Brain Teaser: 3ಕ್ಕೆ 6 ಕೂಡಿಸಿ, ಮೂರರಿಂದ ಭಾಗಿಸಿ 2ರಿಂದ ಗುಣಿಸಿದ್ರೆ ಎಷ್ಟಾಗುತ್ತೆ, ನೀವು ಜಾಣರಾದ್ರೆ ಥಟ್ಟಂತ ಉತ್ತರ ಹೇಳಿ
ನೀವು ನಿಜಕ್ಕೂ ಜಾಣರು ಅನ್ನಿಸ್ತಾ ಇದ್ಯಾ, ಹಾಗಾದ್ರೆ ನಿಮ್ಮ ಜಾಣತನ ಪರೀಕ್ಷೆ ಮಾಡೋಕೆ ಇಲ್ಲೊಂದು ಸವಾಲಿದೆ. ಈ ಸವಾಲು ಸ್ವೀಕರಿಸಿ, ನಿಮ್ಮ ಜಾಣತನ ಪರೀಕ್ಷೆ ಮಾಡಿ. ಇಲ್ಲಿರುವ ಮ್ಯಾಥ್ಸ್ ಪಜಲ್‌ಗೆ ಥಟ್ಟಂತ ಉತ್ತರ ಹೇಳಿದ್ರೆ ನೀವು ಖಂಡಿತ ಜಾಣರು ಅಂತ ಲೆಕ್ಕ. ಟ್ರೈ ಮಾಡಿ.
ಶಾಲಾ ದಿನಗಳಲ್ಲಿ ಕೂಡಿ ಕಳೆಯುವ ಲೆಕ್ಕ ಅಂದ್ರೆ ಏನೋ ಒಂಥರಾ ಖುಷಿ ಕೊಡ್ತಾ ಇದ್ವು, ಕೆಲವರಿಗೆ ಗುಣಿಸಿ–ಭಾಗಿಸೋ ಲೆಕ್ಕ ಕೊಂಚ ಕಷ್ಟ ಅನ್ನಿಸ್ತಾ ಇದಿದ್ದು ಸುಳ್ಳಲ್ಲ. ಆದರೆ ಮುಂದಿನ ತರಗತಿಗೆ ಬಂದ ಹಾಗೂ ಲೆಕ್ಕ ಸುಲಭ ಅನ್ನಿಸೋಕೆ ಶುರುವಾಗುತ್ತೆ. ಅದರಲ್ಲೂ ನೀವು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯುವವರಾಗಿದ್ದರೆ ಮೆದುಳಿಗೆ ಹುಳ ಬಿಡುವಂತಹ ವಿವಿಧ ರೀತಿಯ ಗಣಿತ ಸೂತ್ರಗಳನ್ನು ನೋಡಿರುತ್ತೀರಿ.
ಇಲ್ಲೊಂದು ಅಂಥದ್ದೇ ಗಣಿತದ ಸೂತ್ರವಿದೆ.ಈ ಗಣಿತ ಸೂತ್ರದಲ್ಲಿ ಕುಡಿಸಿ, ಗುಣಿಸಿ, ಭಾಗಿಸಿ ಎಲ್ಲವನ್ನೂ ಮಾಡಬೇಕು. ಒಮ್ಮೆ ನೋಡಿದಾಗ ಸುಲಭ ಎನ್ನಿಸಿದರೂ ಉತ್ತರ ಕಂಡುಹಿಡಿಯವುದು ಖಂಡಿತ ಸುಲಭದ ಮಾತಲ್ಲ. ಈ ಲೆಕ್ಕಕ್ಕೆ ಉತ್ತರ ಕಂಡುಹಿಡಿಯಲು ನೀವು ಸಾಕಷ್ಟು ಬುದ್ಧಿ ಉಪಯೋಗಿಸಬೇಕು. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುವ ಇಂತಹ ಬ್ರೈನ್ ಟೀಸರ್‌ಗಳು ನಿಮ್ಮ ಮೆದುಳಿಗೆ ಸಾಕಷ್ಟು ಕೆಲಸ ನೀಡಿ ಯೋಚನಾಶಕ್ತಿ ಹೆಚ್ಚುವಂತೆ ಮಾಡುವುದು ಸುಳ್ಳಲ್ಲ.
