Brain Teaser: 3 ಸೇಬುಹಣ್ಣಿಗೆ 30 ಆದ್ರೆ, 1 ತೆಂಗಿನಕಾಯಿ, 1 ಸೇಬು, 3 ಬಾಳೆಹಣ್ಣಿಗೆ ಎಷ್ಟಾಗುತ್ತೆ? 10 ಸೆಕೆಂಡ್‌ನಲ್ಲಿ ಉತ್ತರ ಹೇಳಿ
ಕನ್ನಡ ಸುದ್ದಿ  /  ಜೀವನಶೈಲಿ  /  Brain Teaser: 3 ಸೇಬುಹಣ್ಣಿಗೆ 30 ಆದ್ರೆ, 1 ತೆಂಗಿನಕಾಯಿ, 1 ಸೇಬು, 3 ಬಾಳೆಹಣ್ಣಿಗೆ ಎಷ್ಟಾಗುತ್ತೆ? 10 ಸೆಕೆಂಡ್‌ನಲ್ಲಿ ಉತ್ತರ ಹೇಳಿ

Brain Teaser: 3 ಸೇಬುಹಣ್ಣಿಗೆ 30 ಆದ್ರೆ, 1 ತೆಂಗಿನಕಾಯಿ, 1 ಸೇಬು, 3 ಬಾಳೆಹಣ್ಣಿಗೆ ಎಷ್ಟಾಗುತ್ತೆ? 10 ಸೆಕೆಂಡ್‌ನಲ್ಲಿ ಉತ್ತರ ಹೇಳಿ

ತೆಂಗಿನಕಾಯಿ, ಬಾಳೆಹಣ್ಣು ಹಾಗೂ ಸೇಬುಹಣ್ಣು ಇರುವ ಬ್ರೈನ್‌ ಟೀಸರ್‌ ಚಿತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ. ಇದರಲ್ಲಿ ಗಣಿತದ ಪಜಲ್‌ ಇದ್ದು ಈ ಪಜಲ್‌ಗೆ ಉತ್ತರ ಕಂಡುಹಿಡಿಯಲು ಗಣಿತ ಎಕ್ಸ್‌ಪರ್ಟ್‌ಗಷ್ಟೇ ಸಾಧ್ಯ. ನೀವು ಗಣಿತಪ್ರಿಯರಾದ್ರೆ 10 ಸೆಕೆಂಡ್‌ನಲ್ಲಿ ಉತ್ತರ ಹೇಳೋಕೆ ಪ್ರಯತ್ನ ಮಾಡಿ.

3 ಸೇಬುಹಣ್ಣಿಗೆ 30 ಆದ್ರೆ, 1 ತೆಂಗಿನಕಾಯಿ, 1 ಸೇಬು, 3 ಬಾಳೆಹಣ್ಣಿಗೆ ಎಷ್ಟಾಗುತ್ತೆ?
3 ಸೇಬುಹಣ್ಣಿಗೆ 30 ಆದ್ರೆ, 1 ತೆಂಗಿನಕಾಯಿ, 1 ಸೇಬು, 3 ಬಾಳೆಹಣ್ಣಿಗೆ ಎಷ್ಟಾಗುತ್ತೆ? (X/@Brainy_Bits_Hub)

