Brain Teaser: ಮೆದುಳಿಗೆ ಹುಳ ಬಿಡುವ ಈ ಬ್ರೈನ್ ಟೀಸರ್‌ಗೆ ಉತ್ತರ ಹೇಳಲು ನಿಮ್ಮಿಂದ ಸಾಧ್ಯವೇ? ನಿಮ್ಮ ಜಾಣ್ಮೆಗೊಂದು ಸವಾಲ್
Brain Teaser: ಎಕ್ಸ್ ಬಳಕೆದಾರರೊಬ್ಬರು ಮೆದುಳಿಗೆ ಹುಳ ಬಿಡುವ ಬ್ರೈನ್ ಟೀಸರ್‌ವೊಂದನ್ನು ಹಂಚಿಕೊಂಡಿದ್ದಾರೆ. ಸಂದರ್ಶನದ ಸಮಯದಲ್ಲಿ ಹಾರ್ವರ್ಡ್ ವಿಶ್ವವಿದ್ಯಾಲಯವು ಈ ಪ್ರಶ್ನೆಯನ್ನು ಕೇಳಿತ್ತು ಎಂದು ಅವರು ಹೇಳಿಕೊಂಡಿದ್ದಾರೆ. ನೀವು ನಿಜಕ್ಕೂ ಜಾಣರು ಅಂತಾದ್ರೆ ಈ ಪ್ರಶ್ನೆಗೆ ಉತ್ತರ ಹೇಳಲು ಪ್ರಯತ್ನಿಸಿ, ಇದನ್ನು ನಿಮ್ಮ ಸ್ನೇಹಿತರೊಂದಿಗೂ ಹಂಚಿಕೊಳ್ಳಿ.
Harvard University Brain Teaser: ಬ್ರೈನ್ ಟೀಸರ್‌ಗಳು ನಿಮಗೆ ಮಜಾ ಕೊಡುವುದು ಮಾತ್ರವಲ್ಲ ಯೋಚನಾಶಕ್ತಿಯನ್ನೂ ಹೆಚ್ಚಿಸುತ್ತವೆ. ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ಮೆದುಳಿಗೆ ಹುಳ ಬಿಡುವಂತಿರುವ ಬ್ರೈನ್ ಟೀಸರ್‌ಗಳು ವೈರಲ್ ಆಗುತ್ತವೆ. ಇವು ನೋಡಿದ ತಕ್ಷಣ ಗಮನ ಸೆಳೆಯುವಂತಿರುವುದು ಸುಳ್ಳಲ್ಲ. ಇಂದಿನ ಬ್ರೈನ್ ಟೀಸರ್‌ಗೆ ಉತ್ತರ ಹೇಳಲು ಖಂಡಿತ ನಿಮ್ಮಲ್ಲಿ ಸಾಕಷ್ಟು ಜಾಣತನ ಇರಬೇಕು.
ಇಂದಿನ ಬ್ರೈನ್ ಟೀಸರ್ ಪ್ರಶ್ನೆಯನ್ನು ಹಾರ್ವರ್ಡ್ ವಿಶ್ವವಿದ್ಯಾಲಯದ ಸಂದರ್ಶನದ ಸಮಯದಲ್ಲಿ ಕೇಳಲಾಗಿತ್ತಂತೆ. ಇದನ್ನು ಸಂದರ್ಶನ ಎದುರಿಸಿದ್ದ ವ್ಯಕ್ತಿಯೊಬ್ಬರು ತಮ್ಮ ಎಕ್ಸ್ ಪುಟದಲ್ಲಿ ಹಂಚಿಕೊಂಡಿದ್ದರು. ಆಗಿನಿಂದ ಈ ಬ್ರೈನ್ ಟೀಸರ್ ಸಾಕಷ್ಟು ವೈರಲ್ ಆಗಿದೆ. ಈ ಪ್ರಶ್ನೆಗೆ ಏನಪ್ಪಾ ಉತ್ತರ ಎಂದು ಜನರು ತಲೆ ಕೆಡಿಸಿಕೊಳ್ಳುತ್ತಿದ್ದಾರೆ. ಶೇ 95ರಷ್ಟು ಮಂದಿ ಈ ಪ್ರಶ್ನೆಗೆ ಉತ್ತರಿಸಲು ಸಾಧ್ಯವಾಗದೇ ಸಂದರ್ಶನದಿಂದ ಹೊರಗುಳಿದಿದ್ದಾರೆ ಎಂದು ಕೂಡ ಅವರು ಹೇಳಿಕೊಂಡಿದ್ದಾರೆ.
