Brain Teaser: ನಿಮ್ಮ ಕಣ್ಣು ಎಷ್ಟು ಸೂಕ್ಷ್ಮವಾಗಿದೆ ನೋಡೋಣ, 9 ಸೆಕೆಂಡ್‌ ಒಳಗೆ ಚಿತ್ರದಲ್ಲಿ ಅಡಗಿರುವ ಹೃದಯವನ್ನು ಹುಡುಕಿ-viral news brain teaser find the hidden heart in this image 9 out of 10 fail to spot it social media viral rst ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  Brain Teaser: ನಿಮ್ಮ ಕಣ್ಣು ಎಷ್ಟು ಸೂಕ್ಷ್ಮವಾಗಿದೆ ನೋಡೋಣ, 9 ಸೆಕೆಂಡ್‌ ಒಳಗೆ ಚಿತ್ರದಲ್ಲಿ ಅಡಗಿರುವ ಹೃದಯವನ್ನು ಹುಡುಕಿ

Brain Teaser: ನಿಮ್ಮ ಕಣ್ಣು ಎಷ್ಟು ಸೂಕ್ಷ್ಮವಾಗಿದೆ ನೋಡೋಣ, 9 ಸೆಕೆಂಡ್‌ ಒಳಗೆ ಚಿತ್ರದಲ್ಲಿ ಅಡಗಿರುವ ಹೃದಯವನ್ನು ಹುಡುಕಿ

Brain Teaser: ನಿಮ್ಮ ಕಣ್ಣು ಹದ್ದಿನ ಕಣ್ಣಿನಷ್ಟೇ ಸೂಕ್ಷ್ಮ ಅಂತಾದ್ರೆ ನಿಮಗಾಗಿ ಇಲ್ಲೊಂದು ಬ್ರೈನ್ ಟೀಸರ್ ಚಿತ್ರವಿದೆ. ಇದರಲ್ಲಿ ಅಡಗಿರುವ ಹೃದಯವನ್ನು ನೀವು 9 ಸೆಕೆಂಡ್ ಒಳಗೆ ಹುಡುಕಬೇಕು, ನೋಡೋಣ ನಿಮ್ಮ ಕಣ್ಣು ಎಷ್ಟು ಶಾರ್ಪ್ ಆಗಿದೆ ಅಂತ. ನಿಮ್ಮ ಸಮಯ ಈಗ ಶುರು...

ಬ್ರೈನ್ ಟೀಸರ
ಬ್ರೈನ್ ಟೀಸರ

Brain Teaser: ಬ್ರೈನ್ ಟೀಸರ್ ಚಿತ್ರಗಳು ನಮ್ಮ ಕಣ್ಣು ಮೆದುಳಿಗೆ ಮೋಸ ಮಾಡುವಂತಿರುವುದು ಸುಳ್ಳಲ್ಲ. ಕೆಲವೊಮ್ಮೆ ಇವು ನಮಗೆ ಚಾಲೆಂಜ್ ಮಾಡುವಂತೆ ಇರುತ್ತವೆ. ಈ ಚಿತ್ರಗಳಿಗೆ ಉತ್ತರ ಹುಡುಕುವುದು ಒಂಥರಾ ಮೋಜು ನೀಡುವುದರ ಜೊತೆಗೆ ನಮ್ಮಲ್ಲಿ ಗ್ರಹಿಸುವ ಶಕ್ತಿಯನ್ನು ಹೆಚ್ಚಿಸುತ್ತವೆ. ಯೋಚನಾಶಕ್ತಿ ವೃದ್ಧಿಯಾಗಲು ಬ್ರೈನ್ ಟೀಸರ್‌ಗಳು ನೆರವಾಗುತ್ತವೆ.

