Brain Teaser: ಚಿತ್ರದಲ್ಲಿ ಒಟ್ಟು ಎಷ್ಟು ಕಲ್ಲಂಗಡಿ ಹಣ್ಣುಗಳಿವೆ? ಶೇ 99 ಮಂದಿಗೆ ಉತ್ತರ ಹೇಳಲು ಸಾಧ್ಯವಾಗಿಲ್ಲ, ನೀವೊಮ್ಮೆ ಪ್ರಯತ್ನಿಸಿ
ಇಲ್ಲೊಂದು ವಿಚಿತ್ರವಾದ ಚಿತ್ರವಿದೆ. ಈ ಚಿತ್ರದಲ್ಲಿ ಒಂದಿಷ್ಟು ಕಲ್ಲಂಗಡಿ ಹಣ್ಣನ್ನು ಭಿನ್ನವಾಗಿ ಜೋಡಿಸಲಾಗಿದೆ. ಇದರಲ್ಲಿ ಒಟ್ಟು ಎಷ್ಟು ಕಲ್ಲಂಗಡಿಗಳಿವೆ ಎಂಬುದನ್ನು ಕಂಡುಹಿಡಿಯಬೇಕು. ಈ ಬ್ರೈನ್ ಟೀಸರ್‌ಗೆ ಉತ್ತರ ಹೇಳಲು ಕಣ್ಣಷ್ಟೇ ಅಲ್ಲ, ಮೆದುಳು ಕೂಡ ಶಾರ್ಪ್ ಇರ್ಬೇಕು. ಹಾಗಿದ್ರೆ ಇದಕ್ಕೆ ಉತ್ತರ ಹೇಳಲು ನಿಮ್ಮಿಂದ ಸಾಧ್ಯವೇ ಪ್ರಯತ್ನಿಸಿ.
ಕಲ್ಲಂಗಡಿ ಹಣ್ಣು ಅಂದ್ರೆ ಇಷ್ಟನಾ, ಇಲ್ಲೊಂದು ಕಲ್ಲಂಗಡಿ ಹಣ್ಣಿಗೆ ಸಂಬಂಧಿಸಿದ ಬ್ರೈನ್ ಟೀಸರ್ ಇದೆ, ಇದು ನಿಮ್ಮ ಬ್ರೈನ್ ಎಷ್ಟು ಶಾರ್ಪ್ ಇದೆ ಅಂತ ಕಂಡು ಹಿಡಿಯೋಕೆ ಸಹಾಯ ಮಾಡುತ್ತೆ. ಒಂದಿಷ್ಟು ಕಲ್ಲಂಗಡಿ ಹಣ್ಣುಗಳನ್ನ ವಿಚಿತ್ರವಾಗಿ ಜೋಡಿಸಲಾದ ಈ ಬ್ರೈನ್ ಟೀಸರ್‌ನಲ್ಲಿ ಒಟ್ಟು ಎಷ್ಟು ಕಲ್ಲಂಗಡಿ ಹಣ್ಣಿದೆ ಎಂಬುದನ್ನು ಕಂಡುಹಿಡಿಯಬೇಕು.
ಟ್ವಿಟರ್‌ನಲ್ಲಿ ವೈರಲ್ ಆದ ಈ ಬ್ರೈನ್ ಟೀಸರ್ ನಿಮ್ಮ ಮೆದುಳಿಗೆ ಹುಳ ಬಿಡೋದು ಖಂಡಿತ. ಹೇಗೋ ಲೆಕ್ಕಾ ಹಾಕಿದ್ರು ಲೆಕ್ಕ ಮಿಸ್ ಆಗುತ್ತೆ, ಆಚೆಯಿಂದ ನೋಡಿದ್ರು, ಈಚೆಯಿಂದ ನೋಡಿದ್ರು ಲೆಕ್ಕ ಸಿಗೊಲ್ಲ. ಶೇ 99 ರಷ್ಟು ಮಂದಿ ಈ ಬ್ರೈನ್ ಟೀಸರ್‌ಗೆ ಉತ್ತರ ಹೇಳಲು ಸಾಧ್ಯವಾಗದೇ ಸೋತಿದ್ದಾರೆ.