‘ನೀವು ಈ ಪ್ರಶ್ನೆಗೆ ಉತ್ತರ ಹೇಳಲು ಸಾಧ್ಯವೇ?, ಶೇ 95 ರಷ್ಟು ಮಂದಿ ಸರಿಯಾದ ಉತ್ತರ ಕಂಡುಹಿಡಿಯುವಲ್ಲಿ ಸೋತಿದ್ದಾರೆ‘ ಎಂದು ಎಕ್ಸ್ ಬಳಕೆದಾರರು ಬರೆದುಕೊಂಡಿದ್ದಾರೆ. ‘7 ಜನ ಪುರುಷರಿಗೆ 7 ಜನ ಮಡದಿಯರಿದ್ದಾರೆ. ಪ್ರತಿ ಪುರುಷ ಹಾಗೂ ಪ್ರತಿ ಮಹಿಳೆಗೂ 7 ಜನ ಮಕ್ಕಳಿದ್ದಾರೆ. ಹಾಗಾದರೆ ಒಟ್ಟು ಎಷ್ಟು ಜನರಿದ್ದಾರೆ ಎಂಬುದು ಪ್ರಶ್ನೆಯಾಗಿದೆ.
ಆಗಸ್ಟ್ 8 ರಂದು @inspirdanalyst ಎಂಬ ಟ್ವಿಟರ್ ಖಾತೆ ನಿರ್ವಹಿಸುತ್ತಿರುವ ವ್ಯಕ್ತಿ ಈ ಬ್ರೈನ್ ಟೀಸರ್ ಅನ್ನು ಪೋಸ್ಟ್ ಮಾಡಿದ್ದಾರೆ. ಈಗಾಗಲೇ 27 ಸಾವಿರಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ. ಹಲವರು ಲೈಕ್, ಕಾಮೆಂಟ್ ಮಾಡಿದ್ದಾರೆ.
ಕಾಮೆಂಟ್‌ಗಳು ಹೀಗಿವೆ
‘ಈ ಬ್ರೈನ್ ಟೀಸರ್ ಪ್ರಶ್ನೆ ನಿಜಕ್ಕೂ ಟ್ರಿಕ್ಕಿಯಾಗಿದೆ. 7 ಪುರುಷರು + 7 ಮಡದಿಯರು = 14. ಪ್ರತಿ ಪುರುಷ ಮತ್ತು ಪ್ರತಿ ಮಡದಿಗೆ ಮಕ್ಕಳ ಸಂಖ್ಯೆ = 7. ಏಳು ಹೆಂಡತಿಯರನ್ನು ಹೊಂದಿರುವ ಪ್ರತಿಯೊಬ್ಬ ಪುರುಷನಿಗೆ ಮಕ್ಕಳ ಸಂಖ್ಯೆ = 49 (7×7). ಒಟ್ಟಾರೆ ನಂ. ಮಕ್ಕಳ = 343 (49×7). ಒಟ್ಟು ಸಂ. 14+343 = 357 ಎಂದು ಎಕ್ಸ್ ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ. 7 ಪುರುಷರು ಮತ್ತು 7 ಹೆಂಡತಿಯರು ಎಂದರೆ 7 ಜೋಡಿಗಳು. ಆದ್ದರಿಂದ ಪ್ರತಿ ದಂಪತಿಗಳು 7 ಮಕ್ಕಳನ್ನು ಹೊಂದಿದ್ದರು ಆದ್ದರಿಂದ 7 * 7 = 49, ಮತ್ತು ಒಟ್ಟು ಜನರ ಸಂಖ್ಯೆ: 49 ಮಕ್ಕಳು + 7 ಪುರುಷರು + 7 ಮಹಿಳೆಯರು = 63 ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ.
ನೀವು ಪ್ರಶ್ನೆಯನ್ನು ಹೇಗೆ ಅರ್ಥೈಸುತ್ತೀರಿ ಎಂಬುದರ ಆಧಾರದ ಮೇಲೆ ಎರಡು ಉತ್ತರಗಳು ಸರಿಯಾಗಿವೆ. ಪ್ರತಿಯೊಬ್ಬ ಪುರುಷನಿಗೆ 1 ಹೆಂಡತಿ ಇದ್ದಂತೆ ನೀವು ಅದನ್ನು ಅರ್ಥೈಸಿದರೆ, ಸರಿಯಾದ ಉತ್ತರ 63 ಜನರು. ಆದಾಗ್ಯೂ, ನೀವು ಅದನ್ನು ಪ್ರತಿ ಪುರುಷನಿಗೆ 7 ಹೆಂಡತಿಯರು ಎಂದು ಅರ್ಥೈಸಿದರೆ, ಸರಿಯಾದ ಉತ್ತರ 399 ಮಂದಿ‘ ಎಂದು ಮೂರನೇ ವ್ಯಕ್ತಿ ಕಾಮೆಂಟ್ ಮಾಡಿದ್ದಾರೆ. ಹಾಗಾದರೆ ಇಲ್ಲಿರುವ ಬ್ರೈನ್ ಟೀಸರ್‌ಗೆ ಸರಿಯಾದ ಉತ್ತರ ಯಾವುದು, ನೀವು ಜಾಣರಾದ್ರೆ ಸರಿ ಉತ್ತರ ಕಾಮೆಂಟ್ ಮಾಡಿ.