Brain Teaser: ನಿಮ್ಮ ಕಣ್ಣು ತುಂಬಾ ಸೂಕ್ಷ್ಮವಾಗಿದ್ಯಾ, ಚಿತ್ರದಲ್ಲಿ ಹುಲಿ ಎಲ್ಲಿದೆ ಕಂಡುಹಿಡಿಯಿರಿ, ನಿಮಗಿರೋದು 30 ಸೆಕೆಂಡ್ ಸಮಯ
ನಿಮ್ಮ ಕಣ್ಣು ನಿಜಕ್ಕೂ ಶಾರ್ಪ್ ಆಗಿದೆ ಅಂತ ನಿಮಗೆ ಅನ್ನಿಸುತ್ತಾ, ಹಾಗಾದ್ರೆ ನಿಮಗಾಗಿ ಇಲ್ಲೊಂದು ಚಾಲೆಂಜ್ ಇದೆ. ಇಂದಿನ ಆಪ್ಟಿಕಲ್ ಇಲ್ಯೂಷನ್ ಚಿತ್ರದಲ್ಲಿ ಕಾಡಿನ ದೃಶ್ಯವಿದೆ. ಈ ಚಿತ್ರದಲ್ಲಿ ಹುಲಿಯೊಂದು ಅಡಗಿದೆ. ಆ ಹುಲಿ ಎಲ್ಲಿದೆ ಎಂದು ನೀವು 30 ಸೆಕೆಂಡ್ ಒಳಗೆ ಕಂಡುಹಿಡಿಯಬೇಕು. ನಿಮ್ಮ ಕಣ್ಣಿಗೆ ಇಲ್ಲಿದೆ ಸವಾಲು.
ಆಪ್ಟಿಕಲ್ ಇಲ್ಯೂಷನ್ ಚಿತ್ರಗಳು ವಿಚಿತ್ರವಾಗಿರುತ್ತವೆ. ಮೇಲ್ನೋಟಕ್ಕೆ ನೋಡಿದಾಗ ಇದೇನು ಎಂದು ಅರ್ಥವಾಗುವುದೇ ಇಲ್ಲ, ಈ ಚಿತ್ರಗಳು ನಮ್ಮ ಕಣ್ಣಿಗೆ ಸವಾಲು ಹಾಕುವಂತಿರುವುದು ಸುಳ್ಳಲ್ಲ. ಇದರಲ್ಲಿ ಇರುವ ಅಂಶವನ್ನು ಕಂಡುಹಿಡಿಯಬೇಕಾದ ಸವಾಲು ನಮಗಿರುತ್ತದೆ. ಈ ಚಿತ್ರಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ ಮಾತ್ರ ನಮಗೆ ಉತ್ತರ ಕಂಡುಹಿಡಿಯಲು ಸಾಧ್ಯವಾಗುತ್ತದೆ. ಇದು ನಮ್ಮಲ್ಲಿ ಗಮನಶಕ್ತಿ ಎಷ್ಟಿದೆ ಎಂದು ಕಂಡುಹಿಡಿಯುವ ಮಾರ್ಗವೂ ಹೌದು. ಇಂದಿನ ಬ್ರೈನ್ ಟೀಸರ್ ನಿಮ್ಮ ಕಣ್ಣಿಗೆ ಸವಾಲು ಹಾಕುವಂತಿರುವುದು ಸುಳಲ್ಲ.
ಇಂದಿನ ಆಪ್ಟಿಕಲ್ ಇಲ್ಯೂಷನ್ ಚಿತ್ರದಲ್ಲಿ ಕಾಡಿನ ದೃಶ್ಯವಿದೆ. ಇದರಲ್ಲಿ ಮರಗಳು ಹಾಗೂ ಕುರುಚಲು ಗಿಡಗಳಿವೆ. ಒಂದು ದೊಡ್ಡ ಎಲೆಗಳಿರುವ ಗಿಡಗಳನ್ನು ಇಲ್ಲಿ ನೋಡಬಹುದಾಗಿದೆ. ಈ ಗಿಡಗಳ ರಾಶಿಯ ನಡುವೆ ಒಂದು ಹುಲಿ ಅಡಗಿ ಕುಳಿತಿದೆ. ಆ ಹುಲಿ ಎಲ್ಲಿದೆ ಎಂದು ನೀವು ಕಂಡುಹಿಡಿಯಬೇಕು. ಮೇಲ್ನೋಟಕ್ಕೆ ಕಂಡಾಗ ಹುಲಿ ನಿಮ್ಮ ಕಣ್ಣಿಗೆ ಕಾಣದೇ ಇರಬಹುದು. ಆದರೆ ಸೂಕ್ಷ್ಮವಾಗಿ ಗಮನಿಸಿದರೆ ಖಂಡಿತ ಚಿತ್ರದಲ್ಲಿ ಹುಲಿ ನಿಮಗೆ ಕಾಣಿಸುತ್ತದೆ.
