Brain Teaser: ಕಳ್ಳ ಕದ್ದಿದ್ದು 100 ರೂ, ಅಂಗಡಿಯವರು ಕೊಟ್ಟಿದ್ದು 30 ರೂ; ಹಾಗಾದ್ರೆ ಅಂಗಡಿಯವರಿಗಾದ ನಷ್ಟವೆಷ್ಟು; ಉತ್ತರ ಹೇಳಿ
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಗಣಿತದ ಪಜಲ್‌ವೊಂದು ಗಣಿತ ಪ್ರೇಮಿಗಳ ತಲೆ ಕೆಡಿಸಿದೆ. ಮೇಲ್ನೋಟಕ್ಕೆ ಇದಕ್ಕೆ ಉತ್ತರ ಸರಳ ಎನ್ನಿಸಿದರೂ ಇದು ಮೆದುಳಿಗೆ ಹುಳ ಬಿಡುವಂತೆ ಮಾಡುವುದು ಖಂಡಿತ. ನೀವು ಗಣಿತದಲ್ಲಿ ಶಾರ್ಪ್ ಇದ್ರೆ ಉತ್ತರ ಕಂಡುಹಿಡಿಯೋಕೆ ಟ್ರೈ ಮಾಡಿ.
ಗಣಿತದ ಪಜಲ್‌ಗಳನ್ನು ಬಿಡಿಸುವುದರಿಂದ ಮನಸ್ಸಿಗೆ ಖುಷಿ ಸಿಗುವುದು ಮಾತ್ರವಲ್ಲ, ಇದರಿಂದ ಮೆದುಳು ಕೂಡ ಚುರುಕಾಗುತ್ತದೆ. ಇದಕ್ಕೆ ನಾವು ಉತ್ತರ ಕಂಡುಕೊಂಡು ಖುಷಿ ಪಡುವ ಜೊತೆ ಜೊತೆಗೆ ಸ್ನೇಹಿತರು ಹಾಗೂ ಸಂಬಂಧಿಕರ ಜೊತೆ ಹಂಚಿಕೊಂಡು ಅವರ ಜಾಣ್ಮೆಯನ್ನೂ ಪರೀಕ್ಷೆ ಮಾಡಬಹುದು. ಬ್ರೈನ್ ಟೀಸರ್, ಆಪ್ಟಿಕಲ್ ಇಲ್ಯೂಷನ್, ಪಜಲ್‌ಗಳನ್ನು ಹುಡುಕಲು ಸಾಮಾಜಿಕ ಜಾಲತಾಣಗಳು ಉತ್ತಮ ವೇದಿಕೆ. ಇಲ್ಲಿ ದಿನಕ್ಕೆ ಹತ್ತಾರು ಇಂತಹ ಪಜಲ್‌ಗಳು ನಿಮ್ಮ ಮೆದುಳಿಗೆ ಹುಳ ಬಿಡುವಂತೆ ಇರುತ್ತವೆ.
ಇಲ್ಲೊಂದು ಅಂತಹದ್ದೇ ಗಣಿತ ಪಜಲ್ ಇದೆ. ಪ್ರಶ್ನೆ ಓದಿದಾಗ ಸರಳ ಗಣಿತ ಅನ್ನಿಸಿದ್ರೂ ಇದಕ್ಕೆ ಉತ್ತರ ಹುಡುಕೋದು ಮಾತ್ರ ಕಷ್ಟವೇ. ನೀವು ಗಣಿತದಲ್ಲಿ ಶಾರ್ಪ್ ಇದ್ರೆ ಇದಕ್ಕೆ ಉತ್ತರ ಹುಡುಕಲು ಟ್ರೈ ಮಾಡಿ.
