Brain Teaser: 22=40, 81=97 ಆದ್ರೆ 89 = ಎಷ್ಟು? ಈ ಸುಲಭ ಗಣಿತಕ್ಕೆ 30 ಸೆಕೆಂಡ್‌ನಲ್ಲಿ ಉತ್ತರ ಹೇಳಲು ಸಾಧ್ಯವೇ?
ಇಲ್ಲಿರುವ ಸುಲಭ ಗಣಿತ ಸೂತ್ರಕ್ಕೆ ಉತ್ತರ ಹುಡುಕಲು ನಿಮಗೆ ಸಾಕಷ್ಟು ಸಮಯ ಬೇಕಾಯ್ತಾ? ಹಾಗಾದ್ರೆ ಥಿಂಕ್ ಔಟ್ ದಿ ಬಾಕ್ಸ್. ನಿಮ್ಮ ಗಣಿತದ ಕೌಶಲವನ್ನು ತೋರಿಸಿ ಈ ಸೂತ್ರಕ್ಕೆ ಉತ್ತರ ಹೇಳಿ. ಅಂದ ಹಾಗೆ ಕ್ಯಾಲ್ಕುಲೇಟರ್ ಬಳಸೋ ಹಂಗಿಲ್ಲ ಅನ್ನೋದು ಮರೀಬೇಡಿ.

ನೀವು ಗಣಿತದಲ್ಲಿ ಸಖತ್ ಶಾರ್ಪ್, ನಿಮ್ಮನ್ನು ಮೀರಿಸೋರು ಯಾರೂ ಇಲ್ಲ ಅನ್ನೋದು ನಿಮ್ಮ ಮನಸ್ಸಿನಲ್ಲಿ ಇದ್ಯಾ? ಹೌದು ಎಂದಾದ್ರೆ ನಾವು ನಿಮಗಾಗಿ ಇಲ್ಲೊಂದು ಗಣಿತದ ಪಜಲ್ ಅನ್ನು ತಂದಿದ್ದೇವೆ. ಈ ಬ್ರೈನ್ ಟೀಸರ್ ಚಾಲೆಂಜ್‌ನಲ್ಲಿ ನೀವು ಚಿತ್ರದಲ್ಲಿರುವ ಗಣಿತದ ಪಜಲ್‌ಗೆ ಉತ್ತರ ಕಂಡುಹಿಡಿಯಬೇಕು. ಇದರಲ್ಲಿ ಒಂದಿಷ್ಟು ಸಂಖ್ಯೆಗಳಿವೆ. ಈ ಸಂಖ್ಯೆಗಳ ಮೌಲ್ಯವನ್ನು ಎದುರಿನಲ್ಲಿ ಬರೆಯಲಾಗಿದೆ. ಆದರೆ ಕೊನೆಯ ಸಂಖ್ಯೆಯ ಮೌಲ್ಯ ಎಷ್ಟು ಎಂಬುದನ್ನು ನೀವು ಕಂಡುಹಿಡಿಯಬೇಕು. ಇದನ್ನು ಮೇಲ್ನೋಟಕ್ಕೆ ಕಂಡಾಗ ನಿಮಗೆ ಸುಲಭ ಅನ್ನಿಸಬಹುದು. ಆದರೆ 30 ಸೆಕೆಂಡ್‌ನಲ್ಲಿ, ಕ್ಯಾಲ್ಕುಲೇಟರ್ ಇಲ್ಲದೇ ಈ ಪ್ರಶ್ನೆಗೆ ಉತ್ತರ ಕಂಡು ಹಿಡಿಯಬೇಕು, ಇದು ನಿಮಗಿರುವ ಚಾಲೆಂಜ್. ಸರಿ ಈ ಗಣಿತದ ಪಜಲ್‌ಗೆ ನಿಮ್ಮಿಂದ ಉತ್ತರ ಕಂಡುಹಿಡಿಯಲು ಸಾಧ್ಯವೇ ನೋಡಿ.
