Brain Teaser: ನಿಮ್ಮ ಕಣ್ಣು ನಿಜಕ್ಕೂ ಶಾರ್ಪ್‌ ಇದ್ರೆ 10 ಸೆಕೆಂಡ್‌ನಲ್ಲಿ ಚಿತ್ರದಲ್ಲಿನ 5 ವ್ಯತ್ಯಾಸಗಳನ್ನು ಗುರುತಿಸಿ-viral news brain teaser can you spot five differences in this picture in 10 seconds social media viral in kannada rst ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  Brain Teaser: ನಿಮ್ಮ ಕಣ್ಣು ನಿಜಕ್ಕೂ ಶಾರ್ಪ್‌ ಇದ್ರೆ 10 ಸೆಕೆಂಡ್‌ನಲ್ಲಿ ಚಿತ್ರದಲ್ಲಿನ 5 ವ್ಯತ್ಯಾಸಗಳನ್ನು ಗುರುತಿಸಿ

Brain Teaser: ನಿಮ್ಮ ಕಣ್ಣು ನಿಜಕ್ಕೂ ಶಾರ್ಪ್‌ ಇದ್ರೆ 10 ಸೆಕೆಂಡ್‌ನಲ್ಲಿ ಚಿತ್ರದಲ್ಲಿನ 5 ವ್ಯತ್ಯಾಸಗಳನ್ನು ಗುರುತಿಸಿ

ಇಲ್ಲಿರುವ ಬ್ರೈನ್‌ ಟೀಸರ್‌ ಚಿತ್ರವನ್ನು ಎರಡು ವಿಭಾಗವಾಗಿ ವಿಂಗಡಿಸಲಾಗಿದೆ. ಇಲ್ಲಿ ಒಂದಿಷ್ಟು ಕುಂಬಳಕಾಯಿ ರಾಶಿ ಹಾಗೂ ಪ್ರಾಣಿಗಳಿವೆ. ಈ ಚಿತ್ರದಲ್ಲಿನ 5 ವ್ಯತ್ಯಾಸಗಳನ್ನು ಕಂಡುಹಿಡಿಯುವುದು ನಿಮಗಿರುವ ಸವಾಲು. ಆದರೆ ಕೇವಲ 10 ಸೆಕೆಂಡ್‌ನಲ್ಲಿ ಕಂಡುಹಿಡಿಯಬೇಕು. ಸಾಧ್ಯವೇ ಪ್ರಯತ್ನಿಸಿ.

ಚಿತ್ರದಲ್ಲಿನ 5 ವ್ಯತ್ಯಾಸಗಳನ್ನು ಗುರುತಿಸಿ
ಚಿತ್ರದಲ್ಲಿನ 5 ವ್ಯತ್ಯಾಸಗಳನ್ನು ಗುರುತಿಸಿ

ಬ್ರೈನ್‌ ಟೀಸರ್‌ಗಳನ್ನು ಬಿಡಿಸುವುದು ನಿಜಕ್ಕೂ ಖುಷಿ ಕೊಡುವ ವಿಚಾರ. ಇವು ಮನಸ್ಸಿಗೆ ಒಂಥರಾ ಮಜಾ ಕೊಡುತ್ತವೆ. ಹಲವರು ಬ್ರೈನ್‌ ಟೀಸರ್‌ಗಾಗಿ ಕಾಯುತ್ತಾರೆ. ಇಲ್ಲೊಂದು ಚಿತ್ರವಿದೆ. ಒಂದು ಚಿತ್ರವನ್ನು ಎರಡು ವಿಭಾಗವಾಗಿ ವಿಂಗಡಿಸಲಾಗಿದೆ. ಮೇಲ್ನೋಟಕ್ಕೆ ಈ ಎರಡೂ ಚಿತ್ರಗಳು ಒಂದೇ ರೀತಿ ಕಾಣುತ್ತವೆ. ಆದರೆ ಈ ಚಿತ್ರದಲ್ಲಿ ಕೆಲವೊಂದು ವ್ಯತ್ಯಾಸಗಳಿವೆ. ಸೂಕ್ಷ್ಮವಾಗಿ ಗಮನಿಸಿದಾಗ ನಿಮಗೆ ಚಿತ್ರಗಳಲ್ಲಿನ ವ್ಯತ್ಯಾಸ ಅರಿವಿಗೆ ಬರುತ್ತದೆ.

