Brain Teaser: ಎರಡಕ್ಕೆ ಮೂರು ಕೂಡಿಸಿ, ನಾಲ್ಕರಿಂದ ಗುಣಿಸಿದ್ರೆ ಉತ್ತರ 14 ಅಥವಾ 20? 5 ಸೆಕೆಂಡ್‌ನಲ್ಲಿ ಹೇಳಿ
ಕನ್ನಡ ಸುದ್ದಿ  /  ಜೀವನಶೈಲಿ  /  Brain Teaser: ಎರಡಕ್ಕೆ ಮೂರು ಕೂಡಿಸಿ, ನಾಲ್ಕರಿಂದ ಗುಣಿಸಿದ್ರೆ ಉತ್ತರ 14 ಅಥವಾ 20? 5 ಸೆಕೆಂಡ್‌ನಲ್ಲಿ ಹೇಳಿ

Brain Teaser: ಎರಡಕ್ಕೆ ಮೂರು ಕೂಡಿಸಿ, ನಾಲ್ಕರಿಂದ ಗುಣಿಸಿದ್ರೆ ಉತ್ತರ 14 ಅಥವಾ 20? 5 ಸೆಕೆಂಡ್‌ನಲ್ಲಿ ಹೇಳಿ

ಗಣಿತದಲ್ಲಿ ನೀವು ಎಷ್ಟೇ ಎಕ್ಸ್‌ಪರ್ಟ್ ಆದ್ರೂ ಕೆಲವೊಂದು ಪ‍್ರಶ್ನೆಗಳು ನಿಮ್ಮ ತಲೆಗೆ ಹುಳ ಬಿಡದೇ ಇರುವುದಿಲ್ಲ. ಇಲ್ಲೊಂದು ಅಂಥದ್ದೇ ಪ್ರಶ್ನೆ ಇದೆ. ಪ್ರಶ್ನೆಗೆ ನೀವು ಕೇವಲ 5 ಸೆಕೆಂಡ್‌ನಲ್ಲಿ ಉತ್ತರ ಹೇಳಬೇಕು. ಈ ಪ್ರಶ್ನೆಯ ಉತ್ತರದಲ್ಲಿ ಎರಡು ಆಯ್ಕೆಗಳನ್ನು ನೀಡಲಾಗಿದೆ. ಇದರಲ್ಲಿ ಯಾವುದು ಸರಿ ಉತ್ತರ ಎಂದು ಹೇಳಬೇಕಾಗಿರುವುದು ನಿಮಗಿರುವ ಸವಾಲು.

ಬ್ರೈನ್ ಟೀಸರ್
ಬ್ರೈನ್ ಟೀಸರ್

ಇಂದಿನ ಬ್ರೈನ್ ಟೀಸರ್‌ನಲ್ಲಿರುವ ಗಣಿತದ ಪಜಲ್‌ ಉತ್ತರ ಹೇಳಲು ಸುಲಭವಾಗಿ ಕಂಡರೂ ಖಂಡಿತ ಇದು ಸುಲಭವಲ್ಲ. ಇಲ್ಲಿರುವುದು ಅತ್ಯಂತ ಸರಳ ಗಣಿತದ ಪಜಲ್‌. ಪ್ರಾಥಮಿಕ ಶಾಲಾ ಮಟ್ಟದ ಪ್ರಶ್ನೆ ಇದಾಗಿದ್ದು ಇದಕ್ಕೆ ಉತ್ತರ ಹೇಳುವುದು ಖಂಡಿತ ಸುಲಭವಾಗಿರುವುದಿಲ್ಲ. ಈ ಪ್ರಶ್ನೆಗೆ ಎರಡು ಉತ್ತರವನ್ನೂ ಕೂಡ ನೀಡಲಾಗಿದೆ. ಇದರಲ್ಲಿ ಯಾವುದು ಸರಿ ಉತ್ತರ ಎಂದು ಕಂಡುಹಿಡಿದು ಹೇಳಬೇಕಾಗಿರುವುದು ನಿಮಗಿರುವ ಸವಾಲು.

ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನೀವು ಎದುರಿಸಿದ್ದರೆ ಇಂತಹ ಪ್ರಶ್ನೆಗಳನ್ನು ನೀವು ಗಮನಿಸಿ ಇರುತ್ತೀರಿ. ಇದು ನೋಡಲು ಸುಲಭವಾಗಿದ್ದರೂ ಉತ್ತರ ಹೇಳುವುದು ಟ್ರಿಕ್ಕಿಯಾಗಿರುತ್ತದೆ. ಇದರಿಂದ ಬ್ರೈನ್ ಟೀಸರ್‌ನಲ್ಲಿ ಇರುವ ಮ್ಯಾಥ್ಸ್ ಪಜಲ್ ಕೇವಲ ಕೂಡಿಸಿ, ಗುಣಿಸುವ ಲೆಕ್ಕಾಚಾರವಾಗಿದೆ.

