ಕನ್ನಡ ಸುದ್ದಿ  /  ಜೀವನಶೈಲಿ  /  Brain Teaser: ನೀವು ಗಣಿತದಲ್ಲಿ ನಿಜಕ್ಕೂ ಜಾಣರಾದ್ರೆ, ಈ ಸವಾಲಿಗೆ ಥಟ್​ ಅಂತ ಉತ್ತರಿಸಿ; ಇದು ಮೆದುಳಿಗೆ ಹುಳ ಬಿಡೋದು ಪಕ್ಕಾ

Brain Teaser: ನೀವು ಗಣಿತದಲ್ಲಿ ನಿಜಕ್ಕೂ ಜಾಣರಾದ್ರೆ, ಈ ಸವಾಲಿಗೆ ಥಟ್​ ಅಂತ ಉತ್ತರಿಸಿ; ಇದು ಮೆದುಳಿಗೆ ಹುಳ ಬಿಡೋದು ಪಕ್ಕಾ

ನೀವು ಗಣಿತದಲ್ಲಿ ಎಷ್ಟು ಜಾಣರು ಎಂಬುದನ್ನು ನೋಡಿಯೇ ಬಿಡೋಣ. ಇಲ್ಲಿ ಕೇಳಲಾದ ಪ್ರಶ್ನೆಗೆ ಉತ್ತರಿಸುವಲ್ಲಿ ನೀವು ಶಕ್ತರಾದಲ್ಲಿ ನೀವು ಪ್ರತಿಭಾವಂತರು ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ.

ನೀವು ಗಣಿತದಲ್ಲಿ ನಿಜಕ್ಕೂ ಜಾಣರಾದ್ರೆ, ಈ ಸವಾಲಿಗೆ ಥಟ್​ ಅಂತ ಉತ್ತರಿಸಿ
ನೀವು ಗಣಿತದಲ್ಲಿ ನಿಜಕ್ಕೂ ಜಾಣರಾದ್ರೆ, ಈ ಸವಾಲಿಗೆ ಥಟ್​ ಅಂತ ಉತ್ತರಿಸಿ

ಮೆದುಳಿಗೆ ಕಸರತ್ತನ್ನು ಕೊಡುವ ಕೆಲವೊಂದು ಸವಾಲುಗಳು ಮನಸ್ಸಿಗೆ ಸಾಕಷ್ಟು ವ್ಯಾಯಾಮವನ್ನು ನೀಡುತ್ತದೆ. ನಮ್ಮ ಬುದ್ಧಿಮಟ್ಟ ಹೆಚ್ಚುವ ಜೊತೆಯಲ್ಲಿ ಸಂಖ್ಯೆಗಳ ಮೇಲೆ ನಮಗಿರುವ ಹಿಡಿತ ಕೂಡ ಹೆಚ್ಚಾಗುತ್ತದೆ. ಒಗಟಿನ ರೀತಿಯಲ್ಲಿ ನಿಮ್ಮ ಮೆದುಳಿಗೆ ಕೆಲಸವನ್ನು ಕೊಟ್ಟು ಉತ್ತರ ಹುಡುಕಲು ನಿಮ್ಮನ್ನು ಹೆಣಗಾಡುವಂತೆ ಮಾಡುವ ಸಾಕಷ್ಟು ಸವಾಲುಗಳು ಇಂಟರ್ನೆಟ್​ನಲ್ಲಿ ಸಿಗುತ್ತದೆ. ಸೋಶಿಯಲ್​ ಮೀಡಿಯಾಗಳಲ್ಲಿ ಲಭ್ಯವಿರುವ ಇಂತಹ ಸಾಕಷ್ಟು ಬ್ರೇನ್​ ಟೀಸರ್​ಗಳನ್ನು ಯಾರು ಕೊಟ್ಟ ಸಮಯದಲ್ಲಿ ಪರಿಹರಿಸುತ್ತಾರೋ ಅವರನ್ನು ಬುದ್ಧಿವಂತ ಎಂದು ಕರೆದರೆ ತಪ್ಪಾಗುವುದಿಲ್ಲ. ಹಾಗಾದರೆ ಇನ್ಯಾಕೆ ತಡ ಈಗ ನೀವು ಬುದ್ಧಿವಂತರೋ ಅಲ್ಲವೋ ಎಂಬುದನ್ನು ಪತ್ತೆ ಮಾಡಿಯೇ ಬಿಡೋಣ :

ಟ್ರೆಂಡಿಂಗ್​ ಸುದ್ದಿ

ಮಾಜಿ ಟ್ವಿಟರ್​ ಹಾಗೂ ಪ್ರಸ್ತುತ ಎಕ್ಸ್​ ಎಂದು ಮರುನಾಮಕರಣಗೊಂಡಿರುವ ಸೋಶಿಯಲ್​ ಮೀಡಿಯಾ ವೇದಿಕೆಯಲ್ಲಿ ಇಂತಹದ್ದೊಂದು ಮೆದಳಿಗೆ ಕಸರತ್ತು ನೀಡುವ ಸವಾಲೊಂದನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ನೀವು ಪ್ರತಿಭಾವಂತರೇ ಹೌದಾದಲ್ಲಿ ಈ ಸಮಸ್ಯೆಗೆ ಉತ್ತರ ಹುಡುಕಿಕೊಡಿ ನೋಡೋಣ ಅಂತಾ ಶೀರ್ಷಿಕೆಯಲ್ಲಿ ಬರೆಯಲಾಗಿದೆ ಕೂಡ. , '1+4=10, 2+8=20, 4+16=40 ಆಗಿದ್ದರೆ 8+32 = ಏನಿರಬಹುದು..? ಎಂದು ಪ್ರಶ್ನೆಯನ್ನು ಕೇಳಲಾಗಿದೆ. ಈಗ ಹೇಳಿ ಇದಕ್ಕೆ ಉತ್ತರ ಹುಡುಕಲು ನಿಮ್ಮಿಂದ ಸಾಧ್ಯವಿದೆಯೇ ..?

