Brain Teaser: ಫೇಸ್‌ಮಾಸ್ಕ್‌ ಹಾಕಿರುವ ಆ ಇಬ್ಬರು ಯಾರು? ಜಾಣರಾದ್ರೆ ಉತ್ತರ ಹೇಳಿ; ಈ ಪ್ರಶ್ನೆ ನಿಮ್ಮ ತಲೆಗೆ ಹುಳ ಬಿಡೋದು ಪಕ್ಕಾ
ಕನ್ನಡ ಸುದ್ದಿ  /  ಜೀವನಶೈಲಿ  /  Brain Teaser: ಫೇಸ್‌ಮಾಸ್ಕ್‌ ಹಾಕಿರುವ ಆ ಇಬ್ಬರು ಯಾರು? ಜಾಣರಾದ್ರೆ ಉತ್ತರ ಹೇಳಿ; ಈ ಪ್ರಶ್ನೆ ನಿಮ್ಮ ತಲೆಗೆ ಹುಳ ಬಿಡೋದು ಪಕ್ಕಾ

Brain Teaser: ಫೇಸ್‌ಮಾಸ್ಕ್‌ ಹಾಕಿರುವ ಆ ಇಬ್ಬರು ಯಾರು? ಜಾಣರಾದ್ರೆ ಉತ್ತರ ಹೇಳಿ; ಈ ಪ್ರಶ್ನೆ ನಿಮ್ಮ ತಲೆಗೆ ಹುಳ ಬಿಡೋದು ಪಕ್ಕಾ

ಈ ಬ್ರೈನ್‌ ಟೀಸರ್‌ನಲ್ಲಿ ಪ್ರಶ್ನೆಗೆ ನಿಮ್ಮ ಉತ್ತರವೇನು? ಫೇಸ್‌ಮಾಸ್ಕ್‌ ಧರಿಸಿರುವ ಆ ಇಬ್ಬರು ವ್ಯಕ್ತಿಗಳು ಯಾರು? ಇದಕ್ಕೆ ಯೋಚ್ನೆ ಮಾಡಿದ್ರೆ ಉತ್ತರ ಖಂಡಿತ ಸಿಗುತ್ತೆ. ಹಿಂಟ್‌ ಏನು ಅಂದ್ರೆ ಐಪಿಎಲ್‌ ಹತ್ರ ಇದೆ. ಈಗಲಾದ್ರೂ ಯೋಚ್ನೆ ಮಾಡಿ ಉತ್ತರ ಕಂಡು ಹಿಡಿಯೋಕೆ ಟ್ರೈ ಮಾಡಿ. ನೀವು ನಿಜಕ್ಕೂ ಜಾಣರಾದ್ರೆ ಉತ್ತರ ಹೇಳಿ.

ಫೇಸ್‌ಮಾಸ್ಕ್‌ ಹಾಕಿರುವ ಆ ಇಬ್ಬರು ಯಾರು?
ಫೇಸ್‌ಮಾಸ್ಕ್‌ ಹಾಕಿರುವ ಆ ಇಬ್ಬರು ಯಾರು?

