Brain Teaser: ಈ ಚಿತ್ರದಲ್ಲಿ ಒಂದು ತಪ್ಪಿದೆ, ಅದೇನು ಅಂತ 10 ಸೆಕೆಂಡ್‌ನಲ್ಲಿ ಕಂಡುಹಿಡಿಯಬೇಕು, ನಿಮ್ಮ ಬುದ್ಧಿವಂತಿಕೆಗೊಂದು ಸವಾಲ್
ಇಂದಿನ ಬ್ರೈನ್ ಟೀಸರ್ ಚಿತ್ರವು ನಿಮ್ಮ ಬುದ್ಧಿವಂತಿಕೆಗೆ ಸವಾಲು ಹಾಕುವಂತಿರುವುದು ಸುಳ್ಳಲ್ಲ. ಇದರಲ್ಲಿ 1 ರಿಂದ 6ರವರೆಗೆ ಬರೆಯಲಾಗಿದ್ದು, ಅದರ ಎದುರುಗಡೆ ಇಂಗ್ಲಿಷ್‌ನಲ್ಲಿ ಪುನಃ ಅದನ್ನೇ ಬರೆಯಲಾಗಿದೆ. ಇದರಲ್ಲಿ ಎಲ್ಲವೂ ಸರಿ ಇದೆ. ಆದರೂ ಇದರಲ್ಲಿ ತಪ್ಪಿದೆ ಅಂತೆ. ಆ ತಪ್ಪು ಯಾವುದು ಎಂದು ನೀವು ಕಂಡುಹಿಡಿಯಬೇಕು.

ಬ್ರೈನ್ ಟೀಸರ್ ಚಿತ್ರಗಳು ಎಂದರೆ ನೋಡಲು ಸುಲಭವಾಗಿ, ಸುಂದರವಾಗಿ ಕಂಡು ಮೆದುಳಿಗೆ ಹುಳ ಬಿಡುವಂಥವು. ಇದರಲ್ಲಿ ಪಜಲ್‌ಗಳು, ಗಣಿತದ ಸೂತ್ರಗಳು, ಟ್ರಿಕ್ಕಿ ಪ್ರಶ್ನೆಗಳು ಇರುತ್ತವೆ. ಇದಕ್ಕೆ ಉತ್ತರ ಹುಡುಕುವುದು ಸವಾಲಾಗಿರುತ್ತದೆ. ಇಂದಿನ ಬ್ರೈನ್ ಟೀಸರ್ ಕೂಡ ಅಂಥದ್ದೇ ಸವಾಲನ್ನು ಹೊಂದಿರುವ ಚಿತ್ರವಾಗಿದೆ.
ಈ ಚಿತ್ರದಲ್ಲಿ ನಂಬರ್‌ಗಳನ್ನು ಅಂಕೆ ಹಾಗೂ ಅಕ್ಷರಗಳಲ್ಲಿ ಬರೆಯಲಾಗಿದೆ. 1 ರಿಂದ 6ರವರೆಗೆ ಎಲ್ಲಾ ನಂಬರ್‌ಗಳು ಸರಿ ಇದೆ ಎಂದು ನಿಮಗೆ ಅನ್ನಿಸಬಹುದು. ಆದರೂ ಇದರಲ್ಲಿ ಒಂದು ತಪ್ಪಿದೆ ಅಂತೆ, ಆ ತಪ್ಪು ಯಾವುದು ಎಂದು ನೀವು ಕಂಡುಹಿಡಿಯಬೇಕು. ಇದು ನಿಮಗೆ ಸುಲಭ ಪ್ರಶ್ನೆ ಎನ್ನಿಸಿದರೂ ಇದಕ್ಕೆ ಉತ್ತರ ಕಂಡುಹಿಡಿಯುವುದು ನಿಜಕ್ಕೂ ಸುಲಭದ ಮಾತಲ್ಲ. ಹಾಗಾದರೆ ಈ ಬ್ರೈನ್ ಟೀಸರ್‌ಗೆ ನಿಮ್ಮ ಉತ್ತರವೇನು? ಇದಕ್ಕೆ ನೀವು ಕೇವಲ 10 ಸೆಕೆಂಡ್ ಒಳಗೆ ಉತ್ತರ ಹೇಳಬೇಕು.