ಗಣಿತದ ಪಜಲ್‌ ಬಿಡಿಸುವ ಹವ್ಯಾಸ ನಿಮಗಿದ್ಯಾ? ಅದಕ್ಕಾಗಿ ನಾವು ಸಾಮಾಜಿಕ ಜಾಲತಾಣಗಳನ್ನು ತಡಕಾಡುತ್ತೀರಾ, ಖಂಡಿತ ನಿಮಗೆ ಸಾಮಾಜಿಕ ಜಾಲತಾಣದಲ್ಲಿ ಬಗೆ ಬಗೆಯ ಬ್ರೈನ್‌ ಟೀಸರ್‌ಗಳು ಕಣ್ಣಿಗೆ ಕಾಣುತ್ತವೆ. ಈ ಪಜಲ್‌ಗಳು ನಿಮ್ಮ ಮೆದುಳಿಗೆ ಹುಳ ಬಿಡುವಂತಿರುವುದು ಸುಳ್ಳಲ್ಲ. ಇಲ್ಲೊಂದು ಅಂಥದ್ದೇ ಬ್ರೈನ್‌ ಟೀಸರ್‌ ಚಿತ್ರವಿದೆ. ಈ ಬ್ರೈನ್‌ ಟೀಸರ್‌ ಲೆಕ್ಕಾಚಾರ ನೋಡಲು ಸುಲಭ ಎನ್ನಿಸಿದ್ರೂ ಇದಕ್ಕೆ ಉತ್ತರ ಹುಡುಕುವುದು ಖಂಡಿತ ನಿಮಗೆ ಕಷ್ಟ ಎನ್ನಿಸುತ್ತದೆ. ಮೆದುಳಿಗೆ ಹುಳ ಬಿಡುವ ಈ ಬ್ರೈನ್‌ ಟೀಸರ್‌ಗೆ ಉತ್ತರ ಹುಡುಕಲು ನಿಮ್ಮಿಂದ ಸಾಧ್ಯವೇ ಟ್ರೈ ಮಾಡಿ.

ಎಕ್ಸ್‌ನಲ್ಲಿ ಹಂಚಿಕೊಳ್ಳಲಾದ ಈ ಬ್ರೈನ್‌ ಟೀಸರ್‌ಗೆ ʼಉತ್ತರವೇನು?ʼ ಎಂದು ಶೀರ್ಷಿಕೆ ಬರೆದುಕೊಳ್ಳಲಾಗಿದೆ.

ಈ ಬ್ರೈನ್‌ ಟೀಸರ್‌ನಲ್ಲಿ ಸೇಬುಹಣ್ಣು ತೆಂಗಿನಕಾಯಿ ಹಾಗೂ ಬಾಳೆಹಣ್ಣು ಇದೆ. ಈ ಮೂರಕ್ಕೂ ಒಂದೊಂದು ಮೌಲ್ಯವಿದೆ. ಈ ಮೂರು ಸೇರಿದಾಗ ಎಷ್ಟಾಗುತ್ತೆ ಎಂಬುದನ್ನು 10 ಸೆಕೆಂಡ್‌ನಲ್ಲಿ ಕ್ಯಾಲ್ಕುಲೇಟರ್‌ ಬಳಸದೇ ಕಂಡುಹಿಡಿಯಬೇಕು. ನೀವು ಗಣಿತ ಎಕ್ಸ್‌ಪರ್ಟ್‌ ಆಗಿದ್ದರೆ ಈ ಬ್ರೈನ್‌ ಟೀಸರ್‌ಗೆ ಉತ್ತರ ಹೇಳೋಕೆ ಟ್ರೈ ಮಾಡಿ.

ಮೇ 26 ರಂದು ಈ ಬ್ರೈನ್‌ಟೀಸರ್‌ ಅನ್ನು ಎಕ್ಸ್‌ನಲ್ಲಿ ಪೋಸ್ಟ್‌ ಮಾಡಲಾಗಿತ್ತು. ಅಂದಿನಿಂದ ಇಂದಿನವರೆಗೆ 14,000ಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ವೀಕ್ಷಕರ ಸಂಖ್ಯೆ ಇನ್ನೂ ಹೆಚ್ಚುತ್ತಲೇ ಇದೆ. ಹಲವು ಗಣಿತಪ್ರೇಮಿಗಳು ತಾವು ಕಂಡುಕೊಂಡು ಉತ್ತರವನ್ನು ಕಾಮೆಂಟ್‌ ಮಾಡುವ ಮೂಲಕ ತಿಳಿಸಿದ್ದಾರೆ.

ಈ ಬ್ರೈನ್‌ ಟೀಸರ್‌ಗೆ ಬಂದ ಉತ್ತರಗಳು ಹೀಗಿವೆ

ʼ10+10+10=30. 10+3+3=16. 4-2=2. 1+10+3=14ʼ ಎಂದು ಎಕ್ಸ್‌ ಬಳಕೆದಾರರೊಬ್ಬರು ಕಾಮೆಂಟ್‌ ಮಾಡಿದ್ದಾರೆ.

