Brain Teaser: ನಿಮ್ಮ ಕಣ್ಣು ಸಖತ್ ಶಾರ್ಪ್ ಇದ್ಯಾ? 4 ಸೆಕೆಂಡ್ ಒಳಗೆ ಚಿತ್ರದಲ್ಲಿ ಯಾವ ಮೀನು ಭಿನ್ನವಾಗಿದೆ ಕಂಡುಹಿಡಿಯಿರಿ
ನಿಮ್ಮ ಕಣ್ಣು ನಿಜಕ್ಕೂ ಹದ್ದಿನ ಕಣ್ಣಿನಷ್ಟೇ ಸೂಕ್ಷ್ಮವಾಗಿದೆ ಎಂದು ನಿಮಗೆ ಅನ್ನಿಸ್ತಾ ಇದ್ಯಾ, ಹಾಗಾದ್ರೆ ನಿಮಗಾಗಿ ಇಲ್ಲೊಂದು ಬ್ರೈನ್ ಟೀಸರ್ ಇದೆ. ಇದರಲ್ಲಿ ಮೀನುಗಳು ಹಾಗೂ ಬಾಲ್‌ಗಳಿವೆ. ಇರುವ ಮೀನುಗಳಲ್ಲಿ ಒಂದೇ ಒಂದು ಭಿನ್ನವಾಗಿದೆ. ಅದು ಯಾವುದು ಎಂದು 4 ಸೆಕೆಂಡ್ ಒಳಗೆ ಕಂಡುಹಿಡಿಯಬೇಕು. ನಿಮ್ಮ ಸಮಯ ಈಗ ಶುರು.
ಕೇವಲ ಮೆದುಳು ಮಾತ್ರವಲ್ಲ, ಕಣ್ಣಿಗೂ ಬ್ರೈನ್ ಟೀಸರ್‌ಗಳು ಪರೀಕ್ಷೆ ಒಡ್ಡುತ್ತವೆ. ಇವು ನಮ್ಮ ಯೋಚನಾಶಕ್ತಿಗೂ ಸವಾಲು ಹಾಕುತ್ತವೆ. ನನ್ನ ಕಣ್ಣು ಸಖತ್ ಶಾರ್ಪ್, ಯಾವುದೇ ಸೂಕ್ಷ್ಮ ಇದ್ರೂ ಗುರುತಿಸುತ್ತೆ ಅನ್ನುವವರಿಗೂ ಈ ಬ್ರೈನ್ ಟೀಸರ್ ಸವಾಲು ಎನ್ನಿಸುತ್ತಿರುತ್ತದೆ. ಇದು ನಮ್ಮ ಗಮನ ಶಕ್ತಿಯನ್ನು ಸೆಳೆಯವುದು ಸುಳ್ಳಲ್ಲ. ಬ್ರೈನ್ ಟೀಸರ್‌ಗಳು ತಪ್ಪು ಹಿಡಿಯುವುದು, ಭಿನ್ನವಾಗಿರುವುದನ್ನು ಕಂಡುಹಿಡಿಯುವುದು, ಕೋಡ್ ಟ್ರ್ಯಾಕ್ ಮಾಡುವುದು, ಗಣಿತದ ಪಜಲ್ ಬಿಡಿಸುವುದು ಈ ಎಲ್ಲವನ್ನೂ ಒಳಗೊಂಡಿರುತ್ತದೆ.
ನಿರಂತರವಾಗಿ ಈ ಬ್ರೈನ್ ಟೀಸರ್‌ಗಳನ್ನು ಬಿಡಿಸುವ ಪ್ರಯತ್ನ ಮಾಡುವುದರಿಂದ ನಿಮ್ಮಲ್ಲಿ ಸಮಸ್ಯೆ ಪರಿಹರಿಸುವ ಗುಣ ವೃದ್ಧಿಯಾಗುತ್ತದೆ. ಇದರಿಂದ ಮೆದುಳಿಗೆ ಸಾಕಷ್ಟು ಕೆಲಸ ನೀಡುವ ಮೂಲಕ ಮೆದುಳನ್ನು ಚುರುಕುಗೊಳಿಸುತ್ತದೆ. ಸರಿ ಹಾಗಾದ್ರೆ ನಿಮ್ಮ ಕಣ್ಣಿಗೆ ಪರೀಕ್ಷೆ ಒಡ್ಡಲು ಸಿದ್ಧರಾಗಿದ್ದೀರಾ?
