Brain Teaser: ರಾಶಿ ಕಾರುಗಳ ಮಧ್ಯೆ ಒಂದೇ ಒಂದು ಕಾರು ಭಿನ್ನವಾಗಿದೆ, ಅದು ಯಾವುದು? ನಿಮಗಿರೋದು 5 ಸೆಕೆಂಡ್‌ ಸಮಯ, ಥಟ್ಟಂತ ಹೇಳಿ
ಕನ್ನಡ ಸುದ್ದಿ  /  ಜೀವನಶೈಲಿ  /  Brain Teaser: ರಾಶಿ ಕಾರುಗಳ ಮಧ್ಯೆ ಒಂದೇ ಒಂದು ಕಾರು ಭಿನ್ನವಾಗಿದೆ, ಅದು ಯಾವುದು? ನಿಮಗಿರೋದು 5 ಸೆಕೆಂಡ್‌ ಸಮಯ, ಥಟ್ಟಂತ ಹೇಳಿ

Brain Teaser: ರಾಶಿ ಕಾರುಗಳ ಮಧ್ಯೆ ಒಂದೇ ಒಂದು ಕಾರು ಭಿನ್ನವಾಗಿದೆ, ಅದು ಯಾವುದು? ನಿಮಗಿರೋದು 5 ಸೆಕೆಂಡ್‌ ಸಮಯ, ಥಟ್ಟಂತ ಹೇಳಿ

ನಿಮ್ಮ ಕಣ್ಣಿನ ದೃಷ್ಟಿಗೆ ಎಷ್ಟು ಸೂಕ್ಷ್ಮವಾಗಿದೆ ಎಂಬುದನ್ನು ಕಂಡುಹಿಡಿಯಲು ನಿಮಗಾಗಿ ಇಲ್ಲಿದೆ ಒಂದು ಬ್ರೈನ್ ಟೀಸರ್. ಒಂದೇ ರೀತಿ ಇರುವ ರಾಶಿ ಕಾರುಗಳ ಮಧ್ಯೆ ಒಂದೇ ಒಂದು ಕಾರು ಭಿನ್ನವಾಗಿದೆ. ಅದು ಯಾವುದು, 5 ಸೆಕೆಂಡ್‌ನಲ್ಲಿ ನೀವು ಕಂಡುಹಿಡಿಯಬೇಕು. ನಿಮಗಿದು ಚಾಲೆಂಜ್‌.

ಬ್ರೈನ್ ಟೀಸರ್
ಬ್ರೈನ್ ಟೀಸರ್

ಬ್ರೈನ್ ಟೀಸರ್‌ಗಳು ಇತ್ತೀಚೆಗೆ ಸಾಕಷ್ಟು ಜನರಿಗೆ ಇಷ್ಟವಾಗುತ್ತಿವೆ. ಇವುಗಳು ಕಣ್ಣು, ಮೆದುಳಿಗೆ ಸವಾಲು ಹಾಕುವಂತಿದ್ದರೂ ಒಂಥರಾ ಮೋಜು ನೀಡುವುದು ಸುಳ್ಳಲ್ಲ. ಆ ಕಾರಣಕ್ಕೆ ಇದು ಜನರನ್ನು ಸೆಳೆಯುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಬ್ರೈನ್ ಟೀಸರ್‌ಗಳನ್ನ ಪೋಸ್ಟ್ ಮಾಡುವ ಸಾಕಷ್ಟು ಪೇಜ್‌ಗಳಿವೆ. ಇದರಲ್ಲಿ ದಿನಕ್ಕೊಂದು ಟ್ರಿಕ್ಕಿ ಎನ್ನಿಸುವ ಬ್ರೈನ್ ಟೀಸರ್‌ಗಳನ್ನ ನೀವು ನೋಡಬಹುದು.

ಇಂದಿನ ಬ್ರೈನ್ ಟೀಸರ್ ನಿಮ್ಮ ಕಣ್ಣಿಗೆ ಸವಾಲು ಹಾಕುವಂತಿದೆ. ಇದರಲ್ಲಿ ಒಂದು ರಾಶಿ ಕಾರುಗಳಿದ್ದು, ಆ ಕಾರಿನಲ್ಲಿ ಒಂದೇ ಒಂದು ಮಾತ್ರ ಭಿನ್ನವಾಗಿದೆ. ಅದು ಎಲ್ಲಿದೆ ಎಂಬುದನ್ನು ಕಂಡುಹಿಡಿಯಬೇಕು. ಅದು ನಿಮಗಿರುವ ಸವಾಲು. ಆದರೆ ಇದನ್ನು ಕಂಡುಹಿಡಿಯಲು ನಿಮಗಿರುವುದು ಕೇವಲ 5 ಸೆಕೆಂಡ್ ಸಮಯ.

