ಕನ್ನಡ ಸುದ್ದಿ  /  ಜೀವನಶೈಲಿ  /  Brain Teaser: ಚಿತ್ರದಲ್ಲಿ ಒಟ್ಟು ಎಷ್ಟು ಪ್ರಾಣಿಗಳಿವೆ? ಈ ಚಿತ್ರ ನಿಮ್ಮ ಕಣ್ಣು, ಮೆದುಳಿಗೆ ಮೋಸ ಮಾಡೋದು ಪಕ್ಕಾ

Brain Teaser: ಚಿತ್ರದಲ್ಲಿ ಒಟ್ಟು ಎಷ್ಟು ಪ್ರಾಣಿಗಳಿವೆ? ಈ ಚಿತ್ರ ನಿಮ್ಮ ಕಣ್ಣು, ಮೆದುಳಿಗೆ ಮೋಸ ಮಾಡೋದು ಪಕ್ಕಾ

ಇಲ್ಲೊಂದು ಕಣ್ಣು, ಮೆದುಳಿಗೆ ಮೋಸ ಮಾಡುವ ಚಿತ್ರವಿದೆ. ಚಿತ್ರದಲ್ಲಿ ಒಂದಿಷ್ಟು ಪ್ರಾಣಿಗಳಿವೆ. ನಿಮ್ಮ ಕಣ್ಣಿಗೆ ಇದರಲ್ಲಿ ಒಟ್ಟು ಎಷ್ಟು ಪ್ರಾಣಿಗಳು ಕಾಣಿಸುತ್ತವೆ. ಈ ಬ್ರೈನ್‌ ಟೀಸರ್‌ಗೆ ನಿಮ್ಮ ಉತ್ತರವೇನು ಹೇಳಿ.

 ಚಿತ್ರದಲ್ಲಿ ಒಟ್ಟು ಎಷ್ಟು ಪ್ರಾಣಿಗಳಿವೆ? ಈ ಚಿತ್ರ ನಿಮ್ಮ ಕಣ್ಣು, ಮೆದುಳಿಗೆ ಮೋಸ ಮಾಡೋದು ಪಕ್ಕಾ
ಚಿತ್ರದಲ್ಲಿ ಒಟ್ಟು ಎಷ್ಟು ಪ್ರಾಣಿಗಳಿವೆ? ಈ ಚಿತ್ರ ನಿಮ್ಮ ಕಣ್ಣು, ಮೆದುಳಿಗೆ ಮೋಸ ಮಾಡೋದು ಪಕ್ಕಾ

ಬ್ರೈನ್‌ ಟೀಸರ್‌ಗಳು ನಿಮ್ಮ ಮೆದುಳಿಗೆ ಒಂದು ಸಣ್ಣ ಸಾಹಸ ಪಯಣ ನೀಡುವುದು ಸುಳ್ಳಲ್ಲ. ಇವು ಮೆದುಳಿಗೆ ಹುಳ ಬಿಟ್ಟು ತಲೆ ಕೆರೆದುಕೊಳ್ಳುವಂತೆ ಮಾಡುತ್ತವೆ. ಆದರೆ ಇವು ಮನಸ್ಸಿಗೆ ಮೋಜು ನೀಡುತ್ತವೆ. ನಮ್ಮ ಬೇಸರ ಕಳೆಯಲು ಬ್ರೈನ್‌ ಟೀಸರ್‌ಗಿಂತ ಉತ್ತಮ ಆಯ್ಕೆ ಇನ್ನೊಂದಿಲ್ಲ. ಇಲ್ಲಿರುವ ಒಂದು ಕ್ಲಾಸಿಕ್‌ ಬ್ರೈನ್‌ ಟೀಸರ್‌ನಲ್ಲಿ ಒಟ್ಟು ಎಷ್ಟು ಪ್ರಾಣಿಗಳಿಗೆ ಎಂಬುದನ್ನು ಕಂಡುಹಿಡಿಯುವುದು ನಿಮಗಿರುವ ಸವಾಲು. ಮೇಲ್ನೋಟಕ್ಕೆ ಮೂರ್ನ್ಕಾಲು ಪ್ರಾಣಿಗಳು ಕಾಣಿಸಿದರೂ ಚಿತ್ರದಲ್ಲಿ ಅದಕ್ಕಿಂತಲೂ ಹೆಚ್ಚು ವಿವಿಧ ಪ್ರಾಣಿಗಳಿವೆ.

ʼಇದೊಂದು ಕ್ಲಾಸಿಕ್‌ ಬ್ರೈನ್‌ ಟೀಸರ್.‌ ಇದರಲ್ಲಿ ನಿಮಗೆ ಎಷ್ಟು ಪ್ರಾಣಿಗಳು ಕಾಣಿಸುತ್ತಿವೆʼ ಎಂದು ಶೀರ್ಷಿಕೆ ಬರೆದುಕೊಂಡು ಈ ಬ್ರೈನ್‌ ಟೀಸರ್‌ ಅನ್ನು ಹಂಚಿಕೊಳ್ಳಲಾಗಿದೆ. ಚಿತ್ರದಲ್ಲಿ ಬಿಳಿ ಹಾಗೂ ನೀಲಿ ಬಣ್ಣವನ್ನು ಬಳಸಲಾಗಿದೆ. ಆರಂಭದಲ್ಲಿ ಕಂಡಾಗ ನಿಮಗೆ ಗೆರೆಗಳು ಕಾಣಿಸಬಹುದು. ಆದರೆ ಗಮನಿಸಿ ನೋಡಿದಾಗ ಒಂದಿಷ್ಟು ಪ್ರಾಣಿಗಳು ಕಾಣಿಸುತ್ತವೆ.

