Brain Teaser: 8+8=56, 6+6=30 ಆದ್ರೆ 2+2 ಎಷ್ಟು? 4 ಖಂಡಿತ ಅಲ್ಲ; ನೀವು ಜಾಣರಾದ್ರೆ 30 ಸೆಕೆಂಡ್‌ನಲ್ಲಿ ಸರಿ ಉತ್ತರ ಹೇಳಿ
ಇಂದಿನ ಬ್ರೈನ್ ಟೀಸರ್ ಪ್ರಶ್ನೆ ಬಹಳ ಸುಲಭವಾಗಿದೆ. ಇಲ್ಲಿರೋದು ಕೂಡಿಸುವ ಲೆಕ್ಕಾಚಾರ. 2+2 ಎಷ್ಟು ಎಂದು ಮೂವತ್ತು ಸೆಕೆಂಡ್‌ನಲ್ಲಿ ನೀವು ಹೇಳಬೇಕು. ಆದ್ರೆ ಅದಕ್ಕೆ ಮೂವತ್ತು ಸೆಕೆಂಡ್ ಯಾಕೆ ಒಂದು ಸೆಕೆಂಡ್‌ನಲ್ಲಿ ಹೇಳ್ತೀನಿ ಉತ್ತರ 4 ಅಂತ ಮಾತ್ರ ಹೇಳ್ಬೇಡಿ. ಯಾಕಂದ್ರೆ ಇದಕ್ಕೆ ಸರಿ ಉತ್ತರ 4 ಖಂಡಿತ ಅಲ್ಲ.
ಗಣಿತದ ಪಜಲ್‌ಗಳು ನಮ್ಮ ಮೆದುಳಿಗೆ ಕೆಲಸ ಕೊಡಲು ಹೇಳಿ ಮಾಡಿಸಿದಂಥವು. ಇದರಿಂದ ನಮ್ಮಲ್ಲಿ ಯೋಚನಾಶಕ್ತಿ ಬೆಳೆಯುತ್ತದೆ. ಸೃಜನಾತ್ಮಕ ಯೋಚನೆಗೆ ಮನಸ್ಸು ತೆರೆಯುವಂತೆ ಮಾಡುತ್ತದೆ. ಇದರಿಂದ ನೆನಪಿನ ಶಕ್ತಿಯೂ ಹೆಚ್ಚಾಗುತ್ತದೆ. ಬ್ರೈನ್ ಟೀಸರ್‌ಗಳು ಸರಿಯಾದ ಉತ್ತರ ಸಿಗುವವರೆಗೂ ಮನಸ್ಸು ಯೋಚಿಸುತ್ತಲೇ ಇರುವಂತೆ ಮಾಡುವುದು ಸುಳ್ಳಲ್ಲ.
ಇಂದಿನ ಬ್ರೈನ್ ಟೀಸರ್‌ನಲ್ಲಿರುವ ಗಣಿತದ ಲೆಕ್ಕಾಚಾರವು ಕೂಡಿಸುವುದಾಗಿದೆ. ಇಲ್ಲಿರುವ ಸರಳ ಗಣಿತಕ್ಕೆ ಉತ್ತರ ಮಾತ್ರ ಟ್ರಿಕ್ಕಿಯಾಗಿ ನೀಡಲಾಗಿದೆ. ನೀವು ಕೊಂಚ ಬುದ್ಧಿ ಉಪಯೋಗಿಸಿದ್ರೆ ಈ ಗಣಿತದ ಪಜಲ್‌ಗೆ ಉತ್ತರ ಕಂಡುಕೊಳ್ಳಲು ಸಾಧ್ಯವಾಗುತ್ತದೆ. 2+2 ಎಷ್ಟು ಎಂದು ನೀವು ಕಂಡುಹಿಡಿಯಬೇಕು.
@brain_teaser_1 ಎಂಬ ಎಕ್ಸ್ ಪುಟವನ್ನ ನಿರ್ವಹಣೆಯ ಮಾಡುವವರು ಈ ಬ್ರೈನ್ ಟೀಸರ್ ಅನ್ನು ಪೋಸ್ಟ್ ಮಾಡಿದ್ದಾರೆ. ಇದರಿಂದ ಕೆಲವು ಗಣಿತದ ಲೆಕ್ಕವಿದೆ. ಕೊನೆಯಲ್ಲಿ ಇರುವ 2+2ಕ್ಕೆ ಎಷ್ಟು ಉತ್ತರ ಎಂದು ನೀವು ಕಂಡುಹಿಡಿಯಬೇಕಾಗಿದೆ.