ನೀವು ನಿಜವಾಗ್ಲೂ ಬ್ರೈನ್‌ ಟೀಸರ್‌ ಬಿಡಿಸುವಲ್ಲಿ ಪಂಟರಾಗಿದ್ದರೆ 10 ಸೆಕೆಂಡ್‌ನಲ್ಲಿ ಈ ಚಿತ್ರದಲ್ಲಿನ 5 ವ್ಯತ್ಯಾಸಗಳನ್ನು ಕಂಡುಹಿಡಿಯಬೇಕು. ಇದು ನಿಮ್ಮ ಕಣ್ಣು ಹಾಗೂ ಮೆದುಳಿಗೆ ಸವಾಲು ನೀಡುವ ಚಿತ್ರ ಎನ್ನುವುದರಲ್ಲಿ ಅನುಮಾನವಿಲ್ಲ.

ʼಈ ಚಿತ್ರದಲ್ಲಿ 5 ವ್ಯತ್ಯಾಸಗಳನ್ನು ಗುರುತಿಸಲು ಸಾಧ್ಯವೇ?ʼ ಎಂಬ ಶೀರ್ಷಿಕೆ ಬರೆದುಕೊಂಡು ಫೇಸ್‌ಬುಕ್‌ನಲ್ಲಿ ಹಂಚಿಕೊಳ್ಳಲಾಗಿದೆ. ಹಂಗೇರಿಯನ್‌ ಕಲಾವಿದ ಗೆರ್ಗೆಲಿ ಡುಡಾಸ್ ರಚಿಸಿದ್ದಾರೆ. ಇವರು ದುಡಾಲ್ಫ್‌ ಎಂದೇ ಸಾಮಾಜಿಕ ಜಾಲತಾಣದಲ್ಲಿ ಚಿರಪರಿಚಿತರು. ಈ ಬ್ರೈನ್‌ ಟೀಸರ್‌ನಲ್ಲಿ ಒಂದು ಗಾಡಿಯಲ್ಲಿ ಕುಂಬಳಕಾಯಿಗಳನ್ನು ತುಂಬಿಸಿ ಇಡಲಾಗಿದೆ. ಅದರ ಸುತ್ತಲೂ ಮೊಲ, ಅಳಿಲು, ಪಕ್ಷಿಗಳು ಸುತ್ತುವರಿದಿವೆ. ಅದಾಗ್ಯೂ ಚಿತ್ರದ ಎರಡು ಭಾಗಗಳಲ್ಲಿ ಒಂದಿಷ್ಟು ವ್ಯತ್ಯಾಸಗಳಿವೆ. ಹದ್ದಿನ ಕಣ್ಣು ನಿಮ್ಮದಾಗಿದ್ದರೆ ಹತ್ತು ಸೆಕೆಂಡ್‌ನಲ್ಲಿ ಈ ವ್ಯತ್ಯಾಸಗಳನ್ನು ಕಂಡುಹಿಡಿಯಿರಿ.

ಒಂದು ದಿನದ ಹಿಂದೆ ಡುಡಾಲ್ಪ್‌ ಈ ಚಿತ್ರವನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದರು. ಈಗಾಗಲೇ 500ಕ್ಕೂ ಹೆಚ್ಚು ಮಂದಿ ಇವರ ಪೋಸ್ಟ್‌ಗೆ ಪ್ರತಿಕ್ರಿಯೆ ನೀಡಿದ್ದಾರೆ. 100ಕ್ಕೂ ಹೆಚ್ಚು ಮಂದಿ ಈ ಬ್ರೈನ್‌ ಟೀಸರ್‌ ಅನ್ನು ಶೇರ್‌ ಮಾಡಿದ್ದಾರೆ. ಹಲವರು ಕಾಮೆಂಟ್‌ ಮಾಡುವ ಮೂಲಕ ತಮ್ಮ ಉತ್ತರವನ್ನು ತಿಳಿಸಿದ್ದಾರೆ.

ಕಾಮೆಂಟ್‌ಗಳು ಹೀಗಿವೆ

ʼಇದು ನಿಜಕ್ಕೂ ಕಷ್ಟ. ಆದರೆ ನಾನು 5 ವ್ಯತ್ಯಾಸವನ್ನು ಕಂಡುಹಿಡಿದೆʼ ಎಂದು ಫೇಸ್‌ಬುಕ್‌ ಬಳಕೆದಾರರೊಬ್ಬರು ಬರೆದುಕೊಂಡಿದ್ದಾರೆ. ʼನನ್ನಿಂದ 5 ಕಂಡುಹಿಡಿಯಲು ಸಾಧ್ಯವಾಗಿಲ್ಲ. ಆದರೆ ನಾನು ಆಕಾಶದಲ್ಲಿ ಗೊಂಬೆ ಆಡಿಸೋನನ್ನು ನೋಡಿದೆʼ ಎಂದು ಇನ್ನೊಬ್ಬರು ಕಾಮೆಂಟ್‌ ಮಾಡಿದ್ದಾರೆ. ʼನಾನು ನಿದ್ದೆ ಮಾಡುತ್ತೇನೆ, ನನಗೆ 1 ಅಷ್ಟೇ ಕಾಣಿಸಿದ್ದುʼ ಎಂದು ಫೇಸ್‌ಬುಕ್‌ ಬಳಕೆದಾರರೊಬ್ಬರು ತಮಾಷೆಯಾಗಿ ಬರೆದುಕೊಂಡಿದ್ದಾರೆ. ʼ3 ವ್ಯತ್ಯಾಸಗಳನ್ನು ಸುಲಭವಾಗಿ ಗುರುತಿಸಬಹುದು. ಆದರೆ ಇನ್ನೆರಡು ಸಾಧ್ಯವೇ ಇಲ್ಲʼ ಎಂದು ವ್ಯಕ್ತಿಯೊಬ್ಬರು ಕಾಮೆಂಟ್‌ ಮಾಡಿದ್ದಾರೆ.

