Brain Teaser: ಗಣಿತದಲ್ಲಿ ಪಂಟರು ಅನ್ನೋರು ಇಲ್ನೋಡಿ, ಇಲ್ಲಿರುವ ಪಜಲ್‌ಗೆ 10 ಸೆಕೆಂಡ್‌ನಲ್ಲಿ ಉತ್ತರ ಹೇಳೋಕಾಗುತ್ತಾ ಟ್ರೈ ಮಾಡಿ
ಗಣಿತ ಎಕ್ಸ್‌ಪರ್ಟ್ಸ್‌ಗಳಿಗೆ ಗಣಿತದ ಪಜಲ್‌ಗಳನ್ನು ಬಿಡಿಸುವುದು ಎಂದರೆ ಹಾಲು ಕುಡಿದಷ್ಟು ಸುಲಭ. ನೀವು ಗಣಿತಪ್ರೇಮಿಯಾಗಿದ್ರೆ ನಿಮಗಾಗಿ ಇಲ್ಲೊಂದು ಪಜಲ್ ಇದೆ. ಇದಕ್ಕೆ 10 ಸೆಕೆಂಡ್ ಒಳಗೆ ಉತ್ತರ ಕಂಡುಹಿಡಿಯಬೇಕು. ಇದು ನಿಮ್ಮಿಂದ ಸಾಧ್ಯವೇ ಪ್ರಯತ್ನಿಸಿ ನೋಡಿ.
ಸಾಮಾಜಿಕ ಜಾಲತಾಣ ಟ್ವಿಟರ್‌ನಲ್ಲಿ ಆಗಾಗ ಗಣಿತದ ಪಜಲ್‌ಗಳು ವೈರಲ್ ಆಗುತ್ತಿರುತ್ತವೆ. ಇಂತಹ ಪಜಲ್‌ಗಳು ನಮ್ಮ ಮೆದುಳಿಗೆ ಹುಳ ಬಿಡುವಂತಿರುವುದು ಸುಳ್ಳಲ್ಲ. ಇಲ್ಲೊಂದು ಅಂಥದ್ದೇ ಬ್ರೈನ್ ಟೀಸರ್ ಇದೆ. ಮೇಲ್ನೋಟಕ್ಕೆ ಕಂಡಾಗ ಸುಲಭ ಗಣಿತದಂತೆ ಕಾಣುವ ಈ ಪಜಲ್‌ಗೆ ಉತ್ತರ ಹೇಳೋದು ಖಂಡಿತ ಸುಲಭವಲ್ಲ.
ನೀವು ಗಣಿತಪ್ರೇಮಿಯಾಗಿದ್ದು ಗಣಿತದ ಪಜಲ್‌ಗೆ ಉತ್ತರ ಹೇಳುವ ಬಯಕೆ ನಿಮ್ಮಲ್ಲಿದ್ದರೆ ಈ ಪಜಲ್ ಅನ್ನು ಒಮ್ಮೆ ನೋಡಿ. ಇದು ನಿಮ್ಮ ಜಾಣ್ಮೆಯನ್ನು ಪರೀಕ್ಷೆ ಮಾಡುವಂತೆ ಇರುವುದು ಸುಳ್ಳಲ್ಲ. ಈ ಬ್ರೈನ್ ಟೀಸರ್‌ಗೆ ಕೇವಲ 10 ಸೆಕೆಂಡ್ ಒಳಗೆ ಉತ್ತರ ಹೇಳಬೇಕಾಗಿರುವುದು ನಿಮಗಿರುವ ಸವಾಲು.
ಇಂತಹ ಬ್ರೈನ್ ಟೀಸರ್‌ಗಳು ನಮ್ಮ ಮೆದುಳಿಗೆ ಸಾಕಷ್ಟು ಕೆಲಸ ಕೊಡುತ್ತವೆ, ನಮ್ಮಲ್ಲಿ ಯೋಚನಾಶಕ್ತಿ ವೃದ್ಧಿಯಾಗುವಂತೆ ಮಾಡುತ್ತವೆ. ನಮ್ಮಲ್ಲಿ ಸಮಸ್ಯೆ ಹರಿಸುವ ಗುಣವನ್ನು ಹಾಗೂ ಕೌಶಲವನ್ನು ಹೆಚ್ಚಿಸುತ್ತವೆ. ಹಾಗಾದರೆ ಇಂದಿನ ಬ್ರೈನ್ ಟೀಸರ್‌ನಲ್ಲಿ ಏನಿದೆ ನೋಡಿ.