ಸೇಬು = 30/3 = 10, ಬಾಳೆಹಣ್ಣು = (16-10)/2 = 3, ತೆಂಗಿನಕಾಯಿ = 3-2 = 1. ಸೇಬು+ಬಾಳೆಹಣ್ಣು, ತೆಂಗಿನಕಾಯಿ ಸೇರಿಸಿ 10+3+1= 14ʼ ಎಂದು ಬರೆದುಕೊಂಡಿದ್ದಾರೆ.

ಕೆಲವರು ಈ ಬ್ರೈನ್‌ ಟೀಸರ್‌ಗೆ ಉತ್ತರ 14 ಎಂದು ಕಾಮೆಂಟ್‌ ಮಾಡಿದ್ದರೆ ಇನ್ನೂ ಕೆಲವರು 13.5 ಎಂದು ಕಾಮೆಂಟ್‌ ಮಾಡಿದ್ದಾರೆ.

ಹಾಗಾದ್ರೆ ಸರಿ ಈ ಬ್ರೈನ್‌ ಟೀಸರ್‌ಗೆ ನಿಮ್ಮ ಉತ್ತರವೇನು, ಕಾಮೆಂಟ್‌ ಮಾಡಿ.

ಈ ಬ್ರೈನ್‌ ಟೀಸರ್‌ಗಳನ್ನೂ ಓದಿ

Brain Teaser: ಚಿತ್ರದಲ್ಲಿ ಎಷ್ಟು ಬೀಗಗಳು ಲಾಕ್‌ ಆಗಿಲ್ಲ? 10 ಸೆಕೆಂಡ್‌ನಲ್ಲಿ ಉತ್ತರ ಹೇಳಿ, ನಿಮ್ಮ ಕಣ್ಣು ಎಷ್ಟು ಶಾರ್ಪ್‌ ನೋಡೋಣ

ಇಲ್ಲಿರುವ ಬ್ರೈನ್‌ ಟೀಸರ್‌ ಚಿತ್ರದಲ್ಲಿ ರಾಶಿ ಬೀಗಗಳಿವೆ. ಈ ಬೀಗಗಳಲ್ಲಿ ಕೆಲವನ್ನು ಲಾಕ್‌ ಮಾಡಿಲ್ಲ. ಕೇವಲ 10 ಸೆಕೆಂಡ್‌ನಲ್ಲಿ ಎಷ್ಟು ಬೀಗಗಳು ಲಾಕ್‌ ಆಗಿಲ್ಲ ಎಂಬುದನ್ನು ಕಂಡುಹಿಡಿಯಬೇಕು. ನಿಮ್ಮ ಕಣ್ಣು ನಿಜಕ್ಕೂ ಸಖತ್‌ ಶಾರ್ಪ್‌ ಇದ್ರೆ ನೀವು ಈ ಬ್ರೈನ್‌ ಟೀಸರ್‌ಗೆ ಉತ್ತರ ಕಂಡುಹಿಡಿಯಬಹುದು.

Brain Teaser: ವೃತ್ತದಲ್ಲಿ ಮಿಸ್‌ ಆಗಿರುವ ನಂಬರ್‌ ಯಾವುದು? ಗಣಿತ ಪ್ರಿಯರು ಥಟ್ಟಂತ ಉತ್ತರ ಹೇಳಿ ನೋಡೋಣ

ಗಣಿತದ ಸೂತ್ರಗಳು ಕೆಲವೊಮ್ಮೆ ನಮ್ಮ ಮೆದುಳಿಗೆ ಹುಳ ಬಿಡುವಂತಿರುವುದು ಸುಳ್ಳಲ್ಲ. ಇಲ್ಲೊಂದು ವೃತ್ತವಿದೆ, ಈ ವೃತ್ತದಲ್ಲಿ ಒಂದಿಷ್ಟು ಸಂಖ್ಯೆಗಳಿವೆ. ಒಂದು ಸಂಖ್ಯೆ ಮಾತ್ರ ಮಿಸ್‌ ಆಗಿದೆ. ಆ ನಂಬರ್‌ ಯಾವುದು ಎಂಬುದನ್ನು ಕಂಡುಹಿಡಿಯಬೇಕು. ಗಣಿತ ಪ್ರೇಮಿಗಳು ಉತ್ತರ ಹೇಳಲು ಟ್ರೈ ಮಾಡಿ.

Whats_app_banner