ಜೂನ್‌ 26 ರಂದು ಈ ವೈರಲ್‌ ಪೋಸ್ಟ್‌ ಹಂಚಿಕೊಂಡಾಗಿನಿಂದ ಇಲ್ಲಿಯವರೆಗೆ 2.6 ಲಕ್ಷ ವೀಕ್ಷಿಸಿದ್ದಾರೆ. ಈ ಬ್ರೈನ್‌ ಟೀಸರ್‌ ವೀಕ್ಷಕರ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದೆ. ಈ ಬ್ರೈನ್‌ ಟೀಸರ್‌ನಲ್ಲಿ ಕೆಲವರಿಗೆ 4 ಪ್ರಾಣಿ ಕಾಣಿಸಿದ್ರೆ ಇನ್ನೂ ಕೆಲವರಿಗೆ 11 ಪ್ರಾಣಿ ಕಾಣಿಸಿವೆ. ಕೆಲವರಿಗೆ 7 ಪ್ರಾಣಿಗಳು ಕಾಣಿಸಿವೆ. ಹಾಗಾದರೆ ನಿಮ್ಮ ಕಣ್ಣಿಗೆ ಈ ಬ್ರೈನ್‌ ಟೀಸರ್‌ನಲ್ಲಿ ಎಷ್ಟು ಪ್ರಾಣಿಗಳು ಕಾಣುತ್ತಿವೆ ಹೇಳಿ.

ಟ್ರೆಂಡಿಂಗ್​ ಸುದ್ದಿ

ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್‌ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ʼಬ್ರೈನ್‌ ಟೀಸರ್‌ಗಳು ಕೇಂದ್ರ ನರಮಂಡಲದ ಮೇಲೆ ಧನಾತ್ಮಕ ಪ್ರಭಾವ ಬೀರುತ್ತವೆ ಮತ್ತು ಒತ್ತಡದ ಹಾದಿಯನ್ನು ಸಕ್ರಿಯಗೊಳಿಸುತ್ತವೆʼ ಎಂದು ಹೇಳಿದೆ. ಇದು ಅರಿವಿನ ಅಂಶಗಳನ್ನೂ ಸುಧಾರಿಸಬಹುದು.

ಈ ಬ್ರೈನ್‌ ಟೀಸರ್‌ಗಳನ್ನೂ ಓದಿ

Brain Teaser: ನಿಮ್ಮ ಕಣ್ಣು ನಿಜಕ್ಕೂ ಶಾರ್ಪ್‌ ಅನ್ನಿಸಿದ್ರೆ 5 ಸೆಕೆಂಡ್‌ನೊಳಗೆ ಚಿತ್ರದಲ್ಲಿ C ಅಕ್ಷರ ಎಲ್ಲಿದೆ ಕಂಡು ಹಿಡಿಯಿರಿ

ಇನ್‌ಸ್ಟಾಗ್ರಾಂನಲ್ಲಿ ಶೇರ್‌ ಮಾಡಲಾದ ಬ್ರೈನ್‌ ಟೀಸರ್‌ ಚಿತ್ರವೊಂದು ನಿಮ್ಮ ಕಣ್ಣಿನ ಸೂಕ್ಷ್ಮತೆಯನ್ನು ಪರೀಕ್ಷಿಸುತ್ತದೆ. ಚಿತ್ರದಲ್ಲಿ ಇಂಗ್ಲಿಷ್‌ನ C ಅಕ್ಷರ ಎಲ್ಲಿದೆ ಎಂಬುದನ್ನು 5 ಸೆಕೆಂಡ್‌ನಲ್ಲಿ ಕಂಡುಹಿಡಿಯಬೇಕು. ಇದು ನಿಮ್ಮ ಗಮನಶಕ್ತಿ ಹಾಗೂ ಕಣ್ಣನ್ನು ಪರೀಕ್ಷೆ ಮಾಡುವ ಚಿತ್ರವಾಗಿದೆ.

Brain Teaser: 20+3=46 ಆದ್ರೆ 40+5= ಎಷ್ಟು? ಗಣಿತದಲ್ಲಿ ಎಕ್ಸ್‌ಪರ್ಟ್‌ ಅನ್ನೋರು 10 ಸೆಕೆಂಡ್‌ನಲ್ಲಿ ಉತ್ತರ ಹೇಳಿ

ಗಣಿತ ಸೂತ್ರಗಳನ್ನು ಬಿಡಿಸುವುದು, ಲಾಜಿಕಲ್‌ ಗಣಿತಕ್ಕೆ ಉತ್ತರ ಹುಡುಕುವುದು ಎಲ್ಲರಿಂದಲೂ ಸಾಧ್ಯವಿಲ್ಲ. ಮೆದುಳು ಶಾರ್ಪ್‌ ಇದ್ದು, ಗಣಿತದಲ್ಲಿ ಎಕ್ಸ್‌ಪರ್ಟ್‌ ಇದ್ದವರಿಗಷ್ಟೇ ಇದಕ್ಕೆ ಉತ್ತರ ಕಂಡುಕೊಳ್ಳಲು ಸಾಧ್ಯವಾಗುತ್ತದೆ. ನೀವು ಗಣಿತಪ್ರಿಯರಾದ್ರೆ ಈ ಬ್ರೈನ್‌ ಟೀಸರ್‌ಗೆ 10 ಸೆಕೆಂಡ್‌ನಲ್ಲಿ ಉತ್ತರ ಹೇಳಿ.