Brain Teaser: ಚಿತ್ರದಲ್ಲಿರುವ ಮಹಿಳೆಯರ ಚಪ್ಪಲಿ ಗಮನಿಸಿ ಗರ್ಭಿಣಿ ಯಾರೆಂದು ಊಹಿಸಿ, ನಿಮಗಿರೋದು 15 ಸೆಕೆಂಡ್ ಸಮಯ
ಇಂದಿನ ಬ್ರೈನ್ ಟೀಸರ್ ಚಿತ್ರದಲ್ಲಿ ಮೂವರು ಹುಡುಗಿಯರಿದ್ದಾರೆ. ಇವರ ಕಾಲು ಮಾತ್ರ ತೋರಿಸಿಲಾಗಿದ್ದು, ಅವರ ಚಪ್ಪಲಿಯನ್ನು ನೋಡಿ ಇವರಲ್ಲಿ ಗರ್ಭಿಣಿ ಯಾರೆಂದು ಊಹಿಸುವುದು ನಿಮಗಿರುವ ಸವಾಲು. ನೀವು ನಿಜಕ್ಕೂ ಶಾರ್ಪ್ ಮೈಂಡ್‌ನವರಾದ್ರೆ ಈ ಚಿತ್ರದಲ್ಲಿ ಗರ್ಭಿಣಿ ಯಾರೆಂದು ಊಹಿಸಿ, ಉತ್ತರ ಹೇಳಿ.
ಬ್ರೈನ್ ಟೀಸರ್‌ಗಳು ಎಂದರೆ ಕೇವಲ ಮನಸ್ಸಿಗೆ ಖುಷಿ ಕೊಡುವ ಚಿತ್ರಗಳಲ್ಲ. ಇವು ಮೆದುಳಿಗೆ ಸವಾಲು ಹಾಕುವ ಚಿತ್ರಗಳು. ಇದರಲ್ಲಿರುವ ಪ್ರಶ್ನೆ ನಿಮ್ಮ ಮೆದುಳಲ್ಲಿ ಹುಳ ಬಿಟ್ಟಂತೆ ಮಾಡುವುದು ಸುಳ್ಳಲ್ಲ. ಯಾಕೆಂದರೆ ಬ್ರೈನ್ ಟೀಸರ್‌ನಲ್ಲಿರುವ ಪ್ರಶ್ನೆಗಳಿಗೆ ಸರಿಯಾದ ಉತ್ತರ ಹೇಳಲು ಅಸಮಾನ್ಯ ಬುದ್ಧಿವಂತಿಕೆ ಬೇಕು.
ಬ್ರೈನ್ ಟೀಸರ್ ಹೇಗೆಂದರೆ ಇದರಲ್ಲಿರುವ ಪ್ರಶ್ನೆಯನ್ನು ನೋಡಿದ ಮೇಲೆ ನಿಮಗೆ ಉತ್ತರ ಕಂಡುಹಿಡಿಯವವರೆಗೂ ನೆಮ್ಮದಿ ಇರುವುದಿಲ್ಲ. ಉತ್ತರ ಏನಿರಬಹುದು ಎಂದು ಮನಸ್ಸಿನಲ್ಲಿ ಕೊರತೆಯುತ್ತಲೇ ಇರುತ್ತದೆ. ಇದೀಗ ಬ್ರೈನ್ ಟೀಸರ್ ಟ್ರೆಂಡ್ ಆಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಇಂತಹ ಹಲವಾರು ವಿವಿಧ ಬ್ರೈನ್ ಟೀಸರ್‌ಗಳು ವೈರಲ್ ಆಗುತ್ತವೆ. ನೀವು ಬ್ರೈನ್ ಟೀಸರ್ ಪ್ರೇಮಿಯಾದ್ರೆ ಇಂದಿನ ಬ್ರೈನ್ ಟೀಸರ್‌ಗೆ ಉತ್ತರ ಹೇಳುವ ಪ್ರಯತ್ನ ಮಾಡಿ.
ಬ್ರೈನ್ ಟೀಸರ್‌ನಲ್ಲಿ ಏನಿದೆ?
