Brain Teaser: ಆ ತರಗತಿಯಲ್ಲಿ ಒಟ್ಟು ಎಷ್ಟು ಜನ ಮಕ್ಕಳಿದ್ದಾರೆ? ಕ್ಯಾಲ್ಕುಲೆಟರ್ ಬಳಸದೇ ಯೋಚಿಸಿ ಉತ್ತರಿಸಿ; ನಿಮಗೊಂದು ಸವಾಲು
ಇನ್‌ಸ್ಟಾಗ್ರಾಂ ಪುಟವೊಂದರಲ್ಲಿ ಹಂಚಿಕೊಳ್ಳಲಾಗಿರುವ ಬ್ರೈನ್ ಟೀಸರ್‌ವೊಂದು ಇದೀಗ ಪಜಲ್ ಪ್ರಿಯರಿಗೆ ತಲೆ ಕೆರೆದುಕೊಳ್ಳುವಂತೆ ಮಾಡಿದೆ. ಕ್ಯಾಲ್ಕುಲೆಟರ್ ಬಳಸದೇ ಇಲ್ಲಿರುವ ಸುಲಭ ಗಣಿತಕ್ಕೆ ಉತ್ತರ ಹೇಳಬೇಕು. ಇದು ನಿಮಗಿರುವ ಚಾಲೆಂಜ್. ಉತ್ತರ ಹುಡುಕೋಕೆ ನೀವೊಮ್ಮೆ ಟ್ರೈ ಮಾಡಿ.
ಬ್ರೈನ್ ಟೀಸರ್‌ಗಳಿಗೆ ಉತ್ತರ ಹುಡುಕುವುದು ಒಂಥರಾ ಮಜಾ ನೀಡುತ್ತದೆ. ಇವು ನಿಮಗೆ ಕ್ರಿಯಾತ್ಮಕ ವಿಧಾನದಲ್ಲಿ ಯೋಚನೆ ಮಾಡಲು ಸಹಾಯ ಮಾಡುವುದು ಮಾತ್ರವಲ್ಲ, ಔಟ್ ಆಫ್ ದಿ ಬಾಕ್ಸ್ ಯೋಚಿಸುವಂತೆಯೂ ಮಾಡುತ್ತವೆ. ಹೇಗಾದ್ರೂ ಮಾಡಿ ಇದಕ್ಕೆ ಉತ್ತರ ಕಂಡುಹಿಡಿಯಲೇ ಬೇಕು ಎಂದು ಮೆದುಳು ಚುರುಕಾಗುವಂತೆ ಮಾಡುವ ಗುಣ ಈ ಬ್ರೈನ್ ಟೀಸರ್‌ಗಳಿಗಿದೆ. ನೀವು ಪಜಲ್ ಬಿಡಿಸುವ ಹವ್ಯಾಸ ರೂಢಿಸಿಕೊಂಡಿದ್ದರೆ ನಾವು ನಿಮಗಾಗಿ ಪ್ರತಿದಿನ ಭಿನ್ನವಾಗಿರುವ ಬ್ರೈನ್ ಟೀಸರ್‌ಗಳನ್ನು ತರುತ್ತೇವೆ. ಇವತ್ತು ನಿಮಗಾಗಿ ಒಂದು ಹೊಸ ಬ್ರೈನ್ ಟೀಸರ್ ಅನ್ನು ತಂದಿದ್ದೇವೆ. ಇದಕ್ಕೆ ಉತ್ತರ ಹುಡುಕೋಕೆ ಟ್ರೈ ಮಾಡಿ.
ಬ್ರೈನ್ ಟೀಸರ್‌ನಲ್ಲಿ ಏನಿದೆ?
Heights - for your brain & gut ಎಂಬ ಇನ್‌ಸ್ಟಾಗ್ರಾಂ ಪುಟದಲ್ಲಿ ಈ ಬ್ರೈನ್ ಟೀಸರ್ ಅನ್ನು ಪೋಸ್ಟ್ ಮಾಡಲಾಗಿದೆ. ಚಿತ್ರದಲ್ಲಿರುವ ಪ್ರಶ್ನೆ ಹೀಗಿದೆ: ತರಗತಿಯಲ್ಲಿ 14 ಮಂದಿ ಹುಡುಗಿಯರಿದ್ದಾರೆ. ಎಂಟು ಮಕ್ಕಳು ನೀಲಿ ಶರ್ಟ್ ಧರಿಸಿದ್ದಾರೆ. ಇಬ್ಬರು ಹುಡುಗಿಯರಲ್ಲ, ಜೊತೆಗೆ ಅವರು ನೀಲಿ ಅಂಗಿ ಧರಿಸಿಲ್ಲ. 5 ಮಕ್ಕಳು ಹುಡುಗಿಯರು, ಅವರು ನೀಲಿ ಶರ್ಟ್ ಧರಿಸಿದ್ದಾರೆ. ಹಾಗಾದರೆ ಈ ತರಗತಿಯಲ್ಲಿ ಒಟ್ಟು ಎಷ್ಟು ಮಕ್ಕಳಿದ್ದಾರೆ?
