Brain Teaser: 44ರ ಸಾಲಿನಲ್ಲಿ ಒಂದೇ ಒಂದು ಕಡೆ 45 ಇದೆ, ಅದು ಎಲ್ಲಿದೆ? ನಿಮ್ಮ ಕಣ್ಣು ಶಾರ್ಪ್‌ ಇದ್ರೆ 10 ಸೆಕೆಂಡ್‌ನಲ್ಲಿ ಉತ್ತರ ಹೇಳಿ
ಕನ್ನಡ ಸುದ್ದಿ  /  ಜೀವನಶೈಲಿ  /  Brain Teaser: 44ರ ಸಾಲಿನಲ್ಲಿ ಒಂದೇ ಒಂದು ಕಡೆ 45 ಇದೆ, ಅದು ಎಲ್ಲಿದೆ? ನಿಮ್ಮ ಕಣ್ಣು ಶಾರ್ಪ್‌ ಇದ್ರೆ 10 ಸೆಕೆಂಡ್‌ನಲ್ಲಿ ಉತ್ತರ ಹೇಳಿ

Brain Teaser: 44ರ ಸಾಲಿನಲ್ಲಿ ಒಂದೇ ಒಂದು ಕಡೆ 45 ಇದೆ, ಅದು ಎಲ್ಲಿದೆ? ನಿಮ್ಮ ಕಣ್ಣು ಶಾರ್ಪ್‌ ಇದ್ರೆ 10 ಸೆಕೆಂಡ್‌ನಲ್ಲಿ ಉತ್ತರ ಹೇಳಿ

ಬ್ರೈನ್‌ ಟೀಸರ್‌ ಹೆಸರೇ ಹೇಳುವಂತೆ ನಮ್ಮ ಮೆದುಳಿಗೆ ಸಾಕಷ್ಟು ಕೆಲಸ ಕೊಡುವ ಚಿತ್ರವಿದು. ಆ ಕಾರಣಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಬ್ರೈನ್‌ ಟೀಸರ್‌ ಚಿತ್ರಗಳು ವೈರಲ್‌ ಆಗುತ್ತವೆ. ಇಂತಹ ಬ್ರೈನ್‌ ಟೀಸರ್‌ಗಳು ನಮ್ಮ ಕಣ್ಣು, ಮೆದುಳಿಗೆ ಸವಾಲು ಹಾಕುವಂತಿರುವುದು ಸುಳ್ಳಲ್ಲ. ಇಂದಿನ ಬ್ರೈನ್‌ ಟೀಸರ್‌ನಲ್ಲಿ 44ರ ರಾಶಿಯಲ್ಲಿರುವ 45 ಅನ್ನು ಕಂಡುಹಿಡಿಯಬೇಕು.

44ರ ರಾಶಿಯಲ್ಲಿ ಒಂದೇ ಒಂದು ಕಡೆ 45 ಇದೆ, ಅದು ಎಲ್ಲಿದೆ? ನಿಮ್ಮ ಕಣ್ಣು ಶಾರ್ಪ್‌ ಇದ್ರೆ 10 ಸೆಕೆಂಡ್‌ನಲ್ಲಿ ಉತ್ತರ ಹೇಳಿ
44ರ ರಾಶಿಯಲ್ಲಿ ಒಂದೇ ಒಂದು ಕಡೆ 45 ಇದೆ, ಅದು ಎಲ್ಲಿದೆ? ನಿಮ್ಮ ಕಣ್ಣು ಶಾರ್ಪ್‌ ಇದ್ರೆ 10 ಸೆಕೆಂಡ್‌ನಲ್ಲಿ ಉತ್ತರ ಹೇಳಿ