ಇಂದಿನ ಬ್ರೈನ್ ಟೀಸರ್‌ನಲ್ಲಿ ಒಂದು ಅಸ್ಪಷ್ಟ ಚಿತ್ರವಿದೆ. ಇದರಲ್ಲಿರುವುದೆಲ್ಲಾ ಗೋಜಲುಗಳಾಗಿ ನಿಮಗೆ ಕಾಣಿಸಬಹುದು. ಈ ಒಂದು ಚಿತ್ರದಲ್ಲಿ ಐದಾರು ಅಂಶಗಳಿವೆ, ಈ ಎಲ್ಲದರ ನಡುವೆ ಹೃದಯವೊಂದು ಅಡಗಿದೆ. ಆ ಹೃದಯವನ್ನು ಕಂಡುಹಿಡಿಯುವುದು ನಿಮಗಿರುವ ಸವಾಲು. ಇದನ್ನು ನೀವು ಕೇವಲ 9 ಸೆಕೆಂಡ್ ಒಳಗೆ ಕಂಡುಹಿಡಿಯಬೇಕು, ಆಗ ನಿಮ್ಮ ಕಣ್ಣು ಸಖತ್ ಶಾರ್ಪ್ ಎಂದು ಒಪ್ಪಿಕೊಳ್ಳಬಹುದು.

ಈ ಚಿತ್ರವನ್ನು ಸೂಕ್ಷ್ಮವಾಗಿ ಬಹಳ ಹೊತ್ತು ಗಮನಿಸಿದರೆ ನಿಮಗೆ ತಲೆ ತಿರುಗುವುದು ಖಂಡಿತ. ಇದಕ್ಕೆ ಉತ್ತರ ಹುಡುಕಲು ಕಣ್ಣಿನ ಜೊತೆ ಮೆದುಳು ಕೂಡ ಸೂಕ್ಷ್ಮವಾಗಿರಬೇಕು. ಈಜುತ್ತಿರುವ ಬಾತುಕೋಳಿಗಳ ನಡುವೆಲ್ಲೂ ಹೃದಯ ಅಡಗಿ ಕುಳಿತು ಬಿಟ್ಟಿದೆ. ಅದನ್ನು ಬೇಗ ಬೇಗ ಹುಡುಕಿ ನೋಡೋಣ.

ಇಂತಹ ಬ್ರೈನ್ ಟೀಸರ್‌ಗಳು ನಮ್ಮಲ್ಲಿ ಯೋಚನಾ ಶಕ್ತಿಯನ್ನು ಬದಲಿಸುತ್ತವೆ. ವಾಸ್ತವಕ್ಕೂ ಗ್ರಹಿಕೆಗೂ ಬಹಳ ವ್ಯತ್ಯಾಸವಿದೆ ಎಂಬುದನ್ನು ನಾವು ಬ್ರೈನ್ ಟೀಸರ್‌ಗಳ ಮೂಲಕ ಅರ್ಥ ಮಾಡಿಕೊಳ್ಳಬಹುದು. ಯಾಕೆಂದರೆ ನಮ್ಮ ಕಣ್ಣು ಮೆದುಳು ಗ್ರಹಿಸಿದ್ದಕ್ಕಿಂತ ಭಿನ್ನವಾಗಿರುವುದು ಈ ಚಿತ್ರದಲ್ಲಿ ಇರುತ್ತದೆ. ಈ ಬ್ರೈನ್ ಟೀಸರ್ ಖಂಡಿತ ನಿಮ್ಮ ವೀಕ್ಷಣಾ ಸಾಮರ್ಥ್ಯವನ್ನ ಪರೀಕ್ಷೆ ಮಾಡುವುದು ಸುಳಲ್ಲ.

