Brain Teaser: ಹಸು ಖರೀದಿ ಮಾಡಿ, ಮಾರಾಟ ಮಾಡುವ ಸುಂದರ ಗಳಿಸಿದ ಲಾಭವೆಷ್ಟು; ಈ ಲೆಕ್ಕ ನಿಮ್ಮ ತಲೆಗೆ ಹುಳ ಬಿಡೋದು ಪಕ್ಕಾ-viral news brain teaser man sells cow and makes a profit can you figure out how much social media viral rst ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  Brain Teaser: ಹಸು ಖರೀದಿ ಮಾಡಿ, ಮಾರಾಟ ಮಾಡುವ ಸುಂದರ ಗಳಿಸಿದ ಲಾಭವೆಷ್ಟು; ಈ ಲೆಕ್ಕ ನಿಮ್ಮ ತಲೆಗೆ ಹುಳ ಬಿಡೋದು ಪಕ್ಕಾ

Brain Teaser: ಹಸು ಖರೀದಿ ಮಾಡಿ, ಮಾರಾಟ ಮಾಡುವ ಸುಂದರ ಗಳಿಸಿದ ಲಾಭವೆಷ್ಟು; ಈ ಲೆಕ್ಕ ನಿಮ್ಮ ತಲೆಗೆ ಹುಳ ಬಿಡೋದು ಪಕ್ಕಾ

ಇಲ್ಲೊಂದು ಬ್ರೈನ್‌ ಟೀಸರ್‌ ಇದೆ. ಇದೊಂಥರ ಮಜಾ ಇರುವುದು ಸುಳ್ಳಲ್ಲ. ಕ್ಯಾಲ್ಕುಲೆಟರ್‌ ಬಳಸದೇ ಈ ಬ್ರೈನ್‌ ಟೀಸರ್‌ಗೆ ಉತ್ತರ ಕಂಡುಹಿಡಿಯಬೇಕು. ದನ ಮಾರುವ ಸುಂದರನಿಗೆ ಎಷ್ಟು ಲಾಭ ಆಯ್ತು ಎಂಬುದನ್ನ ನೀವು ಕಂಡುಹಿಡಿಯಬೇಕು.

ದನ ಖರೀದಿ ಮಾಡಿ, ಮಾರಾಟ ಮಾಡುವ ಸುಂದರ ಗಳಿಸಿದ ಲಾಭವೆಷ್ಟು
ದನ ಖರೀದಿ ಮಾಡಿ, ಮಾರಾಟ ಮಾಡುವ ಸುಂದರ ಗಳಿಸಿದ ಲಾಭವೆಷ್ಟು

ಗಣಿತದ ಲೆಕ್ಕಾಚಾರ ಇರುವ ಬ್ರೈನ್‌ ಟೀಸರ್‌ವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್‌ ಆಗುತ್ತಿದೆ. ಅಲ್ಲದೇ ಸರಿಯಾದ ಉತ್ತರ ಏನಿರಬಹುದು ಎಂಬ ಚರ್ಚೆ ಕೂಡ ಆರಂಭವಾಗಿದೆ. ಎಕ್ಸ್‌ನಲ್ಲಿ ಹಂಚಿಕೊಳ್ಳಲಾದ ಈ ಪೋಸ್ಟ್‌ ದನ ಮಾರಾಟ ಮಾಡಿದ ಸುಂದರನಿಗೆ ಎಷ್ಟು ಲಾಭವಾಯ್ತು ಎಂಬುದನ್ನು ಕಂಡುಹಿಡಿಯುವ ಸವಾಲನ್ನು ಹೊಂದಿದೆ. ಮನಸ್ಸಿನಲ್ಲಿ ಲೆಕ್ಕಾಚಾರ ಮಾಡಿ ಈ ಬ್ರೈನ್‌ ಟೀಸರ್‌ ಪಜಲ್‌ಗೆ ಉತ್ತರ ಕಂಡುಹಿಡಿಯಲು ಸಾಧ್ಯವಾಗುವುದೇ? ಯೋಚಿಸಿ.

Massimo ಎಂಬ ಎಕ್ಸ್‌ ಖಾತೆಯೊಂದಿರುವ ಬಳಕೆದಾರೊಬ್ಬರು ʼಎ ಕ್ಲಾಸಿಕ್‌ ಬ್ರೈನ್‌ ಟೀಸರ್‌ʼ ಎಂದು ಶೀರ್ಷಿಕೆ ಬರೆದುಕೊಳ್ಳುವ ಮೂಲಕ ಈ ಬ್ರೈನ್‌ ಟೀಸರ್‌ ಅನ್ನು ಹಂಚಿಕೊಂಡಿದ್ದಾರೆ. ಈ ಬ್ರೈನ್‌ ಟೀಸರ್‌ನಲ್ಲಿರುವ ಪ್ರಶ್ನೆ ಹೀಗಿದೆ: 80000 ಕೊಟ್ಟು ಸುಂದರ ಒಂದು ದರ ಖರೀದಿ ಮಾಡುತ್ತಾನೆ. ಅದನ್ನು 1,25,000ಕ್ಕೆ ಮಾರಾಟ ಮಾಡುತ್ತಾನೆ. ಮರುದಿನ 1,40,000 ಕೊಟ್ಟು ಪುನಃ ಖರೀದಿ ಮಾಡುತ್ತಾನೆ. ನಂತರ ಅದೇ ಹಸುವನ್ನು 1,55,000ಕ್ಕೆ ಮಾರಾಟ ಮಾಡುತ್ತಾನೆ. ಹಾಗಾದರೆ ಸುಂದರ ಗಳಿಸಿದ ಲಾಭವೆಷ್ಟು? ಈ ಪ್ರಶ್ನೆಗೆ ಕ್ಯಾಲ್ಕುಲೆಟರ್‌ ಬಳಸದೇ ಯೋಚಿಸಿ ಉತ್ತರ ಹೇಳಬೇಕಿದೆ.

