Brain Teaser: 1+4=5, 2+5=12 ಆದ್ರೆ 8+11 = ಎಷ್ಟು? ಗಣಿತದಲ್ಲಿ ನೀವು ನಿಜಕ್ಕೂ ಪಂಟರಾದ್ರೆ 5 ಸೆಕೆಂಡ್ ಒಳಗೆ ಉತ್ತರ ಹೇಳಿ
ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ನೀಡುವ ಲಾಜಿಕಲ್ ಗಣಿತ ನಮ್ಮ ತಲೆಗೆ ಹುಳ ಬಿಟ್ಟ ಫೀಲಿಂಗ್ ನೀಡುವುದು ಸುಳ್ಳಲ್ಲ. ಅಂತಹ ಲಾಜಿಕಲ್ ಗಣಿತಗಳನ್ನೇ ಬ್ರೈನ್ ಟೀಸರ್‌ಗಳಲ್ಲೂ ಬಳಸಲಾಗುತ್ತದೆ. ಇಲ್ಲಿರುವ ಇಂದಿನ ಬ್ರೈನ್ ಟೀಸರ್ ಕೂಡ ಗಣಿತದ ಪಜಲ್ ಹೊಂದಿದೆ. ಇದಕ್ಕೆ 5 ಸೆಕೆಂಡ್ ಒಳಗೆ ಉತ್ತರ ಹೇಳಬೇಕು.
ಸಾಮಾಜಿಕ ಜಾಲತಾಣದಲ್ಲಿ ಬ್ರೈನ್ ಟೀಸರ್‌ವೊಂದು ವೈರಲ್ ಆಗುತ್ತಿದೆ. ಈ ಬ್ರೈನ್ ಟೀಸರ್‌ನಲ್ಲಿ ಗಣಿತ ಪಜಲ್‌ವೊಂದಿದೆ. ಈ ಪಜಲ್ ನೋಡೋಕೆ ಸುಲಭ ಎನ್ನಿಸಿದ್ರೂ ಇದಕ್ಕೆ ಉತ್ತರ ಕಂಡುಹಿಡಿಯುವುದು ಸುಲಭದ ಮಾತಲ್ಲ. ಈ ಲಾಜಿಕಲ್ ಗಣಿತ ನಿಮ್ಮ ಮೆದುಳಿಗೆ ಹುಳ ಬಿಡುವುದು ಖಂಡಿತ. ಗಣಿತದಲ್ಲಿ ನೀವು ಪಂಟರು ಅಂತಾದ್ರೆ 5 ಸೆಕೆಂಡ್ ಒಳಗೆ ಈ ಗಣಿತದ ಪಜಲ್‌ಗೆ ಉತ್ತರವೇನು ಎಂದು ಹೇಳಬೇಕು.
@Rainmaker1973 ಎಂಬ ಟ್ವಿಟರ್ ಪುಟದಲ್ಲಿ ಈ ಬ್ರೈನ್ ಟೀಸರ್ ಅನ್ನು ಪೋಸ್ಟ್ ಮಾಡಲಾಗಿದೆ. ಈ ಕ್ಲಾಸಿಕಲ್ ಬ್ರೈನ್ ಟೀಸರ್‌ಗೆ ಉತ್ತರ ಕಂಡುಹಿಡಿಯಲು ನಿಮ್ಮಿಂದ ಸಾಧ್ಯವೇ? ಎಂದು ಇದರಲ್ಲಿ ಪ್ರಶ್ನೆ ಕೇಳಲಾಗಿದೆ. 1+4=5, 2+5= 12, 3+6=21 ಆದ್ರೆ, 8+11= ಎಷ್ಟು? ಎಂದು ಈ ಗಣಿತದ ಪಜಲ್‌ನಲ್ಲಿ ಪ್ರಶ್ನೆ ಕೇಳಲಾಗಿದೆ.
ಜೂನ್ 23 ರಂದು ಟ್ವಿಟರ್‌ನಲ್ಲಿ ಹಂಚಿಕೊಳ್ಳಲಾದ ಬ್ರೈನ್ ಟೀಸರ್ ಇದಾಗಿದೆ. ಈಗಾಗಲೇ 4 ಸಾವಿರಕ್ಕೂ ಅಧಿಕ ಮಂದಿ ಈ ಬ್ರೈನ್ ಟೀಸರ್ ಅನ್ನು ವೀಕ್ಷಿಸಿದ್ದಾರೆ. ಹಲವರು ಕಾಮೆಂಟ್ ಮಾಡುವ ಮೂಲಕ ಉತ್ತರ ಕಂಡುಕೊಂಡಿದ್ದಾರೆ.
