Brain Teaser: A+A+A=39 ಆದ್ರೆ, A+B+C= ಎಷ್ಟು? ಗಣಿತದಲ್ಲಿ ನೀವು ಎಕ್ಸ್‌ಪರ್ಟ್ ಆದ್ರೆ 10 ಸೆಕೆಂಡ್‌ನಲ್ಲಿ ಉತ್ತರ ಹೇಳಿ
ಗಣಿತದ ಪಜಲ್ ಬಿಡಿಸೋದು ನೋಡಿದಷ್ಟು ಸುಲಭವಲ್ಲ. ಅದಕ್ಕೆ ಮೆದುಳು ಚುರುಕಾಗಿ ಕೆಲಸ ಮಾಡಬೇಕು. ಬುದ್ಧಿ ಥಟ್ಟಂತ ಗ್ರಹಿಸಬೇಕು. ನಿಮ್ಮ ಮೆದುಳು ಗಣಿತದ ಪಜಲ್ ಬಿಡಿಸುವುದರಲ್ಲಿ ಶಾರ್ಪ್ ಅಂತ ನಿಮಗೆ ಅನ್ನಿಸಿದ್ರೆ ಈ ಬ್ರೈನ್ ಟೀಸರ್‌ಗೆ 10 ಸೆಕೆಂಡ್‌ನಲ್ಲಿ ಉತ್ತರ ಹೇಳಿ.
ಬ್ರೈನ್ ಟೀಸರ್ ಪಜಲ್‌ಗಳು ನಿಮ್ಮಲ್ಲಿ ಯೋಚನಾಶಕ್ತಿಯನ್ನು ವೃದ್ಧಿಸುತ್ತವೆ. ನಿಮ್ಮ ಮನಸ್ಸಿಗೆ ಮೋಜು ನೀಡುವ ಜೊತೆಗೆ ಬುದ್ಧಿಗೂ ಸಾಕಷ್ಟು ಕೆಲಸ ಕೊಡುತ್ತವೆ. ಒಂದಿಷ್ಟು ಕಾಲ ಮನಸ್ಸನ್ನು ಹಿಡಿದಿಟ್ಟುಕೊಂಡು ಬೇರೆ ಯೋಚನೆ ಸುಳಿಯದಂತೆ ನೋಡಿಕೊಳ್ಳುತ್ತದೆ. ಆ ಕಾರಣಕ್ಕೆ ಪಜಲ್ ಪ್ರಿಯರು ಸಾಮಾಜಿಕ ಜಾಲತಾಣಗಳಲ್ಲಿ ಪಜಲ್‌ಗಳಿಗಾಗಿ ಹುಡುಕಾಟ ನಡೆಸುತ್ತಾರೆ. ನೀವು ಅಂತಹ ಗ್ರೂಪ್‌ನಲ್ಲಿದ್ದರೆ ನಿಮಗಾಗಿ ಇಲ್ಲಿದೆ ಒಂದು ಮೆದುಳಿಗೆ ಹುಳ ಬಿಡುವ ಬ್ರೈನ್ ಟೀಸರ್.
ಇದೊಂದು ಗಣಿತದ ಪಜಲ್ ಆಗಿದ್ದು, ಮೇಲ್ನೋಟಕ್ಕೆ ಇದೇನು ಮಹಾ ಎನ್ನಿಸಬಹುದು. ಆದರೆ ಉತ್ತರ ಹೇಳೋದು ಖಂಡಿತ ಸುಲಭವಲ್ಲ ಯಾಕೆಂದರೆ ಈ ಬ್ರೈನ್ ಟೀಸರ್‌ಗೆ 10 ಸೆಕೆಂಡ್‌ನಲ್ಲಿ ಉತ್ತರ ಹೇಳಬೇಕು.
A+A+A=39, B+B-A=25, 6+C+B=50 ಆದ್ರೆ A+B+C = ಎಷ್ಟು? ಎಂಬುದು ಈ ಬ್ರೈನ್ ಟೀಸರ್‌ನಲ್ಲಿರುವ ಪ್ರಶ್ನೆಯಾಗಿದೆ.
ಪಿನ್‌ಟ್ರೆಸ್ಟ್‌ನಲ್ಲಿ ವೈರಲ್ ಆದ ಬ್ರೈನ್ ಟೀಸರ್ ಇದಾಗಿದೆ. ಈ ಬ್ರೈನ್ ಟೀಸರ್‌ಗೆ ನಿಗದಿತ ಸಮಯ ಅಂದರೆ 10 ಸೆಕೆಂಡ್‌ನಲ್ಲಿ ಉತ್ತರ ಕಂಡುಹಿಡಿಯಲು ನಿಮ್ಮಿಂದ ಸಾಧ್ಯವಾಯ್ತೆ? ಹಾಗಾದ್ರೆ ನೀವು ಪಕ್ಕಾ ಗಣಿತದಲ್ಲಿ ಪಂಟರು ಎಂದರ್ಥ. ಇದನ್ನು ನಿಮ್ಮ ಸ್ನೇಹಿತರು ಸಂಬಂಧಿಕರಿಗೂ ಕಳುಹಿಸಿ ಅವರಿಗೂ ಉತ್ತರ ಕಂಡುಹಿಡಿಯುವಂತೆ ಹೇಳಿ.