ಮಾರ್ಚ್‌ 5 ರಂದು ಈ ಬ್ರೈನ್‌ ಟೀಸರ್‌ ಅನ್ನು ಪೋಸ್ಟ್‌ ಮಾಡಲಾಗಿತ್ತು. ಇದೀಗ ಸಾಕಷ್ಟು ವೈರಲ್‌ ಆಗಿದ್ದು 18 ಲಕ್ಷಕ್ಕೂ ಅಧಿಕ ಮಂದಿ ಈ ಪೋಸ್ಟ್‌ ವೀಕ್ಷಿಸಿದ್ದಾರೆ. ಈಗಲೂ ಹಲವರು ಈ ಪೋಸ್ಟ್‌ ನೋಡುತ್ತಿದ್ದಾರೆ. ಹಲವರು ಕಾಮೆಂಟ್‌ ವಿಭಾಗದಲ್ಲಿ ತಾವು ಕಂಡುಕೊಂಡ ಉತ್ತರವನ್ನು ಕಾಮೆಂಟ್‌ ಮಾಡಿದ್ದಾರೆ.

ಕಾಮೆಂಟ್‌ಗಳಲ್ಲಿ ಬಂದ ಉತ್ತರಗಳು ಹೀಗಿವೆ

́ʼ45 ಸಾವಿರ ಲಾಭವಾಗಿದೆʼ ಎಂದು ಎಕ್ಸ್‌ ಬಳಕೆದಾರೊಬ್ಬರು ಕಾಮೆಂಟ್‌ ಮಾಡಿದ್ದಾರೆ.

ʼ45 ಅಥವಾ 60 ಈ ಎರಡಲ್ಲಿ ಒಂದು ಸರಿ ಉತ್ತರ. ಆದರೆ ಯಾವುದು ಎಂಬುದು ಮಾತ್ರ ತಿಳಿಯುತ್ತಿಲ್ಲʼ ಎಂದು ಇನ್ನೊಬ್ಬರು ಕಾಮೆಂಟ್‌ ಮಾಡಿದ್ದಾರೆ.

ಹಲವರು ಈ ಬ್ರೈನ್‌ ಟೀಸರ್‌ಗೆ 60 ಸಾವಿರ ಲಾಭವಾಗಿದೆ ಎಂದರೆ ಕೆಲವರು 45 ಸಾವಿರ ಲಾಭ ಗಳಿಸಿದ್ದಾನೆ ಎಂದು ಉತ್ತರಿಸಿದ್ದಾರೆ. ಅವೆರಲ್ಲರ ಕಥೆ ಬಿಡಿ, ನಿಮ್ಮ ಉತ್ತರವೇನು ತಿಳಿಸಿ.

ಇದನ್ನೂ ಓದಿ

Brain Teaser: ಆ ತರಗತಿಯಲ್ಲಿ ಒಟ್ಟು ಎಷ್ಟು ಜನ ಮಕ್ಕಳಿದ್ದಾರೆ? ಕ್ಯಾಲ್ಕುಲೆಟರ್‌ ಬಳಸದೇ ಯೋಚಿಸಿ ಉತ್ತರಿಸಿ; ನಿಮಗೊಂದು ಸವಾಲು

ಇನ್‌ಸ್ಟಾಗ್ರಾಂ ಪುಟವೊಂದರಲ್ಲಿ ಹಂಚಿಕೊಳ್ಳಲಾಗಿರುವ ಬ್ರೈನ್‌ ಟೀಸರ್‌ವೊಂದು ಇದೀಗ ಪಜಲ್‌ ಪ್ರಿಯರಿಗೆ ತಲೆ ಕೆರೆದುಕೊಳ್ಳುವಂತೆ ಮಾಡಿದೆ. ಕ್ಯಾಲ್ಕುಲೆಟರ್‌ ಬಳಸದೇ ಇಲ್ಲಿರುವ ಸುಲಭ ಗಣಿತಕ್ಕೆ ಉತ್ತರ ಹೇಳಬೇಕು. ಇದು ನಿಮಗಿರುವ ಚಾಲೆಂಜ್‌. ಉತ್ತರ ಹುಡುಕೋಕೆ ನೀವೊಮ್ಮೆ ಟ್ರೈ ಮಾಡಿ.

Brain Teaser: 1ಕ್ಕೆ 5 ಕೂಡಿಸಿದ್ರೆ 6 ಆದ್ರೆ, 5ಕ್ಕೆ 11 ಕೂಡಿಸಿದ್ರೆ ಎಷ್ಟು, ಲೆಕ್ಕದಲ್ಲಿ ಪಕ್ಕಾ ಇದ್ರೆ ಥಟ್ಟಂತ ಉತ್ತರ ಹೇಳಿ

ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ವೈರಲ್‌ ಆದ ಹೊಸ ಗಣಿತದ ಪಜಲ್‌ವೊಂದು ಇದೀಗ ಮೆದುಳಿಗೆ ಹುಳ ಬಿಡುವುದು ಖಂಡಿತ. ಇದು ಸುಲಭ ಗಣಿತವೇ ಆದ್ರೂ ಲಾಜಿಕಲ್‌ ಥಿಂಕಿಂಗ್‌ನಿಂದಷ್ಟೇ ಇದಕ್ಕೆ ಸರಿ ಉತ್ತರ ಕಂಡುಹಿಡಿಯಲು ಸಾಧ್ಯ. ಇದಕ್ಕೆ ಉತ್ತರ ಖಂಡಿತ 16 ಅಲ್ಲ.

mysore-dasara_Entry_Point