Pro Brain Teaser ಎಂಬ ಟ್ವಿಟರ್ ಪುಟ ನಿರ್ವಹಿಸುತ್ತಿರುವವರು ಈ ಬ್ರೈನ್ ಟೀಸರ್ ಅನ್ನು ಹಂಚಿಕೊಂಡಿದ್ದಾರೆ. ಶೇ 99ರಷ್ಟು ಮಂದಿ ಉತ್ತರ ಹೇಳಲು ಸೋತಿದ್ದಾರೆ. ಈ ಚಿತ್ರದಲ್ಲಿ ಒಟ್ಟು ಎಷ್ಟು ಕಲ್ಲಂಗಡಿ ಹಣ್ಣುಗಳಿವೆ? ಎಂದು ಚಿತ್ರದ ಮೇಲೆ ಬರೆಯಲಾಗಿದೆ. ಆಗಸ್ಟ್ 13 ರಂದು ಈ ಬ್ರೈನ್ ಟೀಸರ್ ಅನ್ನು ಟ್ವಿಟರ್‌ನಲ್ಲಿ ಹಂಚಿಕೊಳ್ಳಲಾಗಿದೆ. ಈಗಾಗಲೇ 1000 ಕ್ಕೂ ಅಧಿಕ ಮಂದಿ ಇದನ್ನು ವೀಕ್ಷಿಸಿದ್ದಾರೆ. ಕೆಲವರು ಕಾಮೆಂಟ್ ಮಾಡುವ ಮೂಲಕ ತಾವು ಕಂಡುಕೊಂಡ ಉತ್ತರ ತಿಳಿಸಿದ್ದಾರೆ. ಕೆಲವರು ಈ ಬ್ರೈನ್ ಟೀಸರ್‌ಗೆ ಉತ್ತರ 4 ಎಂದರೆ ಹಲವರು 5 ಎಂದು ಕಾಮೆಂಟ್ ಮಾಡಿದ್ದಾರೆ. ಹಾಗಾದರೆ ಈ ಬ್ರೈನ್ ಟೀಸರ್‌ಗೆ ನಿಮ್ಮ ಉತ್ತರವೇನು?
ಕಣ್ಣು, ಮೆದುಳು ಎರಡಕ್ಕೂ ಕೆಲಸ ಕೊಡುವ ಇಂತಹ ಬ್ರೈನ್ ಟೀಸರ್‌ಗಳು ನಮ್ಮಲ್ಲಿ ಯೋಚನಾ ಶಕ್ತಿ ಬೆಳೆಯವಂತೆ ಮಾಡುವುದು ಸುಳ್ಳಲ್ಲ. ನೀವು ಈ ಬ್ರೈನ್ ಟೀಸರ್‌ಗೆ ಉತ್ತರ ಹೇಳಲು ಪ್ರಯತ್ನಿಸಿ, ನಿಮ್ಮ ಸಮಯ ಈಗ ಶುರು.
ಈ ಬ್ರೈನ್ ಟೀಸರ್ ಅನ್ನು ಓದಿ
Brain Teaser: ಮೆದುಳಿಗೆ ಹುಳ ಬಿಡುವ ಈ ಗಣಿತದ ಪಜಲ್‌ಗೆ ಉತ್ತರ ಹೇಳಲು ಶೇ 80 ರಷ್ಟು ಜನ ಸೋತಿದ್ದಾರೆ, ನಿಮಗೆ ಸಾಧ್ಯಾನಾ ಪ್ರಯತ್ನಿಸಿ
ಗಣಿತ ಪ್ರೇಮಿಗಳ ಸಾಲಿನಲ್ಲಿ ನೀವೂ ಇದ್ದೀರಾ, ಮೆದುಳಿಗೆ ಹುಳ ಬಿಟ್ಟುಕೊಳ್ಳೋದು ಅಂದ್ರೆ ನಿಮಗೆ ಇಷ್ಟಾನಾ, ಹಾಗಾದರೆ ಇಲ್ಲೊಂದು ಪಜಲ್ ಇದೆ. ಶೇ 80 ರಷ್ಟು ಮಂದಿ ಉತ್ತರ ಹೇಳಲಾಗದೆ ಸೋತಿರುವ ಈ ಬ್ರೈನ್ ಟೀಸರ್‌ಗೆ ನಿಮ್ಮಿಂದ ಉತ್ತರ ಕಂಡುಹಿಡಿಯಲು ಸಾಧ್ಯವೇ ಪ್ರಯತ್ನ ಮಾಡಿ.
Brain Teaser: 5ಕ್ಕೆ 5 ಕೂಡಿಸಿ 5 ರಿಂದ ಗುಣಿಸಿದ್ರೆ ಎಷ್ಟಾಗುತ್ತೆ? ಗಣಿತ ಇಷ್ಟ ಅನ್ನೋರು ಥಟ್ಟಂತ ಉತ್ತರ ಹೇಳಿ
ಗಣಿತ ಹಲವರಿಗೆ ಕಬ್ಬಿಣದ ಕಡಲೆ. ಇನ್ನೂ ಕೆಲವರಿಗೆ ಸಿಹಿಯಾದ ಪಾನಕದಂತೆ. ನಿಮಗೆ ಗಣಿತ ಫೇವರಿಟ್ ಸಬ್ಜೆಕ್ಟ್ ಆದ್ರೆ ಇಲ್ಲಿರುವ ಪಜಲ್‌ಗೆ ಥಟ್ಟಂತ ಉತ್ತರ ಹೇಳಿ. ಗಣಿತದಲ್ಲಿ ನೀವೆಷ್ಟು ಶಾರ್ಪ್ ನೋಡೋಣ. ಹಾಗಾದ್ರೆ 5ಕ್ಕೆ 5 ಕೂಡಿಸಿ 5 ರಿಂದ ಗುಣಿಸಿದ್ರೆ ಎಷ್ಟಾಗುತ್ತೆ?