ಕನ್ನಡ ಸುದ್ದಿ  /  Lifestyle  /  Viral News Brain Teaser Find Out Which Cup Will Get Filled First Test Your Iq Social Media Viral Rst

Brain Teaser: 7 ಕಪ್‌ಗಳಲ್ಲಿ ಮೊದಲು ಯಾವ ಕಪ್‌ ತುಂಬುತ್ತೆ, ಉತ್ತರ ಹೇಳಿ ಜಾಣತನ ತೋರಿ; ನಿಮಗಿದು ಚಾಲೆಂಜ್‌

ʼಯಾವ ಕಪ್‌ಗೆ ಮೊದಲು ನೀರು ತುಂಬುತ್ತೆ?ʼ ಇನ್‌ಸ್ಟಾಗ್ರಾಂ ಥ್ರೆಡ್‌ನಲ್ಲಿ ಪೋಸ್ಟ್‌ ಮಾಡಲಾದ ಬ್ರೈನ್‌ ಟೀಸರ್‌ ನಿಮ್ಮ ಬುದ್ಧಿಮತ್ತೆಯನ್ನು ಪರೀಕ್ಷಿಸುವುದು ಸುಳ್ಳಲ್ಲ. 7 ಕಪ್‌ಗಳಲ್ಲಿ ಮೊದಲು ಯಾವ ಕಪ್‌ಗೆ ನೀರು ತುಂಬುತ್ತೆ ಎನ್ನುವುದು ನಿರ್ಧರಿಸಿ ಉತ್ತರ ಹೇಳಿ. ನಿಮ್ಮ ಜಾಣತನ ತೋರಿ.

7 ಕಪ್‌ಗಳಲ್ಲಿ ಮೊದಲು ಯಾವ ಕಪ್‌ ತುಂಬುತ್ತೆ
7 ಕಪ್‌ಗಳಲ್ಲಿ ಮೊದಲು ಯಾವ ಕಪ್‌ ತುಂಬುತ್ತೆ

ಬ್ರೈನ್‌ ಟೀಸರ್‌, ಆಪ್ಟಿಕಲ್‌ ಇಲ್ಯೂಷನ್‌ಗಳಿಗೆ ಉತ್ತರ ಹೇಳುವುದು ಹಲವರಿಗೆ ಇಷ್ಟವಾಗುತ್ತದೆ. ಇವು ಒಂಥರಾ ಮೋಜು ನೀಡುವುದು ಸುಳ್ಳಲ್ಲ. ಇದರಿಂದ ಮೆದುಳು ಚುರುಕಾಗುತ್ತದೆ. ಈ ಕಾರಣದಿಂದಲೇ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿರುವ ಬ್ರೈನ್‌ ಟೀಸರ್‌ಗಳು ಸಾಕಷ್ಟು ವೈರಲ್‌ ಆಗುತ್ತವೆ. ನೀವು ಮೆದುಳಿಗೆ ಕೆಲಸ ಕೊಡುವ ಬ್ರೈನ್‌ ಟೀಸರ್‌ಗಾಗಿ ಹುಡುಕುತ್ತಿದ್ದರೆ, ಇಲ್ಲಿದೆ ನಿಮಗಾಗಿ ಒಂದು ಸ್ಪೆಷಲ್‌ ಬ್ರೈನ್‌ ಟೀಸರ್‌. ಇದು ನಿಜಕ್ಕೂ ಸುಲಭದ ಪ್ರಶ್ನೆ. ಯಾವ ಕಪ್‌ ಮೊದಲು ತುಂಬುತ್ತದೆ? ಇದಕ್ಕೆ ನೀವು ಉತ್ತರ ಹೇಳಬೇಕು.

‘Memes’ ಎಂಬ ಥ್ರೆಡ್‌ ಖಾತೆ ಹೊಂದಿರುವ ವ್ಯಕ್ತಿಯೊಬ್ಬರು ಈ ಬ್ರೈನ್‌ ಟೀಸರ್‌ ಅನ್ನು ಹಂಚಿಕೊಂಡಿದ್ದಾರೆ. ನಿಮ್ಮ ಐಕ್ಯೂ ಪರೀಕ್ಷೆ ಮಾಡಿ? ಎಂಬ ಪ್ರಶ್ನೆಯೊಂದಿಗೆ ಈ ಬ್ರೈನ್‌ ಟೀಸರ್‌ ಅನ್ನು ಹಂಚಿಕೊಳ್ಳಲಾಗಿದೆ. ಇದರಲ್ಲಿ 7 ಕಪ್‌ಗಳನ್ನು ಇರಿಸಲಾಗಿದೆ. ಮೇಲಿನಿಂದ ಮಗ್‌ನಲ್ಲಿ ನೀರು ಸುರಿಯಲಾಗುತ್ತಿದೆ. ಯಾವ ಕಪ್‌ ಮೊದಲು ತುಂಬುತ್ತದೆ ಎಂಬುದು ಇಲ್ಲಿರುವ ಪ್ರಶ್ನೆ. ನಿಜಕ್ಕೂ ನಿಮ್ಮಲ್ಲಿ ಜಾಣತನ ಇದ್ರೆ ಈ ಪ್ರಶ್ನೆಗೆ ಉತ್ತರ ಹೇಳಿ. ಈ ಬ್ರೈನ್‌ ಟೀಸರ್‌ ಅನ್ನು ಥ್ರೆಡ್‌ನಲ್ಲಿ ಇಂದು ಬೆಳಿಗ್ಗೆ ಹಂಚಿಕೊಳ್ಳಲಾಗಿತ್ತು. ಈಗಾಗಲೇ ಹಲವರು ಇದಕ್ಕೆ ಕಾಮೆಂಟ್‌ ಮಾಡುವ ಮೂಲಕ ಉತ್ತರ ಹೇಳಿದ್ದಾರೆ. ಇನ್ನೂ ಕೆಲವರು ಈ ಪೋಸ್ಟ್‌ಗೆ ಲೈಕ್‌ ಕಾಮೆಂಟ್‌ ಮಾಡಿದ್ದಾರೆ.