ನೀವು ಹುಲಿ ಎಲ್ಲಿದೆ ಎಂದು ದಿನವಿಡೀ ಹುಡುಕುವಂತಿಲ್ಲ. 30 ಸೆಕೆಂಡ್ ಒಳಗೆ ಹುಲಿ ಎಲ್ಲಿ ಎಂದು ಕಂಡುಹಿಡಿದು ಹೇಳಬೇಕು. 30 ಸೆಕೆಂಡ್ ಒಳಗೆ ಉತ್ತರ ಹೇಳಲು ಸಾಧ್ಯವಾದರೆ ಖಂಡಿತ ನಿಮ್ಮ ಕಣ್ಣು ಸಖತ್ ಶಾರ್ಪ್ ಇದೆ ಎಂದರ್ಥ.
ನಿಮಗೆ ಹುಲಿ ಕಂಡುಹಿಡಿಯಲು ಸಾಧ್ಯವಾದರೇ ಈ ಚಿತ್ರವನ್ನು ನಿಮ್ಮ ಸ್ನೇಹಿತರು, ಆತ್ಮೀಯರಿಗೂ ಕಳುಹಿಸಿ. ಅವರ ಬಳಿ ಹುಲಿ ಎಲ್ಲಿದೆ ಕಂಡುಹಿಡಿಯಲು ಹೇಳಿ. ಅವರ ಕಣ್ಣು ಎಷ್ಟು ಶಾರ್ಪ್ ಇದೆ ಅಂತ ಪರೀಕ್ಷೆ ಮಾಡಿ.
ಈ ಬ್ರೈನ್ ಟೀಸರ್‌ಗಳನ್ನೂ ಓದಿ
Brain Teaser: ಚಳಿಗಾಲದಲ್ಲೂ ನಿಮ್ಮ ಮೆದುಳು ಚುರುಕಾಗಿ ಕೆಲಸ ಮಾಡುತ್ತೆ ಅಂದ್ರೆ ಈ ಬ್ರೈನ್ ಟೀಸರ್‌ಗೆ ಥಟ್ಟಂತ ಉತ್ತರ ಹೇಳಿ, ನಿಮಗೊಂದು ಸವಾಲ್
ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ವೈರಲ್ ಆದ ಬ್ರೈನ್ ಟೀಸರ್ ಈಗ ಹಲವರ ಮೆದುಳಿಗೆ ಹುಳ ಬಿಟ್ಟಿದೆ. ಇದರಲ್ಲಿರುವ ಗಣಿತದ ಪಜಲ್‌ಗೆ ಉತ್ತರ ಹೇಳಬೇಕಾಗಿರುವುದು ಇಂದಿನ ಸವಾಲು. ಇದರಲ್ಲಿ ಸುಲಭ ಗಣಿತ, ಆದರೆ ಉತ್ತರ ಖಂಡಿತ ಸುಲಭವಿಲ್ಲ. ನಿಮ್ಮ ಮೆದುಳು ಚುರುಕಾಗಿದ್ರೆ ಈ ಪ್ರಶ್ನೆಗೆ ಥಟ್ಟಂತ ಉತ್ತರ ಹೇಳಿ.
Brain Teaser: ಪತ್ತೇದಾರಿಕೆ ಮಾಡೋದ್ರಲ್ಲಿ ನೀವು ಪಂಟರಾದ್ರೆ ಈ 5 ಜನರಲ್ಲಿ ಕೊಲೆಗಾರ ಯಾರು ಕಂಡುಹಿಡಿಯಿರಿ, ನಿಮಗಿರೋದು 30 ಸೆಕೆಂಡ್ ಸಮಯ
ಪತ್ತೇದಾರಿ ಕೆಲಸ ಮಾಡೋದ್ರಲ್ಲಿ ನೀವು ಎಕ್ಸ್‌ಪರ್ಟ್ ಅಂತಾದ್ರೆ ನಿಮಗಾಗಿ ಇಲ್ಲೊಂದು ಬ್ರೈನ್ ಟೀಸರ್ ಚಿತ್ರವಿದೆ. ಇದರಲ್ಲಿ ಒಂದು ಕೊಲೆ ನಡೆದಿರುವ ವಿವರ ಇದ್ದು, 5 ಜನರಲ್ಲಿ ಕೊಲೆಗಾರ ಯಾರು ಎಂದು ನೀವು ಕಂಡು ಹಿಡಿಯಬೇಕು. ಇದು ನಿಮಗಿರುವ ಸವಾಲು. ನಿಮ್ಮ ಸಮಯ ಈಗ ಶುರು.