Brain Teaser: 4+3=14, 6+1=28 ಆದ್ರೆ 8+6 = ಎಷ್ಟು? ಗಣಿತ ನಿಮ್ಮ ಫೇವರಿಟ್ ಸಬ್ಜೆಕ್ಟ್ ಆಗಿದ್ರೆ 10 ಸೆಕೆಂಡ್ ಒಳಗೆ ಉತ್ತರ ಹೇಳಿ
ಸಾಮಾಜಿಕ ಜಾಲತಾಣ ಅಂದ್ರೆ ಕೇವಲ ಮೋಜು ನೀಡುವುದು ಮಾತ್ರವಲ್ಲ, ಜ್ಞಾನವನ್ನೂ ಹೆಚ್ಚಿಸುತ್ತದೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಬ್ರೈನ್ ಟೀಸರ್‌ಗಳು ನಮ್ಮ ಮೆದುಳಿಗೆ ಸಾಕಷ್ಟು ಕೆಲಸ ನೀಡುತ್ತವೆ. ನಮ್ಮಲ್ಲಿ ಸಮಸ್ಯೆ ಪರಿಹರಿಸುವ ಗುಣವನ್ನು ಬೆಳೆಸುತ್ತವೆ. ಅಂತಹ ಬ್ರೈನ್ ಟೀಸರ್‌ವೊಂದು ಇಲ್ಲಿದೆ.
ಶಾಲಾ ದಿನಗಳಲ್ಲಿ ಓದುವಾಗ ಗಣಿತ ನಿಮ್ಮ ಫೇವರಿಟ್ ಸಬ್ಜೆಕ್ಟ್ ಆಗಿತ್ತಾ, ಗಣಿತದ ಸೂತ್ರಗಳನ್ನು ನೀವು ಪಟ್‌ಪಟ್ ಅಂತ ಬಿಡಿಸ್ತಾ ಇದ್ರಾ? ಗಣಿತದಲ್ಲಿ ನಿಮಗೆ ಯಾವಾಗ್ಲೂ ಔಟ್ ಆಫ್ ಔಟ್ ಬರ್ತಾ ಇತ್ತಾ, ಹಾಗಾದ್ರೆ ನಿಮ್ಮಂತಹ ಬುದ್ಧಿವಂತರಿಗಾಗಿ ಇಲ್ಲೊಂದು ಗಣಿತದ ಪಜಲ್ ಇದೆ. ಇದನ್ನು ನೋಡೋಕೆ ಸುಲಭ ಅನ್ನಿಸಿದ್ರೂ ಮೆದುಳು ಉಪಯೋಗಿಸದೇ ಈ ಬ್ರೈನ್ ಟೀಸರ್‌ಗೆ ನೀವು ಉತ್ತರ ಕಂಡುಹಿಡಿಯುವುದು ಕಷ್ಟವಾಗುತ್ತದೆ. ಈ ಲಾಜಿಕಲ್ ಗಣಿತಕ್ಕೆ ಕೇವಲ 10 ಸೆಕೆಂಡ್ ಒಳಗೆ ಉತ್ತರ ಕಂಡುಹಿಡಿಯಲು ನಿಮ್ಮಿಂದ ಸಾಧ್ಯ ಆದ್ರೆ ನೀವು ಖಂಡಿತ ಗಣಿತದಲ್ಲಿ ಎಕ್ಸ್‌ಪರ್ಟ್.
ಇನ್‌ಸ್ಟಾಗ್ರಾಂ, ಟ್ವಿಟರ್‌ನಂತಹ ಸಾಮಾಜಿಕ ತಾಣಗಳಲ್ಲಿ ಇಂತಹ ಬ್ರೈನ್ ಟೀಸರ್‌ಗಳು ಸಾಕಷ್ಟು ಹರಿದಾಡುತ್ತಲೇ ಇರುತ್ತವೆ. ಇವುಗಳಿಗೆ ಉತ್ತರ ಕಂಡುಕೊಳ್ಳಲು ನಾವು ಬುದ್ಧಿ ಮಾಡಬೇಕು. ಆದರೂ ಇವು ಮೋಜಿನ ಜೊತೆಗೆ ನಮ್ಮ ಗಮನಶಕ್ತಿ ಹೆಚ್ಚಿಸಿ, ಮೆದುಳನ್ನು ಚುರುಕಾಗಿಸುವ ಕೆಲಸ ಮಾಡುತ್ತವೆ.
@brain_teaser_1 ಎಂಬ ಎಕ್ಸ್ ಪುಟದಲ್ಲಿ ವೈರಲ್ ಆಗಿರುವ ಬ್ರೈನ್ ಟೀಸರ್ ಮ್ಯಾಥ್ಸ್ ಪಜಲ್ ಇದಾಗಿದೆ. #maths ಎಂಬ ಹ್ಯಾಷ್‌ಟ್ಯಾಗ್ ಬರೆದುಕೊಂಡು ಇದನ್ನು ಹಂಚಿಕೊಳ್ಳಲಾಗಿದೆ.
ಈ ಚಿತ್ರದಲ್ಲಿ 4+3=14, 5+2=21, 6+1=28 ಆದ್ರೆ, 8+6= ಎಷ್ಟು ಎಂದು ಪ್ರಶ್ನೆ ಕೇಳಲಾಗಿದೆ.