ಡುಡಾಲ್ಫ್‌ ಅವರು ಇದೇ ಮೊದಲ ಬಾರಿಯಲ್ಲಿ ಈಗಾಗಲೇ ಹಲವು ಬ್ರೈನ್‌ ಟೀಸರ್‌ಗಳನ್ನು ಇವರು ಹಂಚಿಕೊಂಡಿದ್ದಾರೆ. ಅಲ್ಲದೆ ತಮ್ಮ ವಿಭಿನ್ನ ಚಿತ್ರಗಳ ಮೂಲಕ ಅಭಿಮಾನಿಗಳನ್ನು ಪಡೆದಿದ್ದಾರೆ. ನೀವೀಗ ಇವರ ಚಿತ್ರದಲ್ಲಿನ ವ್ಯತ್ಯಾಸಗಳನ್ನು ಗುರುತಿಸುವ ಚಾಲೆಂಜ್‌ ಸ್ವೀಕರಿಸಿ.

ಇನ್ನಷ್ಟು ಇಂತಹ ವೈರಲ್‌ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

ಇದನ್ನೂ ಓದಿ

Brain Teaser: ಹುಲ್ಲಿನ ಬಣವೆಯಲ್ಲಿ ಸೂಜಿಯೊಂದು ಕಳೆದುಹೋಗಿದೆ; ಹದ್ದಿನ ಕಣ್ಣು ನಿಮ್ಮದಾಗಿದ್ದರೆ 5 ಸೆಕೆಂಡ್‌ನಲ್ಲಿ ಹುಡುಕಿ ತೋರಿಸಿ

ಒಂದಿಷ್ಟು ದಿನಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್‌ ಆಗಿದ್ದು ಬ್ರೈನ್‌ ಟೀಸರ್‌ ಚಿತ್ರವೊಂದು ಇದೀಗ ಮತ್ತೆ ಮುನ್ನೆಲೆಗೆ ಬಂದಿದೆ. ಈ ಬ್ರೈನ್‌ ಟೀಸರ್‌ ಜನರ ಕಣ್ಣಿಗೆ ಮೋಸ ಮಾಡುತ್ತಿರುವುದಂತೂ ಸುಳ್ಳಲ್ಲ. ಇಲ್ಲೊಂದು ಒಣಹುಲ್ಲಿನ ರಾಶಿ ಇದೆ. ಆ ರಾಶಿಯ ಮೇಲೆ ಒಂದಿಷ್ಟು ಕೀಟಗಳು ಸುಳಿದಾಡುತ್ತಿವೆ. ಆದರೆ ಈ ರಾಶಿ ಹುಲ್ಲಿನ ನಡುವೆ ಸೂಜಿಯೊಂದು ಕಳೆದಿದೆ. ಆ ಸೂಚಿಯನ್ನು ಹುಡುಕುವುದು ನಿಮಗಿರುವ ಸವಾಲು. ಹಾಗಂತ ದಿನವಿಡೀ ಕುಳಿತ ಹುಡುಕುವ ಹಾಗಿಲ್ಲ. ಕೇವಲ 5 ಸೆಕೆಂಡ್‌ ಒಳಗೆ ಚಿತ್ರದಲ್ಲಿರುವ ಸೂಜಿಯನ್ನು ಹುಡುಕಬೇಕು. ನಿಮ್ಮ ಕಣ್ಣು ನಿಜಕ್ಕೂ ಸೂಕ್ಷ್ಮವಾಗಿದೆ, ಮೆದುಳು ಚುರುಕಾಗಿದೆ ಎಂದರೆ ಐದೇ ಐದು ಸೆಕೆಂಡ್‌ನಲ್ಲಿ ಸೂಜಿಯನ್ನು ಹುಡುಕಿ.