Brain Teaser: ಐ ಅಕ್ಷರದಿಂದ ಪ್ರಾರಂಭವಾಗುವ ನನಗೆ ಎ ಸೇರಿಸಿದ್ರೆ ಹೊಸ ಪದವಾಗುತ್ತೆ, ಆದ್ರೆ ಅರ್ಥ ಮಾತ್ರ ಒಂದೇ; ಹಾಗಿದ್ರೆ ನಾನ್ಯಾವ ಪದ?
ಮೆದುಳಿಗೆ ಹುಳ ಬಿಡುವ ಪ್ರಶ್ನೆಗಳಿಗೆ ಉತ್ತರ ಹುಡುಕುವುದು ಎಂದರೆ ನಿಮಗೆ ಇಷ್ಟನಾ, ಹಾಗಿದ್ರೆ ಇಲ್ಲೊಂದು ಪ್ರಶ್ನೆ ಇದೆ. ಇದು ನಿಜಕ್ಕೂ ನಿಮ್ಮ ತಲೆಯಲ್ಲಿ ಚಿಟ್ಟೆ ಹರಿದಾಡುವಂತೆ ಮಾಡುವುದು ಸುಳಲ್ಲ. ಸ್ವಲ್ಪ ಯೋಚನೆ ಮಾಡಿದ್ರೆ ಈ ಪ್ರಶ್ನೆಗೆ ಉತ್ತರ ಸಿಗುತ್ತೆ, ಟ್ರೈ ಮಾಡಿ.
ಸಾಮಾಹಿಕ ಜಾಲತಾಣಗಳಲ್ಲಿ ಸ್ಕ್ರೋಲ್ ಮಾಡುವಾಗ ಕಣ್ಣಿಗೆ ಬೀಳುವ ಕೆಲವು ಬ್ರೈನ್ ಟೀಸರ್‌ಗಳು ನಮ್ಮನ್ನು ತರ್ಕಕ್ಕೆ ನೂಕುವುದು ಸುಳ್ಳಲ್ಲ. ಅಲ್ಲದೆ ಇಲ್ಲಿರುವ ಕೆಲವು ಸವಾಲುಗಳಿಗೆ ಉತ್ತರ ಹುಡುಕಲು ನಾವು ಗಂಟೆಗಟ್ಟಲೆ ಸಮಯ ಕೊಡುತ್ತೇವೆ. ಯಾಕೆಂದರೆ ಇವು ಉತ್ತರ ಸಿಗದೇ ನಮ್ಮನ್ನು ಕಾಡಿಸುತ್ತವೆ. ಇಂತಹ ಮೆದುಳಿಗೆ ಹುಳ ಬಿಡುವ ಸವಾಲುಗಳಿಗೆ ನಾವು ಉತ್ತರ ಕಂಡುಕೊಳ್ಳಲು ಪ್ರಯತ್ನಿಸುವುದು ಮಾತ್ರವಲ್ಲ, ನಮ್ಮ ಜೊತೆಯಲ್ಲಿ ಇರುವವರಿಗೂ ಉತ್ತರ ಏನು ಎಂದು ಕೇಳಿ ತಲೆ ತಿನ್ನುತ್ತೇವೆ. ಆದರೂ ಈ ಬ್ರೈನ್ ಟೀಸರ್‌ಗಳು ನಮ್ಮ ಮನಸ್ಸಿಗೆ ಮಜಾ ನೀಡುವುದರಲ್ಲಿ ಅನುಮಾನವಿಲ್ಲ. ನೀವು ಬ್ರೈನ್ ಟೀಸರ್ ಸವಾಲುಗಳಿಗೆ ಉತ್ತರ ಹುಡುಕಲು ಬಯಸುವವರಾದರೆ ನಿಮಗಾಗಿ ಇಲ್ಲೊಂದು ಬ್ರೈನ್ ಟೀಸರ್ ಇದೆ. ಈ ಸವಾಲು ನಿಜಕ್ಕೂ ನೀವು ತಲೆ ಕರೆದುಕೊಳ್ಳುವಂತೆ ಮಾಡುವುದರಲ್ಲಿ ಅನುಮಾನವಿಲ್ಲ.
'Facts Fellow' ಎಂಬ ಇನ್‌ಸ್ಟಾಗ್ರಾಂ ಪುಟದಲ್ಲಿ ಈ ಬ್ರೈನ್ ಟೀಸರ್ ಅನ್ನು ಹಂಚಿಕೊಳ್ಳಲಾಗಿತ್ತು. ʼನಾನು ಐ ಅಕ್ಷರದಿಂದ ಪ್ರಾರಂಭವಾಗುವ ಒಂದು ಪದ. ನೀವು ನನಗೆ ಎ ಅಕ್ಷರವನ್ನು ಸೇರಿಸಿದರೆ, ನಾನು ವಿಭಿನ್ನ ಅರ್ಥ ಹೊಂದಿದ ಹೊಸ ಪದವಾಗುತ್ತೇನೆ. ಆದರೆ ನನ್ನನ್ನ ಹೇಳುವ ರೀತಿ ಮಾತ್ರ ಒಂದೇ ಆಗಿರುತ್ತದೆ, ಹಾಗಾದರೆ ನಾನು ಯಾವ ಪದ?ʼ ಎಂಬುದು ಈ ಬ್ರೈನ್ ಟೀಸರ್‌ನಲ್ಲಿರುವ ಪ್ರಶ್ನೆಯಾಗಿದೆ.