ಕಾಮೆಂಟ್‌ಗಳು ಹೀಗಿವೆ

3,4,5 ಹಾಗೂ 7 ಅನ್ನು ಬ್ಲಾಕ್‌ ಮಾಡಲಾಗಿದೆ. 1 ಮತ್ತು 6 ಗಣನೆಗೆ ತೆಗೆದುಕೊಳ್ಳದೇ ಇದ್ದರೆ, ಆರು 7ಕ್ಕಿಂತ ಮೊದಲು ತುಂಬುತ್ತದೆ ಎಂದು ವ್ಯಕ್ತಿಯೊಬ್ಬರು ಕಾಮೆಂಟ್‌ ಮಾಡಿದ್ದಾರೆ.

ʼ2ನೇ ಕಪ್‌ʼ ಎಂದು ಇನ್ನೊಬ್ಬರು ಕಾಮೆಂಟ್‌ ಮಾಡಿದ್ದಾರೆ. 6 ಯಾಕೆಂದರೆ ಉಳಿದ ಕಪ್‌ಗಳನ್ನು ಬ್ಲಾಕ್‌ ಮಾಡಲಾಗಿದೆ ಎಂದು ಮೂರನೇ ವ್ಯಕ್ತಿ ಕಾಮೆಂಟ್‌ ಮಾಡುವ ಮೂಲಕ ಉತ್ತರಿಸಿದ್ದಾರೆ. ಹೀಗೆ ಹಲವರು 2,3,6 ಎಂದು ತಮಗೆ ಅನ್ನಿಸಿದ ಉತ್ತರಗಳನ್ನು ಕಾಮೆಂಟ್‌ ಮಾಡಿದ್ದಾರೆ, ಇದಕ್ಕೆ ನಿಮ್ಮ ಉತ್ತರವೇನು?

ಈ ಬ್ರೈನ್‌ ಟೀಸರ್‌ಗಳನ್ನೂ ಓದಿ

Brain Teaser: ಇಲ್ಲಿದೆ ಕೂಡಿಸಿ, ಭಾಗಿಸುವ ಸುಲಭ ಗಣಿತ; ಆದ್ರೆ ಕ್ಯಾಲ್ಕುಲೆಟರ್‌ ಬಳಸದೆ ಉತ್ತರ ಹೇಳ್ಬೇಕು; ನಿಮ್ಮಿಂದ ಸಾಧ್ಯನಾ ನೋಡಿ

ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ ಮಾಡಲಾದ ಸರಳ ಗಣಿತದ ಸೂತ್ರವೊಂದು ನಿಮ್ಮ ಮೆದುಳಿಗೆ ಹುಳ ಬಿಡುವುದು ಖಂಡಿತ. ಯಾಕೆಂದರೆ ಕ್ಯಾಲ್ಕುಲೆಟರ್‌ ಬಳಸದೇ ಈ ಪ್ರಶ್ನೆಗೆ ಉತ್ತರ ಹೇಳಬೇಕು. ಇದು ನಿಜಕ್ಕೂ ಚಾಲೆಂಜ್‌ ಅನ್ನಿಸೋದು ಸುಳ್ಳಲ್ಲ.

Brain Teaser: 9=90 ಆದ್ರೆ, 3= ಎಷ್ಟು? ಗಣಿತದಲ್ಲಿ ಪಂಟರಾದ್ರೆ ಪೆನ್ನು-ಪೇಪರ್‌ ಬಳಸದೇ ಈ ಪ್ರಶ್ನೆಗೆ ಉತ್ತರ ಹೇಳಿ

ಇತ್ತೀಚಿಗೆ ಥ್ರೆಡ್‌ನಲ್ಲಿ ಪೋಸ್ಟ್‌ ಮಾಡಲಾದ ಬ್ರೈನ್‌ ಟೀಸರ್‌ವೊಂದು ನಿಮ್ಮ ಮೆದುಳಿಗೆ ಹುಳ ಬಿಡುವುದು ಖಂಡಿತ. ಇದರಲ್ಲಿ ಒಂದು ಗಣಿತದ ಸೂತ್ರವಿದ್ದು, 3ರ ಮೌಲ್ಯ ಎಷ್ಟು ಎಂಬುದನ್ನು ಕಂಡುಹಿಡಿಯಬೇಕಾಗಿರುವುದು ನಿಮಗಿರುವ ಸವಾಲು. ಪೆನ್ನು-ಪೇಪರ್‌ ಬಳಸದೇ ಅದಕ್ಕೆ ಉತ್ತರ ಕಂಡುಹಿಡಿಯಲಯ ಸಾಧ್ಯವೇ? ಟ್ರೈ ಮಾಡಿ.

ವಿಭಾಗ