Brain Teaser: 2+3=10, 8+4=96 ಆದ್ರೆ 9+7= ಎಷ್ಟು? ಗಣಿತ ಎಕ್ಸ್‌ಪರ್ಟ್ ನೀವಾದ್ರೆ 10 ಸೆಕೆಂಡ್ ಒಳಗೆ ಉತ್ತರ ಹೇಳಿ-viral news brain teaser if 2 3 10 8 4 96 then 9 7 how much find the answer in 10 seconds maths puzzle rst ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  Brain Teaser: 2+3=10, 8+4=96 ಆದ್ರೆ 9+7= ಎಷ್ಟು? ಗಣಿತ ಎಕ್ಸ್‌ಪರ್ಟ್ ನೀವಾದ್ರೆ 10 ಸೆಕೆಂಡ್ ಒಳಗೆ ಉತ್ತರ ಹೇಳಿ

Brain Teaser: 2+3=10, 8+4=96 ಆದ್ರೆ 9+7= ಎಷ್ಟು? ಗಣಿತ ಎಕ್ಸ್‌ಪರ್ಟ್ ನೀವಾದ್ರೆ 10 ಸೆಕೆಂಡ್ ಒಳಗೆ ಉತ್ತರ ಹೇಳಿ

Brain Teaser: ಗಣಿತ ಖಂಡಿತ ಎಲ್ಲರಿಗೂ ಕಬ್ಬಿಣದ ಕಡಲೆಯಲ್ಲ, ಗಣಿತ ಕೆಲವರಿಗೆ ಫೇವರಿಟ್ ಸಬ್ಜೆಕ್ಟ್ ಕೂಡ ಹೌದು. ನೀವೂ ಗಣಿತಪ್ರೇಮಿಯಾದ್ರೆ ನಿಮಗಾಗಿ ಇಲ್ಲೊಂದು ಬ್ರೈನ್ ಟೀಸರ್ ಇದೆ. ಇದಕ್ಕೆ ನೀವು 10 ಸೆಕೆಂಡ್ ಒಳಗೆ ಉತ್ತರ ಹೇಳಬೇಕು. ಬುದ್ಧಿಗೆ ಗುದ್ದು ಕೊಡುವ ಈ ಬ್ರೈನ್ ಟೀಸರ್‌ಗೆ ಥಟ್ಟಂತ ಉತ್ತರ ಹೇಳಲು ಸಾಧ್ಯವೇ? ಟ್ರೈ ಮಾಡಿ.

ಬ್ರೈನ್ ಟೀಸರ್‌
ಬ್ರೈನ್ ಟೀಸರ್‌

Maths Puzzle Brain Teaser: ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ಬ್ರೈನ್ ಟೀಸರ್‌ಗಳು ಹರಿದಾಡುತ್ತಿರುತ್ತವೆ. ಈ ಬ್ರೈನ್ ಟೀಸರ್‌ಗಳು ನಮ್ಮ ಮೆದುಳಿಗೆ ಹುಳ ಬಿಡುವುದು ಸುಳ್ಳಲ್ಲ. ಸುಲಭ ಎನ್ನಿಸುವ ಲೆಕ್ಕವೂ ನಮಗೆ ಕಷ್ಟವಾಗಿ ಕಾಣಬಹುದು. ಇಂತಹ ಟ್ರಿಕ್ಕಿ ಪ್ರಶ್ನೆಗಳು ನಮ್ಮ ಮೆದುಳನ್ನು ಸೆಳೆಯುದೇ ಬಿಡುವುದಿಲ್ಲ. ಹೀಗಾಗಿ ಹಲವರು ಬ್ರೈನ್ ಟೀಸರ್ ಬಿಡಿಸುವ ಹವ್ಯಾಸವನ್ನು ರೂಢಿಸಿಕೊಂಡಿರುತ್ತಾರೆ. ಅಂತಹವರಿಗಾಗಿ ಇಲ್ಲೊಂದು ಬ್ರೈನ್ ಟೀಸರ್‌ ಇದೆ.

ಈ ಬ್ರೈನ್ ಟೀಸರ್‌ಗೆ ಉತ್ತರ ಹೇಳಲು ನೀವು ಗಣಿತದಲ್ಲಿ ಶಾರ್ಪ್ ಇರಬೇಕು. ಜೊತೆಗೆ ನಿಮ್ಮ ಮೆದುಳು ಕೂಡ ಶಾರ್ಪ್ ಇರಬೇಕು, ಯಾಕಂದ್ರೆ ಇಲ್ಲಿ 2+3=5 ಖಂಡಿತ ಆಗೊಲ್ಲ, 2+3=10 ಆಗುತ್ತೆ. ಈ ಬ್ರೈನ್ ಟೀಸರ್‌ಗೆ ನೀವು ಕೇವಲ 10 ಸೆಕೆಂಡ್‌ ಒಳಗೆ ಸರಿಯಾದ ಉತ್ತರ ಹೇಳಬೇಕು, ಅದು ನಿಮಗಿರುವ ಸವಾಲು.