ಈ ಬ್ರೈನ್ ಟೀಸರ್‌ನಲ್ಲಿ ಕೇಸರಿ, ನೀಲಿ, ಗುಲಾಬಿ ಬಣ್ಣದ ಉಡುಪು ಧರಿಸಿದ ಮಹಿಳೆಯರ ಕಾಲನ್ನು ಗಮನಿಸಬಹುದು. ಇವರಲ್ಲಿ ಒಬ್ಬರು ಸ್ಕರ್ಟ್ ಧರಿಸಿದ್ದರೆ, ಒಬ್ಬಳು ಲೆಗ್ಗಿಂಗ್ ಟಾಪ್ ಧರಿಸಿದ್ದಾಳೆ. ಇದರಲ್ಲಿ ಒಬ್ಬಳು ಫ್ಲ್ಯಾಟ್ ಶೂ, ಒಬ್ಬಳು ಹೀಲ್ಡ್ಸ್ ಶೂ, ಇನ್ನೊಬ್ಬಳು ಲೇಯರ್ಡ್ ಶೂ ಧರಿಸಿದ್ದಾಳೆ. ಇದರಲ್ಲಿ ಒಬ್ಬಳು ಗೃಹಿಣಿ ಅವಳು ಯಾರು ಎಂದು ನೀವು ಕಂಡುಹಿಡಿಯಬೇಕು. ನಿಮಗಿರೋದು ಕೇವಲ 15 ಸೆಕೆಂಡ್ ಸಮಯ.
ಮಹಿಳೆಯರ ಚಪ್ಪಲಿ ನೋಡಿ ಗರ್ಭಿಣಿ ಯಾರು ಎಂದು ಊಹಿಸಲು ನಿಮ್ಮಿಂದ ಸಾಧ್ಯವಾಯ್ತಾ, ಹಾಗಾದರೆ ನೀವು ಖಂಡಿತ ಬ್ರಿಲಿಯೆಂಟ್ ಎಂದೇ ಅರ್ಥ. ಒಂದು ವೇಳೆ ನಿಮ್ಮಿಂದ ಗರ್ಭಿಣಿ ಯಾರು ಎಂದು ಊಹಿಸಲು ಸಾಧ್ಯವಾಗಿಲ್ಲ ಎಂದರೆ ನಾವು ನಿಮಗೆ ಸಹಾಯ ಮಾಡುತ್ತೇವೆ. ಇದರಲ್ಲಿ ಮೂರನೇ ಮಹಿಳೆ ಎಂದರೆ ಸಿ ಗರ್ಭಿಣಿ. ಯಾಕೆಂದರೆ ಆಕೆ ಶೂ ಧರಿಸಿದ್ದು, ಶೂ ಲೇಸ್ ಅನ್ನು ಕಟ್ಟದೆ ಸಡಿಲವಾಗಿ ಇರಿಸಿಕೊಂಡಿದ್ದಾರೆ.
ಸರಿ ಈಗ ಉತ್ತರ ಗೊತ್ತಾಯ್ತು ಅಲ್ವಾ ಇನ್ನೇಕೆ ತಡ. ಇದನ್ನು ನಿಮ್ಮ ಸ್ನೇಹಿತರು ಹಾಗೂ ಸಂಬಂಧಿಕರಿಗೂ ಶೇರ್ ಮಾಡಿ. ಅವರ ಬುದ್ಧಿವಂತಿಕೆ ಹೇಗಿದೆ ಎಂದು ಪರೀಕ್ಷೆ ಮಾಡಿ.
ಈ ಬ್ರೈನ್ ಟೀಸರ್ ಅನ್ನೂ ಓದಿ
Brain Teaser: 3 ಸೇಬುಹಣ್ಣಿನ ಬೆಲೆ 30ರೂ ಆದ್ರೆ, ತೆಂಗಿನಕಾಯಿ ಸೇಬುಹಣ್ಣು ಹಾಗೂ ಬಾಳೆಹಣ್ಣಿನ ಒಟ್ಟು ಮೊತ್ತ ಎಷ್ಟಾಗುತ್ತೆ, ಥಟ್ಟಂತ ಹೇಳಿ
ಹಣ್ಣುಗಳು ಹಾಗೂ ಗಣಿತದಿಂದ ಕೂಡಿದ ಬ್ರೈನ್ ಟೀಸರ್‌ವೊಂದು ವೈರಲ್ ಆಗಿದೆ. ಇದರಲ್ಲಿ ಸೇಬು, ತೆಂಗಿನಕಾಯಿ, ಬಾಳೆಹಣ್ಣಿದ್ದು ಇವುಗಳ ಒಟ್ಟು ಮೊತ್ತ ಎಷ್ಟು ಎಂದು ನೀವು ಹೇಳಬೇಕು. ಆದರೆ ಈ ಪ್ರಶ್ನೆ ನೋಡೋಕೆ ಸುಲಭ ಆದ್ರೂ ಉತ್ತರ ಹೇಳೋದು ಕಷ್ಟ ಎನ್ನಿಸಬಹುದು. ನೀವು ಗಣಿತಪ್ರೇಮಿಯಾದ್ರೆ ಉತ್ತರ ಕಂಡುಹಿಡಿಯಲು ಪ್ರಯತ್ನಿಸಿ.