ಇಂತಹ ಬ್ರೈನ್ ಟೀಸರ್‌ಗಳು ನಮಗೆ ಉತ್ತರ ಹೇಳುವ ಸವಾಲು ಹಾಕುವ ಜೊತೆಗೆ ನಮ್ಮಲ್ಲಿ ಗಮನಶಕ್ತಿ, ಏಕಾಗ್ರತೆ ಹೆಚ್ಚುವಂತೆ ಮಾಡುತ್ತವೆ. ಇದಕ್ಕೆ ನಾವು ಒಂದಿಷ್ಟು ಸಮಯ ಮೀಸಲಿಡುವ ಕಾರಣ ನಮ್ಮ ಮನಸ್ಸು ಬೇರೆಡೆಗೆ ಸೆಳೆಯುವುದಿಲ್ಲ. ಇದರಿಂದ ಮನಸ್ಸಿನ ಬೇಸರವೂ ದೂರಾಗುತ್ತದೆ. ಒಂದಿಷ್ಟು ಮೋಜು ನೀಡುವ ಈ ಬ್ರೈನ್ ಟೀಸರ್‌ಗಳು ನಮ್ಮ ಮೆದುಳನ್ನ ಚುರುಕು ಮಾಡಿ ಸಮಸ್ಯೆಗಳನ್ನು ಹೇಗೆ ಪರಿಹರಿಸಬೇಕು ಎಂಬುದನ್ನು ಕಲಿಸುತ್ತದೆ.

ಸರಿ ಹಾಗಾದರೆ ಇನ್ನೇಕೆ ತಡ, ಶೇ 80 ರಷ್ಟು ಮಂದಿ ಭಿನ್ನವಾದ ಕಾರು ಎಲ್ಲಿದೆ ಎಂದು ಕಂಡುಹಿಡಿಯಲು ಸೋತಿರುವ ಈ ಬ್ರೈನ್ ಟೀಸರ್‌ಗೆ ನಿಮ್ಮ ಉತ್ತರವೇನು, 5 ಸೆಕೆಂಡ್‌ನಲ್ಲಿ ಹೇಳಲು ಸಾಧ್ಯವಾಗುವುದೇ ಪ್ರಯತ್ನ ಮಾಡಿ. ಇದಕ್ಕೆ ನಿಮ್ಮಿಂದ ಉತ್ತರ ಕಂಡುಹಿಡಿಯಲು ಸಾಧ್ಯವಾದ್ರೆ ನಿಮ್ಮ ಸ್ನೇಹಿತರು, ಆತ್ಮೀಯರಿಗೂ ಈ ಬ್ರೈನ್ ಟೀಸರ್ ಅನ್ನು ಕಳುಹಿಸಿ ಅವರಿಂದ ಉತ್ತರ ನಿರೀಕ್ಷಿಸಿ.

ಈ ಬ್ರೈನ್ ಟೀಸರ್‌ಗಳನ್ನೂ ಓದಿ 

Brain Teaser: ಲಿವಿಂಗ್ ರೂಮ್‌ನ ಈ ಚಿತ್ರದಲ್ಲಿ 5 ಪದಗಳು ಅಡಗಿವೆ; ಅವು ಯಾವುವು, 70 ಸೆಕೆಂಡ್‌ನಲ್ಲಿ ಉತ್ತರ ಹೇಳಿ, ನಿಮಗಿದು ಚಾಲೆಂಜ್‌

ಗಾಂಧಿ ಜಯಂತಿಗೆ ರಜೆ ಇರುವ ಕಾರಣ ಖಾಲಿ ಕೂತು ಬೋರ್ ಆಗ್ತಾ ಇದ್ಯಾ? ನಿಮ್ಮ ಮೆದುಳಿಗೆ ಕೆಲಸ ನೀಡಿ, ಮೋಜು ಸಿಗಬೇಕು ಅಂತಿದ್ರೆ ಬ್ರೈನ್ ಟೀಸರ್‌ಗೆ ಹುಡುಕುವ ಪ್ರಯತ್ನ ಮಾಡಿ. ಇಲ್ಲಿರುವ ಚಿತ್ರದಲ್ಲಿ 5 ಇಂಗ್ಲಿಷ್‌ ಪದಗಳಿವೆ. ಅವು ಯಾವುದು ಎಂಬುದನ್ನು ಕಂಡುಹಿಡಿಯುವುದು ನಿಮಗಿರುವ ಸವಾಲು.

Brain Teaser: ಚಿತ್ರದಲ್ಲಿ ಒಬ್ಬನೇ ಒಬ್ಬ ಭಿನ್ನವಾದ ಹುಡುಗ ಇದ್ದಾನೆ, ಅವನು ಎಲ್ಲಿದ್ದಾನೆ? 10 ಸೆಕೆಂಡ್‌ನಲ್ಲಿ ಕಂಡುಹಿಡಿಯಿರಿ

ನಿಮ್ಮ ಕಣ್ಣು ಸಖತ್ ಶಾರ್ಪ್ ಅಂತ ನಿಮಗೆ ಅನ್ನಿಸ್ತಾ ಇದ್ಯಾ, ಎಷ್ಟೇ ಸೂಕ್ಷ್ಮ ಇದ್ರೂ ಪಟ್ ಅಂತ ಕಂಡುಹಿಡಿತೀರಾ, ಹಾಗಾದ್ರೆ ಈ ಚಿತ್ರದಲ್ಲಿರುವ ಹುಡುಗರಲ್ಲಿ ಭಿನ್ನವಾಗಿರುವ ಹುಡುಗ ಎಲ್ಲಿದ್ದಾನೆ, 10 ಸೆಕೆಂಡ್ ಒಳಗೆ ಕಂಡುಹಿಡಿಯಿರಿ. ಇದು ನಿಮ್ಮ ಕಣ್ಣಿಗೆ ಚಾಲೆಂಜ್‌.

Whats_app_banner