮಗಿರುವ ಸವಾಲು. ನಿಮಗಿರುವುದು ಕೇವಲ 5 ಸೆಕೆಂಡ್ ಸಮಯ.