Brain Teaser: ಚಿತ್ರದಲ್ಲಿ ಒಟ್ಟು ಎಷ್ಟು 9 ಇದೆ, 6 ಸೆಕೆಂಡ್‌ನಲ್ಲಿ ಉತ್ತರ ಹೇಳಿ; ನಿಮ್ಮ ಕಣ್ಣಿಗೊಂದು ಸವಾಲ್
ನಿಮ್ಮ ಕಣ್ಣು ಹಾಗೂ ಮೆದುಳು ಎರಡೂ ಸಖತ್ ಶಾರ್ಪ್ ಅಂತ ನಿಮಗೆ ಅನ್ನಿಸುತ್ತಾ, ಹಾಗಾದ್ರೆ ನಿಮಗಾಗಿ ಇಲ್ಲೊಂದು ಬ್ರೈನ್ ಟೀಸರ್ ಇದೆ. ಈ ಚಿತ್ರದಲ್ಲಿ ಒಂಭತ್ತರಲ್ಲಿ ಒಂದಿಷ್ಟು ಒಂಭತ್ತಿದೆ. 6 ಸೆಕೆಂಡ್‌ನಲ್ಲಿ ಒಟ್ಟು ಎಷ್ಟು 9 ಇದೆ ಎಂಬುದನ್ನು ಕಂಡುಹಿಡಿಯಬೇಕು.
ಟ್ವಿಟರ್‌ನಲ್ಲಿ ವೈರಲ್ ಆದ ಬ್ರೈನ್ ಟೀಸರ್‌ವೊಂದು ನಿಮ್ಮ ಕಣ್ಣು ಹಾಗೂ ಮೆದುಳಿಗೆ ಚಾಲೆಂಜ್ ಮಾಡೋದು ಖಂಡಿತ. ಇಂದಿನ ಬ್ರೈನ್ ಟೀಸರ್ ಚಿತ್ರದಲ್ಲಿ ನಿಮಗೆ ಒಂದು 9ರ ಆಕೃತಿ ಕಾಣುತ್ತದೆ. ಇದರಲ್ಲಿ ಒಂದಿಷ್ಟು 9 ಗಳನ್ನು ಸೇರಿಸಲಾಗಿದೆ. ಇದರಲ್ಲಿ ಒಟ್ಟು ಎಷ್ಟು 9 ಇದೆ ಎಂದು 6 ಸೆಕೆಂಡ್ ಒಳಗೆ ಕಂಡುಹಿಡಿಯಬೇಕು.
ಇದೇನಪ್ಪ ಇಷ್ಟು ಸುಲಭ ಇರೋ ಟಾಸ್ಕ್ ನೀಡಿದ್ದಾರೆ ಅಂತ ಅಂದ್ಕೋಬೇಡಿ. ಇದು ಖಂಡಿತ ನಿಮ್ಮ ತಲೆಗೆ ಹುಳ ಬಿಡುವುದು ಫಿಕ್ಸ್. ಯಾಕೆಂದರೆ ನಿಮಗೆ ನೋಡಿದ್ದಲ್ಲೆಲ್ಲಾ ಒಂಭತ್ತು ಕಾಣಿಸಬಹುದು. ನಾವು ನೀಡಿರುವ ಸಮಯದ ಪರಿಧಿಯೊಳಗೆ ಒಂಭತ್ತನ್ನು ಕಂಡುಹಿಡಿಯುವುದು ನಿಜಕ್ಕೂ ಸವಾಲು.
ಆಗಸ್ಟ್ 22 ರಂದು Dr. Alberto Blázquez ಎಂಬುವವರು ಈ ಬ್ರೈನ್ ಟೀಸರ್ ಅನ್ನು ಟ್ವಿಟರ್‌ನಲ್ಲಿ ಪೋಸ್ಟ್ ಮಡಿದ್ದಾರೆ. ಈಗಾಗಲೇ 4,700ಕ್ಕೂ ಹೆಚ್ಚು ಮಂದಿ ಇದನ್ನು ವೀಕ್ಷಿಸಿದ್ದಾರೆ. 50ಕ್ಕೂ ಹೆಚ್ಚು ಮಂದಿ ತಾವು ಕಂಡುಕೊಂಡ ಉತ್ತರವನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿದ್ದಾರೆ. ಹಾಗಾದರೆ ಈ ಬ್ರೈನ್ ಟೀಸರ್‌ನಲ್ಲಿ ಎಷ್ಟು ಒಂಭತ್ತುಗಳಿಗೆ ಎಂಬುದಕ್ಕೆ ನಿಮ್ಮ ಉತ್ತರವೇನು. ಕಾಮೆಂಟ್‌ನಲ್ಲಿ ಒಬ್ಬೊಬ್ಬರು ಒಂದೊಂದು ಉತ್ತರ ನೀಡಿದ್ದಾರೆ. ಕೆಲವರು 8 ಅಂದರೆ ಇನ್ನೂ ಹಲವರು 9 ಹಾಗೂ 10 ಎಂದು ಉತ್ತರ ಹೇಳಿದ್ದಾರೆ. ಹಾಗಾದರೆ ಯಾವುದು ಸರಿ ಉತ್ತರ.
