ಕನ್ನಡ ಸುದ್ದಿ  /  ಜೀವನಶೈಲಿ  /  Brain Teaser: ಮೂರು ಅಥವಾ ನಾಲ್ಕು? ಚಿತ್ರದಲ್ಲಿ ಎಷ್ಟು ಬ್ಲಾಕ್‌ಗಳಿವೆ, ಈ ಚಿತ್ರ ನಿಮ್ಮ ಮೆದುಳಿಗೆ ಹುಳ ಬಿಡೋದು ಪಕ್ಕಾ

Brain Teaser: ಮೂರು ಅಥವಾ ನಾಲ್ಕು? ಚಿತ್ರದಲ್ಲಿ ಎಷ್ಟು ಬ್ಲಾಕ್‌ಗಳಿವೆ, ಈ ಚಿತ್ರ ನಿಮ್ಮ ಮೆದುಳಿಗೆ ಹುಳ ಬಿಡೋದು ಪಕ್ಕಾ

ಆಪ್ಟಿಕಲ್‌ ಇಲ್ಯೂಷನ್‌ ಚಿತ್ರಗಳನ್ನು ನೋಡಿದಾಗ ಇದೇನಪ್ಪಾ ಹೀಗಿದೆ ಎಂದು ಅನ್ನಿಸದೇ ಇರುವುದಿಲ್ಲ. ಯಾಕಂದ್ರೆ ಅದು ನಮ್ಮ ಕಣ್ಣಿಗೆ ವಿಚಿತ್ರವಾಗಿ ಕಾಣಿಸುತ್ತದೆ. ಚಿತ್ರದಲ್ಲಿ ಇರುವುದೇ ಒಂದು ನಮ್ಮ ಕಣ್ಣಿಗೆ ಕಾಣಿಸುವುದೇ ಒಂದು. ಇಂದಿನ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರದಲ್ಲಿ ಎಷ್ಟು ಬ್ಲಾಕ್‌ಗಳಿವೆ ಎಂಬುದನ್ನು ನೀವು ಕಂಡುಹಿಡಿಯಬೇಕು.

ಮೂರು ಅಥವಾ ನಾಲ್ಕು? ಚಿತ್ರದಲ್ಲಿ ಎಷ್ಟು ಬ್ಲಾಕ್‌ಗಳಿವೆ, ಈ ಚಿತ್ರ ನಿಮ್ಮ ಮೆದುಳಿಗೆ ಹುಳ ಬಿಡೋದು ಪಕ್ಕಾ
ಮೂರು ಅಥವಾ ನಾಲ್ಕು? ಚಿತ್ರದಲ್ಲಿ ಎಷ್ಟು ಬ್ಲಾಕ್‌ಗಳಿವೆ, ಈ ಚಿತ್ರ ನಿಮ್ಮ ಮೆದುಳಿಗೆ ಹುಳ ಬಿಡೋದು ಪಕ್ಕಾ

ಮಳೆಗಾಲವಾದ ಕಾರಣ ಮೆದುಳಿಗೆ ಜಿಡ್ಡು ಹಿಡಿದಂತಾಗಿದ್ಯಾ, ಮೆದುಳಿಗೆ ಏನಾದ್ರೂ ಕೆಲಸ ಕೊಡಬೇಕು ಅಂತ ಯೋಚಿಸ್ತಾ ಇದೀರಾ, ಹಾಗಿದ್ರೆ ಈ ಆಪ್ಟಿಕಲ್‌ ಇಲ್ಯೂಷನ್‌ಗೆ ಉತ್ತರ ಹುಡುಕಲು ಟ್ರೈ ಮಾಡಿ. ಇದೊಂಥರ ನಿಮ್ಮ ಮೆದುಳಿಗೆ ಕಸರತ್ತು ನೀಡುವ ಚಿತ್ರವಾಗಿದೆ. ಆಪ್ಟಿಕಲ್‌ ಇಲ್ಯೂಷನ್‌ ಚಿತ್ರಗಳಿಗೆ ಉತ್ತರ ಕಂಡುಹಿಡಿಯಲು ಕಣ್ಣಿನೊಂದಿಗೆ ಮೆದುಳು ಕೂಡ ಶಾರ್ಪ್‌ ಇರಬೇಕಾಗುತ್ತದೆ. ಆಪ್ಟಿಕಲ್ ಭ್ರಮೆಗಳು ಗೊಂದಲಮಯ ಚಿತ್ರಗಳಾಗಿವೆ, ಅದು ವ್ಯಕ್ತಿಯು ವಿಷಯಗಳನ್ನು ಹೇಗೆ ನೋಡುತ್ತಾನೆ ಎಂಬುದರ ಕುರಿತು ತಂತ್ರಗಳನ್ನು ಆಡುತ್ತದೆ.

