Brain Teaser: 20+3=46 ಆದ್ರೆ 40+5= ಎಷ್ಟು? ಗಣಿತದಲ್ಲಿ ಎಕ್ಸ್‌ಪರ್ಟ್ ಅನ್ನೋರು 10 ಸೆಕೆಂಡ್‌ನಲ್ಲಿ ಉತ್ತರ ಹೇಳಿ
ಗಣಿತ ಸೂತ್ರಗಳನ್ನು ಬಿಡಿಸುವುದು, ಲಾಜಿಕಲ್ ಗಣಿತಕ್ಕೆ ಉತ್ತರ ಹುಡುಕುವುದು ಎಲ್ಲರಿಂದಲೂ ಸಾಧ್ಯವಿಲ್ಲ. ಮೆದುಳು ಶಾರ್ಪ್ ಇದ್ದು, ಗಣಿತದಲ್ಲಿ ಎಕ್ಸ್‌ಪರ್ಟ್ ಇದ್ದವರಿಗಷ್ಟೇ ಇದಕ್ಕೆ ಉತ್ತರ ಕಂಡುಕೊಳ್ಳಲು ಸಾಧ್ಯವಾಗುತ್ತದೆ. ನೀವು ಗಣಿತಪ್ರಿಯರಾದ್ರೆ ಈ ಬ್ರೈನ್ ಟೀಸರ್‌ಗೆ 10 ಸೆಕೆಂಡ್‌ನಲ್ಲಿ ಉತ್ತರ ಹೇಳಿ.
ಸಾಮಾಜಿಕ ಜಾಲತಾಣ ಎನ್ನುವುದು ಕೇವಲ ಮನೋರಂಜನೆ ಮಾತ್ರವಲ್ಲ, ಇದು ಮಾಹಿತಿಯ ಆಗರವು ಹೌದು. ಸಾಮಾಜಿಕ ಜಾಲತಾಣವು ಕಲಿಕೆಗೆ ವೇದಿಕೆಯೂ ಹೌದು. ಇದರಲ್ಲಿ ವೈರಲ್ ಆಗುವ ಬ್ರೈನ್ ಟೀಸರ್‌ಗಳು ನಮ್ಮ ಕಣ್ಣು ಹಾಗೂ ಮೆದುಳನ್ನು ಚುರುಕುಗೊಳಿಸುವುದು ಸುಳ್ಳಲ್ಲ. ಇದು ಮೆದುಳಿಗೆ ಸಾಕಷ್ಟು ಕೆಲಸ ನೀಡುವ ಮೂಲಕ ಮೆದುಳನ್ನು ಚುರುಕಾಗಿಸುತ್ತದೆ. ಇನ್‌ಸ್ಟಾಗ್ರಾಂ, ಟ್ವಿಟರ್‌ನಲ್ಲಿ ವೈರಲ್ ಆಗುವ ಮ್ಯಾಥ್ಸ್ ಪಜಲ್‌ಗಳು ಮೆದುಳಿಗೆ ಹುಳ ಬಿಡುವಂತಿರುತ್ತವೆ. ಇಲ್ಲೊಂದು ಅಂಥದ್ದೇ ಬ್ರೈನ್ ಟೀಸರ್ ಇದೆ.
@Brainy_Bits_Hub ಎಂಬ ಎಕ್ಸ್ ಪುಟದಲ್ಲಿ ಪೋಸ್ಟ್ ಮಾಡಲಾದ ಈ ಬ್ರೈನ್ ಟೀಸರ್ ಗಣಿತ ಪಜಲ್ ಅನ್ನು ಹೊಂದಿದೆ. 20+3=46, 10+2=12, 30+1=93, 32+1=165 ಆದ್ರೆ 40+5= ಎಷ್ಟು? ಎಂದು ಪ್ರಶ್ನೆ ಕೇಳಲಾಗಿದೆ. ಇದಕ್ಕೆ 10 ಸೆಕೆಂಡ್‌ನಲ್ಲಿ ಉತ್ತರ ಹೇಳಿದ್ರೆ ನೀವು ನಿಜಕ್ಕೂ ಗಣಿತದಲ್ಲಿ ಎಕ್ಸ್‌ಪರ್ಟ್ ಎಂದುಕೊಳ್ಳಬಹುದು.