Train your Brain ಎಂಬ ಟ್ವಿಟರ್ ಪುಟದಲ್ಲಿ ಹಂಚಿಕೊಳ್ಳಲಾದ ಈ ಬ್ರೈನ್ ಟೀಸರ್‌ನಲ್ಲಿ X+x= 60,Y+Y=20, Z+Z= 4 ಆದ್ರೆ X*Y/z=? ಎಂಬುದು ಪ್ರಶ್ನೆಯಾಗಿದೆ. ಈ ಮೆದುಳಿಗೆ ಹುಳ ಬಿಡುವ ಪ್ರಶ್ನೆಗೆ ನೀವು ಉತ್ತರ ಹೇಳಬೇಕಾಗಿದೆ.
ಆಗಸ್ಟ್ 25 ರಂದು ಪೋಸ್ಟ್ ಮಾಡಲಾದ ಈ ಬ್ರೈನ್ ಟೀಸರ್ ಅನ್ನು ಈಗಾಗಲೇ 16ಸಾವಿರಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ. 160ಕ್ಕೂ ಹೆಚ್ಚು ಮಂದಿ ಲೈಕ್ ಮಾಡಿದ್ದಾರೆ. 500ಕ್ಕೂ ಹೆಚ್ಚು ಮಂದಿ ತಾವು ಕಂಡುಕೊಂಡ ಉತ್ತರವನ್ನು ಕಾಮೆಂಟ್ ಮಾಡಿದ್ದಾರೆ. ಇದರಲ್ಲಿ ಒಬ್ಬೊಬ್ಬರು ಒಂದೊಂದು ರೀತಿ ಉತ್ತರ ಹೇಳಿದ್ದಾರೆ. ಕೆಲವರು 35 ಎಂದರೆ ಕೆಲವರು 20 ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೂ ಕೆಲವರು 351, 1, 2 ಎಂತೆಲ್ಲಾ ತಮಗೆ ಅನ್ನಿಸಿದ ಉತ್ತರ ಹೇಳಿದ್ದಾರೆ. ಹಾಗಾದರೆ ಈ ಬ್ರೈನ್ ಟೀಸರ್‌ಗೆ ನಿಮ್ಮ ಉತ್ತರವೇನು.
ಇದನ್ನೂ ಓದಿ
Brain Teaser: ಚಿತ್ರದಲ್ಲಿ ಭಿನ್ನವಾಗಿರುವ ಕಪ್ ಯಾವುದು, ನಿಮ್ಮ ಕಣ್ಣು ಸೂಕ್ಷ್ಮವಾಗಿದ್ರೆ 5 ಸೆಕೆಂಡ್ ಒಳಗೆ ಹುಡುಕಿ
ನಿಮ್ಮ ಕಣ್ಣಿನ ದೃಷ್ಟಿ ಬಹಳ ಸೂಕ್ಷ್ಮವಾಗಿದೆ ಎಂದು ನಿಮಗೆ ಅನ್ನಿಸ್ತಾ ಇದ್ಯಾ, ಹಾಗಾದ್ರೆ ನಿಮಗಾಗಿ ಇಲ್ಲೊಂದು ಬ್ರೈನ್ ಟೀಸರ್ ಚಿತ್ರವಿದೆ. ಇದರಲ್ಲಿ ಒಂದಿಷ್ಟು ಕಪ್‌ಗಳಿದ್ದು ಒಂದೇ ಒಂದು ಕಪ್ ಮಾತ್ರ ಭಿನ್ನವಾಗಿದೆ, ಅದು ಯಾವುದು ಎಂದು 5 ಸೆಕೆಂಡ್ ಒಳಗೆ ಕಂಡುಹಿಡಿಯಬೇಕು.