Pro Brain Teaser ಎಂಬ ಟ್ವಿಟರ್ ಪುಟದಲ್ಲಿ ಪೋಸ್ಟ್ ಮಾಡಲಾದ ಈ ಬ್ರೈನ್ ಟೀಸರ್‌ಗೆ ನಿಮ್ಮ ಉತ್ತರವೇನು ಎಂದು ಪ್ರಶ್ನೆ ಕೇಳಲಾಗಿದೆ. 3+6/3*2=? ಎಂಬ ಪ್ರಶ್ನೆ ಚಿತ್ರದಲ್ಲಿದ್ದು ಮೂರು ಉತ್ತರಗಳನ್ನು ನೀಡಲಾಗಿದೆ. ಆ ಉತ್ತರಗಳು ಹೀಗಿವೆ. 4,6,7 ಮೂರು ಆಯ್ಕೆಗಳನ್ನು ನೀಡಲಾಗಿದೆ. ಹಾಗಾದರೆ ಈ ಬ್ರೈನ್ ಟೀಸರ್‌ಗೆ ಈ ಮೂರರಲ್ಲಿ ಯಾವ ಉತ್ತರ ಸರಿ ಎಂಬುದನ್ನು ನೀವು ಹೇಳಬೇಕು.
ಆಗಸ್ಟ್ 22 ರಂದು ಪೋಸ್ಟ್ ಮಾಡಲಾದ ಈ ಬ್ರೈನ್ ಟೀಸರ್ ಅನ್ನು ಈಗಾಗಲೇ 44 ಸಾವಿರದಷ್ಟು ಮಂದಿ ವೀಕ್ಷಿಸಿದ್ದಾರೆ. 1 ಸಾವಿರಕ್ಕೂ ಅಧಿಕ ಮಂದಿ ಈ ಪೋಸ್ಟ್ ಅನ್ನು ಲೈಕ್ ಮಾಡಿದ್ದಾರೆ. 1 ಸಾವಿರಕ್ಕೂ ಹೆಚ್ಚು ಕಾಮೆಂಟ್‌ಗಳು ಬಂದಿವೆ.
ಈ ಬ್ರೈನ್ ಟೀಸರ್‌ಗೆ ಹಲವರು 4 ಎಂದರೆ ಇನ್ನೂ ಒಂದಿಷ್ಟು ಮಂದಿ 7 ಸರಿಯಾದ ಉತ್ತರ ಎಂದು ಕಾಮೆಂಟ್ ಮಾಡಿದ್ದಾರೆ, ಹಾಗಾದರೆ ನಿಮ್ಮ ಲೆಕ್ಕದಲ್ಲಿ ಈ ಗಣಿತದ ಪಜಲ್‌ಗೆ ಸರಿಯಾದ ಉತ್ತರ ಯಾವುದು?
ಈ ಬ್ರೈನ್ ಟೀಸರ್ ಅನ್ನೂ ಓದಿ
Brain Teaser: 5-4=3, 7-16=3 ಆದ್ರೆ 3–9= ಎಷ್ಟು? ಗಣಿತದಲ್ಲಿ ನೀವು ಏಕ್ಸ್‌ಪರ್ಟ್ ಆದ್ರೆ ಈ ಪ್ರಶ್ನೆಗೆ 5 ಸೆಕೆಂಡ್‌ನಲ್ಲಿ ಉತ್ತರ ಹೇಳಿ
ಗಣಿತದ ಸೂತ್ರಗಳು ನೋಡಲು ಸುಲಭ ಎನ್ನಿಸಿದರೂ ಸರಿಯಾದ ಉತ್ತರ ಕಂಡುಹಿಡಿಯಲು ಖಂಡಿತ ಕಷ್ಟ ಪಡಬೇಕಾಗುತ್ತದೆ. ಇದಕ್ಕಾಗಿ ಬ್ರೈನ್ ಟೀಸರ್‌ಗಳಲ್ಲಿ ಗಣಿತ ಸೂತ್ರಗಳು ಹೆಚ್ಚಿರುತ್ತವೆ. ಇಲ್ಲೊಂದು ಅಂಥದ್ದೇ ಸೂತ್ರವಿದೆ. ಇದಕ್ಕೆ 5 ಸೆಕೆಂಡ್ ಒಳಗೆ ಉತ್ತರ ಕಂಡುಹಿಡಿಯಲು ನಿಮ್ಮಿಂದ ಸಾಧ್ಯವೇ ನೋಡಿ.