Brain Teaser: 3+4=28, 4+5=36 ಆದ್ರೆ 10+6= ಎಷ್ಟು? ಗಣಿತ ಪ್ರೇಮಿ ನೀವಾದ್ರೆ 10 ಸೆಕೆಂಡ್ ಒಳಗೆ ಉತ್ತರ ಹೇಳಿ-viral news brain teaser if you good at maths find the answer for this maths puzzle in 10 second social media viral rst ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  Brain Teaser: 3+4=28, 4+5=36 ಆದ್ರೆ 10+6= ಎಷ್ಟು? ಗಣಿತ ಪ್ರೇಮಿ ನೀವಾದ್ರೆ 10 ಸೆಕೆಂಡ್ ಒಳಗೆ ಉತ್ತರ ಹೇಳಿ

Brain Teaser: 3+4=28, 4+5=36 ಆದ್ರೆ 10+6= ಎಷ್ಟು? ಗಣಿತ ಪ್ರೇಮಿ ನೀವಾದ್ರೆ 10 ಸೆಕೆಂಡ್ ಒಳಗೆ ಉತ್ತರ ಹೇಳಿ

Brain Teaser: ಗಣಿತದಲ್ಲಿ ನೀವು ಸಖತ್ ಶಾರ್ಪ್ ಅಂತಾದ್ರೆ ನಿಮಗಾಗಿ ಇಲ್ಲೊಂದು ಬ್ರೈನ್ ಟೀಸರ್ ಚಿತ್ರವಿದೆ. ಇದರಲ್ಲಿ ಕೂಡಿಸುವ ಲೆಕ್ಕವಿದ್ದು ಇದಕ್ಕೆ 10 ಸೆಕೆಂಡ್ ಒಳಗೆ ನೀವು ಉತ್ತರ ಹೇಳಬೇಕು. ಹಾಗಾದರೆ 10+6 ಎಷ್ಟು ಥಟ್ಟಂತ ಹೇಳಿ.

ಬ್ರೈನ್ ಟೀಸರ್
ಬ್ರೈನ್ ಟೀಸರ್

Brain Teaser maths puzzle: ಗಣಿತದಲ್ಲಿ ನೀವೆಷ್ಟೇ ಶಾರ್ಪ್ ಇದ್ರು ಕೆಲವೊಂದು ಪಜಲ್‌ಗಳು ನಿಮ್ಮ ಮೆದುಳಿಗೆ ಹುಳ ಬಿಡುವಂತಿರುವುದು ಸುಳ್ಳಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುವ ಇಂತಹ ಪಜಲ್‌ಗಳು ನಮ್ಮ ಜಾಣ್ಮೆಗೆ ಸವಾಲು ಹಾಕುವಂತಿರುತ್ತವೆ. ಇಂತಹ ಪಜಲ್‌ವೊಂದು ಇಲ್ಲಿದೆ.

ಇಲ್ಲಿರುವುದು ನಿಮಗೆ ಸುಲಭದ ಗಣಿತ ಎನ್ನಿಸಬಹುದು. ಯಾಕೆಂದರೆ ಇದು ಬರಿ ಕೂಡಿಸುವ ಲೆಕ್ಕಾಚಾರ. ಆದರೆ ಇಲ್ಲಿ 3+4= 7 ಖಂಡಿತ ಆಗೊಲ್ಲ. ಹಾಗಾಗಿ ಈ ಲೆಕ್ಕ ನಿಮ್ಮನ್ನ ಕೊಂಚ ಗೊಂದಲಕ್ಕೆ ದೂಡುವುದು ಸುಳ್ಳಲ್ಲ. ಟ್ವಿಟರ್‌ನಲ್ಲಿ ವೈರಲ್ ಆದ ಈ ಪಜಲ್‌ಗೆ ನೀವು 10 ಸೆಕೆಂಡ್‌ ಒಳಗೆ ಉತ್ತರ ಹೇಳಬೇಕು. ನಿಮ್ಮಿಂದ ಸಾಧ್ಯವೇ ಪ್ರಯತ್ನಿಸಿ.

@Brainy_Bits_Hub ಎಂಬ ಟ್ವಿಟರ್ ಪುಟದಲ್ಲಿ ಈ ಬ್ರೈನ್ ಟೀಸರ್‌ ಅನ್ನು ಪೋಸ್ಟ್ ಮಾಡಲಾಗಿದೆ. ಇದರಲ್ಲಿ ಒಂದು ಗಣಿತದ ಪಜಲ್ ಇದೆ. ಮಿಸ್ ಆಗಿರುವ ನಂಬರ್ ಕಂಡುಹಿಡಿಯಿರಿ ಎಂದು ಶೀರ್ಷಿಕೆ ಬರೆದುಕೊಂಡು ಇದನ್ನು ಹಂಚಿಕೊಳ್ಳಲಾಗಿದೆ. ಈ ಬ್ರೈನ್ ಟೀಸರ್‌ನಲ್ಲಿ 3+4=28, 4+5=36 ಆದ್ರೆ, 10+6 = ಎಷ್ಟು ಎಂಬ ಪ್ರಶ್ನೆ ಕೇಳಲಾಗಿದೆ. ಗಣಿತದಲ್ಲಿ ಶಾರ್ಪ್ ಅನ್ನೋರು ಕೇವಲ 10 ಸೆಕೆಂಡ್ ಒಳಗೆ ಈ ಬ್ರೈನ್ ಟೀಸರ್‌ಗೆ ಉತ್ತರ ಕಂಡುಹಿಡಿಯಬೇಕು.