ಇಂತಹ ಬ್ರೈನ್ ಟೀಸರ್‌ಗಳಿಗೆ ಉತ್ತರ ಹೇಳಲು ಕಣ್ಣು ಹಾಗೂ ಮೆದುಳು ಚುರುಕಾಗಿ ಇರಬೇಕು. ಅದಕ್ಕಾಗಿ ನೀವು ಸಾಕಷ್ಟು ಬುದ್ಧಿ ಖರ್ಚು ಮಾಡಬೇಕಾಗುತ್ತದೆ. ಕೆಲವೊಮ್ಮೆ ಎಷ್ಟೇ ಯೋಚಿಸಿದರೂ 10 ಸೆಕೆಂಡ್ ಬಿಡಿ 1 ಗಂಟೆ ಕಳೆದರೂ ಉತ್ತರ ದೊರಕುವುದಿಲ್ಲ. ಆದರೆ ಅದಕ್ಕಾಗಿ ನಾವು ಮೆದುಳನ್ನು ಕ್ರಿಯಶೀಲವಾಗಿ ಇರಿಸಿಕೊಳ್ಳುವ ಕಾರಣ ಮೆದುಳು ಚುರುಕಾಗುತ್ತದೆ. ಇದರಿಂದ ಯೋಚನಾಶಕ್ತಿಯೂ ವೃದ್ಧಿಯಾಗುತ್ತದೆ. ಏಕಾಗ್ರತೆ ಬೆಳೆಯುತ್ತದೆ.
ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಇಂತಹ ಬ್ರೈನ್ ಟೀಸರ್‌ಗಳು ಸಾಕಷ್ಟು ವೈರಲ್ ಆಗುತ್ತಿವೆ. ಇವು ಅದಕ್ಕಿಂತ ಒಂದು ಟ್ರಿಕ್ಕಿಯಾಗಿದ್ದು, ನಮ್ಮ ಮೆದುಳಿಗೆ ಹುಳ ಬಿಡುವಂತಿರುವುದು ಸುಳ್ಳಲ್ಲ. ಪಜಲ್ ಪ್ರಿಯರು ಇಂತಹ ಬ್ರೈನ್ ಟೀಸರ್‌ಗಳು ಅಪ್‌ಲೋಡ್ ಅಥವಾ ಪೋಸ್ಟ್ ಆಗುವುದನ್ನೇ ಕಾಯುತ್ತಿರುತ್ತಾರೆ. ಅದೆಲ್ಲಾ ಬಿಡಿ ಇಂದಿನ ಬ್ರೈನ್ ಟೀಸರ್‌ಗೆ ಉತ್ತರ ಕಂಡಿ ಹಿಡಿಯಲು ನಿಮ್ಮಿಂದ ಸಾಧ್ಯವಾಯ್ತ, ಆಗಿಲ್ಲ ಅಂದರೆ ನಾನು ನಿಮಗೆ ಸಹಾಯ ಮಾಡುತ್ತೇವೆ. ಇದರಲ್ಲಿ ಏನು ತಪ್ಪಿದೆ ಅಂತ ಈ ಕೆಳಗಿನ ಚಿತ್ರ ನೋಡಿ.