ಬ್ರೈನ್‌ ಟೀಸರ್‌ಗಳು ಮೇಲ್ನೋಟಕ್ಕೆ ಸುಲಭವಾಗಿ ಕಂಡರೂ ಅದಕ್ಕೆ ಉತ್ತರ ಕಂಡುಹಿಡಿಯುವುದು ನಿಜಕ್ಕೂ ಸುಲಭದ ಮಾತಲ್ಲ. ಇದು ನಮ್ಮ ಮೆದುಳು ಹಾಗೂ ಕಣ್ಣಿಗೆ ಸವಾಲು ಹಾಕುವಂತಿರುತ್ತದೆ. ಸೂಕ್ಷ್ಮ ದೃಷ್ಟಿ ಇದ್ದವರಷ್ಟೇ ಬ್ರೈನ್‌ ಟೀಸರ್‌ಗೆ ಹೇಳಿದ ಸಮಯಕ್ಕೆ ಸರಿಯಾಗಿ ಉತ್ತರ ಕಂಡುಹಿಡಿಯಲು ಸಾಧ್ಯ. ಇದರೊಂದಿಗೆ ನಿಮ್ಮ ಮೆದುಳಿನ ಗ್ರಹಿಕೆಯೂ ಮುಖ್ಯವಾಗುತ್ತದೆ. ನಿಮಗೆ ಬ್ರೈನ್‌ ಟೀಸರ್‌ಗೆ ಉತ್ತರ ಕಂಡುಹುಡುಕುವ ಅಭ್ಯಾಸವಿದ್ರೆ ನಾವು ನಿಮಗಾಗಿ ಬ್ರೈನ್‌ ಟೀಸರ್‌ಗಳನ್ನು ಪ್ರಕಟ ಮಾಡುತ್ತಿರುತ್ತೇವೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದ ಈ ಬ್ರೈನ್‌ ಟೀಸರ್‌ಗಳು ನಿಮ್ಮ ಮೆದುಳಿಗೆ ಹುಳ ಬಿಡುವಂತಿರುತ್ತದೆ.

ಇಂದಿನ ಬ್ರೈನ್‌ ಟೀಸರ್‌ನಲ್ಲಿ ಉದ್ದಕ್ಕೆ ಅಡ್ಡಕ್ಕೆ 44 ಸಂಖ್ಯೆಗಳನ್ನು ಬರೆಯಲಾಗಿದೆ. ಈ ರಾಶಿಯ 44ರ ನಡುವೆ ಒಂದು ಸಂಖ್ಯೆ ಪಾತ್ರ 45 ಇದೆ. ಇದು ಎಲ್ಲಿದೆ ಎಂದು ಕೇವಲ 10 ಸೆಕೆಂಡ್‌ನಲ್ಲಿ ಕಂಡುಹಿಡಿಯಬೇಕು. ಈ ಆಪ್ಟಿಕಲ್ ಭ್ರಮೆಯು ಕಣ್ಣುಗಳಿಗೆ ಪರೀಕ್ಷೆಯಾಗಿ ಕಾರ್ಯನಿರ್ವಹಿಸುತ್ತದೆ, ವಿಮರ್ಶಾತ್ಮಕ ಚಿಂತನೆ, ಸಮಸ್ಯೆ-ಪರಿಹರಿಸುವ ಸಾಮರ್ಥ್ಯಗಳು ಮತ್ತು ತೀಕ್ಷ್ಣವಾದ ವೀಕ್ಷಣಾ ಶಕ್ತಿಗಳನ್ನು ಬೇಡುತ್ತದೆ. ಹಾಗಾದರೆ ಸರಿ ನಿಮ್ಮ ಸಮಯ ಈಗ ಶುರು, 45 ಎಲ್ಲಿದೆ ಎಂಬುದನ್ನು 10 ಸೆಕೆಂಡ್‌ನಲ್ಲಿ ಕಂಡುಹಿಡಿಯಲು ನಿಮ್ಮಿಂದ ಸಾಧ್ಯವಾಯಿತೇ, ಇಲ್ಲ ಎಂದಾದರೆ ನಾವು ನಿಮಗೆ ಕ್ಲೂ ಕೊಡ್ತೀವಿ. ಮೇಲಿಂದ ಕೆಳಗೆ ಅಥವಾ ಎಡದಿಂದ ಬಲಕ್ಕೆ ನೋಡಿ. 45 ನಿಮ್ಮ ಕಣ್ಣಿಗೆ ಕಾಣಿಸಬಹುದು.