ಸೆಪ್ಟೆಂಬರ್ 1 ರಂದು ಪೋಸ್ಟ್ ಮಾಡಲಾದ ಈ ಬ್ರೈನ್ ಟೀಸರ್ ಅನ್ನು ಈಗಾಗಲೇ 12 ಸಾವಿರಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ. ಕೆಲವರು ಕಾಮೆಂಟ್ ಮಾಡುವ ಮೂಲಕ ತಾವು ಕಂಡುಕೊಂಡ ಉತ್ತರ ತಿಳಿಸಿದ್ದಾರೆ. ಈ ಬ್ರೈನ್ ಟೀಸರ್‌ಗೆ ಒಬ್ಬರೊಬ್ಬರು ಒಂದೊಂದು ರೀತಿ ಉತ್ತರ ಹೇಳಿದ್ದಾರೆ. 130, 64, 360, 96 ಹೀಗೆ ಬೇರೆ ಬೇರೆ ಉತ್ತರಗಳನ್ನು ನೀಡಿದ್ದಾರೆ. ಹಾಗಾದರೆ ಈ ಬ್ರೈನ್ ಟೀಸರ್‌ಗೆ ನಿಮ್ಮ ಉತ್ತರವೇನು?

ಈ ಬ್ರೈನ್ ಟೀಸರ್‌ಗಳನ್ನೂ ಓದಿ 

Brain Teaser: ವೃತ್ತದಲ್ಲಿ ಅಡಗಿರುವ ನಂಬರ್ ಯಾವುದು? 8 ಸೆಕೆಂಡ್ ಒಳಗೆ ಕಂಡುಹಿಡಿಯಿರಿ, ನಿಮ್ಮ ಕಣ್ಣಿಗೊಂದು ಪರೀಕ್ಷೆ

Brain Teaser Eye Test: ಇಂದಿನ ಬ್ರೈನ್ ಟೀಸರ್‌ನಲ್ಲಿ ಒಂದು ಹಸಿರು ಬಣ್ಣದ ವೃತ್ತವಿದೆ. ಆ ವೃತ್ತದಲ್ಲಿ ಮೇಲ್ನೋಟಕ್ಕೆ ಏನೂ ಕಾಣುವುದಿಲ್ಲ. ಆದರೆ ಅದರಲ್ಲಿ ನಂಬರ್ ಒಂದು ಅಡಗಿದೆ. ಆ ನಂಬರ್ ಯಾವುದು ಎಂದು 8 ಸೆಕೆಂಡ್ ಒಳಗೆ ಕಂಡುಹಿಡಿಯಬೇಕು. ನಿಮ್ಮ ಕಣ್ಣಿಗಿದು ಪರೀಕ್ಷೆ, ಪ್ರಯತ್ನ ಮಾಡಿ.

Brain Teaser: ಗಣಿತದ ಸೂತ್ರಗಳನ್ನು ಬಿಡಿಸುವಲ್ಲಿ ನೀವು ನಿಸ್ಸೀಮರೇ, ಹಾಗಿದ್ರೆ 11 ಸೆಕೆಂಡ್‌ ಇಲ್ಲಿರುವ ಪ್ರಶ್ನೆಗೆ ಉತ್ತರ ಹೇಳಿ

ಶಾಲಾ ದಿನಗಳಲ್ಲಿ ನಿಮ್ಮಿಷ್ಟದ ಸಬ್ಜೆಕ್ಟ್ ಯಾವುದು? ಗಣಿತ ಅಂತಾದ್ರೆ ಲೆಕ್ಕದಲ್ಲಿ ನಿಮ್ಮ ಜಾಣತನ ಪರೀಕ್ಷಿಸಲು ಇಲ್ಲಿದೆ ಒಂದು ಬ್ರೈನ್ ಟೀಸರ್‌, ಈ ಗಣಿತದ ಪಜಲ್‌ಗೆ ನೀವು 11 ಸೆಕೆಂಡ್ ಒಳಗೆ ಉತ್ತರ ಹೇಳಬೇಕು, ನಿಮ್ಮ ಮೆದುಳು ಎಷ್ಟು ಚುರುಕಾಗಿದೆ ನೋಡೋಣ.