@Brainy_Bits_Hub ಎನ್ನುವ ಟ್ವಿಟರ್ ಪುಟದಲ್ಲಿ ಈ ಬ್ರೈನ್ ಟೀಸರ್ ಅನ್ನು ಹಂಚಿಕೊಳ್ಳಲಾಗಿದೆ. ಚಿತ್ರದಲ್ಲಿ 2+3*4 ಎಷ್ಟು ಎಂದು ಪ್ರಶ್ನೆ ಕೇಳಲಾಗಿದ್ದು ಇದಕ್ಕೆ 14, 20 ಎಂಬ ಉತ್ತರ ಆಯ್ಕೆಗಳನ್ನೂ ನೀಡಲಾಗಿದೆ. ನಿಮಗಿರುವ ಸವಾಲು ಕೇವಲ 5 ಸೆಕೆಂಡ್‌ನಲ್ಲಿ ಈ ಪ್ರಶ್ನೆಗೆ ಉತ್ತರ ಕಂಡುಹಿಡಿಯುವುದು.

ಅಕ್ಟೋಬರ್ 5 ರಂದು ಈ ಬ್ರೈನ್ ಟೀಸರ್ ಅನ್ನು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಲಾಗಿತ್ತು. ಈಗಾಗಲೇ 11 ಸಾವಿರಕ್ಕೂ ಅಧಿಕ ಮಂದಿ ಈ ಪೋಸ್ಟ್ ಅನ್ನು ವೀಕ್ಷಿಸಿದ್ದಾರೆ. 120ಕ್ಕೂ ಹೆಚ್ಚು ಜನ ಲೈಕ್ ಮಾಡಿದ್ದರೆ, 490 ಮಂದಿ ಕಾಮೆಂಟ್ ಮಾಡಿ ತಮ್ಮ ಉತ್ತರವನ್ನು ತಿಳಿಸಿದ್ದಾರೆ.

ಬಹುತೇಕರು ಪ್ರಶ್ನೆಗೆ ಉತ್ತರ 14 ಎಂದರೆ ಕಾಮೆಂಟ್ ಮಾಡಿದ್ದಾರೆ. ಕೆಲವರು 20 ಎಂದಿದ್ದಾರೆ. ಹಾಗಾದರೆ 2+3*4= 14 ಅಥವಾ 20 ಯಾವುದು ಸರಿಯಾದ ಉತ್ತಮ ಹೇಳಿ.

ಈ ಬ್ರೈನ್ ಟೀಸರ್‌ಗಳನ್ನೂ ಓದಿ

Brain Teaser: ನಿಮ್ಮ ಕಣ್ಣಿಗೊಂದು ಪರೀಕ್ಷೆ, 20 ಸೆಕೆಂಡ್‌ನಲ್ಲಿ ಹಸಿರು ಬಣ್ಣದ ವೃತ್ತದಲ್ಲಿ ಅಡಗಿರುವ ನಂಬರ್ ಯಾವುದು ಕಂಡುಹಿಡಿಯಿರಿ

ನಿಮ್ಮ ಕಣ್ಣು ಸಖತ್ ಶಾರ್ಪ್ ಅಂತ ನಿಮಗೆ ಅನ್ನಿಸ್ತಾ ಇದ್ಯಾ, ಹಾಗಾದರೆ ನಿಮಗೊಂದು ಚಾಲೆಂಜ್ ಇದೆ. ಈ ಬ್ರೈನ್‌ ಟೀಸರ್‌ನಲ್ಲಿ ಇರುವ ಹಸಿರು ಬಣ್ಣದ ವೃತ್ತದ ಒಳಗೆ ಬರೆದಿರುವ ನಂಬರ್ ಯಾವುದು ಎಂದು 20 ಸೆಕೆಂಡ್‌ನಲ್ಲಿ ನೀವು ಕಂಡುಹಿಡಿಯಬೇಕು, ಕಣ್ಣು ನೋವು ಬಂದರೆ ನಾವು ಜವಾಬ್ದಾರರಲ್ಲ.

Brain Teaser: ನಿಮ್ಮ ಮೆದುಳಿಗೊಂದು ಸವಾಲ್‌, ಚಿತ್ರದಲ್ಲಿ ಮಿಸ್ ಆಗಿರುವ ನಂಬರ್ ಯಾವುದು, 15 ಸೆಕೆಂಡ್ ಒಳಗೆ ಉತ್ತರ ಹೇಳಿ

ಗಣಿತದಲ್ಲಿ ನೀವು ಜಾಣರು ಅಂತಾದ್ರೆ ನಿಮಗಾಗಿ ಇ‍ಲ್ಲೊಂದು ಸವಾಲಿದೆ. ಈ ಚಿತ್ರದಲ್ಲಿ ಒಂದು ನಂಬರ್ ಮಿಸ್ ಆಗಿದೆ. ಅದು ಯಾವುದು ಎಂದು ಕಂಡುಹಿಡಿಯಬೇಕು. ನಿಮ್ಮ ಮೆದುಳು ಶಾರ್ಪ್ ಇದ್ರೆ ಕೇವಲ 15 ಸೆಕೆಂಡ್‌ ಒಳಗೆ ಉತ್ತರ ಹೇಳಬೇಕು. ನಿಮ್ಮ ಸಮಯ ಈಗ ಶುರು, ಟ್ರೈ ಮಾಡಿ.