Brainy Bits Hub ಎನ್ನುವ ಟ್ವಿಟರ್ ಪುಟವನ್ನು ನಿರ್ವಹಿಸುತ್ತಿರುವವರು ಈ ಬ್ರೈನ್ ಟೀಸರ್‌ ಅನ್ನು ಪೋಸ್ಟ್ ಮಾಡಿದ್ದಾರೆ. ಮಿಸ್ ಆಗಿರುವ ನಂಬರ್ ಯಾವುದು ಹೇಳಿ ಎಂದು ಶೀರ್ಷಿಕೆ ಬರೆದುಕೊಂಡಿದ್ದಾರೆ. ಈ ಬ್ರೈನ್ ಟೀಸರ್ ಚಿತ್ರದಲ್ಲಿ 2+3=10, 7+2=63, 6+5=66, 8+4=96, ಆದ್ರೆ 9+7= ಎಷ್ಟು ಎಂಬುದು ಪ್ರಶ್ನೆ. ಈ ಪ್ರಶ್ನೆಗೆ ನೀವು 10 ಸೆಕೆಂಡ್ ಒಳಗೆ ಉತ್ತರ ಹೇಳಬೇಕಾಗಿರುವುದು.

ಸೆಪ್ಟೆಂಬರ್ 3 ರಂದು ಪೋಸ್ಟ್ ಮಾಡಲಾದ ಈ ಬ್ರೈನ್ ಟೀಸರ್‌ ಅನ್ನು ಈಗಾಗಲೇ 1 ಸಾವಿರಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ. ಕೆಲವರು ಕಾಮೆಂಟ್ ಮಾಡುವ ಮೂಲಕ ತಾವು ಕಂಡುಕೊಂಡ ಉತ್ತರವನ್ನು ತಿಳಿಸಿದ್ದಾರೆ.

‘ನನಗೆ ಗೊತ್ತಿಲ್ಲ‘ ಎಂದು ವ್ಯಕ್ತಿಯೊಬ್ಬರು ಕಾಮೆಂಟ್ ಮಾಡಿದ್ದಾರೆ. ಹಲವರು ಇದಕ್ಕೆ 144 ಉತ್ತರ ಎಂದು ಕಾಮೆಂಟ್ ಮೂಲಕ ತಿಳಿಸಿದ್ದಾರೆ. ಹಾಗಾದರೆ ಈ ಬ್ರೈನ್ ಟೀಸರ್‌ಗೆ ನಿಮ್ಮ ಉತ್ತರವೇನು ಹೇಳಿ.

ಈ ಬ್ರೈನ್ ಟೀಸರ್‌ಗಳನ್ನೂ ಓದಿ

Brain Teaser: ನಿಮ್ಮ ಕಣ್ಣು ಎಷ್ಟು ಸೂಕ್ಷ್ಮವಾಗಿದೆ ನೋಡೋಣ, 9 ಸೆಕೆಂಡ್‌ ಒಳಗೆ ಚಿತ್ರದಲ್ಲಿ ಅಡಗಿರುವ ಹೃದಯವನ್ನು ಹುಡುಕಿ

Brain Teaser: ನಿಮ್ಮ ಕಣ್ಣು ಹದ್ದಿನ ಕಣ್ಣಿನಷ್ಟೇ ಸೂಕ್ಷ್ಮ ಅಂತಾದ್ರೆ ನಿಮಗಾಗಿ ಇಲ್ಲೊಂದು ಬ್ರೈನ್ ಟೀಸರ್ ಚಿತ್ರವಿದೆ. ಇದರಲ್ಲಿ ಅಡಗಿರುವ ಹೃದಯವನ್ನು ನೀವು 9 ಸೆಕೆಂಡ್ ಒಳಗೆ ಹುಡುಕಬೇಕು, ನೋಡೋಣ ನಿಮ್ಮ ಕಣ್ಣು ಎಷ್ಟು ಶಾರ್ಪ್ ಆಗಿದೆ ಅಂತ. ನಿಮ್ಮ ಸಮಯ ಈಗ ಶುರು...

Brain Teaser: ನಿಮ್ಮ ಜಾಣ್ಮೆಗೊಂದು ಸವಾಲ್‌, ಚಿತ್ರದಲ್ಲಿರುವ ಮೂರು ಪ್ರಾಣಿಗಳ ಒಟ್ಟು ತೂಕ ಎಷ್ಟು? 11 ಸೆಕೆಂಡ್‌ನಲ್ಲಿ ಉತ್ತರ ಹೇಳಿ

Brain Test: ನೀವು ತುಂಬಾ ಬುದ್ಧಿವಂತರು ಅಂತ ನಿಮಗೆ ಅನ್ನಿಸುತ್ತಾ, ಹಾಗಾದ್ರೆ ಇಲ್ಲಿರುವ ಬ್ರೈನ್ ಟೀಸರ್‌ಗೆ 11 ಸೆಕೆಂಡ್‌ ಒಳಗೆ ಉತ್ತರ ಹೇಳಿ. ಮೂರು ಪ್ರಾಣಿಗಳ ಒಟ್ಟು ತೂಕ ಎಷ್ಟು ಎಂದು ಹೇಳುವುದು ನಿಮಗಿರುವ ಸವಾಲು, ಇನ್ನೇಕೆ ತಡ ಚಿತ್ರ ನೋಡಿ, ಉತ್ತರ ಹೇಳಿ.

mysore-dasara_Entry_Point