Brain Teaser: 212=25, 214=47 ಆದ್ರೆ, 215 = ಎಷ್ಟು? ಗಣಿತದಲ್ಲಿ ನೀವು ಜಾಣರಾದ್ರೆ 10 ಸೆಕೆಂಡ್‌ನಲ್ಲಿ ಉತ್ತರ ಹೇಳಿ
ಗಣಿತದಲ್ಲಿ ನೀವು ಎಕ್ಸ್‌ಪರ್ಟ್ ಆದ್ರೆ ನಿಮಗಾಗಿ ಇಲ್ಲದೆ ಒಂದು ಹೊಸ ಮ್ಯಾಥ್ಸ್ ಪಜಲ್. ಇಲ್ಲಿರುವ ಸುಲಭ ಗಣಿತಕ್ಕೆ ನೀವು ಕ್ಯಾಲ್ಕುಲೇಟರ್ ಬಳಸದೇ 10 ಸೆಕೆಂಡ್‌ನಲ್ಲಿ ಉತ್ತರ ಹೇಳಬೇಕು. ನಿಮ್ಮ ಸಮಯ ಈಗ ಶುರು...
ಸಾಮಾಜಿಕ ಜಾಲತಾಣಗಳನ್ನು ಸ್ಕ್ರೋಲ್ ಮಾಡುವಾಗ ನಿಮಗೆ ಬ್ರೈನ್ ಟೀಸರ್‌ಗಳು ಕಣ್ಣಿಗೆ ಬಿದ್ದಿರಬಹುದು. ಇಂತಹ ಬ್ರೈನ್ ಟೀಸರ್‌ಗಳು ನಿಮಗೆ ಮೋಜು ನೀಡುವ ಜೊತೆಗೆ ಮೆದುಳನ್ನು ಚುರುಕು ಮಾಡುತ್ತವೆ. ಗಣಿತದ ಪಜಲ್‌ಗಳು ಮೆದುಳಿಗೆ ಸಾಕಷ್ಟು ಕೆಲಸ ನೀಡುತ್ತವೆ. ಗಣಿತ ಪ್ರಿಯರಿಗೆ ಪಜಲ್ ಬಿಡಿಸುವುದು ಎಂದರೆ ಎಲ್ಲಿಲ್ಲದ ಪ್ರೀತಿ. ನೀವು ಗಣಿತದಲ್ಲಿ ಪಂಟರಾದ್ರೆ ನಿಮಗಾಗಿ ಇಲ್ಲಿದೆ ಒಂದು ಗಣಿತದ ಪಜಲ್. ಈ ಬ್ರೈನ್ ಟೀಸರ್‌ಗೆ ಕ್ಯಾಲ್ಕುಲೆಟರ್ ಬಳಸದೇ 10 ಸೆಕೆಂಡ್‌ನಲ್ಲಿ ಉತ್ತರ ಹೇಳಬೇಕು.
ಎಕ್ಸ್‌ನಲ್ಲಿ ವೈರಲ್ ಆದ ಈ ಪೋಸ್ಟ್‌ನಲ್ಲಿ ಈ ರಸಪ್ರಶ್ನೆಗೆ ಉತ್ತರ ಕಂಡುಹಿಡಿಯಲು ಯಾರು ಟ್ರೈ ಮಾಡ್ತೀರಿ? ಎಂದು ಶೀರ್ಷಿಕೆ ಬರೆಯಲಾಗಿದೆ. 212=25, 213=36, 214= 47 ಆದರೆ 215= ಎಷ್ಟು? ಎಂದು ಇಲ್ಲಿರುವ ಪೋಸ್ಟ್‌ನಲ್ಲಿ ಪ್ರಶ್ನೆ ಕೇಳಲಾಗಿದೆ.
ಮೇ 16ರಂದು ಪೋಸ್ಟ್ ಮಾಡಲಾಗಿರುವ ಈ ಬ್ರೈನ್ ಟೀಸರ್ ಅನ್ನು ಈಗಾಗಲೇ 2000 ದಷ್ಟು ಮಂದಿ ವೀಕ್ಷಿಸಿದ್ದಾರೆ. ಕೆಲವರು ಲೈಕ್ ಮಾಡಿದ್ದರೆ, ಇನ್ನೂ ಕೆಲವರು ಕಾಮೆಂಟ್ ಮಾಡುವ ಮೂಲಕ ತಾವು ಕಂಡುಕೊಂಡ ಉತ್ತರವನ್ನು ತಿಳಿಸಿದ್ದಾರೆ. ಹಲವರು ಈ ಬ್ರೈನ್ ಟೀಸರ್‌ಗೆ ಉತ್ತರ 58 ಎಂದು ಕಾಮೆಂಟ್ ಮಾಡಿದ್ದಾರೆ. 2+1+2=5 25, 2+1+3=6 36, 2+1+4=7 47, 2+1+5=8 58 ಎಂದು ಎಕ್ಸ್ ಬಳಕೆದಾರೊಬ್ಬರು ಬಿಡಿಸಿ ತೋರಿಸಿದ್ದಾರೆ. ಹಾಗಾದ್ರೆ ಈ ಬ್ರೈನ್ ಟೀಸರ್‌ಗೆ ಉತ್ತರ 58 ಸರಿನಾ, ನೀವು ಬೇರೆ ಯಾವುದಾದ್ರೂ ಉತ್ತರ ಕಂಡುಕೊಂಡಿದ್ದೀರಾ? ಉತ್ತರ ಹೇಳಿ.