ಜುಲೈ 8ರಂದು ಈ ಬ್ರೈನ್ ಟೀಸರ್ ಅನ್ನು ಟ್ವಿಟರ್ ಅಲ್ಲಿ ಪೋಸ್ಟ್ ಮಾಡಲಾಗಿದ್ದು, ಈಗಾಗಲೇ 2500ಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ. 45ಕ್ಕೂ ಹೆಚ್ಚು ಜನ ಇದಕ್ಕೆ ಕಾಮೆಂಟ್ ಮಾಡಿದ್ದಾರೆ. ಹಲವರು ಲೈಕ್ಸ್ ಕೂಡ ಮಾಡಿದ್ದಾರೆ.
ಈ ಬ್ರೈನ್ ಟೀಸರ್‌ಗೆ ಟ್ವಿಟರ್ ಬಳಕೆದಾರರು ಒಬ್ಬೊಬ್ಬರು ಒಂದೊಂದು ರೀತಿ ಕಾಮೆಂಟ್ ಮಾಡಿದ್ದಾರೆ. 84,70,42,14 ಹೀಗೆ ಹಲವು ಉತ್ತರಗಳನ್ನು ಹೇಳಿದ್ದಾರೆ. ಆದರೆ ಬಹುತೇಕರು 84 ಉತ್ತರ ಎಂದು ಕಾಮೆಂಟ್ ಮಾಡಿದ್ದಾರೆ. ನೆಟ್ಟಿಗರನ್ನು ಗೊಂದಲಕ್ಕೆ ಸಿಲುಕಿಸಿದ ಈ ಬ್ರೈನ್ ಟೀಸರ್‌ಗೆ ನೀವು ಉತ್ತರ ಕಂಡುಕೊಳ್ಳಲು ಪ್ರಯತ್ನಿಸಿ. ಇದನ್ನು ನಿಮ್ಮ ಸ್ನೇಹಿತರು ಹಾಗೂ ಸಂಬಂಧಿಕರ ಜೊತೆಗೆ ಹಂಚಿಕೊಳ್ಳಿ. ಅವರ ಬುದ್ಧಿವಂತಿಕೆಯನ್ನೂ ಪರೀಕ್ಷೆ ಮಾಡಿ.
ಈ ಬ್ರೈನ್ ಟೀಸರ್‌ಗಳನ್ನೂ ಓದಿ
Brain Teaser: 1+4=5, 2+5=12, 8+11= ಎಷ್ಟು? ಈ ಗಣಿತದ ಪಜಲ್‌ಗೆ 5 ಸೆಕೆಂಡ್ ಒಳಗೆ ಉತ್ತರ ಹೇಳಿ
ಗಣಿತದ ಪಜಲ್‌ಗಳು ಮೆದುಳಿಗೆ ಹುಳ ಬಿಡೋದು ಖಂಡಿತ. ಕೆಲವೊಮ್ಮೆ ಕ್ಯಾಲ್ಕುಲೆಟರ್ ಇದ್ರೂ ಉತ್ತರ ಹೇಳೋಕೆ ಕಷ್ಟ ಆಗುತ್ತೆ. ಅಂತಹ ಪಜಲ್‌ಗಳು ಬ್ರೈನ್ ಟೀಸರ್ ರೂಪದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುತ್ತವೆ. ಇಲ್ಲೊಂದು ಅಂಥದ್ದೇ ಪಜಲ್ ಇದೆ. ಇದಕ್ಕೆ 5 ಸೆಕೆಂಡ್ ಒಳಗೆ ಉತ್ತರ ಹೇಳೋಕೆ ನಿಮ್ಮಿಂದ ಸಾಧ್ಯವೇ ನೋಡಿ.
Brain Teaser: Aಯ ಮೌಲ್ಯವೆಷ್ಟು? ಗಣಿತದಲ್ಲಿ ನೀವು ಜೀನಿಯಸ್ ಅಂತಾದ್ರೆ ಈ ಸೂತ್ರಕ್ಕೆ ಥಟ್ಟಂತ ಉತ್ತರ ಹೇಳಿ
ಶಾಲಾ ದಿನಗಳಲ್ಲಿ ಗಣಿತದ ಸಮೀಕರಣಗಳು ನಮಗೆ ಭಯ ಹುಟ್ಟಿಸಿರುವುದು ಸುಳ್ಳಲ್ಲ. ಹಾಗಂತ ಇವು ಎಲ್ಲರಿಗೂ ಕಬ್ಬಿಣ ಕಡಲೆಯಲ್ಲ. ಗಣಿತ ಎಕ್ಸ್‌ಪರ್ಟ್‌ಗಳು ಎಂತಹ ಇಕ್ವೇಷನ್‌ಗಳನ್ನಾದ್ರೂ ಸುಲಭವಾಗಿ ಬಿಡಿಸುತ್ತಾರೆ. ಇಲ್ಲೊಂದು ಅಂಥದ್ದೇ ಸಮೀಕರಣವಿದೆ. ನೀವು ಗಣಿತ ಪ್ರೇಮಿಯಾದ್ರೆ ಇದಕ್ಕೆ ಉತ್ತರ ಹೇಳಲು ಪ್ರಯತ್ನಿಸಿ.