ʼನನ್ನ ಉತ್ತರ 96, ಚಾಪ್‌ಜಿಪಿಟಿಯಲ್ಲಿ ಉತ್ತರ 40 ಎಂದು ತೋರಿಸಿತು. ಎರಡೂ ಉತ್ತರ ಸರಿʼ ಎಂದು ಟ್ವಿಟರ್ ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ.
1 + 4(1) = 5, 2 + 5(2) = 12, 3 + 6(3) = 21, 8 + 11(4) = 52 ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ. 92 ಅಥವಾ 96 ಎಂದು ಮೂರನೇ ವ್ಯಕ್ತಿ ಕಾಮೆಂಟ್ ಮಾಡಿದ್ದಾರೆ. 8*11=88 ಎಂದು ನಾಲ್ಕನೇ ವ್ಯಕ್ತಿ ಕಾಮೆಂಟ್ ಮಾಡಿದ್ದಾರೆ. 40,96,88,129,888 ಹೀಗೆ ಒಬ್ಬೊಬ್ಬರು ಒಂದೊಂದು ರೀತಿ ಕಾಮೆಂಟ್ ಮಾಡಿದ್ದಾರೆ. ಹಾಗಾದರೆ ಈ ಬ್ರೈನ್ ಟೀಸರ್‌ಗೆ ನಿಮ್ಮ ಉತ್ತರವೇನು?
ಈ ಬ್ರೈನ್ ಟೀಸರ್‌ಗಳನ್ನೂ ಓದಿ
Brain Teaser: 4 ಚೌಕ ಕೂಡಿಸಿದ್ರೆ 5 ಆದ್ರೆ, 9 ಚೌಕ ಸೇರಿ ಎಷ್ಟಾಗುತ್ತೆ? ನಿಮ್ಮ ಮೆದುಳು ಚುರುಕಿದ್ರೆ 10 ಸೆಕೆಂಡ್‌ನಲ್ಲಿ ಉತ್ತರ ಹೇಳಿ
ಟ್ವಿಟರ್‌ನಲ್ಲಿ ವೈರಲ್ ಆದ ಬ್ರೈನ್ ಟೀಸರ್‌ವೊಂದು ನಿಮ್ಮ ಮೆದುಳಿಗೆ ಹುಳ ಬಿಡುವುದು ಖಂಡಿತ. ಲಾಜಿಕಲ್ ಗಣಿತ ಬಲ್ಲವರಷ್ಟೇ ಈ ಬ್ರೈನ್ ಟೀಸರ್‌ಗೆ ಉತ್ತರ ಹೇಳಲು ಸಾಧ್ಯ. ನಿಮ್ಮ ಮೆದುಳು ಸಖತ್ ಶಾರ್ಪ ಅನ್ನಿಸಿದ್ರೆ ಈ ಬ್ರೈನ್ ಟೀಸರ್‌ಗೆ ತಟ್ಟಂತ ಉತ್ತರ ಹೇಳಿ. ನಿಮ್ಮ ಸಮಯ ಈಗ ಶುರು.
Brain Teaser: A+A+A=39 ಆದ್ರೆ, A+B+C= ಎಷ್ಟು? ಗಣಿತದಲ್ಲಿ ನೀವು ಎಕ್ಸ್‌ಪರ್ಟ್ ಆದ್ರೆ 10 ಸೆಕೆಂಡ್‌ನಲ್ಲಿ ಉತ್ತರ ಹೇಳಿ
ಗಣಿತದ ಪಜಲ್ ಬಿಡಿಸೋದು ನೋಡಿದಷ್ಟು ಸುಲಭವಲ್ಲ. ಅದಕ್ಕೆ ಮೆದುಳು ಚುರುಕಾಗಿ ಕೆಲಸ ಮಾಡಬೇಕು. ಬುದ್ಧಿ ಥಟ್ಟಂತ ಗ್ರಹಿಸಬೇಕು. ನಿಮ್ಮ ಮೆದುಳು ಗಣಿತದ ಪಜಲ್ ಬಿಡಿಸುವುದರಲ್ಲಿ ಶಾರ್ಪ್ ಅಂತ ನಿಮಗೆ ಅನ್ನಿಸಿದ್ರೆ ಈ ಬ್ರೈನ್ ಟೀಸರ್‌ಗೆ 10 ಸೆಕೆಂಡ್‌ನಲ್ಲಿ ಉತ್ತರ ಹೇಳಿ.