ಪ್ರಶ್ನೆ ಹೀಗಿದೆ
ವ್ಯಕ್ತಿಯೊಬ್ಬ ಅಂಗಡಿಯಿಂದ 100 ರೂಪಾಯಿ ಕಳವು ಮಾಡುತ್ತಾನೆ. ನಂತರ ಅದೇ ಅಂಗಡಿಯಲ್ಲಿ 70 ರೂಪಾಯಿಯ ವಸ್ತು ಖರೀದಿಸಿ ಕದ್ದ ನೂರು ರೂಪಾಯಿಯನ್ನು ಅಂಗಡಿಯವರಿಗೆ ನೀಡುತ್ತಾನೆ. ಅವರು ಅವನಿಗೆ 30 ರೂಪಾಯಿ ಮರಳಿ ನೀಡುತ್ತಾರೆ. ಇದರಿಂದ ಅಂಗಡಿಯವರಿಗೆ ಎಷ್ಟು ನಷ್ಟ ಆಯ್ತು? ಇದು ಇಲ್ಲಿರುವ ಪ್ರಶ್ನೆ. ಈ ಪ್ರಶ್ನೆ ಏನೋ ಸರಳ ಅನ್ನಿಸುತ್ತಿದೆ. ಆದರೆ ಉತ್ತರ ಕಂಡು ಹಿಡಿಯಲು ನೆಟ್ಟಿಗರು ತಲೆ ಕೆಡಿಸಿಕೊಳ್ಳುತ್ತಿದ್ದಾರೆ.
ಈ ಪ್ರಶ್ನೆಗೆ ನಿಮ್ಮ ಉತ್ತರವೇನು, ಇದಕ್ಕೆ ಉತ್ತರ ಕಂಡು ಹಿಡಿಯಲು ನಿಮ್ಮಿಂದ ಸಾಧ್ಯವಾಗುತ್ತದೆಯೇ ಪರಿಶೀಲಿಸಿ.
ಈ ಬ್ರೈನ್ ಟೀಸರ್ ಅನ್ನೂ ಓದಿ
Brain Teaser: ಎಷ್ಟು ಮೊಟ್ಟೆ ಉಳಿದಿವೆ ಅಂತ ಹೇಳ್ತೀರಾ? ಶೇ 99ರಷ್ಟು ಜನ ತಪ್ಪು ಉತ್ತರನೇ ಹೇಳೋದು
Viral News: ಒಬ್ಬ ವ್ಯಕ್ತಿ ಹೇಳ್ತಾನೆ, ನನ್ನ ಬಳಿ 6 ಮೊಟ್ಟೆಗಳಿವೆ. 2 ಮೊಟ್ಟೆಯನ್ನು ಒಡೆದೆ, 2 ಮೊಟ್ಟೆಯನ್ನು ಫ್ರೈ ಮಾಡಿದೆ, 2 ಮೊಟ್ಟೆಯನ್ನು ತಿಂದೆ. ಹಾಗಾದ್ರೆ ನನ್ನ ಬಳಿ ಎಷ್ಟು ಮೊಟ್ಟೆ ಉಳಿಯಿತು ಎಂದು ಕೇಳ್ತಾನೆ. ಈ ಪ್ರಶ್ನೆಗೆ ನೀವೇ ಉತ್ತರ ಕೊಡಬೇಕು.
Brain Teaser: ಗಡಿಯಾರದಲ್ಲಿ ಒಟ್ಟು ಎಷ್ಟು ಅಂಕಿಗಳಿವೆ..? ಖಂಡಿತ 12 ಅಲ್ಲ, ಸರಳ ಎನಿಸಿದರೂ ಈ ಪ್ರಶ್ನೆಯಲ್ಲಿದೆ ಲಾಜಿಕ್..!
Brain Teaser: ಎಲ್ಲರ ಮನೆಯಲ್ಲಿಯೂ ಗಡಿಯಾರ ಇರುವುದು ಸರ್ವೇ ಸಾಮಾನ್ಯ. ಆದರೆ ಎಂದಾದರೂ ಇಂತಹದ್ದೊಂದು ಪ್ರಶ್ನೆ ನಿಮ್ಮ ಮನದಲ್ಲಿ ಮೂಡಿದೆಯೇ..? ಗಡಿಯಾರದಲ್ಲಿ ಒಟ್ಟು ಎಷ್ಟು ಅಂಕಿಗಳಿವೆ ಎಂಬುದಕ್ಕೆ ಉತ್ತರ ನಿಮಗೆ ಗೊತ್ತೇ..? ಈ ಪ್ರಶ್ನೆಯನ್ನು ಸರಿಯಾಗಿ ಅರ್ಥ ಮಾಡಿಕೊಂಡು ನಂತರ ಉತ್ತರ ಕೊಡಿ, ಆತುರ ಬೇಡ.
(This copy first appeared in Hindustan Times Kannada website. To read more like this please logon to kannada.hindustantimes.com)