ಬ್ರೈನ್‌ ಟೀಸರ್‌ಗೆ ಉತ್ತರ ಹುಡುಕೋದುಟ್ರಿಕ್ಕಿ ಅನ್ನಿಸಿದ್ರು, ಇದರೊಂದಿಗೆ ಸಮಯ ಕಳೆದಿದ್ದೇ ತಿಳಿಯುವುದಿಲ್ಲ. ಅಷ್ಟರ ಮಟ್ಟಿಗೆ ಅವು ನಮ್ಮನ್ನು ಹಿಡಿದಿಟ್ಟುಕೊಳ್ಳುತ್ತವೆ. ಇದೊಂಥರಾ ಮೋಜಿನ ಚಟುವಟಿಕೆಯೂ ಹೌದು. ಬ್ರೈನ್‌ ಟೀಸರ್‌ಗಳಿಗೆ ಉತ್ತರ ಕಂಡುಹಿಡಿಯಲು ನಾವು ಲಾಜಿಕಲ್‌ ಜೊತೆಗೆ ಕ್ರಿಯೆಟಿವ್‌ ಆಗಿಯೂ ಯೋಜಿಸಬೇಕು. ನಿಮಗೆ ಮೆದುಳಿಗೆ ಹುಳ ಬಿಡುವ ಪ್ರಶ್ನೆಗಳಿಗೆ ಉತ್ತರ ಹುಡುಕೋದು ಇಷ್ಟ ಅಂತಂದ್ರೆ ನಿಮಗಾಗಿ ಇಲ್ಲಿದೆ ಒಂದು ಇಂಟರೆಸ್ಟಿಂಗ್‌ ಪ್ರಶ್ನೆ. ಈ ಬ್ರೈನ್‌ ಟೀಸರ್‌ನಲ್ಲಿ ಇಬ್ಬರು ಮಾಸ್ಕ್‌ ಧರಿಸಿರುವ ವ್ಯಕ್ತಿಗಳು ಯಾರು ಎಂಬುದನ್ನು ನೀವು ಕಂಡುಹಿಡಿಯಬೇಕು. ಸಂಪೂರ್ಣ ಪ್ರಶ್ನೆ ಓದಿ ಅರ್ಥ ಮಾಡಿಕೊಂಡು ಉತ್ತರ ಹೇಳಿ. ನಿಮ್ಮಿಂದ ಈ ಪ್ರಶ್ನೆಗೆ ಉತ್ತರ ಹೇಳೋದು ಸಾಧ್ಯ ಅನ್ಸುತ್ತಾ?

Maria Shriver ಎಂಬ ಹೆಸರಿನ ಖಾತೆ ಹೊಂದಿರುವ ಇನ್‌ಸ್ಟಾಗ್ರಾಂ ಬಳಕೆದಾರರೊಬ್ಬರು ಈ ಬ್ರೈನ್‌ ಟೀಸರ್‌ ಅನ್ನು ಪೋಸ್ಟ್‌ ಮಾಡಿದ್ದಾರೆ. ಈ ಬ್ರೈನ್‌ ಟೀಸರ್‌ನಲ್ಲಿ ಈ ರೀತಿ ಬರೆಯಲಾಗಿದೆ. ʼಒಬ್ಬ ವ್ಯಕ್ತಿ ಮನೆಯಿಂದ ಓಡಿ ಹೋಗುತ್ತಾನೆ. ಓಡುತ್ತಾ ಓಡುತ್ತಾ ಎಡಕ್ಕೆ ತಿರುಗುತ್ತಾನೆ, ಮತ್ತರ ಸ್ವಲ್ಪ ದೂರ ಓಡುತ್ತಾನೆ, ಮತ್ತೆ ಎಡಕ್ಕೆ ತಿರುಗುತ್ತಾನೆ. ಮತ್ತೆ ಎಡಕ್ಕೆ ತಿರುಗುತ್ತಾನೆ. ಮರಳಿ ಮನೆಗೆ ಬಂದಾಗ ಇಬ್ಬರು ಮುಸುಕುಧಾರಿಗಳಿರುತ್ತಾರೆ. ಅವರು ಯಾರು?

ಈ ಬ್ರೈನ್‌ ಟೀಸರ್‌ ಅನ್ನು ಮಾರ್ಚ್‌ 20 ರಂದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿತ್ತು. ಈಗಾಗಲೇ 3000ಕ್ಕೂ ಅಧಿಕ ಮಂದಿ ಲೈಕ್‌ ಮಾಡಿದ್ದರೆ, ಹಲವರು ಕಾಮೆಂಟ್‌ ಮಾಡುವ ಮೂಲಕ ಉತ್ತರ ಕಂಡುಕೊಳ್ಳಲು ಪ್ರಯತ್ನಿಸಿದ್ದಾರೆ.

ಹಲವರು ಈ ಬ್ರೈನ್‌ ಟೀಸರ್‌ಗೆ ಕ್ಯಾಚರ್‌ ಹಾಗೂ ಅಂಪೈರ್‌ ಎಂದು ಉತ್ತರ ನೀಡಿದ್ದಾರೆ.