ಕಳೆದ ಎರಡು ದಿನಗಳ ಹಿಂದೆ ಎಂದರೆ ಮಾರ್ಚ್ 30 ರಂದು ಈ ಪೋಸ್ಟ್ ಅನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಳ್ಳಲಾಗಿದೆ. ಅಲ್ಲಿಂದ ಇಲ್ಲಿಯವರೆಗೆ ಹಲವರು ಈ ಪೋಸ್ಟ್ ಅನ್ನು ವೀಕ್ಷಿಸಿದ್ದರೆ, ಕೆಲವರು ಲೈಕ್ಸ್, ಕಾಮೆಂಟ್ ಮಾಡಿದ್ದಾರೆ. ಕೆಲವರು ತಾವು ಕಂಡುಕೊಂಡ ಉತ್ತರವನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿದ್ದಾರೆ.
ʼ17=5 ಮಕ್ಕಳು ನೀಲಿ ಶರ್ಟ್ ಧರಿಸಿದ ಹುಡುಗಿಯರು, ಅಲ್ಲಿ ಮೂವರು ಹುಡುಗರಿರಬೇಕು. ಆದ್ದರಿಂದ ಅದನ್ನು 14 ಹುಡುಗಿಯರ ಮೂಲ ಸಂಖ್ಯೆಗೆ ಸೇರಿಸಿ, 14+3=17ʼ ಎಂದು ಇನ್‌ಸ್ಟಾಗ್ರಾಮ್ ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ.
ʼ17 ಅಥವಾ 19ʼ ಸರಿಯಾದ ಉತ್ತರ ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ.
ಕೆಲವರು ಈ ಬ್ರೈನ್ ಟೀಸರ್‌ಗೆ 16 ಸರಿ ಉತ್ತರ ಎಂದಿದ್ದಾರೆ. ಅವರೆಲ್ಲರ ಉತ್ತರ ಬಿಡಿ, ಈ ಬ್ರೈನ್ ಟೀಸರ್‌ಗೆ ನಿಮ್ಮ ಉತ್ತರವೇನು ತಿಳಿಸಿ. ಕ್ಯಾಲ್ಕುಲೇಟರ್ ಬಳಸಂಗಿಲ್ಲ ನೆನಪಿರಲಿ.
ಈ ಬ್ರೈನ್ ಟೀಸರ್‌ಗಳನ್ನೂ ಓದಿ
Brain Teaser: 3ಕ್ಕೆ 3 ಕೂಡಿಸಿದ್ರೆ 36 ಆದ್ರೆ, 6ಕ್ಕೆ 7 ಕೂಡಿಸಿದ್ರೆ ಎಷ್ಟು? 10 ಸೆಕೆಂಡ್‌ನಲ್ಲಿ ಉತ್ತರ ಹೇಳೋಕೆ ಟ್ರೈ ಮಾಡಿ
ಗಣಿತಪ್ರೇಮಿಗಳಿಗಾಗಿ ಇಲ್ಲೊಂದು ಹೊಸ ಬ್ರೈನ್ ಟೀಸರ್ ಇದೆ. ಎಕ್ಸ್‌ನಲ್ಲಿ ಪೋಸ್ಟ್ ಮಾಡಲಾದ ಈ ಸುಲಭ ಗಣಿತದ ಪಜಲ್‌ಗೆ ಉತ್ತರ ಹುಡುಕಲು ಜನ ಮೆದುಳಿಗೆ ಹುಳ ಬಿಟ್ಟುಕೊಂಡಿರುವುದು ಸುಳ್ಳಲ್ಲ. 6ಕ್ಕೆ 7 ಕೂಡಿಸಿದ್ರೆ ಎಷ್ಟು ಅಂತ 10 ಸೆಕೆಂಡ್‌ನಲ್ಲಿ ಉತ್ತರ ಹೇಳಬೇಕು.
Brain Teaser: ವೃತ್ತದಲ್ಲಿ ಮಿಸ್ ಆಗಿರುವ ಸಂಖ್ಯೆ ಯಾವುದು; ನೀವು ನಿಜಕ್ಕೂ ಬುದ್ಧಿವಂತರಾದ್ರೆ 20 ಸೆಕೆಂಡ್‌ನಲ್ಲಿ ಉತ್ತರ ಹೇಳಿ
ಇಲ್ಲೊಂದು ಗಣಿತದ ಸವಾಲಿದೆ. ಚಿತ್ರದಲ್ಲಿರುವ ವೃತ್ತದಲ್ಲಿ 10,13,4,15,17 ಹೀಗೆ ಒಂದಿಷ್ಟು ಸಂಖ್ಯೆಗಳಿವೆ. ಇದರಲ್ಲಿ ಒಂದು ಸಂಖ್ಯೆ ಮಾತ್ರ ಮಿಸ್ ಆಗಿದೆ. ಆ ಸಂಖ್ಯೆ ಯಾವುದು ಎಂದು ಕಂಡುಹಿಡಿಯಬೇಕು. ನೀವು ನಿಜಕ್ಕೂ ಬುದ್ಧಿವಂತರಾದ್ರೆ 20 ಸೆಕೆಂಡ್‌ನಲ್ಲಿ ಉತ್ತರ ಹೇಳಬೇಕು.
ವಿಭಾಗ