ಈ ಬ್ರೈನ್ ಟೀಸರ್ ನಿಮ್ಮ ಕಣ್ಣನ್ನು ಪರೀಕ್ಷೆ ಮಾಡುವುದು ಮಾತ್ರವಲ್ಲ, ಮೆದುಳನ್ನೂ ಪರೀಕ್ಷೆ ಮಾಡುತ್ತದೆ. ಇದು ನಿಮ್ಮಲ್ಲಿ ಗಮನಶಕ್ತಿಯನ್ನು ಹೆಚ್ಚಿಸುತ್ತದೆ. ಏಕಾಗ್ರತೆ ಹೆಚ್ಚಲು ಕೂಡ ಸಹಕಾರಿ, ಜೊತೆಗೆ ಇದು ನಿಮಗೆ ಮೋಜು ನೀಡುತ್ತದೆ. ಇನ್ಯಾಕೆ ತಡ, ಶುರು ಮಾಡಿ 9 ಹುಡುಕಲು.
ಈ ಬ್ರೈನ್ ಟೀಸರ್‌ಗಳನ್ನೂ ಓದಿ
Brain Teaser: ಗುಂಡನ ಬಳಿ ಎಷ್ಟು ಮೊಟ್ಟೆ ಉಳಿಯಿತು, 8 ಸೆಕೆಂಡ್ ಒಳಗೆ ಉತ್ತರ ಹೇಳಿ, ಈ ಲೆಕ್ಕ ಮೆದುಳಿಗೆ ಹುಳ ಬಿಡೋದು ಪಕ್ಕಾ
ಗುಂಡನ ಬಳಿ 6 ಮೊಟ್ಟೆಗಳಿವೆ. ಅದರಲ್ಲಿ ಎರಡು ಒಡೆದು ಹೋಯ್ತು, ಎರಡನ್ನು ಗುಂಡ ಫ್ರೈ ಮಾಡುತ್ತಾನೆ ಹಾಗೂ 2 ಮೊಟ್ಟೆಯನ್ನು ತಿನ್ನುತ್ತಾನೆ. ಹಾಗಾದರೆ ಗುಂಡನ ಬಳಿ ಒಟ್ಟು ಎಷ್ಟು ಮೊಟ್ಟೆಗಳು ಉಳಿದಿವೆ. 8 ಸೆಕೆಂಡ್ ಒಳಗೆ ಉತ್ತರ ಹೇಳೋಕೆ ಟ್ರೈ ಮಾಡಿ.
Brain Teaser: ಗಣಿತದಲ್ಲಿ ಪಂಟರು ಅನ್ನೋರು ಇಲ್ನೋಡಿ, ಇಲ್ಲಿರುವ ಪಜಲ್‌ಗೆ 10 ಸೆಕೆಂಡ್‌ನಲ್ಲಿ ಉತ್ತರ ಹೇಳೋಕಾಗುತ್ತಾ ಟ್ರೈ ಮಾಡಿ
ಗಣಿತ ಎಕ್ಸ್‌ಪರ್ಟ್ಸ್‌ಗಳಿಗೆ ಗಣಿತದ ಪಜಲ್‌ಗಳನ್ನು ಬಿಡಿಸುವುದು ಎಂದರೆ ಹಾಲು ಕುಡಿದಷ್ಟು ಸುಲಭ. ನೀವು ಗಣಿತಪ್ರೇಮಿಯಾಗಿದ್ರೆ ನಿಮಗಾಗಿ ಇಲ್ಲೊಂದು ಪಜಲ್ ಇದೆ. ಇದಕ್ಕೆ 10 ಸೆಕೆಂಡ್ ಒಳಗೆ ಉತ್ತರ ಕಂಡುಹಿಡಿಯಬೇಕು. ಇದು ನಿಮ್ಮಿಂದ ಸಾಧ್ಯವೇ ಪ್ರಯತ್ನಿಸಿ ನೋಡಿ.