ಇಂತಹ ಬ್ರೈನ್‌ ಟೀಸರ್‌ಗಳು ನಮಗೆ ಮೋಜು ನೀಡುವುದು ಮಾತ್ರವಲ್ಲ ನಮ್ಮ ಮೆದುಳನ್ನು ಚುರುಕಾಗಿಸುವುದು ಸುಳ್ಳಲ್ಲ. ಇದರಿಂದ ಸಮಸ್ಯೆ ಪರಿಹರಿಸುವ ಗುಣವು ನಮ್ಮಲ್ಲಿ ವೃದ್ಧಿಯಾಗುತ್ತದೆ. ಒಟ್ಟಾರೆ ಬ್ರೈನ್‌ ಟೀಸರ್‌ಗಳು ನಮಗೆ ಟೈಮ್‌ ಪಾಸ್‌ಗೆ ನೆರವಾಗುವ ಜೊತೆಗೆ ಬುದ್ದಿಯನ್ನೂ ಚುರುಕುಗೊಳಿಸುತ್ತವೆ.

ಇದನ್ನೂ ಓದಿ

Brain Teaser: 3 ಸೇಬುಹಣ್ಣಿಗೆ 30 ಆದ್ರೆ, 1 ತೆಂಗಿನಕಾಯಿ, 1 ಸೇಬು, 3 ಬಾಳೆಹಣ್ಣಿಗೆ ಎಷ್ಟಾಗುತ್ತೆ? 10 ಸೆಕೆಂಡ್‌ನಲ್ಲಿ ಉತ್ತರ ಹೇಳಿ

ತೆಂಗಿನಕಾಯಿ, ಬಾಳೆಹಣ್ಣು ಹಾಗೂ ಸೇಬುಹಣ್ಣು ಇರುವ ಬ್ರೈನ್‌ ಟೀಸರ್‌ ಚಿತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ. ಇದರಲ್ಲಿ ಗಣಿತದ ಪಜಲ್‌ ಇದ್ದು ಈ ಪಜಲ್‌ಗೆ ಉತ್ತರ ಕಂಡುಹಿಡಿಯಲು ಗಣಿತ ಎಕ್ಸ್‌ಪರ್ಟ್‌ಗಷ್ಟೇ ಸಾಧ್ಯ. ನೀವು ಗಣಿತಪ್ರಿಯರಾದ್ರೆ 10 ಸೆಕೆಂಡ್‌ನಲ್ಲಿ ಉತ್ತರ ಹೇಳೋಕೆ ಪ್ರಯತ್ನ ಮಾಡಿ.

Brain Teaser: ಚಿತ್ರದಲ್ಲಿ ಎಷ್ಟು ಬೀಗಗಳು ಲಾಕ್‌ ಆಗಿಲ್ಲ? 10 ಸೆಕೆಂಡ್‌ನಲ್ಲಿ ಉತ್ತರ ಹೇಳಿ, ನಿಮ್ಮ ಕಣ್ಣು ಎಷ್ಟು ಶಾರ್ಪ್‌ ನೋಡೋಣ

ಇಲ್ಲಿರುವ ಬ್ರೈನ್‌ ಟೀಸರ್‌ ಚಿತ್ರದಲ್ಲಿ ರಾಶಿ ಬೀಗಗಳಿವೆ. ಈ ಬೀಗಗಳಲ್ಲಿ ಕೆಲವನ್ನು ಲಾಕ್‌ ಮಾಡಿಲ್ಲ. ಕೇವಲ 10 ಸೆಕೆಂಡ್‌ನಲ್ಲಿ ಎಷ್ಟು ಬೀಗಗಳು ಲಾಕ್‌ ಆಗಿಲ್ಲ ಎಂಬುದನ್ನು ಕಂಡುಹಿಡಿಯಬೇಕು. ನಿಮ್ಮ ಕಣ್ಣು ನಿಜಕ್ಕೂ ಸಖತ್‌ ಶಾರ್ಪ್‌ ಇದ್ರೆ ನೀವು ಈ ಬ್ರೈನ್‌ ಟೀಸರ್‌ಗೆ ಉತ್ತರ ಕಂಡುಹಿಡಿಯಬಹುದು.

Whats_app_banner