ಈ ಬ್ರೈನ್ ಟೀಸರ್‌ನಲ್ಲಿರುವ ಪ್ರಶ್ನೆ ಹೀಗಿದೆ. 8+8= 56, 6+6=30, 4+4=12, So 2+2=?. ಇಲ್ಲಿ 8+8 = 16 ಆಗುವುದಿಲ್ಲ, 4+4 =8 ಕೂಡ ಆಗುವುದಿಲ್ಲ. ಹಾಗಾಗಿ 2+2= 4 ಆಗಲು ಸಾಧ್ಯವಿಲ್ಲ. ಹಾಗಾದರೆ ಸರಿಯಾದ ಉತ್ತರ ಏನು ಅಂತ ಹೇಳಿ.
ಈ ಬ್ರೈನ್ ಟೀಸರ್ ನಿಮ್ಮ ಮೆದುಳಿಗೆ ಹುಳ ಬಿಡುವಂತಿರುವುದು ಸುಳ್ಳಲ್ಲ. ಹಾಗಂತ ಇದಕ್ಕೆ ಉತ್ತರ ಕಂಡುಹಿಡಿಯುವುದು ಕಷ್ಟವೇನಲ್ಲ. ಕೊಂಚ ಯೋಚಿಸಿದ್ರೆ ಈ ಬ್ರೈನ್ ಟೀಸರ್‌ಗೆ ಸುಲಭವಾಗಿ ಉತ್ತರ ಕಂಡುಕೊಳ್ಳಬಹುದು. ನಿಮಗೆ ಉತ್ತರ ಗೊತ್ತಾದರೆ ತಡ ಮಾಡದಿರಿ. ನಿಮ್ಮ ಸ್ನೇಹಿತರು ಆತ್ಮೀಯರಿಗೂ ಇದನ್ನು ಶೇರ್ ಮಾಡಿ ಅವರಿಂದ ಉತ್ತರ ಕಂಡುಹಿಡಿಯಲು ಹೇಳಿ.
ಈ ಬ್ರೈನ್ ಟೀಸರ್‌ಗಳನ್ನೂ ಓದಿ
Brain Teaser: ಹದ್ದಿನ ಕಣ್ಣಿನಷ್ಟೇ ನಿಮ್ಮ ಕಣ್ಣು ಸೂಕ್ಷ್ಮವಾಗಿದ್ದರೆ ನಿಮಗೊಂದು ಚಾಲೆಂಜ್, ಚಿತ್ರದಲ್ಲಿ ಬೆಕ್ಕು ಎಲ್ಲಿದೆ ಹುಡುಕಿ
ಗಾರ್ಡನ್‌ನ ದೃಶ್ಯವಿರುವ ಈ ಬ್ರೈನ್ ಟೀಸರ್‌ನಲ್ಲಿ ನಿಮ್ಮ ಕಣ್ಣಿಗೊಂದು ಸವಾಲಿದೆ. ನೀಲಿ ಹೂ ಬಿಡುವ ಗಿಡದ ಮಧ್ಯೆ ಬೆಕ್ಕೊಂದು ಅಡಗಿ ಕೂತಿದೆ. ಆ ಬೆಕ್ಕು ಎಲ್ಲಿದೆ ಎಂದು ನೀವು ಕಂಡುಹಿಡಿಯಬೇಕು. ಹದ್ದಿನ ಕಣ್ಣಿನಷ್ಟೇ ನಿಮ್ಮ ಕಣ್ಣು ಶಾರ್ಪ್ ಆಗಿದ್ದರೆ ಮಾತ್ರ ಬೆಕ್ಕನ್ನು ಹುಡುಕಲು ಸಾಧ್ಯ.
Brain Teaser: ಟ್ಯಾಂಕ್‌ನಲ್ಲಿ ಒಟ್ಟು ಎಷ್ಟು ಮೀನು ಉಳಿಯಿತು? ನೀವು ನಿಜಕ್ಕೂ ಬುದ್ಧಿವಂತರಾದ್ರೆ 10 ಸೆಕೆಂಡ್‌ನಲ್ಲಿ ಉತ್ತರ ಹೇಳಿ
ಶನಿವಾರದ ಹೊತ್ತು ಮೆದುಳಿಗೆ ಹುಳ ಬಿಟ್ಕೋಬೇಕಾ, ಹಾಗಿದ್ರೆ ನಿಮಗಾಗಿ ಇಲ್ಲಿದೆ ಒಂದು ಸವಾಲು. ಈ ಬ್ರೈನ್ ಟೀಸರ್‌ನಲ್ಲಿರುವ ಪ್ರಶ್ನೆಗೆ ನೀವು ಉತ್ತರ ಹೇಳಬೇಕು, ಅದು ಕೇವಲ 10 ಸೆಕೆಂಡ್‌ನಲ್ಲಿ. ನೀವು ನಿಜಕ್ಕೂ ಜಾಣರಾಗಿದ್ರೆ ಟ್ಯಾಂಕ್‌ನಲ್ಲಿ ಒಟ್ಟು ಎಷ್ಟು ಮೀನು ಉಳಿದಿವೆ ಹೇಳಿ.