ಎರಡು ಚಿತ್ರಗಳು ಒಂದೇ ಚಿತ್ರದಲ್ಲಿ ಒಟ್ಟಿಗೆ ಬೆರೆತಾಗ ಅಕ್ಷರಶಃ ಭ್ರಮೆ ಸಂಭವಿಸುತ್ತದೆ. ಮೆದುಳು ಅದನ್ನು ಒಂದು ಏಕೀಕೃತ ಚಿತ್ರವಾಗಿ ಗ್ರಹಿಸಲು ಪ್ರಯತ್ನಿಸುತ್ತದೆ, ಆದರೆ ಕಣ್ಣುಗಳು ಮೆದುಳಿಗೆ ಎರಡು ಪ್ರತ್ಯೇಕ ಚಿತ್ರಗಳಾಗಿ ವಿಶ್ಲೇಷಿಸಲು ಸಂಕೇತವನ್ನು ನೀಡುವುದನ್ನು ಮುಂದುವರಿಸುತ್ತದೆ.

ಟ್ರೆಂಡಿಂಗ್​ ಸುದ್ದಿ

ಅರಿವಿನ ಭ್ರಮೆಗಳು ಭ್ರಮೆಯ ಅತ್ಯಂತ ಸಂಕೀರ್ಣವಾದ ವಿಧವಾಗಿದೆ. ಅವು ಮೆದುಳಿನ ಉಪಪ್ರಜ್ಞೆ ಭಾಗ ಮತ್ತು ಚಿತ್ರದೊಂದಿಗೆ ಸಂಪರ್ಕಿಸುವ ಸಾಮರ್ಥ್ಯವನ್ನು ಒಳಗೊಂಡಿರುತ್ತವೆ. ನಿಮ್ಮ ಆಲೋಚನೆಗಳಿಗೆ ಆಳವನ್ನು ಒದಗಿಸುವಲ್ಲಿ ಮತ್ತು ನಿಮ್ಮ ಕಣ್ಣುಗಳು ಏನನ್ನು ಗ್ರಹಿಸುತ್ತವೆ ಎಂಬುದನ್ನು ಅರ್ಥೈಸುವಲ್ಲಿ ಮೆದುಳು ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ.

ಚಿತ್ರದಲ್ಲಿ ಎಷ್ಟು ಬ್ಲಾಕ್‌ಗಳಿವೆ?

ಟ್ವಿಟರ್‌ನಲ್ಲಿ ವೈರಲ್‌ ಆದ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರವೊಂದು ಜನರನ್ನು ಗೊಂದಲಕ್ಕೆ ದೂಡಿರುವುದು ಸುಳ್ಳಲ್ಲ. ಎಷ್ಟು ಬ್ಲಾಕ್‌ ಇರಬಹುದು ಎಂದು ಯೋಚಿಸಿದ್ದಷ್ಟೂ ಗೊಂದಲ ಮೂಡಿಸುತ್ತಲೇ ಇರುವ ಈ ಚಿತ್ರಕ್ಕೆ ಉತ್ತರ ಕಂಡುಹಿಡಿಯಲು ನಿಮ್ಮಿಂದ ಸಾಧ್ಯವೇ ಪ್ರಯತ್ನಿಸಿ.

ಈ ಆಪ್ಟಿಕಲ್‌ ಇಲ್ಯೂಷನ್‌ಗೆ ಸರಿ ಉತ್ತರ ಒಬ್ಬೊಬ್ಬರು ಒಂದೊಂದು ರೀತಿ ನೀಡಿದ್ದಾರೆ. ಕೆಲವರು 3 ಎಂದರೆ ಇನ್ನೂ ಕೆಲವರು 4 ಎಂದಿದ್ದಾರೆ.

ಹಾಗಾದರೆ ನಿಮ್ಮ ಕಣ್ಣಿಗೆ ಎಷ್ಟು ಬ್ಲಾಕ್‌ ಕಾಣಿಸಿತು ನೋಡಿ, ನಿಮ್ಮ ಸ್ನೇಹಿತರು ಹಾಗೂ ಸಂಬಂಧಿಕರೊಂದಿಗೂ ಈ ಚಿತ್ರವನ್ನು ಹಂಚಿಕೊಳ್ಳಿ.

ಈ ಆಪ್ಟಿಕಲ್‌ ಇಲ್ಯೂಷನ್‌ ಲೇಖನವನ್ನೂ ಓದಿ 

Optical Illusion: ಈ ಚಿತ್ರವನ್ನು ನೋಡಿದಾಕ್ಷಣ ನಿಮಗೆ ಕಂಡಿದ್ದೇನು? ನಿಮ್ಮ ಪ್ರೇಮಜೀವನವನ್ನು ನಿರ್ಧರಿಸುತ್ತೆ ಈ ಚಿತ್ರ

ಈ ಚಿತ್ರವನ್ನು ನೋಡಿದ ಕೂಡಲೇ ನಿಮಗೆ ಮೊದಲು ಏನು ಕಾಣಿಸಿತು..? ಮೊದಲು ನಿಮ್ಮ ಕಣ್ಣ ಮುಂದೆ ಯಾವ ಚಿತ್ರ ಕಾಣಿಸಿತೋ ಆ ಚಿತ್ರವು ನಿಮ್ಮ ಪ್ರೇಮ ಜೀವನ ಹೇಗಿದೆ ಎಂಬುದನ್ನು ತಿಳಿಸುತ್ತದೆ. ಈಗ ಹೇಳಿ ನಿಮ್ಮ ಕಣ್ಣಿಗೆ ಕಂಡ ಆ ಮೊದಲ ಚಿತ್ರ ಯಾವುದು?