ಕೆಲ ಸಮಯದ ಹಿಂದೆ ಎಕ್ಸ್​ನಲ್ಲಿ ಈ ಸವಾಲನ್ನು ಕೇಳಲಾಗಿದ್ದು ಈಗಾಗಲೇ 57 ಸಾವಿರಕ್ಕೂ ಅಧಿಕ ವೀವ್ಸ್​ ಸಂಪಾದಿಸಿದೆ. ಅನೇಕರು ಇದನ್ನು ರಿಟ್ವೀಟ್​ ಮಾಡಿದ್ದಾರೆ ಕೂಡ. ಇದಕ್ಕೆ ಉತ್ತರ ಹುಡುಕುವ ಪ್ರಯತ್ನ ಮಾಡಿದ ಅನೇಕರು ತಮ್ಮ ಉತ್ತರಗಳನ್ನು ಕಮೆಂಟ್​ ಬಾಕ್ಸಿನಲ್ಲಿ ಹಾಕಿದ್ದಾರೆ.

ನಾನು ಪ್ರತಿಭಾವಂತನೇನಲ್ಲ. ಆದರೆ ಒಂದು ಪ್ರಯತ್ನ ಮಾಡಿದ್ದೇನೆ. . ಪ್ಯಾಟರ್ನ್ ಸೂತ್ರ = 2(a+b) ಬಳಕೆ ಮಾಡಿ ಈ ಸವಾಲಿಗೆ ಉತ್ತರ ಹುಡುಕಿದರೆ ಉತ್ತರ 80 ಎಂದು ಬರಲಿದೆ ಎಂದು ಎಕ್ಸ್​ ಬಳಕೆದಾರರೊಬ್ಬರು ಕಮೆಂಟ್​ ಮಾಡಿದ್ದಾರೆ. ಇನ್ನೊಬ್ಬರು ಈ ಪ್ರಶ್ನೆಗೆ ಉತ್ತರ 175 ಎಂದು ಹೇಳಿದ್ದಾರೆ.

ಅನೇಕರು ಕಮೆಂಟ್​ ಬಾಕ್ಸಿನಲ್ಲಿ ತಮ್ಮದೇ ರೀತಿಯಲ್ಲಿ ಉತ್ತರ ನೀಡಿದ್ದಾರೆ. ಹೀಗಾಗಿ ಸಾಕಷ್ಟು ಸಂಖ್ಯೆಗಳು ಕಮೆಂಟ್​ ಬಾಕ್ಸಿನಲ್ಲಿ ಹರಿದಾಡುತ್ತಿದೆ. ಆದರೆ ಹೆಚ್ಚಿನ ಜನರು ಈ ಪ್ರಶ್ನೆಗೆ ಉತ್ತರ 80 ಎಂದು ಹೇಳಿದ್ದಾರೆ. ಅಂದಹಾಗೆ ಈ ಪ್ರಶ್ನೆಗೆ ಉತ್ತರ ಕಂಡುಹಿಡಿಯಲು ನಿಮ್ಮಿಂದ ಸಾಧ್ಯವಾಯ್ತೇ..? ಹೌದು ಎಂದಾದರೆ ನಿಮ್ಮ ಉತ್ತರ ಏನು...?

ಇದನ್ನೂ ಓದಿ

Brain Teaser: ನೀವು ಗಣಿತದಲ್ಲಿ ಪಂಟರಾದ್ರೆ ಈ ಪಜಲ್‌ ಬಿಡಿಸೋಕೆ ಟ್ರೈ ಮಾಡಿ; ಇದು ನೋಡಿದಷ್ಟು ಸುಲಭವಲ್ಲ

ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆದ ಬ್ರೈನ್‌ ಟೀಸರ್‌ವೊಂದು ನಿಮ್ಮ ತಲೆ ಕೆಡಿಸೋದು ಪಕ್ಕಾ. ಇದು ಮೇಲ್ನೋಟಕ್ಕೆ ಸುಲಭ ಗಣಿತ ಅನ್ನಿಸಿದ್ರು ಮೆದುಳಿಗೆ ಹುಳ ಬಿಡುವಂತಿದೆ. ಬೋಡ್ಮಾಸ್‌ ನಿಯಮ ಗೊತ್ತಿದ್ರೆ ಈ ಗಣಿತದ ಪಜಲ್‌ ಅನ್ನು ನೀವು ಸುಲಭವಾಗಿ ಬಿಡಿಸಬಹುದು. ಸರಿ ಇನ್ನೇಕೆ ತಡ ಶುರು ಮಾಡಿ

ವಿಭಾಗ