ಇಂದಿನ ಚಿತ್ರದಲ್ಲಿ ಡಾಲ್ಫಿನ್ ಮೀನುಗಳು ಹಾಗೂ ಚೆಂಡುಗಳಿವೆ. ಇದರಲ್ಲಿರುವ ಎಲ್ಲಾ ಮೀನುಗಳು ಒಂದೇ ರೀತಿ ಕಾಣಿಸುತ್ತವೆ, ಆದರೂ ಒಂದು ಮೀನು ಭಿನ್ನವಾಗಿದೆ. ಅದು ಯಾವುದು ಎಂದು ಕಂಡುಹಿಡಿಯುವುದು ನಿಮ್ಮ ಕಣ್ಣಿಗಿರುವ ಸವಾಲು. ಹಾಗಂತ ಗಂಟೆಗಟ್ಟಲೆ ಹುಡುಕುವಂತಿಲ್ಲ, ಕೇವಲ 4 ಸೆಕೆಂಡ್ ಒಳಗೆ ಆ ಮೀನು ಎಲ್ಲಿದೆ ಎಂದು ಉತ್ತರ ಹೇಳಬೇಕು.
ಈ ಬ್ರೈನ್ ಟೀಸರ್ ನಿಮ್ಮನ್ನು ಕೌಶಲ ಪರೀಕ್ಷೆಗೆ ಒಡ್ಡುವುದು ಸುಳ್ಳಲ್ಲ. ಚಿತ್ರವನ್ನು ಹತ್ತಿರದಿಂದ ಸೂಕ್ಷ್ಮವಾಗಿ ಗಮನಿಸಿ. ಇಲ್ಲಿರುವ ಇಮೋಜಿಯಲ್ಲಿ ಯಾವುದು ಭಿನ್ನವಾಗಿದೆ ಎಂದು 4 ಸೆಕೆಂಡ್ ಒಳಗೆ ಕಂಡುಹಿಡಿಯಲು ಸಾಧ್ಯವೇ ಗಮನಿಸಿ.
ಭಿನ್ನವಾಗಿರುವ ಮೀನು ಹುಡುಕೋಕೆ ಸಾಧ್ಯವಾಗಿಲ್ವಾ, ಸರಿಯಾಗಿ ಗಮನಿಸಿ. ಇನ್ನೂ ಸಿಕ್ಕಿಲ್ವಾ? ಹಾಗಾದರೆ ಕೇಳಿ ಆ ಭಿನ್ನವಾಗಿರುವ ಮೀನು ಬಾಯಿ ತೆರೆದುಕೊಂಡಿದೆ. ಈಗಾಗಲಾದ್ರೂ ಸಿಕ್ತಾ ನೋಡಿ.
ಈ ಬ್ರೈನ್ ಟೀಸರ್‌ಗಳನ್ನೂ ಓದಿ
Brain Teaser: ಚಿತ್ರದಲ್ಲಿ ಮಿಸ್ ಆಗಿರುವ ನಂಬರ್ ಯಾವುದು, ಥಟ್ಟಂತ ಅಂತ ಉತ್ತರ ಹೇಳಿ, ನೀವೆಷ್ಟು ಜಾಣರು ನೋಡೋಣ
ಮೆದುಳಿಗೆ ಸಾಕಷ್ಟು ಕೆಲಸ ಕೊಡೋಕೆ ನಿಮಗೆ ತುಂಬಾ ಇಷ್ಟನಾ, ನಿಮ್ಮ ಮೆದುಳು ತುಂಬಾ ಚುರುಕು ಅಂತ ಅನ್ನಿಸ್ತಾ ಇದ್ಯಾ, ಹಾಗಾದರೆ ಇಲ್ಲಿರುವ ಬ್ರೈನ್ ಟೀಸರ್‌ಗೆ ಥಟ್ಟಂತ ಉತ್ತರ ಹೇಳಿ. ನೀವು ಎಷ್ಟು ಜಾಣರು ಎಂಬುದನ್ನು ಚೆಕ್ ಮಾಡೋಣ.
Brain Teaser: ಚಿತ್ರದಲ್ಲಿ ಒಟ್ಟು ಎಷ್ಟು 9 ಇದೆ, 6 ಸೆಕೆಂಡ್‌ನಲ್ಲಿ ಉತ್ತರ ಹೇಳಿ; ನಿಮ್ಮ ಕಣ್ಣಿಗೊಂದು ಸವಾಲ್
ನಿಮ್ಮ ಕಣ್ಣು ಹಾಗೂ ಮೆದುಳು ಎರಡೂ ಸಖತ್ ಶಾರ್ಪ್ ಅಂತ ನಿಮಗೆ ಅನ್ನಿಸುತ್ತಾ, ಹಾಗಾದ್ರೆ ನಿಮಗಾಗಿ ಇಲ್ಲೊಂದು ಬ್ರೈನ್ ಟೀಸರ್ ಇದೆ. ಈ ಚಿತ್ರದಲ್ಲಿ ಒಂಭತ್ತರಲ್ಲಿ ಒಂದಿಷ್ಟು ಒಂಭತ್ತಿದೆ. 6 ಸೆಕೆಂಡ್‌ನಲ್ಲಿ ಒಟ್ಟು ಎಷ್ಟು 9 ಇದೆ ಎಂಬುದನ್ನು ಕಂಡುಹಿಡಿಯಬೇಕು.