ʼMath Quiz, Game and Puzzlesʼ ಎಂಬ ಇನ್‌ಸ್ಟಾಗ್ರಾಂ ಪುಟದಲ್ಲಿ ಈ ಬ್ರೈನ್ ಟೀಸರ್ ಅನ್ನು ಹಂಚಿಕೊಳ್ಳಲಾಗಿದೆ. ಇಲ್ಲಿರುವ ಪ್ರಶ್ನೆ ಹೀಗಿದೆ. 22 = 40, 35 = 82, 81 = 97, 43 = 71, 56 = 111, ಮೌಲ್ಯ ಇಷ್ಟಾದರೆ 89 ರ ಮೌಲ್ಯವೆಷ್ಟು ಎಂದು ಪ್ರಶ್ನೆ ಕೇಳಲಾಗಿದೆ. ಈ ಬ್ರೈನ್ ಟೀಸರ್‌ಗೆ 30 ಸೆಕೆಂಡ್‌ನಲ್ಲಿ ಉತ್ತರ ಕಂಡುಹಿಡಿಯಬೇಕು. ನಿಮ್ಮ ಸಮಯ ಈಗ ಶುರು...
ಕೆಲವು ದಿನಗಳ ಹಿಂದೆ ಈ ಬ್ರೈನ್ ಟೀಸರ್ ಅನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದೆ. ಅಲ್ಲಿಂದ ಇಲ್ಲಿಯವರೆಗೆ ಹಲವರು ಲೈಕ್ಸ್, ಕಾಮೆಂಟ್ ಮಾಡಿದ್ದಾರೆ. ಹಲವರು ಕಾಮೆಂಟ್ ಮಾಡುವ ಮೂಲಕ ತಾವು ಕಂಡುಕೊಂಡ ಉತ್ತರವನ್ನು ತಿಳಿಸಿದ್ದಾರೆ. ಹಲವರು 89ರ ಮೌಲ್ಯ 171 ಎಂದು ಉತ್ತರಿಸಿದ್ದಾರೆ. ʼ8+9=17 and 9-8=1 then, 89=171ʼ ಎಂದು ಇನ್‌ಸ್ಟಾಗ್ರಾಂ ಬಳಕೆದಾರೊಬ್ಬರು ಕಾಮೆಂಟ್ ಮಾಡಿದ್ದಾರೆ.
ಈ ಬ್ರೈನ್ ಟೀಸರ್‌ಗಳನ್ನೂ ಓದಿ
Brain Teaser: 7=42, 5=20 ಆದ್ರೆ 3= ಎಷ್ಟು? ಕ್ಯಾಲ್ಕುಲೆಟರ್ ಬಳಸದೇ ಉತ್ತರ ಹೇಳಿ, ನೀವೆಷ್ಟು ಜಾಣರು ನೋಡೋಣ
ಗಣಿತದ ಪಜಲ್ ಇರುವ ಬ್ರೈನ್ ಟೀಸರ್‌ವೊಂದು ಇಲ್ಲಿದೆ. ಇದು ಸುಲಭ ಗಣಿತವೇ ಆದ್ರೂ ಕೂಡ ಉತ್ತರ ಕಂಡುಕೊಳ್ಳುವುದು ನಿಮಗೆ ಸವಾಲು ಎನ್ನಿಸಬಹುದು. ಈ ಬ್ರೈನ್ ಟೀಸರ್‌ಗೆ ಉತ್ತರವೇನು ಹೇಳಿ? ನಿಮಗಿದು ಹೊಸ ಚಾಲೆಂಜ್.
Brain Teaser: ಎ+ಎ=4, -2ಬಿ +3ಎ = ಎಷ್ಟು? ಗಣಿತದಲ್ಲಿ ಶಾರ್ಪ್ ಇದ್ರೆ 20 ಸೆಕೆಂಡ್‌ನಲ್ಲಿ ಉತ್ತರ ಹೇಳಿ
ಇನ್‌ಸ್ಟಾಗ್ರಾಂ ಹಾಗೂ ಎಕ್ಸ್‌ನಲ್ಲಿ ಮ್ಯಾಥ್ಸ್ ಪಜಲ್‌ಗಳನ್ನು ಪೋಸ್ಟ್ ಮಾಡುವ ಕೆಲವು ಪುಟಗಳಿವೆ. ಅಲ್ಲಿ ದಿನಕ್ಕೊಂದು ಗಣಿತ ಪಜಲ್‌ಗಳನ್ನು ಪೋಸ್ಟ್ ಮಾಡುತ್ತಿರುತ್ತಾರೆ. ಇಲ್ಲೊಂದು ಹೊಸ ಗಣಿತದ ಪಜಲ್ ಇದೆ. ಗಣಿತದಲ್ಲಿ ನೀವು ಶಾರ್ಪ್ ಇರೋದು ನಿಜ ಆದ್ರೆ 20 ಸೆಕೆಂಡ್‌ನಲ್ಲಿ ಈ ಪ್ರಶ್ನೆಗೆ ಉತ್ತರ ಹೇಳಬೇಕು.