ಸರಿ ಹಾಗಾದ್ರೆ 9 ಸೆಕೆಂಡ್ ಒಳಗೆ ಅದಕ್ಕೆ ಉತ್ತರ ಕಂಡುಹಿಡಿಯಲು ನಿಮ್ಮಿಂದ ಸಾಧ್ಯವಾಯ್ತಾ, 9 ಸೆಕೆಂಡ್ ಮುಗಿದು 10 ನಿಮಿಷ ಕಳೆದರೂ ನಿಮ್ಮಿಂದ ಹೃದಯವನ್ನು ಹುಡುಕಲು ಸಾಧ್ಯವಾಗಿಲ್ಲ ಅಂದ್ರೆ ನಾವು ನಿಮಗೆ ಸಹಾಯ ಮಾಡುತ್ತೇವೆ. ಈ ಕೆಳಗಿನ ಚಿತ್ರ ಗಮನಿಸಿ, ಇಲ್ಲಿದೆ ನೋಡಿ ಕಳೆದು ಹೋದ ಹಾರ್ಟ್.

ಬ್ರೈನ್ ಟೀಸರ್
ಬ್ರೈನ್ ಟೀಸರ್

ಈ ಬ್ರೈನ್ ಟೀಸರ್‌ಗಳ‌ನ್ನೂ ಓದಿ

Brain Teaser: ನಿಮ್ಮ ಜಾಣ್ಮೆಗೊಂದು ಸವಾಲ್‌, ಚಿತ್ರದಲ್ಲಿರುವ ಮೂರು ಪ್ರಾಣಿಗಳ ಒಟ್ಟು ತೂಕ ಎಷ್ಟು? 11 ಸೆಕೆಂಡ್‌ನಲ್ಲಿ ಉತ್ತರ ಹೇಳಿ

Brain Test: ನೀವು ತುಂಬಾ ಬುದ್ಧಿವಂತರು ಅಂತ ನಿಮಗೆ ಅನ್ನಿಸುತ್ತಾ, ಹಾಗಾದ್ರೆ ಇಲ್ಲಿರುವ ಬ್ರೈನ್ ಟೀಸರ್‌ಗೆ 11 ಸೆಕೆಂಡ್‌ ಒಳಗೆ ಉತ್ತರ ಹೇಳಿ. ಮೂರು ಪ್ರಾಣಿಗಳ ಒಟ್ಟು ತೂಕ ಎಷ್ಟು ಎಂದು ಹೇಳುವುದು ನಿಮಗಿರುವ ಸವಾಲು, ಇನ್ನೇಕೆ ತಡ ಚಿತ್ರ ನೋಡಿ, ಉತ್ತರ ಹೇಳಿ.

Brain Teaser: ಮೆದುಳಿಗೆ ಹುಳ ಬಿಡುವ ಈ ಬ್ರೈನ್ ಟೀಸರ್‌ಗೆ ಉತ್ತರ ಹೇಳಲು ನಿಮ್ಮಿಂದ ಸಾಧ್ಯವೇ? ನಿಮ್ಮ ಜಾಣ್ಮೆಗೊಂದು ಸವಾಲ್‌

Brain Teaser: ಎಕ್ಸ್ ಬಳಕೆದಾರರೊಬ್ಬರು ಮೆದುಳಿಗೆ ಹುಳ ಬಿಡುವ ಬ್ರೈನ್ ಟೀಸರ್‌ವೊಂದನ್ನು ಹಂಚಿಕೊಂಡಿದ್ದಾರೆ. ಸಂದರ್ಶನದ ಸಮಯದಲ್ಲಿ ಹಾರ್ವರ್ಡ್ ವಿಶ್ವವಿದ್ಯಾಲಯವು ಈ ಪ್ರಶ್ನೆಯನ್ನು ಕೇಳಿತ್ತು ಎಂದು ಅವರು ಹೇಳಿಕೊಂಡಿದ್ದಾರೆ. ನೀವು ನಿಜಕ್ಕೂ ಜಾಣರು ಅಂತಾದ್ರೆ ಈ ಪ್ರಶ್ನೆಗೆ ಉತ್ತರ ಹೇಳಲು ಪ್ರಯತ್ನಿಸಿ, ಇದನ್ನು ನಿಮ್ಮ ಸ್ನೇಹಿತರೊಂದಿಗೂ ಹಂಚಿಕೊಳ್ಳಿ.

mysore-dasara_Entry_Point