ʼನನಗೆ ಉತ್ತರ ಸಿಕ್ತು, ಕೆಲ ನಿಮಿಷ ತಗೊಂಡೆ ಆದರೆ ಇದು ನಿಜಕ್ಕೂ ಚೆನ್ನಾಗಿದೆʼ ಎಂದು ಇನ್‌ಸ್ಟಾಗ್ರಾಂ ಬಳಕೆದಾರರೊಬ್ಬರು ಬರೆದುಕೊಂಡಿದ್ದಾರೆ.

ʼನೀವು ನಿಜಕ್ಕೂ ನನ್ನನ್ನು ಗೊಂದಲಕ್ಕೆ ದೂಡಿದ್ರಿʼ ಎಂದು ಇನ್ನೊಬ್ಬರು ಕಾಮೆಂಟ್‌ ಮಾಡಿದ್ದಾರೆ. ʼನನಗೆ ಪ್ರಶ್ನೆ ಎರಡೆರಡು ಬಾರಿ ಓದಿದ್ರು ಅರ್ಥ ಆಗಿಲ್ಲ, ಇದೊಂಥರ ಮಜಾ ಇದೆʼ ಎಂದು ಇನ್ನೊಬ್ಬರು ಕಾಮೆಂಟ್‌ ಮಾಡಿ ಮೆಚ್ಚುಗೆ ಸೂಚಿಸಿದ್ದಾರೆ.

ಈ ಬ್ರೈನ್‌ ಟೀಸರ್‌ಗಳನ್ನೂ ಓದಿ

Brain Teaser: ಗಾಡಿಯಲ್ಲಿ ಒಟ್ಟು ಎಷ್ಟು ಬಾಕ್ಸ್‌ಗಳನ್ನ ಲೋಡ್‌ ಮಾಡಲಾಗಿದೆ? ಥಟ್ಟಂತ ನೋಡಿ, ಪಟ್‌ ಅಂತ ಉತ್ತರ ಹೇಳಿ

ಗಾಡಿಯೊಂದರಲ್ಲಿ ಒಂದಿಷ್ಟು ಬಾಕ್ಸ್‌ಗಳನ್ನು ಲೋಡ್‌ ಮಾಡಲಾಗಿದೆ. ಅದರಲ್ಲಿ ಎಷ್ಟು ಬಾಕ್ಸ್‌ಗಳಿವೆ ಎಂಬ ಹೇಳಬೇಕು. ದಿನವಿಡೀ ನೋಡುತ್ತಾ ಕೂರುವಂತಿಲ್ಲ, ಥಟ್ಟಂತ ನೋಡಿ, ಪಟ್‌ ಅಂತ ಉತ್ತರ ಹೇಳಬೇಕು. ಈ ಚಾಲೆಂಜ್‌ ಸ್ವೀಕರಿಸಲು ನೀವು ಸಿದ್ಧರಿದ್ದೀರಾ?

Brain Teaser: 4ರಲ್ಲಿ 3 ಗುಣಿಸಿ, 3 ಭಾಗಿಸಿ, 4 ಗುಣಿಸಿದ್ರೆ ಎಷ್ಟಾಗುತ್ತೆ; ಥಟ್ಟಂತ 10 ಸೆಕೆಂಡ್‌ನಲ್ಲಿ ಉತ್ತರ ಹೇಳಿ

ಗಣಿತ ಎಲ್ಲರಿಗೂ ಕಬ್ಬಿಣದ ಕಡಲೆಯಲ್ಲ. ಕೆಲವರು ಗಣಿತದ ಸೂತ್ರಗಳಿಗೆ ಥಟ್ಟಂತ ಉತ್ತರ ಹೇಳ್ತಾರೆ. ಅಂತಹವರಿಗಾಗಿ ಇಲ್ಲಿದೆ ಒಂದು ಬ್ರೈನ್‌ ಟೀಸರ್‌. ಇಲ್ಲೊಂದು ಸರಳ ಗಣಿತ ಸೂತ್ರವಿದೆ, ಇದಕ್ಕೆ 10 ಸೆಕೆಂಡ್‌ನಲ್ಲಿ ಉತ್ತರ ಹೇಳಿದ್ರೆ ನೀವು ನಿಜಕ್ಕೂ ಜಾಣರು.

Whats_app_banner