ಗಣಿತದ ಪಜಲ್‌ಗಳು ಮೆದುಳನ್ನು ಕ್ರಿಯಾಶೀಲವನ್ನಾಗಿಸುತ್ತವೆ. ಪಜಲ್‌ಗಳಿಗೆ ಉತ್ತರ ಹುಡುಕಲು ನಾವು ಸಾಕಷ್ಟು ಬುದ್ಧಿ ಉಪಯೋಗಿಸುತ್ತೇವೆ. ಅಲ್ಲದೇ ಇದು ಒಂದಷ್ಟು ಹೊತ್ತು ಮನಸ್ಸು ಹಿಡಿದಿಟ್ಟುಕೊಂಡು ಬೇರೆಲ್ಲಾ ಯೋಚನೆಗಳಿಂದ ದೂರಾಗುವಂತೆ ಮಾಡುತ್ತದೆ.
ಇದನ್ನೂ ಓದಿ
Brain Teaser: ಈ ಬಾಕ್ಸ್‌ನಲ್ಲಿ ಮಿಸ್ ಆಗಿರುವ ನಂಬರ್ ಯಾವುದು, ಕ್ಯಾಲ್ಕುಲೆಟರ್ ಬಳಸದೇ 20 ಸೆಕೆಂಡ್‌ನಲ್ಲಿ ಉತ್ತರ ಹೇಳಿ
ಎಕ್ಸ್‌ನಲ್ಲಿ ವೈರಲ್ ಆದ ಬ್ರೈನ್ ಟೀಸರ್‌ವೊಂದು ನಿಮ್ಮ ತಲೆಗೆ ಹುಳ ಬಿಡುವುದು ಖಂಡಿತ. ಇದೊಂದು ಗಣಿತ ಪಜಲ್ ಆಗಿದ್ದು, ಕ್ಯಾಲ್ಕುಲೇಟರ್ ಬಳಸದೇ ನೀವು ಇದಕ್ಕೆ 20 ಸೆಕೆಂಡ್‌ನಲ್ಲಿ ಉತ್ತರ ಕಂಡುಹಿಡಿಯಬೇಕು. ಹಾಗಾದ್ರೆ ಬಾಕ್ಸ್‌ನಲ್ಲಿ ಮಿಸ್ ಆಗಿರುವ ನಂಬರ್ ಯಾವುದು ತಿಳಿಸಿ.
Brain Teaser: ಈ ಬೀಗ ತೆಗೆಯಲು ಕೋಡ್ ಏನಿರಬಹುದು? ಬುದ್ಧಿವಂತರಾಗಿದ್ರೆ 10 ಸೆಕೆಂಡ್‌ನಲ್ಲಿ ಪತ್ತೆಹಚ್ಚಿ ನೋಡೋಣ
ಬುದ್ಧಿವಂತರಿಗಾಗಿ ಇಲ್ಲೊಂದು ಬ್ರೈನ್ ಟೀಸರ್ ಸವಾಲಿದೆ. ಚಿತ್ರದಲ್ಲಿ ಒಂದು ಬೀಗವಿದ್ದು ಆ ಬೀಗ ತೆಗೆಯಲು ಕೋಡ್ ಅನಿವಾರ್ಯವಾಗಿದೆ. ಕೆಳಗೆ ಕೊಟ್ಟಿರುವ ಲಿಂಕ್ ಗಮನಿಸಿ, ಈ ಬೀಗದ ಕೋಡ್ ಅನ್ನು 10 ಸೆಕೆಂಡ್‌ನಲ್ಲಿ ಕಂಡುಹಿಡಿಯಿರಿ. ನಿಮ್ಮ ಮೆದುಳಿಗೆ ಚಾಲೆಂಜ್ ಮಾಡುವ ಬ್ರೈನ್ ಟೀಸರ್ ಇದು.
(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)