ಸರಿ ನಿಮಗೆ ಈ ಬ್ರೈನ್ ಟೀಸರ್‌ಗೆ ಉತ್ತರ ಕಂಡುಹಿಡಿಯಲು ಸಾಧ್ಯವಾಗಿಲ್ವಾ, ಚಿಂತೆ ಮಾಡ್ಬೇಡಿ. ಇದಕ್ಕೆ ಉತ್ತರ ನಾವು ನಿಮಗೆ ಹೇಳುತ್ತೇವೆ.
A + A + A = 39 ಅಥವಾ A = 13 ಈಗ, B + B - A = 25 ಅಥವಾ 2 B = 25 + A 2B = 38 B = 19 ಮೂರನೇ ಸಮೀಕರಣವು ಸಿ ಮೌಲ್ಯವನ್ನು ಕಂಡುಹಿಡಿಯಬೇಕು.
6 + C + B = 50, 6 + 19 = 50 - C, C = 50 - 25, C = 25 ಆದ್ದರಿಂದ, A + B + C = 13 + 19 + 25 = 57. ನೋಡಿ ಉತ್ತರ ಕಂಡುಹಿಡಿಯಲು ನೀವು ಇಷ್ಟೊಂದು ತಲೆ ಉಪಯೋಗಿಸಬೇಕಿತ್ತು.
ಈ ಬ್ರೈನ್ ಟೀಸರ್‌ಗಳನ್ನೂ ಓದಿ
Brain Teaser: ಚಿತ್ರದಲ್ಲಿ ಒಟ್ಟು ಎಷ್ಟು ಪ್ರಾಣಿಗಳಿವೆ? ಈ ಚಿತ್ರ ನಿಮ್ಮ ಕಣ್ಣು, ಮೆದುಳಿಗೆ ಮೋಸ ಮಾಡೋದು ಪಕ್ಕಾ
ಇಲ್ಲೊಂದು ಕಣ್ಣು, ಮೆದುಳಿಗೆ ಮೋಸ ಮಾಡುವ ಚಿತ್ರವಿದೆ. ಚಿತ್ರದಲ್ಲಿ ಒಂದಿಷ್ಟು ಪ್ರಾಣಿಗಳಿವೆ. ನಿಮ್ಮ ಕಣ್ಣಿಗೆ ಇದರಲ್ಲಿ ಒಟ್ಟು ಎಷ್ಟು ಪ್ರಾಣಿಗಳು ಕಾಣಿಸುತ್ತವೆ. ಈ ಬ್ರೈನ್ ಟೀಸರ್‌ಗೆ ನಿಮ್ಮ ಉತ್ತರವೇನು ಹೇಳಿ.
Brain Teaser: 20+3=46 ಆದ್ರೆ 40+5= ಎಷ್ಟು? ಗಣಿತದಲ್ಲಿ ಎಕ್ಸ್‌ಪರ್ಟ್ ಅನ್ನೋರು 10 ಸೆಕೆಂಡ್‌ನಲ್ಲಿ ಉತ್ತರ ಹೇಳಿ
ಗಣಿತ ಸೂತ್ರಗಳನ್ನು ಬಿಡಿಸುವುದು, ಲಾಜಿಕಲ್ ಗಣಿತಕ್ಕೆ ಉತ್ತರ ಹುಡುಕುವುದು ಎಲ್ಲರಿಂದಲೂ ಸಾಧ್ಯವಿಲ್ಲ. ಮೆದುಳು ಶಾರ್ಪ್ ಇದ್ದು, ಗಣಿತದಲ್ಲಿ ಎಕ್ಸ್‌ಪರ್ಟ್ ಇದ್ದವರಿಗಷ್ಟೇ ಇದಕ್ಕೆ ಉತ್ತರ ಕಂಡುಕೊಳ್ಳಲು ಸಾಧ್ಯವಾಗುತ್ತದೆ. ನೀವು ಗಣಿತಪ್ರಿಯರಾದ್ರೆ ಈ ಬ್ರೈನ್ ಟೀಸರ್‌ಗೆ 10 ಸೆಕೆಂಡ್‌ನಲ್ಲಿ ಉತ್ತರ ಹೇಳಿ.