ಇಂದು ಬೆಳಿಗ್ಗೆ ಈ ಬ್ರೈನ್ ಟೀಸರ್ ಅನ್ನು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಲಾಗಿದೆ. ಇದನ್ನು ಪೋಸ್ಟ್ ಮಾಡಿದಾಗಿನಿಂದ ಈವರೆಗೆ ಹಲವರು ವೀಕ್ಷಿಸಿದ್ದಾರೆ. ಕೆಲವರು ಪೋಸ್ಟ್‌ಗೆ ಲೈಕ್ ಮಾಡಿದ್ದರೆ ಇನ್ನೂ ಕೆಲವರು ಕಾಮೆಂಟ್ ಮಾಡುವ ಮೂಲಕ ತಾವು ಕಂಡುಕೊಂಡ ಉತ್ತರವನ್ನು ತಿಳಿಸಿದ್ದಾರೆ.
ಸರಿ ಈ ಬ್ರೈನ್ ಟೀಸರ್‌ಗೆ ನಿಮ್ಮ ಉತ್ತರವೇನು? ಇದಕ್ಕೆ ಉತ್ತರ ಹುಡುಕಲು ನಿಮ್ಮಿಂದ ಸಾಧ್ಯವಾಗುವುದೇ, ಹಾಗಿದ್ರೆ ಟ್ರೈ ಮಾಡಿ.
ನಾನು ಐ (I) ಅಕ್ಷರದಿಂದ ಪ್ರಾರಂಭವಾಗುವ ಒಂದು ಪದ. ನೀವು ನನಗೆ ಎ (A) ಅಕ್ಷರ ಸೇರಿಸಿದರೆ, ನಾನು ಭಿನ್ನ ಅರ್ಥ ಹೊಂದಿದ ಹೊಸ ಪದವಾಗುತ್ತೇನೆ. ಆದರೆ ಉಚ್ಛಾರ ಮಾತ್ರ ಒಂದೇ ರೀತಿ ಇರುತ್ತದೆ. ಹಾಗಾದ್ರೆ ನಾನು ಯಾವ ಪದ? ಯೋಚಿಸಿ ಉತ್ತರಿಸಿ.
ಈ ಬ್ರೈನ್ ಟೀಸರ್‌ಗಳನ್ನೂ ಓದಿ
Brain Teaser: ಚಿತ್ರದಲ್ಲಿ ಮಿಸ್ ಆಗಿರುವ ನಂಬರ್ ಯಾವುದು? ಈ ಸುಲಭ ಗಣಿತಕ್ಕೆ ಥಟ್ಟಂತ ಉತ್ತರ ಹೇಳಿ ಜಾಣತನ ತೋರಿ
ನೀವು ಗಣಿತಪ್ರೇಮಿಯೇ, ಗಣಿತದಲ್ಲಿ ನೀವು ಪಂಟರಾದ್ರೆ ನಿಮಗಾಗಿ ಇಲ್ಲೊಂದು ಬ್ರೈನ್ ಟೀಸರ್ ಇದೆ. ಈ ಬಾಕ್ಸ್‌ನಲ್ಲಿ ಒಂದು ಸಂಖ್ಯೆ ಮಿಸ್ ಆಗಿದೆ. ಆ ನಂಬರ್ ಯಾವುದು ಎಂದು ಕಂಡುಹಿಡಿಯಿರಿ. ನಿಮಗೊಂದು ಹೊಸ ಸವಾಲು. ಪೆನ್ನು-ಪೇಪರ್, ಕ್ಯಾಲ್ಕುಲೇಟರ್ ಬಳಸುವಂತಿಲ್ಲ ನೆನಪಿರಲಿ.
Brain Teaser: 6÷2...?; ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಹುಟ್ಟು ಹಾಕಿರುವ ಈ ಬ್ರೈನ್ ಟೀಸರ್‌ಗೆ ನಿಮ್ಮ ಉತ್ತರವೇನು?
ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಲಾಗಿರುವ ಗಣಿತ ಸೂತ್ರದ ಬ್ರೈನ್ ಟೀಸರ್‌ವೊಂದು ಇದೀಗ ಭಾರಿ ಚರ್ಚೆ ಹುಟ್ಟುಹಾಕಿದೆ. ಇಲ್ಲಿರುವ ಸಮೀಕರಣಕ್ಕೆ ನೀವು ಉತ್ತರ ಕಂಡುಹಿಡಿಯಬೇಕು, ಅಂದ್ ಹಾಗೆ ಪೆನ್ನು-ಪೇಪರ್, ಕ್ಯಾಲ್ಕುಲೇಟರ್ ಬಳಸುವಂತಿಲ್ಲ. ಬೋಡ್‌ಮಾಸ್ ನಿಯಮ ಗೊತ್ತಿದ್ರೆ ಖಂಡಿತ ಇದಕ್ಕೆ ಉತ್ತರ ಹುಡುಕೋದು ಬಲು ಸುಲಭ.