ಈ ಗೊತ್ತಾಯ್ತು ಅಲ್ವಾ ಚಿತ್ರದಲ್ಲಿ ಏನು ತಪ್ಪಿತ್ತು, ಎಲ್ಲಿ ತಪ್ಪಿತ್ತು ಅಂತ. ಇನ್ನೇಕೆ ತಡ ಈಗಲೇ ಚಿತ್ರವನ್ನು ನಿಮ್ಮ ಸ್ನೇಹಿತರು ಅಥವಾ ಆತ್ಮೀಯರಿಗೆ ಕಳುಹಿಸಿ ಅವರಿಗೆ ಈ ಪ್ರಶ್ನೆಗೆ ಉತ್ತರಿಸುವ ಸವಾಲು ಹಾಕಿ. ಅವರಿಂದ ಏನು ಉತ್ತರ ಬರಬಹುದು. ಅವರಿಗೆ ಈ ಪ್ರಶ್ನೆಗೆ ಉತ್ತರ ಕಂಡುಹಿಡಿಯಲು ಸಾಧ್ಯವೇ ಪರೀಕ್ಷೆ ಮಾಡಿ.
ಈ ಬ್ರೈನ್ ಟೀಸರ್‌ಗಳನ್ನೂ ಓದಿ
Brain Teaser: ಚಿತ್ರದಲ್ಲಿ ಒಂದೇ ಒಂದು ಕಡೆ Dog ಪದ ಇದೆ, ಅದು ಎಲ್ಲಿದೆ? 5 ಸೆಕೆಂಡ್‌ನಲ್ಲಿ ಕಂಡುಹಿಡಿಯುವುದು ನಿಮಗಿರುವ ಸವಾಲ್
ನಿಮ್ಮ ಮೆದುಳು ತುಂಬಾನೇ ಚುರುಕಾಗಿದೆ ಎಂದು ನಿಮಗೆ ಅನ್ನಿಸುತ್ತಾ, ಹಾಗಾದ್ರೆ ಅದಕ್ಕೊಂದು ಪರೀಕ್ಷೆ ನೀಡಿ. ಚಿತ್ರದಲ್ಲಿ ಒಂದಿಷ್ಟು ಆಂಗ್ಲ ಪದಗಳನ್ನ ಬರೆಯಲಾಗಿದ್ದು, ಆ ಪದಗಳ ನಡುವೆ ಒಂದೇ ಒಂದು ಕಡೆ Dog ಪದ ಇದೆ. ಅದು ಎಲ್ಲಿದೆ ಎಂದು ಕಂಡುಹಿಡಿಯುವುದು ನಿಮಗಿರುವ ಸವಾಲು. ನಿಮಗಿರುವುದು ಕೇವಲ 5 ಸೆಕೆಂಡ್ ಸಮಯ.
Brain Teaser: ನಿಮ್ಮ ಕಣ್ಣಿಗೊಂದು ಪರೀಕ್ಷೆ, 20 ಸೆಕೆಂಡ್‌ನಲ್ಲಿ ಹಸಿರು ಬಣ್ಣದ ವೃತ್ತದಲ್ಲಿ ಅಡಗಿರುವ ನಂಬರ್ ಯಾವುದು ಕಂಡುಹಿಡಿಯಿರಿ
ನಿಮ್ಮ ಕಣ್ಣು ಸಖತ್ ಶಾರ್ಪ್ ಅಂತ ನಿಮಗೆ ಅನ್ನಿಸ್ತಾ ಇದ್ಯಾ, ಹಾಗಾದರೆ ನಿಮಗೊಂದು ಚಾಲೆಂಜ್ ಇದೆ. ಈ ಬ್ರೈನ್ ಟೀಸರ್‌ನಲ್ಲಿ ಇರುವ ಹಸಿರು ಬಣ್ಣದ ವೃತ್ತದ ಒಳಗೆ ಬರೆದಿರುವ ನಂಬರ್ ಯಾವುದು ಎಂದು 20 ಸೆಕೆಂಡ್‌ನಲ್ಲಿ ನೀವು ಕಂಡುಹಿಡಿಯಬೇಕು, ಕಣ್ಣು ನೋವು ಬಂದರೆ ನಾವು ಜವಾಬ್ದಾರರಲ್ಲ.