ಜೂನ್ 23 ರಂದು ಎಕ್ಸ್‌ನಲ್ಲಿ ಪೋಸ್ಟ್ ಮಾಡಲಾದ ಬ್ರೈನ್ ಟೀಸರ್ ಇದಾಗಿದೆ. ಈಗಾಗಲೇ 2000 ದಷ್ಟು ಮಂದಿ ಇದನ್ನು ವೀಕ್ಷಿಸಿದ್ದಾರೆ. ಹಲವರು ಕಾಮೆಂಟ್ ಮಾಡುವ ಮೂಲಕ ತಾವು ಕಂಡುಕೊಂಡ ಉತ್ತರವನ್ನು ತಿಳಿಸಿದ್ದಾರೆ.
ಬ್ರೈನ್ ಟೀಸರ್‌ಗೆ ಬಂದ ಕಾಮೆಂಟ್‌ಗಳು
45*(4+0)=180 ಎಂದು ಎಕ್ಸ್ ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ. 225 ಎಂದು ಒಬ್ಬರು ಕಾಮೆಂಟ್ ಮಾಡಿದ್ದರೆ, 205 ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ. ಹಲವರು ಈ ಬ್ರೈನ್ ಟೀಸರ್‌ಗೆ ಉತ್ತರ 180 ಎಂದು ಕಾಮೆಂಟ್ ಮಾಡಿದ್ದಾರೆ. ನೀವು ಇವರಂತೆ ಗಣಿತ ಎಕ್ಸ್‌ಪರ್ಟ್ಸ್ ಆದ್ರೆ ಈ ಬ್ರೈನ್ ಟೀಸರ್‌ಗೆ ಉತ್ತರವೇನು ತಿಳಿಸಿ.
ಈ ಬ್ರೈನ್ ಟೀಸರ್‌ಗಳನ್ನೂ ಓದಿ
Brain Teaser: ಮೊದಲು ಯಾವ ಗ್ಲಾಸ್ ತುಂಬುತ್ತೆ? ನಿಮ್ಮ ಮೆದುಳು ಚುರುಕಾಗಿದ್ರೆ 15 ಸೆಕೆಂಡ್‌ನಲ್ಲಿ ಉತ್ತರ ಹೇಳಿ
ನಿಮ್ಮ ಮೆದುಳು ಎಷ್ಟು ಚುರುಕಾಗಿದೆ ಎಂದು ತಿಳಿಯಬೇಕು ಅನ್ನೋ ಆಸೆ ನಿಮಗಿದ್ರೆ ಈ ಬ್ರೈನ್ ಟೀಸರ್‌ಗೆ ಉತ್ತರ ಹೇಳಿ. 15 ಸೆಕೆಂಡ್‌ನಲ್ಲಿ ಯಾವ ಗ್ಲಾಸ್ ಮೊದಲು ತುಂಬುತ್ತೆ ಎಂದು ಹೇಳಿದ್ರೆ ನೀವು ನಿಜಕ್ಕೂ ಶಾರ್ಪ್. ನಿಮ್ಮ ಸಮಯ ಈಗ ಶುರು.
Brain Teaser: ನಿಮ್ಮ ಕಣ್ಣು ಸಖತ್ ಶಾರ್ಪ್ ಇದ್ಯಾ, ಹಾಗಿದ್ರೆ ಆಕ್ಟೋಪಸ್‌ಗಳ ನಡುವೆ ಅಡಗಿರುವ ಮೀನನ್ನು ಹುಡುಕಿ; ನಿಮಗಿದು ಚಾಲೆಂಜ್
ನಿಮ್ಮ ಕಣ್ಣು ಸಖತ್ ಶಾರ್ಪ್ ಅಂತ ನಿಮಗೆ ಅನ್ನಿಸುತ್ತಾ, ಇದನ್ನ ಪರೀಕ್ಷೆ ಮಾಡೋದು ಹೇಗೆ ಅಂತ ಯೋಚ್ನೆ ಮಾಡ್ತೀರಾ, ಹಾಗಾದ್ರೆ ನಿಮಗಾಗಿ ಇಲ್ಲಿದೆ ಒಂದು ಬ್ರೈನ್ ಟೀಸರ್. ಚಿತ್ರದಲ್ಲಿರುವ ಆಕ್ಟೋಪಸ್‌ಗಳ ನಡುವೆ ಅಡಗಿರುವ ಮೀನನ್ನು ಹುಡುಕುವುದು ನಿಮಗಿರುವ ಸವಾಲು.